Amala Paul beach photos: ಸಮುದ್ರತೀರದಲ್ಲಿ ಒದ್ದೆಯಾದ ಅಮಲಾ ಪೌಲ್: ಫೋಟೊ ವೈರಲ್

ಅಮಲಾ ಪೌಲ್ ದಕ್ಷಿಣ ಭಾರತದ ಫೇಮಸ್ ನಟಿ. ಕನ್ನಡ, ತೆಲುಗು ಹಾಗೂ ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹೆಸರು ಗಳಿಸಿರುವ ನಟಿ. ಸೌಂದರ್ಯ, ಪ್ರತಿಭೆ, ನಟನೆಯ ಅದೆಷ್ಟೇ ಸಾಮರ್ಥ್ಯವಿದ್ದರೂ, ಅಮಲಾ ಪೌಲ್‌ಗೆ ಹೆಚ್ಚೇನು ಯಶಸ್ಸು ಸಿಕ್ಕಿಲ್ಲ. ಸಿನಿಮಾ ಮಂದಿ ಪ್ರಕಾರ, ಅಮಲಾ ಪೌಲ್ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವುತ್ತಿದ್ದಾರೆ. ಈ ಕಾರಣಕ್ಕೆ ಅಮಲಾಗೆ ಯಶಸ್ಸು ಅನ್ನುವುದು ಮರೀಚಿಕೆಯಾಗಿದೆ ಅನ್ನೋ ಅಭಿಪ್ರಾಯವಿದೆ.

ಅಮಲಾ ಪೌಲ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿದ್ದಾರೆ. ಒಂದಲ್ಲ ಒಂದು ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಟ್ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಬೀಚ್‌ನಲ್ಲಿ ಒದ್ದೆಯಾದ ಫೋಟಗಳನ್ನೇ ಶೇರ್ ಮಾಡಿಕೊಂಡಿದ್ದು, ಅದೇ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ತಮಿಳು ಚಿತ್ರಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದ ನಟಿ ಅಮಲಾ ಪೌಲ್. ಆದರೆ, ಚಿಕ್ಕ ವಯಸ್ಸಿನಲ್ಲಿಯೇ ಮಲಯಾಳಂನ 'ನೀಲಾ ತಾಮರಾ' (Neelathamara) ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕವೇ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇಲ್ಲಿ ಒಂದಿಷ್ಟು ಸಿನಿಮಾಗಳು ಅಮಲಾಗೆ ಉತ್ತಮ ಹೆಸರು ತಂದುಕೊಟ್ಟಿತ್ತು. ಬಳಿಕ ತೆಲುಗು ಚಿತ್ರಕ್ಕೆ ಎಂಟ್ರಿಕೊಟ್ಟರು. ಕನ್ನಡದಲ್ಲಿ ಕಿಚ್ಚನೊಂದಿಗೂ ಹೆಜ್ಜೆ ಹಾಕಿದ್ದಾರೆ. ಇದೇ ನಟಿಯ ಹಾಟ್ ಫೋಟೊಗಳು ಸಖತ್ ವೈರಲ್ ಆಗಿವೆ. ಆ ಫೋಟೊಗಳನ್ನೊಮ್ಮೆ ನೋಡಿ.

ಅರೆಬೆತ್ತಲೆಯಾಗಿ ನಟಿಸಿದ್ದ ಅಮಲಾ

ಅರೆಬೆತ್ತಲೆಯಾಗಿ ನಟಿಸಿದ್ದ ಅಮಲಾ

ಅಮಲಾ ಪೌಲ್ ದಕ್ಷಿಣ ಭಾರತದ ಬೋಲ್ಡ್ ನಟಿಯರಲ್ಲೊಬ್ಬರು. ಮೂರು ವರ್ಷಗಳ ಹಿಂದೆ ಅಮಲಾ ಪೌಲ್ 'ಆಡೈ'(Aadai) ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅಮಲಾ ಅವತಾರವನ್ನು ನೋಡಿ ಬೆಚ್ಚಿಬಿದ್ದಿದ್ದರು. ಯಾಕಂದ್ರೆ, ಈ ಸಿನಿಮಾದಲ್ಲಿ ಅರೆಬೆತ್ತಳಾಗಿ ಕಾಣಿಸಿಕೊಂಡಿದ್ದರು. ಅಮಲಾ ಪೌಲ್ ಈ ಸಾಹಸಕ್ಕೆ ಕೈ ಹಾಕಿದ್ದು, ವಿವಾದಗಳಿಗೂ ಕಾರಣವಾಗಿತ್ತು. ಇದು ಪ್ರಯೋಗಾತ್ಮಕ ಸಿನಿಮಾ ಅಂತ ಅನಿಸಿಕೊಂಡರೂ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಓಡಲಿಲ್ಲ.

ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದ ನಟಿ

ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದ ನಟಿ

ತಮಿಳು ನಿರ್ದೇಶಕ ಎ ಎಲ್ ವಿಜಯ್ ಜೊತೆ ಅಮಲಾ ಪೌಲ್ ವಿವಾಹವಾಗಿದ್ದರು. ಹಲವು ದಿನಗಳಿಂದ ಈ ಜೋಡಿ ಗೌಪ್ಯವಾಗಿ ಪ್ರೀತಿಸುತ್ತಿದ್ದರು. ಬಳಿಕ ಹಿರಿಯರ ಮನವೊಲಿಸಿ ಮದುವೆ ಆಗಿದ್ದರು. ಆದರೂ, ಇವರ ದಾಂಪತ್ಯ ಹೆಚ್ಚು ದಿನ ಉಳಿಯಲಿಲ್ಲ. ಬಳಿಕ ನಿರ್ದೇಶಕ ವಿಜಯ್ ತಂದೆ ಈ ವಿಚ್ಛೇದನಕ್ಕೆ ನಟ ಧನುಷ್ ಕಾರಣ ಎಂದು ಆರೋಪ ಮಾಡಿದ್ದರು. ಆದರೂ ಈ ವಿಚ್ಛೇದನ ಅತೀ ದೊಡ್ಡ ಸಂಚಲನವನ್ನೇ ಮೂಡಿಸಿತ್ತು.

ಅಮಲಾ ಪೌಲ್ ಎರಡನೇ ಮದುವೆ?

ಅಮಲಾ ಪೌಲ್ ಎರಡನೇ ಮದುವೆ?

ನಿರ್ದೇಶಕ ವಿಜಯ್ ಜೊತೆ ಮೊದಲನೇ ಮದುವೆ ಮುರಿದು ಬಿದ್ದ ಬಳಿಕ ಅಮಲಾ ಪೌಲ್ ಮತ್ತೆ ಸುದ್ದಿಯಲ್ಲಿದ್ದರು. ಯುವ ಗಾಯಕ ಭರೀಂದರ್ ಸಿಂಗ್ ಜೊತೆ ಕೆಲವು ಫೋಟೊಗಳು ವೈರಲ್ ಆಗಿದ್ದವು. ಇಬ್ಬರೂ ಪ್ರೀತಿಸುತ್ತಿದ್ದಾರೆ ಅಂತ ಗುಲ್ಲೆದ್ದಿತ್ತು. ಇನ್ನೊಂದು ಕಡೆ ಇಬ್ಬರೂ ಮದುವೆ ಆಗಿದ್ದಾರೆ ಅನ್ನೋ ಮಾತೂ ಕೂಡ ಕೇಳಿಬಂದಿತ್ತು. ಆದರೆ, ಇಬ್ಬರೂ ಮದುವೆ ಆಗಿರುವ ವಿಷಯವನ್ನು ಅಮಲಾ ಪೌಲ್ ಅಲ್ಲಗೆಳೆದಿದ್ದರು.

ಅಮಲಾ ಪೌಲ್ ಕನ್ನಡ ನಂಟು

ಅಮಲಾ ಪೌಲ್ ಕನ್ನಡ ನಂಟು

ಅಮಲಾ ಪೌಲ್ ಕೇವಲ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಷ್ಟೇ ನಟಿಸಿಲ್ಲ. ಬದಲಾಗಿದೆ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕಿಚ್ಚನೊಂದಿಗೆ 'ಹೆಬ್ಬುಲಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಟಾಲಿವುಡ್‌ನಲ್ಲಿ ಬಂದ 'ಕುಡಿ ಎಡಮೈಥೆ' ಅನ್ನೋ ವೆಬ್ ಸಿರೀಸ್‌ನಲ್ಲೂ ನಟಿಸಿದ್ದರು. ಇದನ್ನು 'ಯುಟರ್ನ್' ಖ್ಯಾತಿಯ ಪವನ್ ಕುಮಾರ್ ನಿರ್ದೇಶಿಸಿದ್ದರು.

ಬೀಚ್‌ನಲ್ಲಿ ಒದ್ದೆಯಾದ ಅಮಲಾ

ಬೀಚ್‌ನಲ್ಲಿ ಒದ್ದೆಯಾದ ಅಮಲಾ

ಸಿನಿಮಾಗಳ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಅಮಲಾ ಪೌಲ್ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೊಗಳನ್ನು ಶೇರ್ ಮಾಡಿದ್ದರು. ಸಮುದ್ರದ ತೀರದಲ್ಲಿ ಒದ್ದೆಯಾಗಿದ್ದ ಫೋಟೊಗಳನ್ನು ಅಮಲಾ ಪೌಲ್ ಹಂಚಿಕೊಂಡಿದ್ದರು. ಈ ಫೋಟೊಗಳನ್ನು ನೋಡಿ, ನಟಿಯ ಸೌಂದರ್ಯಕ್ಕೆ ನೆಟ್ಟಿಗರು ಮರುಳಾಗಿದ್ದಾರೆ. ನಟಿ ಶೇರ್ ಮಾಡಿದ ಎಲ್ಲಾ ಫೋಟೊಗಳೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

More from Filmibeat

English summary
South beautifull actress Amala Paul beach photos gone viral, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X