ಶ್ರೀರಾಮುಲು ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬುರ್ಕಾ ತೊಟ್ಟು ಬಂದ ಸಾಯಿ ಪಲ್ಲವಿ

ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಸಾಯಿ ಪಲ್ಲವಿ ನಟಿಸಿದ 'ಶ್ಯಾಮ್ ಸಿಂಗಾ ರಾಯ್' ಸಿನಿಮಾ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಇದೇ ಮೊದಲ ಬಾರಿಗೆ ನಾನಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ಸಾಯಿ ಪಲ್ಲವಿ ಕೊಲ್ಕತ್ತಾದ ಡ್ಯಾನ್ಸರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರೂ ನಟರಿಗೂ 'ಶ್ಯಾಮ್ ಸಿಂಗಾ ರಾಯ್' ಚಿತ್ರದ ಹೊಸ ಅನುಭವ ನೀಡಿದೆ. ಅದರಲ್ಲೂ ಸೌತ್ ಬ್ಯೂಟಿ ಸಾಯಿ ಪಲ್ಲವಿ ಈ ಚಿತ್ರದ ಬಗ್ಗೆ ಉತ್ಸಾಹದಿಂದ ಪ್ರಚಾರ ಮಾಡುತ್ತಿದ್ದಾರೆ.

'ಶ್ಯಾಮ್ ಸಿಂಗಾ ರಾಯ್' ಡಿಸೆಂಬರ್ 24ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಆಂಧ್ರದಲ್ಲಿ ಥಿಯೇಟರ್ ಬೆಲೆ ವಿವಾದ, ಆಂಧ್ರ ಸರ್ಕಾರದಿಂದ ಥಿಯೇಟರ್ ಸೀಜ್, ಕೆಲವೆಡೆ 50 ಪರ್ಸೆಂಟ್ ಆಸನ ವ್ಯವಸ್ಥೆಗಳಿಂದ ಈ ಸಿನಿಮಾ ನೂರೆಂಟು ಅಡೆತಡೆಗಳನ್ನು ಎದುರಿಸಿತ್ತು. ಇದರ ಹೊರತಾಗಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ, ಪ್ರೇಕ್ಷಕರ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಲು ಸಾಯಿ ಪಲ್ಲವಿ ಬುರ್ಕಾ ತೊಟ್ಟು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೇ ವಿಡಿಯೋ ಈಗ ಫುಲ್ ವೈರಲ್ ಆಗಿದೆ.

ಬುರ್ಕಾದಲ್ಲಿ ಥಿಯೇಟರ್‌ಗೆ ಬಂದ ಸಾಯಿ ಪಲ್ಲವಿ

ಬುರ್ಕಾದಲ್ಲಿ ಥಿಯೇಟರ್‌ಗೆ ಬಂದ ಸಾಯಿ ಪಲ್ಲವಿ

ಸಾಯಿಪಲ್ಲವಿ, ನಾನಿ ಹಾಗೂ ಕೀರ್ತಿ ಶೆಟ್ಟಿ ನಟಿಸಿದ ' ಶ್ಯಾಮ್ ಸಿಂಗಾ ರಾಯ್' ಚಿತ್ರ ಕಳೆದ ಏಳು ದಿನಗಳಿಂದ ಚಿತ್ರಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹಲವು ಅಡೆ-ತಡೆಗಳನ್ನು ಎದುರಿಸಿ, ಥಿಯೇಟರ್‌ ಲಗ್ಗೆ ಸಿನಿಮಾದ ರೆಸ್ಪಾನ್ಸ್‌ ಕಂಡು ಸಾಯಿ ಪಲ್ಲವಿ ಥ್ರಿಲ್ ಆಗಿದ್ದಾರೆ. ಹೀಗಾಗಿ ಜನರ ಪ್ರತಿಕ್ರಿಯೆಯನ್ನು ಕಣ್ಣಾರೆ ಆನಂದಿಸಲು ಚಿತ್ರಮಂದಿರಕ್ಕೆ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ. ವಿಶೇಷ ಅಂದರೆ, ಪ್ರೇಕ್ಷಕರ ಮಧ್ಯೆ ಕೂತು ಸಿನಿಮಾ ನೋಡಲು ನಿರ್ಧರಿಸಿದ್ದ ಸಾಯಿ ಪಲ್ಲವಿ ಬರ್ಕಾ ತೊಟ್ಟು ಚಿತ್ರಮಂದಿರದೊಳಗೆ ಎಂಟ್ರಿಕೊಟ್ಟಿದ್ದರು.

ಶ್ರೀರಾಮುಲು ಚಿತ್ರಮಂದಿರಕ್ಕೆ ಬಂದ ಸಾಯಿ ಪಲ್ಲವಿ

ಪ್ರೇಕ್ಷಕರೊಂದಿಗೆ ಸ್ಟಾರ್‌ಗಳು ಸಿನಿಮಾ ನೋಡಲು ಸಾಧ್ಯವಿಲ್ಲ. ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು ಜನರು ಮುಗಿಬೀಳುತ್ತಾರೆ. ಹೀಗಾಗಿ ಥಿಯೇಟರ್‌ನಲ್ಲಿ ನೂಕುನುಗ್ಗಲು ಸಂಭವಿಸುವ ಸಾಧ್ಯತೆ ಇರುವುದರಿಂದ ತಾರೆಯರು ಚಿತ್ರಮಂದಿರಲ್ಲಿ ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಲು ಹಿಂದೇಟು ಹಾಕಿತ್ತಾರೆ. ಅದಕ್ಕೆ ಸಾಯಿ ಪಲ್ಲವಿ ಬುರ್ಕಾ ತೊಟ್ಟು ಶ್ರೀರಾಮುಲು ಚಿತ್ರಕ್ಕೆ ದಿಢೀರನೇ ಎಂಟ್ರಿ ಕೊಟ್ಟಿದ್ದರು. ಅಂದಹಾಗೆ ಈ ಚಿತ್ರಮಂದಿರ ಆಂಧ್ರ ಪ್ರದೇಶದ ಮೂಸಾಪೇಟೆಯಲ್ಲಿರುವ ಚಿತ್ರಮಂದಿರ. ಅಲ್ಲಿಗೆ ಸೆಕೆಂಡ್ ಶೋ ನೋಡಲು ಸಾಯಿ ಪಲ್ಲವಿ ಹೋಗಿದ್ದರು. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಯಿ ಫ್ಯಾನ್ಸ್ ಥ್ರಿಲ್

ಸಾಯಿ ಫ್ಯಾನ್ಸ್ ಥ್ರಿಲ್

ಸಿನಿಪ್ರಿಯರ ಮಧ್ಯೆನೇ ಕೂತು ಸಾಯಿ ಪಲ್ಲವಿ 'ಶ್ಯಾಮ್ ಸಿಂಗ ರಾಯ್' ಇಡೀ ಸಿನಿಮಾವನ್ನು ನೋಡಿದ್ದಾರೆ. ಆದರೆ, ಒಬ್ಬರಿಗೂ ತಾನು ಸಾಯಿ ಪಲ್ಲವಿ ಅನ್ನುವ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಸಾಯಿ ಪಲ್ಲವಿ ಬುರ್ಕಾ ತೊಟ್ಟು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಈಕೆಯ ಅಭಿಮಾನಿಗಳು ಕೈ ಹಿಸುಕಿಕೊಂಡಿದ್ದಾರೆ. ಕೆಲವರಂತೂ ಶಾಕ್ ಆಗಿದ್ದಾರೆ. "ಸಾಯಿ ಪಲ್ಲವಿ ತಾನು ಸಾಮಾನ್ಯಳು ಎಂದು ಸಾಭೀತು ಮಾಡಿದ್ದಾರೆ." ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. " ಈ ವಿಡಿಯೋ ನೋಡಿದ ಮೇಲೆ ಸಾಯಿ ಪಲ್ಲವಿ ಪಕ್ಕನೇ ಕೂತಿದ್ದವರ ಪರಿಸ್ಥಿತಿ ಹೇಗಿದೆ ಅಂತ ಊಹಿಸಿಕೊಳ್ಳಲೂ ಅಸಾಧ್ಯ" ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

'ಶ್ಯಾಮ್ ಸಿಂಗ ರಾಯ್' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

'ಶ್ಯಾಮ್ ಸಿಂಗ ರಾಯ್' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

'ಶ್ಯಾಮ್ ಸಿಂಗ ರಾಯ್' ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿದೆ. ಈ ಹಿಂದೆ ನಾನಿ ನಟಿಸಿದ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಹೀಗಾಗಿ ಅಭಿಮಾನಿಗಳಿಗೆ ಚಿತ್ರಮಂದಿರದಲ್ಲಿ ನೋಡಲು ಅವಕಾಶ ಸಿಕ್ಕಿರಲಿಲ್ಲ. ಕೊರೊನಾ ಕಾಲದಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ನಾನಿಯ ಮೊದಲ ಸಿನಿಮಾವಿದು. ಹೀಗಿದ್ದರೂ, ನಾನಿ ಚಿತ್ರ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಐದು ದಿನಗಳಲ್ಲಿ ವಿಶ್ವದಾದ್ಯಂತ ಈ ಸಿನಿಮಾ 35.45 ಕೋಟಿ ಗಳಿಕೆ ಕಂಡಿದ್ದು, 20 ಕೋಟಿ ಶೇರ್ ಬಂದಿದೆ ಎಂದು ಟಾಲಿವುಡ್ ವರದಿ ಮಾಡಿದೆ. ಟಿಕೆಟ್ ದರ ಇಳಿಕೆಯ ಹೊರತಾಗಿಯೂ ಈ ಕಲೆಕ್ಷನ್ ಸೂಪರ್ ಹಿಟ್ ಸಿನಿಮಾಗೆ ಸಮ ಎಂದು ಹೇಳಲಾಗುತ್ತಿದೆ.

More from Filmibeat

English summary
Shyam Singha Roy actress Sai Pallavi entered the theaters in Burkha. Sai Pallavi wanted to know the reaction of the audiences, video goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X