ಬರ್ತ್‌ಡೇ ಪಾರ್ಟಿಯಲ್ಲಿ ವಿದೇಶಿ ಮದ್ಯ, ಗಾಂಜಾ ಸಮೇತ ಸಿಕ್ಕಿಬಿದ್ದ ತೆಲುಗು ಗಾಯಕಿ ಮಂಗ್ಲಿ

ತೆಲುಗು, ಕನ್ನಡ ಸೇರಿ ಸಿನಿಮಾಗಳಲ್ಲಿ ಸೂಪರ್‌ ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಮಂಗ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಹಾಗೂ ತೆಲುಗಿನ ಜಾನಪದ ಗಾಯಕಿ ಮಂಗ್ಲಿ ರೆಸಾರ್ಟ್ ಒಂದರಲ್ಲಿ ತನ್ನ ಹುಟ್ಟುಹಬ್ಬದ ಪ್ರಯುಕ್ತ ಪಾರ್ಟಿಯನ್ನು ನೀಡಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದು, ಆ ಪಾರ್ಟಿಯಲ್ಲಿ ವಿದೇಶಿ ಮದ್ಯ ಹಾಗೂ ಗಾಂಜಾ ಸಿಕ್ಕಿದೆ. ಅಲ್ಲದೆ ಪಾರ್ಟಿಯಲ್ಲಿ ಭಾಗಿಯಾದವರ ವೈದ್ಯಕೀಯ ತಪಾಸೆಣೆಯಲ್ಲಿಯೂ ಇದು ಖಾತ್ರಿಯಾಗಿದೆ.

ಹೈದರಾಬಾದ್​ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್‌ನಲ್ಲಿ ಗಾಯಕಿ ಮಂಗ್ಲಿ ಬರ್ತ್‌ಡೇ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಗೆ ತೆಲುಗು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ತಡರಾತ್ರಿ ಮಂಗ್ಲಿ ಬರ್ತ್‌ಡೇ ಪಾರ್ಟಿ ನಡೆಯುವಾಗ ದಿಢೀರನೇ ಪೊಲೀಸರು ದಾಳಿ ಮಾಡಿದ್ದರು. ಈ ಪಾರ್ಟಿಯಲ್ಲಿ ಸುಮಾರು 50 ಮಂದಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

Singer Mangli landed in trouble as foreign liquor marijuana were found at her birthday party

ಆಪ್ತರು ಹಾಗೂ ತೆಲುಗು ಚಿತ್ರರಂಗದ ಸ್ನೇಹಿತರಿಗೆ ಈ ಪಾರ್ಟಿಗೆ ಮಂಗ್ಲಿ ಆಹ್ವಾನ ನೀಡಿದ್ದರು. ಈ ಪಾರ್ಟಿಯಲ್ಲಿ ವಿದೇಶಿ ಮದ್ಯ ಹಾಗೂ ಗಾಂಜಾ ಸರಬರಾಜು ಆಗಿರುವ ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ತ್ರಿಪುರ ರೆಸಾರ್ಟ್‌ಗೆ ಮಧ್ಯರಾತ್ರಿ ದಾಳಿ ಮಾಡಿದ್ದರು. ಈ ವೇಳೆ ಗಾಯಕಿ ಮಂಗ್ಲಿ ಸೇರಿ ಪಾರ್ಟಿಯಲ್ಲಿ ಭಾಗವಹಿಸಿದ್ದವರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿ ಕೊಡಲಾಗಿತ್ತು. ಈ ವೇಳೆ 9 ಮಂದಿಗೆ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ಇದಲ್ಲದೆ, ಪೊಲೀಸರು ಪಾರ್ಟಿಯಲ್ಲಿ 48 ಜನರ ಮೇಲೆ ಗಾಂಜಾ ಪರೀಕ್ಷೆಗಳನ್ನು ನಡೆಸಿದ್ದು, ಅದರಲ್ಲಿ 9 ಜನರಿಗೆ ಪಾಸಿಟಿವ್ ಬಂದಿದೆ. ಪಾರ್ಟಿ ಆಯೋಜಕರ ವಿರುದ್ಧ ಪೊಲೀಸರು NDPS ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ಘಟನೆ ಈಗ ಚಲನಚಿತ್ರ ವಲಯದಲ್ಲಿ ಬಿಸಿ ವಿಷಯವಾಗಿದೆ.

ಹೈದರಾಬಾದ್‌ನ ಮಾದಕ ವಸ್ತು ನಿಗ್ರಹ ದಳದ ಮಂಗ್ಲಿ ಬರ್ತ್‌ಡೇ ಪಾರ್ಟಿ ಮೇಲೆ ದಾಳಿ ಮಾಡಿ ಕೇಸ್‌ ಅನ್ನು ದಾಖಲಿಸಿಕೊಂಡಿದೆ. ತ್ರಿಪುರ ರೆಸಾರ್ಟ್‌ನ ಮಾನೇಜರ್ ಹಾಗೂ ಗಾಯಕಿ ಮಂಗ್ಲಿ ಮೇಲೆ ದೂರು ದಾಖಲು ಮಾಡಲಾಗಿದೆ. ಮೂಲಗಳ ಪ್ರಕಾರ ಅನುಮತಿಯನ್ನು ಪಡೆದೆ ಗಾಯಕಿ ಮಂಗ್ಲಿ ಈ ಪಾರ್ಟಿಯನ್ನು ಆಯೋಜನೆ ಮಾಡಿದ್ದರು. ಹೀಗಾಗಿ ರೆಸಾರ್ಟ್ ಮ್ಯಾನೇಜರ್ ಹಾಗೂ ಮಂಗ್ಲಿ ವಿರುದ್ಧ ದೂರನ್ನು ದಾಖಲು ಮಾಡಲಾಗಿದೆ.

Singer Mangli landed in trouble as foreign liquor marijuana were found at her birthday party

ಇನ್ನೊಂದು ಕಡೆ ಇದೇ ರೆಸಾರ್ಟ್‌ನಲ್ಲಿ ಗಾಂಜಾವನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಇನ್ನು ಮಂಗ್ಲಿ ಬರ್ತ್‌ಡೇ ಪಾರ್ಟಿ ಮಾಡುತ್ತಿರುವ ವೇಳೆ ಮಾಡಿದ ದಾಳಿಯಲ್ಲಿ ದಾಮೋದರ್ ಎಂಬುವ ವ್ಯಕ್ತಿ ಗಾಂಜಾ ಸೇವಿದ್ದನ್ನು ಎಂದು ಹೇಳಲಾಗಿದೆ. ಹೀಗಾಗಿ ಪೊಲೀಸರು ಆ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಯನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ಹಾಗೇ ಇದೇ ಪಾರ್ಟಿಯಲ್ಲಿ ಸಿಂಗಲ್ ದಿವಿ, ಸಿನಿ ಸಾಹಿತಿ ಕಾಸರ್ಲಾ ಶ್ಯಾಮ್ ಕೂಡ ಭಾಗವಹಿಸಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದವರ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇನ್ನು ತನ್ನ ವಿಶಿಷ್ಠ ಕಂಠದಿಂದ ಸಂಗೀತ ಕ್ಷೇತ್ರದಲ್ಲಿ ಮಂಗ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಕನ್ನಡದಲ್ಲಿ 'ರಾಬರ್ಟ್' ಸಿನಿಮಾದ "ಕಣ್ಣು ಹೊಡೆಯಾಕಾ" ಹಾಡಿನ ತೆಲುಗು ಅವತರಣಿಕೆ ಸೇರಿದಂತೆ ಕನ್ನಡದಲ್ಲೂ ಕೆಲವು ಹಾಡುಗಳನ್ನು ಹಾಡಿದ್ದಾರೆ. ಹಾಗೇ ತೆಲುಗಿನಲ್ಲಿ "ರಾಮುಲೋ ರಾಮುಲಾ", " ಬುಲೆಟ್ ಸಾಂಗ್", "ಸಾರಂಗ ಧರಿಯಾ", "ಭೂಮ್ ಬಾಧಲ್", "ಜಿಂತಾಕ್ ಚಿಂತಾಕ್", "ಲಡ್ಡು ಗಾನಿ ಪೆಳ್ಳಿ" ಅಂತಹ ಸೂಪರ್ ಹಿಟ್ ಹಾಡುಗಳನ್ನು ಮಂಗ್ಲಿ ಹಾಡಿದ್ದಾರೆ. ಸದ್ಯಕ್ಕೀಗ ಬರ್ತ್‌ಡೇ ಪಾರ್ಟಿ ಮಾಡಿ ವಿವಾದದಲ್ಲಿ ಸಿಕ್ಕಿಬಿದ್ದಿದ್ದಾರೆ. ಇನ್ನು ತನಿಖೆ ಬಳಿಕ ಅಸಲಿ ಮತ್ತಷ್ಟು ಸಂಗತಿ ಹೊರ ಬೀಳುವ ಸಾಧ್ಯತೆಯಿದೆ.

More from Filmibeat

English summary
Singer Mangli landed in trouble as foreign liquor marijuana were found at her birthday party.
Read more about: mangli singer birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X