"ಅನುಷ್ಕಾ ಶೆಟ್ಟಿ ಹೀರೋಯಿನ್ ಆಗಲು ಕಾರಣ ನಾನೇ" ಎಂದು ಸೋನು ಸೋದ್‌; ಸ್ವೀಟಿಗೆ ಹೇಗೆ ಪರಿಚಯ?

ಕರಾವಳಿಯ ಬ್ಯೂಟಿ ಅನುಷ್ಕಾ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್. ದಕ್ಷಿಣ ಭಾರತದ ಹೀರೊಗಳಂತೆಯೇ ಅನುಷ್ಕಾ ಶೆಟ್ಟಿಗೂ ಅವರದ್ದೇ ಆದ ಅಪಾರ ಪ್ರಮಾಣದಲ್ಲಿ ಫ್ಯಾನ್ಸ್ ಇದ್ದಾರೆ. ಮೆಗಾ ಬ್ಲಾಕ್‌ಬ್ಲಸ್ಟರ್ ಸಿನಿಮಾಗಳಲ್ಲಿ ನಟಿಸಿ ಟಾಲಿವುಡ್‌ನ ಲೇಡಿ ಸೂಪರ್‌ಸ್ಟಾರ್ ಅಂತಾನೂ ಅನಿಸಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಇತ್ತೀಚೆಗೆ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ಬೇಡಿಕೆಯಂತೂ ಕಮ್ಮಿಯಾಗಿಲ್ಲ.

ಅಂದ್ಹಾಗೆ, ಅನುಷ್ಕಾ ಶೆಟ್ಟಿ 'ಸೂಪರ್' ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಇದೇ ಅವರ ಮೊದಲ ಸಿನಿಮಾ. ಇಲ್ಲಿಂದ ಕರಾವಳಿಯ ಸ್ವೀಟಿಗೆ ಮತ್ತೆಂದೂ ಹಿಂತಿರುಗಿ ನೋಡುವ ಪ್ರಸಂಗವೇ ಬಂದಿಲ್ಲ. ಯಶಸ್ಸಿನ ಮೇಲೆ ಯಶಸ್ಸು ಸಿಗುತ್ತಲೇ ಹೋಯ್ತು. 40ನೇ ವಯಸ್ಸಿನಲ್ಲಿಯೂ ಅನುಷ್ಕಾ ಶೆಟ್ಟಿ ಇಂದಿಗೂ ಸ್ಟಾರ್ ನಟಿಯಾಗಿಯೇ ಗುರುತಿಸಿಕೊಂಡಿದ್ದಾರೆ.

Sonu Sood says he recommended Anushka Shetty to Puri Jagannadh for Super movie

ಅನುಷ್ಕಾ ಶೆಟ್ಟಿಗೆ ಮೊದಲ ಸಿನಿಮಾ ಸಿಕ್ಕಿದ್ದು ಹೇಗೆ? ಕನ್ನಡದ ನಟಿಯಾದರೂ, ಟಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದು ಹೇಗೆ? ಅಂದಿನ ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ ಇವರನ್ನು ಆಯ್ಕೆ ಮಾಡಿದ್ದು ಹೇಗೆ? ಅನ್ನೋ ಅಭಿಮಾನಿಗಳ ಕುತೂಹಲವನ್ನು ಬಹುಭಾಷಾ ನಟ ಸೋನು ಸೂದ್ ದುಪ್ಪಟ್ಟು ಮಾಡಿದ್ದಾರೆ.

ಅನುಷ್ಕಾ ಶೆಟ್ಟಿಯ ಮೊದಲ ಸಿನಿಮಾ 'ಸೂಪರ್‌'ಗೆ ಶಿಫಾರಸ್ಸು ಮಾಡಿದ್ದು ನಾನೇ ಎಂದು ಬಾಲಿವುಡ್ ನಟ ಸೋನು ಸೂದ್ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸೋನು ಸೂದ್ ಈ ಮಾತನ್ನು ಹೇಳಿಕೊಂಡಿದ್ದಾರೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅನುಷ್ಕಾ ಶೆಟ್ಟಿ ಮೊದಲ ಸಿನಿಮಾ ಬಗ್ಗೆ ಸೋನು ಸೂದ್ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

Sonu Sood says he recommended Anushka Shetty to Puri Jagannadh for Super movie

2005ರಲ್ಲಿ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ 'ಸೂಪರ್' ಸಿನಿಮಾಗೆ ಆಕ್ಷನ್ ಕಟ್ ಹೇಳುವುದಕ್ಕೆ ಮುಂದಾಗಿದ್ದರು. ನಾಗಾರ್ಜುನಾ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಜೊತೆ ಅವರೇ ಸಿನಿಮಾದ ಹೀರೊನೂ ಆಗಿದ್ದರು. ಅದೇ ಸಿನಿಮಾದಲ್ಲಿ ಸೋನು ಸೂದ್ ಕೂಡ ನಟಿಸುತ್ತಿದ್ದರು. ಆದರೆ, ಪುರಿ ಜಗನ್ನಾಥ್ ಹೊಸ ನಾಯಕಿಯ ಹುಡುಕಾಟದಲ್ಲಿ ಇದ್ದರು. ಆಗ ಸೋನು ಸೂದ್ ಕಣ್ಣಿಗೆ ಬಿದ್ದಿದ್ದೇ ಅನುಷ್ಕಾ ಶೆಟ್ಟಿ. ಅದ್ಹೇಗೆ ಅನ್ನೋದನ್ನು ಸೋನು ಸೂದ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

"ಅನುಷ್ಕಾ, ನಾನು ಮುಂಬೈನಲ್ಲಿ ಒಂದೇ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದೆವು. ಆ ವೇಳೆಗಾಗಲೇ ನಾನು ಚಿತ್ರರಂಗದಲ್ಲಿ ಇದ್ದೆ. ಅದಾಗಲೇ ನಿರ್ದೇಶಕ ಪುರಿ ಜಗನ್ನಾಥ್ ನನಗೆ ಒಳ್ಳೆಯ ಗೆಳೆಯರಾಗಿದ್ದರು. ಹಿಂದಿಯ ಬ್ಲಾಕ್ ಬಸ್ಟರ್ ಸಿನಿಮಾ 'ಧೂಮ್' ಪ್ರೇರಣೆಯಿಂದ ತೆಲುಗಿನಲ್ಲಿ 'ಸೂಪರ್' ಮಾಡುತ್ತಿದ್ದೇನೆ ಎಂದರು. ಹಾಗೇ ನಾಯಕಿಗಾಗಿ ಹೊಸ ಕಲಾವಿದರನ್ನು ಹುಡುಕುತ್ತಿದ್ದೇವೆ ಎಂದಿದ್ದರು." ಎಂದು ಆ ದಿನವನ್ನು ನೆನಪಿಸಿಕೊಂಡಿಕೊಂಡಿದ್ದಾರೆ.

ಇದೇ ವೇಳೆ ಅನುಷ್ಕಾ ಶೆಟ್ಟಿಯನ್ನು ಸೋನು ಸೂದ್ ಜಿಮ್‌ನಲ್ಲಿ ನೋಡಿದ್ದರು. ಆದರೆ, ಅಲ್ಲಿವರೆಗೂ ಇಬ್ಬರು ಒಬ್ಬರನ್ನೊಬ್ಬರು ನೋಡಿದ್ದರು ಅಷ್ಟೇ. " ಪುರಿ ಜಗನ್ನಾಥ್‌ಗೆ ನಾನು ಅನುಷ್ಕಾ ಬಗ್ಗೆ ಹೇಳಿದ್ದೆ. ಅಲ್ಲಿಯವರೆಗೂ ಅನುಷ್ಕಾ ಜೊತೆ ಮಾತಾಡಿರಲಿಲ್ಲ. ಜಿಮ್‌ನಲ್ಲಿ ಎದುರಾದಾಗ ಆಕೆ ನಗುತ್ತಿದ್ದಳಷ್ಟೇ. ಆಗಲೇ ನಾನು ಜಿಮ್ ಟ್ರೈನರ್‌ನಿಂದ ಅವಳ ನಂಬರ್ ತೆಗೆದುಕೊಂಡು ಪೂರಿ ಜಗನ್ನಾಥ್‌ಗೆ ಹೇಳಿದೆ. ಆ ನಂತರ ಅನುಷ್ಕಾ ಸೂಪರ್ ಸಿನಿಮಾಗೆ ಆಯ್ಕೆಯಾದರು" ಎಂದು ಸೋನು ಸೂದ್ ಹೇಳಿದ್ದಾರೆ.

ಬಳಿಕ 'ಸೂಪರ್' ಸೆಟ್ಟಿಗೆ ಅನುಷ್ಕಾ ಶೆಟ್ಟಿ ಎಂಟ್ರಿ ಕೊಟ್ಟ ಸೋನು ಸೂದ್ ನೋಡಿ ಆಶ್ವರ್ಯಗೊಂಡಿದ್ದರಂತೆ. ಬಳಿಕ ಪುರಿ ಜಗನ್ನಾಥ್ ಅವರೇ ಈ ಸಿನಿಮಾಗೆ ಆಯ್ಕೆ ಆಗುವುದಕ್ಕೆ ಸೋನು ಸೂದ್ ಅವರೇ ಕಾರಣ ಎಂದಿದ್ದರು. ಅಲ್ಲಿಂದ ಸೋನು ಸೂದ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರೂ ಉತ್ತಮ ಗೆಳೆಯರಾಗಿ ಉಳಿದಿದ್ದೇವೆ ಎಂದಿದ್ದಾರೆ.

More from Filmibeat

English summary
Sonu Sood recommended Anushka Shetty for Super movie;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X