'ನಾನು ಸಮಂತಾಳಂತೆ ಆಗಬೇಕು': ಕೀರ್ತಿ ಸುರೇಶ್ ಶೇರ್ ಮಾಡಿದ ಫ್ಯಾನ್ ವಿಡಿಯೋಗೆ ನೆಟ್ಟಿಗರು ಕಮೆಂಟ್ ಏನು?

ಸಮಂತಾ-ನಾಗಚೈತನ್ಯ ವಿಚ್ಛೇದನ ಫ್ಯಾನ್ಸ್ ವಾರ್ ಆಗಿ ಬದಲಾಗಿದೆ. ದಾಂಪತ್ಯಕ್ಕೆ ಅಂತ್ಯ ಹಾಡುತ್ತಿರುವ ವಿಷಯ ಅನೌನ್ಸ್ ಮಾಡುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಅವರ ಮೆಚ್ಚಿನ ಸ್ಟಾರ್ ಬೆಂಬಲಕ್ಕೆ ನಿಂತಿದ್ದರು. ಒಬ್ಬರ ಬಗ್ಗೆ ಕಮೆಂಟ್ ಮಾಡಿದರೆ ಇನ್ನೊಬ್ಬರು ಸಿಡಿದೇಳುತ್ತಿದ್ದರು. ಇನ್ನೊಬ್ಬರ ಬಗ್ಗೆ ಕಮೆಂಟ್ ಮಾಡಿದರೆ ಮತ್ತೊಬ್ಬರು ಕಿಡಿಕಾರುತ್ತಿದ್ದರು. ಇದು ಒಂದೆರಡು ದಿನಗಳಲ್ಲಿ ಮುಗಿದು ಹೋಗುತ್ತೆ ಎಂದುಕೊಂಡಿದ್ದರು. ಆದರೆ, ಅದಿನ್ನೂ ಮುಂದುವರೆಯುತ್ತಲೇ ಇದೆ. ಅದಕ್ಕೆ ಸಾಕ್ಷಿ ಕೀರ್ತಿ ಸುರೇಶ್ ಶೇರ್ ಮಾಡಿದ ಒಂದು ವಿಡಿಯೋ.

ಟಾಲಿವುಡ್‌ನ ಕೀರ್ತಿ ಸುರೇಶ್ ಶೇರ್ ಮಾಡಿದ ಒಂದು ವಿಡಿಯೋ ಸಮಂತಾ ವಿರುದ್ಧ ನೆಟ್ಟಿಗರು ಸಿಡಿದೇಳುವಂತೆ ಮಾಡಿದೆ. ಹಾಗಂತ ಕೀರ್ತಿ ಸುರೇಶ್ ನೆಗೆವಿಟ್ ವಿಡಿಯೋವನ್ನು ಪೋಸ್ಟ್ ಮಾಡಿಲ್ಲ. ಅದರೂ ನೆಟ್ಟಿಗರು ಸಮಂತಾ ವಿರುದ್ಧ ಕಿಡಿಕಾರಿದ್ದಾರೆ. ಸಮಂತಾ ವಿರುದ್ಧ ಕಿಡಿಕಾರುವುದಕ್ಕೂ, ಕೀರ್ತಿ ಸುರೇಶ್ ವಿಡಿಯೋಗೂ ಏನು ಸಂಬಂಧ? ನೆಟ್ಟಿಗರು ಕಿಡಿಕಾರಿದ್ದು ಏಕೆ? ಅಸಲಿ ಅಸಲಿ ವಿಷಯ ಇಲ್ಲಿದೆ ನೋಡಿ.

ಕೀರ್ತಿ ಸುರೇಶ್ ಶೇರ್ ಮಾಡಿದ ವಿಡಿಯೋದಲ್ಲಿ ಏನಿದೆ?

ಕೀರ್ತಿ ಸುರೇಶ್ ಶೇರ್ ಮಾಡಿದ ವಿಡಿಯೋದಲ್ಲಿ ಏನಿದೆ?

ಕೀರ್ತಿ ಸುರೇಶ್ ಸಿನಿಮಾದ ಚಿತ್ರೀಕರಣವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ವೇಳೆ ಬಿಡುವು ಸಿಕ್ಕಾಗ ಕೀರ್ತಿ ಸುರೇಶ್ ಪುಟ್ಟ ಬಾಲಕಿಯೊಬ್ಬಳ ವಿಡಿಯೋವನ್ನು ಮಾಡಿದ್ದರು. ಈ ವಿಡಿಯೋವನ್ನು ಸಮಂತಾಗೂ ಶೇರ್ ಮಾಡಿದ್ದರು. ವಿಡಿಯೋದಲ್ಲಿ ಬಾಲಕಿ "ನಾನು ಮುಂದೆ ಸಮಂತಾಳಂತೆ ಆಗುತ್ತೇನೆ." ಎಂದಿದ್ದಳು. ಸಮಂತಾ ಕೂಡ ಖುಷಿಯಿಂದಲೇ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದರು. ಆದರೆ, ಸಮಂತಾ ಅಭಿಮಾನಿಗಳಿಗೆ ಮಾತ್ರ ಈ ವಿಡಿಯೋ ಇಷ್ಟ ಆಗಲಿಲ್ಲ. ಅದಕ್ಕೆ ಕಮೆಂಟ್ ಮೇಲೆ ಕಮೆಂಟ್ ಮಾಡುತ್ತಿದ್ದಾರೆ.

ಪುಟ್ಟ ಅಭಿಮಾನಿ ಹೇಳಿದ್ದು ಏನು?

ಕೀರ್ತಿ ಸುರೇಶ್ ಕ್ಯೂಟ್ ಆಗಿರುವ ಪುಟ್ಟ ಬಾಲಕಿಯನ್ನು ಶೂಟಿಂಗ್ ಬಿಡುವಿನ ವೇಳೆ ಮಾತಾಡಿಸಿದ್ದರು. ಕೀರ್ತಿ ಸುರೇಶ್ ಹಾಗೂ ಸಮಂತಾ ಪುಟ್ಟ ಅಭಿಮಾನಿ ನಡುವೆ ನಡೆದ ಕೆಲವೇ ಸೆಕೆಂಡುಗಳ ಸಂಭಾಷಣೆ ಸಮಂತಾ ಅಭಿಮಾನಿಗಳಿಗೆ ಇಷ್ಟ ಆಗಿದೆ. "ನೀನು ಬೆಳೆದು ದೊಡ್ಡವಳಾದ ಮೇಲೆ ಏನಾಗಲು ಬಯಸುತ್ತೀಯಾ? ಎಂದು ಕೀರ್ತಿ ಸುರೇಶ್ ಪ್ರಶ್ನೆ ಮಾಡಿದ್ದರು. ಆಗ ಸಮಂತಾ ಫ್ಯಾನ್" ನಾನು ಚಮಂತಾ (ಸಮಂತಾ)ಳಂತೆ ಆಗಬೇಕು" ಅಂತ ಹೇಳಿದ್ದಳು. ಅದೇ ವಿಡಿಯೋವನ್ನು ಖುಷಿಯಲ್ಲಿ ಕೀರ್ತಿ ಸುರೇಶ್ ಶೇರ್ ಮಾಡಿದ್ದರು.

ಬಾಲಕಿ ವಿಡಿಯೋಗೆ ಸಮಂತಾ ಪ್ರತಿಕ್ರಿಯೆ

ಬಾಲಕಿ ವಿಡಿಯೋಗೆ ಸಮಂತಾ ಪ್ರತಿಕ್ರಿಯೆ

ಸಮಂತಾ ಪುಟ್ಟ ಅಭಿಮಾನಿ ವಿಡಿಯೋ ಶೇರ್ ಮಾಡಿ, "ನಿನ್ನ ಡೈ ಹಾರ್ಡ್ ಫ್ಯಾನ್, ಚಮಂತಾ, ನೀನು ಈಕೆಯನ್ನು ಒಮ್ಮೆ ಭೇಟಿ ಆಗಲೇಬೇಕು" ಎಂದು ಕೀರ್ತಿ ಸುರೇಶ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಈ ವಿಡಿಯೋಗೆ ಸಮಂತಾ ಕೂಡ ಫುಲ್ ಖುಷಿಯಿಂದಲೇ ಪ್ರತಿಕ್ರಿಯೆ ನೀಡಿದ್ದರು. "ಈ ಕ್ಯೂಟಿ ಯಾರು" ಎಂದು ಕಮೆಂಟ್ ಮಾಡಿದ್ದರು. ತನ್ನ ಪುಟ್ಟ ಫ್ಯಾನ್ ಕಂಡು ಸಮಂತಾ ಹಿಗ್ಗಿದ ಈ ವಿಡಿಯೋ ನೆಟ್ಟಿಗರಿಗೆ ಇಷ್ಟ ಆಗಿಲ್ಲ. ಸಮಂತಾ ವಿರುದ್ಧ ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡುತ್ತಿದ್ದಾರೆ.

ಸಮಂತಾ ವಿರುದ್ಧ ನೆಟ್ಟಿಗರು ಕಿಡಿ

ಸಮಂತಾ ವಿರುದ್ಧ ನೆಟ್ಟಿಗರು ಕಿಡಿ

ಸಮಂತಾ ಕ್ಯೂಟ್ ಫ್ಯಾನ್ ವಿಡಿಯೋಗೆ ನೋಡಿ ನೆಟ್ಟಿಗರು ಉರಿದು ಬೀಳುತ್ತಿದ್ದಾರೆ. "ಯಾಕೆ ಸಮಂತಾ ರೀತಿ ಆಗಬೇಕು ಅಂತ ಬಯಸುತ್ತಾರೆ. ಒಂದೊಳ್ಳೆ ಕುಟುಂಬವನ್ನು ಬಿಟ್ಟು ಬಂದಿದ್ದಾರೆ. ಕೌಟುಂಬಿಕ ಜೀವನವನ್ನು ಹದಗೆಡಿಸಿಕೊಂಡಿದ್ದಾರೆ." ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ಈಕೆ ಅಗತ್ಯವಿಲ್ಲದ ಬೋಲ್ಡ್ ರೋಲ್‌ಗಳಲ್ಲಿ ಒಂದರ ಹಿಂದೊಂದರಂತೆ ನಟಿಸುತ್ತಿದ್ದಾಳೆ. ವಿಚ್ಛೇದನ ಬಳಿಕ ಎಲ್ಲಾ ಕಡೆ ಸುತ್ತುತ್ತಿದ್ದಾಳೆ." ಎಂದು ಕಮೆಂಟ್ ಮಾಡಿದ್ದಾರೆ. ವಿಚ್ಛೇದನ ಬಳಿಕ ಸಮಂತಾರನ್ನೇ ಟಾರ್ಗೆಟ್ ಮಾಡುತ್ತಿರುವುದಕ್ಕೂ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ.

More from Filmibeat

English summary
South Actress Keerthy Suresh records little girl video says Samantha is her fan. Keerthy Suresh posted short video of little girl saying that she wants to became Samantha. After sharing this video commenting badly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X