"ಬಹುಭಾಷಾ ನಟ ಶರತ್ ಬಾಬು ಗಂಭೀರ" ಕರಾಟೆ ಕಲ್ಯಾಣಿ ಪೋಸ್ಟ್.. ರೊಚ್ಚಿಗೆದ್ದ ನೆಟ್ಟಿಗರು!
ಬಹುಭಾಷಾ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಗಂಭೀರ. ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವಿವಾದಗಳ ಕಣ್ಮಣಿ ಕರಾಟೆ ಕಲ್ಯಾಣಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲ ಸೃಷ್ಟಿಸುತ್ತಿದೆ.
ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 71 ವರ್ಷದ ನಟನ ಆರೋಗ್ಯ ಹದಗೆಟ್ಟಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಕರಾಟೆ ಕಲ್ಯಾಣಿ ಪೋಸ್ಟ್ ಮಾಡಿದ್ದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

"ನನ್ನ ನೆಚ್ಚಿನ ಹೀರೋ ಶರತ್ ಬಾಬು.. ಅಂದಿನ ಹುಡುಗಿಯರ ಕನಸಿನ ರಾಜಕುಮಾರ ಶರತ್ ಬಾಬು ಬೇಗ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ.. ಶ್ರೀರಾಮರಕ್ಷಾ' ಎಂದು ಕರಾಟೆ ಕಲ್ಯಾಣಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಕರಾಟೆ ಕಲ್ಯಾಣಿ ಈ ಪೋಸ್ಟ್ ಹಾಕುತ್ತಿದ್ದಂತೆ ಕೆಲವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಅದೇ ಮತ್ತೆ ಕೆಲವರು ಕರಾಟೆ ಕಲ್ಯಾಣಿ ಪೋಸ್ಟ್ ಹಾಕಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಅಷ್ಟಕ್ಕೂ ನೆಟ್ಟಿಗರು ಕಿಡಿಕಾರುತ್ತಿರುವುದಕ್ಕೆ ಗಂಭೀರ ಕಾರಣವಿದೆ.

ಇತ್ತೀಚೆಗೆ ಕರಾಟೆ ಕಲ್ಯಾಣಿ ತೆಲುಗಿನ ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ಮೃತಪಟ್ಟಿದ್ದಾರೆ ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೆಲೆಬ್ರೆಟಿಗಳು ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ಮನೆಗೆ ಕರೆ ಮಾಡಿದ್ದರು.
ಈ ವಿಷಯ ತಿಳಿಯುತ್ತಿದ್ದಂತೆ, ಸ್ವತ: ಕೋಟಾ ಶ್ರೀನಿವಾಸ ರಾವ್ ಅವರ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು."ನಾನು ಇನ್ನೂ ಬದುಕಿದ್ದೇನೆ." ಎಂದು ಕೋಟಾ ಶ್ರೀನಿವಾಸ ರಾವ್ ವಿಡಿಯೋ ಮಾಡಿ ರಿಲೀಸ್ ಮಾಡಬೇಕಾಗಿ ಬಂದಿತ್ತು. ಇತ್ತ ತಕ್ಷಣವೇ ಕರಾಟೆ ಕಲ್ಯಾಣಿ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು.
ಕೋಟಾ ಶ್ರೀನಿವಾಸ ರಾವ್ ವಿಡಿಯೋ ರಿಲೀಸ್ ಮಾಡುತ್ತಿದ್ದಂತೆ "ನಾನು ಈ ಪೋಸ್ಟ್ ಹಾಕಿಲ್ಲ. ತನ್ನ ಸಂಬಂಧಿಗೆ ಫೋನ್ ಕೊಟ್ಟಿದ್ದೆ. ಅವರಿಂದಲೇ ಈ ಘಟನೆ ನಡೆದಿದೆ ಎಂದು ಕಥೆ ಹೇಳಿ ಮುಚ್ಚಿ ಹಾಕಲು ಯತ್ನಿಸಿದ್ದರು. ಆಗಲೂ ನೆಟ್ಟಿಗರು ಕರಾಟೆ ಕಲ್ಯಾಣಿ ಅವರನ್ ಹೀಗೆ ಪೋಸ್ಟ್ ಮಾಡಬೇಡಿ ಅಂತ ತರಾಟೆಗೆ ತೆಗೆದುಕೊಂಡಿದ್ದರು.
ಈಗ ಮತ್ತೊಂದು ಪೋಸ್ಟ್ ಮಾಡಿದ್ದು, ಬಹುಭಾಷಾ ನಟ ಶರತ್ ಬಾಬು ಆಸ್ಪತ್ರೆಗೆ ದಾಖಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ಶರತ್ ಕುಮಾರ್ ಅವರ ಆರೋಗ್ಯದ ಬಗ್ಗೆ ಇನ್ನೂ ಖಚಿತ ಮಾಹಿತಿ ಹೊರಬೀಳಬೇಕಿದೆ.


Click it and Unblock the Notifications











