"ವದಂತಿಗಳಿಗೂ ನನಗೂ ಸಂಬಂಧವಿಲ್ಲ.. ನಾನು ತಪ್ಪು ಮಾಡಿಲ್ಲ": ನಾಗಚೈತನ್ಯ ಜೊತೆ ಡೇಟಿಂಗ್ ಬಗ್ಗೆ ಶೋಭಿತಾ ಸ್ಪಷ್ಟನೆ!
ಟಾಲಿವುಡ್‌ನಲ್ಲಿ ನಾಗ ಚೈತನ್ಯ, ಸಮಂತಾ ಹಾಗೂ ಶೋಭಿತಾ ಧುಲಿಪಾಲಾ ಈ ಮೂವರು ಸುದ್ದಿಯಾಗುತ್ತಲೇ ಇರುತ್ತಾರೆ. ಒಮ್ಮೆ ಸಮಂತಾ ಹಾಗೂ ನಾಗ ಚೈತನ್ಯ ಬಗ್ಗೆ ಸುದ್ದಿಯಾಗುತ್ತಿದ್ದರೆ. ಇನ್ನೊಂದು ಕಡೆ ನಾಗ ಚೈತನ್ಯ ಹಾಗೂ ಶೋಭಿತಾ ಸುದ್ದಿಯಾಗುತ್ತಾರೆ. ಒಟ್ಟಿನಲ್ಲಿ ಯಾರಾದರೂ ಒಬ್ಬರ ಸುದ್ದಿ ಓಡಾಡುತ್ತಲೇ ಇರುತ್ತೆ.
ಸಮಂತಾ ಹಾಗೂ ನಾಗಚೈತನ್ಯ ನಡುವಿನ ವಿಚ್ಛೇದನ ಕಳೆದೆರಡು ವರ್ಷಗಳಿಂದ ಸುದ್ದಿಯಾಗುತ್ತಲೇ ಇದೆ. ಇನ್ನೊಂದು ಕಡೆ ನಾಗಚೈತನ್ಯ ಹಾಗೂ ಶೋಭಿತಾ ಧುಲಿಪಾಲಾ ಡೇಟಿಂಗ್ ಮ್ಯಾಟರ್ ಹಾಟ್ ಕೇಕ್ ಆಗಿದೆ. ಅದಕ್ಕೆ ಕಾರಣ ಎರಡು ಕಾರಣಗಳು.

ಕೆಲವು ದಿನಗಳಿಂದ ನಾಗಚೈತನ್ಯ ಹಾಗೂ ಶೋಭಿತಾ ಧುಲಿಪಾಲಾ ಡೇಟಿಂಗ್ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಡೇಟಿಂಗ್ ಮ್ಯಾಟರ್ ಹಾಟ್ ಕೇಕ್ ಆಗಿಬಿಟ್ಟಿದೆ. ಈಗ ಶೋಭಿತಾ ಡೇಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ವದಂತಿಗಳಿಗೂ ನನಗೂ ಸಂಬಂಧವಿಲ್ಲ"
ಸಮಂತಾಗೆ ನಾಗಚೈತನ್ಯ ವಿಚ್ಛೇದನ ನೀಡಿದ ಬಳಿಕ ಬಿಸಿಬಿಸಿ ಚರ್ಚೆಯಲ್ಲಿದ್ದ ಮ್ಯಾಟರ್ ಇದು. ನಾಗಚೈತನ್ಯ ದಕ್ಷಿಣ ಭಾರತದ ನಟಿ ಶೋಭಿತಾ ಧುಲಿಪಾಲಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಓಡಾಡಿತ್ತು. ಒಮ್ಮೆ ಲಂಡನ್‌ನಲ್ಲಿ, ಇನ್ನೊಮ್ಮೆ ಅಲ್ಲಿನ ರೆಸ್ಟೋರೆಂಟ್‌ನಲ್ಲಿರುವ ಸುದ್ದಿಗಳು ಓಡಾಡಿದ್ದವು. ಹೀಗಿದ್ದರೂ ಶೋಭಿತಾ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ.
ಶೋಭಿತಾ ಈಗ ಡೇಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. " ಯಾರೋ ಏನೋ ಹೇಳುತ್ತಿದ್ದಾರೆ ಅನ್ನೋದು ಬೇಡ. ವದಂತಿಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ತಪ್ಪು ಮಾಡದೇ ಇರುವಾಗ ಅದನ್ನು ಸ್ಪಷ್ಟಪಡಿಸುವ ಅಗತ್ಯ ನನಗಿಲ್ಲ ಎಂದು ನಿರ್ಧರಿಸಿದ್ದೆ" ಎಂದು ಶೋಭಿತಾ ಮಾಡಿರುವ ಕಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದರು.

"ತಿಳಿಯದೆ ಏನೇನೋ ಮಾತಾಡುತ್ತಾರೆ"
ಇತ್ತೀಚೆಗೆ ಶೋಭಿತಾಗೆ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸೋ ಅವಕಾಶಗಳು ಸಿಗುತ್ತಿವೆ. ಚಿಕ್ಕಂದಿನಿಂದಲೂ ನೃತ್ಯ ಮಾಡಬೇಕು ಎಂದು ಇಷ್ಟಪಟ್ಟಿದ್ದರು. ಅದರಂತೆ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾದಲ್ಲಿ ಎಆರ್ ರೆಹಮಾನ್ ಕಂಪೋಸ್ ಮಾಡಿದ ಮೂರು ಹಾಡುಗಳಿಗೆ ಹೆಜ್ಜೆ ಹಾಕಿದ ಖುಷಿಯಲ್ಲಿದ್ದಾರೆ.
"ಇಷ್ಟೆಲ್ಲ ಅದ್ಭುತ ಕ್ಷಣಗಳಿರುವಾಗ, ಯಾರೋ ಯಾವುದೋ ತಿಳಿಯದೆ ಏನೇನೋ ಮಾತಾಡುವಾಗ, ಆ ವಿಷಯದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಆರಾಮಾಗಿ ನನ್ನ ಕೆಲಸವನ್ನು ನಾನು ಮಾಡುತ್ತೇನೆ. " ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಾಗಚೈತನ್ಯ ಹಾಗೂ ಶೋಭಿತಾ ಡೇಟಿಂಗ್ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.
ನಾಗ ಚೈತನ್ಯ-ಶೋಭಿತಾ ಇಬ್ಬರೂ ಬ್ಯುಸಿ
ನಾಗಚೈತನ್ಯ ಹೊಸ ಸಿನಿಮಾ ಬಿಡುಗಡೆ ಸಜ್ಜಾಗಿದೆ. ವೆಂಕಟ್ ಪ್ರಭು ನಿರ್ದೇಶನದ 'ಕಸ್ಟಡಿ' ಸಿನಿಮಾ, ಇದೇ ಮೇ 12ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಕೃತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ನಾಗಚೈತನ್ಯ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಇನ್ನೊಂದು ಕಡೆ 'ಪೊನ್ನಿಯಿನ್ ಸೆಲ್ವನ್' ಬಳಿಕ ಶೋಭಿತಾಗೆ ಹೆಚ್ಚೆಚ್ಚು ಆಫರ್‌ಗಳು ಬರುತ್ತಿವೆ ಅನ್ನೋ ಸುದ್ದಿ ಓಡಾಡುತ್ತಿದೆ. ಸದ್ಯ ಶೋಭಿತಾ 'ಸಿತಾರಾ' ಅನ್ನೋ ಸಿನಿಮಾ ಶೂಟಿಂಗ್ ಮುಗಿದಿದೆ. ಅಮೆರಿಕನ್ ಸಿನಿಮಾ 'ಮಂಕಿ ಮ್ಯಾನ್' ಶೂಟಿಂಗ್ ಹಂತದಲ್ಲಿದೆ.


Click it and Unblock the Notifications











