ಸೋಶಿಯಲ್ ಮೀಡಿಯಾದಲ್ಲಿ ಪವನ್ ಕಲ್ಯಾಣ್, ವಿಜಯ್ ದೇವರಕೊಂಡ ಫ್ಯಾನ್ಸ್ ಮಧ್ಯೆ ಯುದ್ಧ!
ಟಾಲಿವುಡ್‌ನಲ್ಲಿ ಹೊಸ ಸಿನಿಮಾವೊಂದು ಫಸ್ಟ್ ಲುಕ್‌ನಿಂದಲೇ ಸದ್ದು ಮಾಡುತ್ತಿದೆ. ಅದುವೇ ಸಮಂತಾ ಹಾಗೂ ವಿಜಯ್ ದೇವರಕೊಂಡ ಅಭಿನಯದ 'ಖುಷಿ'. ಈ ಸಿನಿಮಾ ಫಸ್ಟ್ ಲುಕ್ ಅನ್ನು ಸಿನಿಮಾ ಟೀಮ್ ಇಂದು ( ಮೇ 16) ಬಿಡುಗಡೆ ಮಾಡಿತ್ತು. ಸಿನಿಮಾ ಟೈಟಲ್ ಹಾಗೂ ಪೋಸ್ಟರ್ ನೋಡಿ ವಿಜಯ್ ಹಾಗೂ ಸಮಂತಾ ಅಭಿಮಾನಿಗಳು ಥ್ರಿಲ್ ಆಗಿದ್ದರು.
ಇಬ್ಬರ ಅಭಿಮಾನಿಗಳು ಥ್ರಿಲ್ ಆಗುವುದಕ್ಕೆ ಎರಡು ಕಾರಣವಿದೆ. ಒಂದು ಸಮಂತಾ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್. ಇನ್ನೊಂದು ಸಿನಿಮಾದ ಟೈಟಲ್. ಈ ಎರಡೂ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ.
ಸಮಂತಾ ಹಾಗೂ ವಿಜಯ್ ದೇವರಕೊಂಡು ಸಿನಿಮಾ 'ಖುಷಿ' ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಕಾಳವೇ ಆರಂಭ ಆಗಿದೆ. ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ಹಾಗೂ ವಿಜಯ್ ದೇವರಕೊಂಡ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾದಟಕ್ಕೆ ಇಳಿದಿದ್ದಾರೆ. ಅದ್ಯಾಕೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಬೇಸರವೇಕೆ?
ಸಮಂತಾ ಹಾಗೂ ವಿಜಯ್ ದೇವರಕೊಂಡ ಅಭಿನಯದ ಸಿನಿಮಾ 'ಖುಷಿ' ಟೈಟಲ್ ಅನೌನ್ಸ್ ಆಗುತ್ತಿದ್ದಂತೆ, ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಬೇಸರವಾಗಿದೆ. ಅದಕ್ಕೆ ಕಾರಣ 20 ವರ್ಷಗಳ ಹಿಂದೆ ರಿಲೀಸ್ ಆಗಿದ್ದ 'ಖುಷಿ' ಸಿನಿಮಾ. ಪವನ್ ಕಲ್ಯಾಣ್ ಹಾಗೂ ಭೂಮಿಕಾ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಹೀಗಾಗಿ 20 ವರ್ಷ ಹಿಂದಿನ ಸಿನಿಮಾದ ಫೀಲ್ ಅನ್ನು ಹೊಸ ಸಿನಿಮಾ ಹಾಳುತ್ತಿದೆ ಎಂಬುದು ಪವನ್ ಅಭಿಮಾನಿಗಳ ಬೇಸರಕ್ಕೆ ಕಾರಣ.

20 ವರ್ಷದ ಹಿಂದೆ ತೆರೆಕಂಡಿತ್ತು 'ಖುಷಿ'
'ಖುಷಿ' ಇದೇ ಹೆಸರಿನ ಸಿನಿಮಾ 20 ವರ್ಷದ ಹಿಂದೆ ತೆರೆಕಂಡಿತ್ತು. ಈ ಸಿನಿಮಾ ಕ್ಲಾಸಿಕ್ ಲವ್ ಸ್ಟೋರಿಗೆ ಜನರು ಜನಸೋತಿದ್ದರು. ಅದರಲ್ಲೂ ಪವನ್ ಕಲ್ಯಾಣ್ ಹಾಗೂ ಭೂಮಿಕಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಈ ಸಿನಿಮಾ ಹಾಡು, ಕಥೆ, ಸ್ಕ್ರೀನ್ ಪ್ಲೇ, ಆಕ್ಷನ್ ಎಲ್ಲವೂ ಸೂಪರ್ ಡೂಪರ್ ಹಿಟ್ ಆಗಿತ್ತು. ಇಂದಿಗೂ ಪವನ್ ಕಲ್ಯಾಣ್ ಅಭಿಮಾನಿಗಳು ಈ ಸಿನಿಮಾವನ್ನು ಪದೇ ಪದೆ ಟಿವಿಯಲ್ಲಿ ನೋಡಿ ಎಂಜಾಯ್ ಮಾಡುತ್ತಾರೆ. ತಮಿಳಿನ ಇದೇ ಸಿನಿಮಾದ ರಿಮೇಕ್ ಆಗಿದ್ದರೂ, ಟಾಲಿವುಡ್ ಅಲ್ಲಿನ ನೇಟಿವಿಟಿಗೆ ತಕ್ಕಂತೆ ನಿರ್ಮಾಣ ಮಾಡಿದ್ದರು.

ಹೊಸ ಸಿನಿಮಾ ಮೇಲ್ಯಾಕೆ ಕೋಪ?
'ಖುಷಿ' ಸಿನಿಮಾ ಟೈಟಲ್ ಅನೌನ್ಸ್ ಆಗುತ್ತಿದ್ದಂತೆ ಪವನ್ ಕಲ್ಯಾಣ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಲು ಆರಂಭಿಸಿದ್ದಾರೆ. " ಖುಷಿ ಸಿನಿಮಾ ಪವನ್ ಕಲ್ಯಾಣ್ ಅವರ ಕ್ಲಾಸಿಕ್ ಸಿನಿಮಾ. ನಿರ್ಮಾಪಕರು ಈ ಸಿನಿಮಾ ಟೈಟಲ್ ಅನ್ನು ಇಟ್ಟುಕೊಳ್ಳಬೇಕಿತ್ತು. ಖುಷಿ ಅಂದರೆ ಪವನ್ ಕಲ್ಯಾಣ್. ಪವನ್ ಕಲ್ಯಾಣ್ ಅಂದರೆ ಖುಷಿ. ಈಗ ವಿಜಯ್ ದೇವರಕೊಂಡ ತೆಗೆದುಕೊಂಡಿದ್ದಾರೆ. " ಪವನ್ ಅಭಿಮಾನಿಯೊಬ್ಬ ಕಿಡಿಕಾರಿದ್ದಾನೆ.

ರೌಡಿ ಫ್ಯಾನ್ಸ್ ತಿರುಗೇಟು?
ಪವನ್ ಕಲ್ಯಾಣ್ ಅಭಿಮಾನಿಗಳು ತಿರುಗಿಬೀಳುತ್ತಿದ್ದಂತೆ ರೌಡೊ ಫ್ಯಾನ್ಸ್ ಕಮೆಂಟ್ಸ್ ಕೊಡಲು ಆರಂಭಿಸಿದ್ದಾರೆ. " ಪವನ್ ಕಲ್ಯಾಣ್ ಖುಷಿ ಸಿನಿಮಾವೇ ತಮಿಳು ಸಿನಿಮಾದ ರಿಮೇಕ್. ಟೈಟಲ್ ಅನ್ನು ಮರಬಳಕೆ ಮಾಡುವುದರಲ್ಲಿ ಯಾವುದೇ ರೀತಿಯ ತೊಂದರೆಯಿಲ್ಲ. ಈ ಹಿಂದೆ ಹಲವು ಬಾರಿ ನಡೆದಿದೆ." ಎಂದು ವಿಜಯ್ ಅಭಿಮಾನಿ ಹೇಳಿದ್ರೆ, ಇನ್ನೊಬ್ಬ " ಪವನ್ ಕಲ್ಯಾಣ್ ಅಭಿಮಾನಿಗಳು ಓವರ್ ರಿಯಾಕ್ಷನ್ ಕೊಡುತ್ತಿದ್ದಾರೆ." ಎಂದು ಆಕ್ರೋಶ ಹೊರಹಾಕಿದ್ದಾರೆ.


Click it and Unblock the Notifications











