'ಘಾಟಿ' ಅನುಷ್ಕಾ ಶೆಟ್ಟಿ ಬಳಿ ಇರುವ ಆಸ್ತಿ ಎಷ್ಟು? 'ಬಾಹುಬಲಿ 2' ಬಳಿಕ ಸಿನಿಮಾ ತಡವಾಗುತ್ತಿರೋದೇಕೆ?

ಕರಾವಳಿಯ ಸುಂದರಿ ಅನುಷ್ಕಾ ಶೆಟ್ಟಿ ದಕ್ಷಿಣ ಭಾರತದ ಜನಪ್ರಿಯ ನಟಿ. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾಗಳನ್ನು ಕೊಟ್ಟಿರುವ ನಟಿಯೀಕೆ. ಈ ನಟಿಯ ಹೆಸರಿನಲ್ಲಿರುವ ದಾಖಲೆಯನ್ನು ಬಹುಶ: ದಕ್ಷಿಣ ಭಾರತದ ನಟಿಯರು ಮುರಿಯುವುದು ಸದ್ಯಕ್ಕಂತೂ ಅಸಾಧ್ಯ.

ಸೋಲೊ ನಾಯಕಿಯಾಗಿ ನಟಿಸಿದ ಸಿನಿಮಾಗಳೇ ಬಾಕ್ಸಾಫೀಸ್‌ ಅನ್ನು ಚಿಂದಿ ಉಡಾಯಿಸಿವೆ. ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಅನುಷ್ಕಾ ಶೆಟ್ಟಿಗೆ ಬಾಲಿವುಡ್‌ನಿಂದಲೂ ಆಫರ್‌ಗಳು ಬಂದಿದ್ದವು. ಆದರೆ, ಅದ್ಯಾಕೋ ಅನುಷ್ಕಾ ಶೆಟ್ಟಿ ಆ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳಲಿಲ್ಲ.

South actress Anushka Shetty net worth assets and upcoming movies

'ಬಾಹುಬಲಿ' ಕೊಟ್ಟ ಸಕ್ಸಸ್‌ಗೆ ಅನುಷ್ಕಾ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳಲ್ಲಿಯೇ ನಟಿಸುತ್ತಾರೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಅನುಷ್ಕಾ ನಿಧಾನವಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಅದ್ಯಾಕೆ ಅನ್ನೋದು ಇಂದಿಗೂ ಗೊತ್ತಾಗಲೇ ಇಲ್ಲ. ಅಷ್ಟೇ ಅಲ್ಲದೆ 'ಬಾಹುಬಲಿ 2' ನಟಿಸಿದ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಸದ್ದು ಮಾಡಲೇ ಇಲ್ಲ.

ಅನುಷ್ಕಾ ಶೆಟ್ಟಿ ಈಗಲೂ ಗ್ರೀನ್ ಸಿಗ್ನಲ್ ಕೊಟ್ಟರೆ ನಿರ್ಮಾಪಕರು ಅವರೊಂದಿಗೆ ಸಿನಿಮಾ ಮಾಡುವುದಕ್ಕೆ ಕ್ಯೂ ನಿಲ್ಲುತ್ತಾರೆ. ಆದರೆ, ಅನುಷ್ಕಾ ಶೆಟ್ಟಿನೇ ಆಸಕ್ತಿ ತೋರುತ್ತಿಲ್ಲ ಅನ್ನೋ ಹರಿದಾಡುತ್ತಿದ್ದ ಸುದ್ದಿ. ಆದ್ರೀಗ ಎರಡು ಸಿನಿಮಾಗಳು ಅವರ ಕೈಯಲ್ಲಿವೆ. ಇಂದು (ನವೆಂಬರ್ 7) 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅನುಷ್ಕಾ ಶೆಟ್ಟಿಗೆ ಆ ಎರಡೂ ಚಿತ್ರತಂಡ ಭರ್ಜರಿ ಗಿಫ್ಟ್ ಕೊಟ್ಟಿವೆ. ಅದು ಅನುಷ್ಕಾ ಫ್ಯಾನ್ಸ್‌ ಅಲ್ಲಿ ನಿರೀಕ್ಷೆಗಳನ್ನು ಹುಟ್ಟಾಕಿದೆ.

ಸಿನಿಮಾ ಮಾಡಿಲ್ಲ ಅಂದ ಮಾತ್ರಕ್ಕೆ ಅನುಷ್ಕಾ ಶೆಟ್ಟಿ ಒಟ್ಟು ಆಸ್ತಿಯಲ್ಲೇನು ಕಮ್ಮಿಯಾಗಿಲ್ಲ. ದಕ್ಷಿಣ ಭಾರತದ ಶ್ರೀಮಂತ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅನುಷ್ಕಾ ಶೆಟ್ಟಿ ಬಳಿ ಇರುವ ಆಸ್ತಿಯ ಬಗ್ಗೆನೂ ಚರ್ಚೆಯಾಗುತ್ತಿದೆ. ಈಗಾಗಲೇ ವರದಿಯಾಗಿರುವ ಪ್ರಕಾರ ಅನುಷ್ಕಾ ಶೆಟ್ಟಿ ಬಳಿ ಸುಮಾರು 133 ಕೋಟಿ ರೂಪಾಯಿ ಆಸ್ತಿಯಿದೆ ಎನ್ನಲಾಗಿದೆ. ಸಿನಿಮಾ ಹಾಗೂ ಹೂಡಿಕೆಗಳಿಂದ ಬಹುತೇಕ ಆಸ್ತಿಯ ಮೂಲ ಎನ್ನಲಾಗಿದೆ.

ಇನ್ನೊಂದು ಕಡೆ ಅನುಷ್ಕಾ ಶೆಟ್ಟಿ ಬಳಿಕ 12 ಕೋಟಿ ರೂಪಾಯಿ ಬೆಲೆ ಬಾಳುವ ಐಷಾರಾಮಿ ಬಂಗಲೆ ಅಂತ ಮಾಧ್ಯಮಗಳು ವರದಿ ಮಾಡಿವೆ. ಬಿಎಂಡ್ಲ್ಯೂ 6 ಸೀರಿಸ್, ಔಡಿ ಕ್ಯೂ 5 ಸೇರಿದಂತೆ ಇನ್ನೂ ಕೆಲವು ದುಬಾರಿ ಕಾರುಗಳಿವೆ ಎಂದು ವರದಿಯಾಗಿದೆ. ಅನುಷ್ಕಾ ಶೆಟ್ಟಿ ಬೆಂಗಳೂರಿನಲ್ಲಿ ಶಿಕ್ಷಣ ಮುಗಿಸಿದ ಬಳಿಕ ಸಿನಿಮಾ ಎಂಟ್ರಿ ಕೊಟ್ಟಿದ್ದರು. 2005ರಲ್ಲಿ ತೆಲುಗಿನ ಸೂಪರ್ ಸಿನಿಮಾ ಮೂಲಕ ಅನುಷ್ಕಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು ಅಲ್ಲಿಂದ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

'ಬಾಹುಬಲಿ' ಬಳಿಕ ಸೈಲೆಂಟ್ ಆಗಿದ್ದ ಅನುಷ್ಕಾ ಶೆಟ್ಟಿ ಈಗ ಮತ್ತೆ ಅದೇ ಜೋಷ್‌ನಲ್ಲಿ ಮರಳಿದ್ದಾರೆ. ಕ್ರಿಶ್ ಜಗರ್ಲಮುಡಿ ನಿರ್ದೇಶಿಸುತ್ತಿರುವ 'ಘಾಟಿ'ಯಲ್ಲಿ ಖಡಕ್ ಲುಕ್ ಕೊಟ್ಟಿದ್ದಾರೆ. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿವೆ. ಇನ್ನೊಂದು ಮಲಯಾಳಂ ಸಿನಿಮಾರಂಗೂ ಎಂಟ್ರಿ ಕೊಟ್ಟಿದ್ದು, 'ಕಥನಾರ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಎರಡೂ ಸಿನಿಮಾ ಝಲಕ್‌ ನೋಡಿ ಅವರ ಅಭಿಮಾನಿಗಳಿಗೆ ಮತ್ತೆ ಹಳೆಯ ಅನುಷ್ಕಾ ಶೆಟ್ಟಿನೇ ನೆನಪಾಗುತ್ತಿದೆ.

More from Filmibeat

English summary
South actress Anushka Shetty net worth, assets and upcoming movies;ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಬಳಿ ಇರುವ ಒಟ್ಟು ಆಸ್ತಿ ಎಷ್ಟು?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X