ಹಿರಿಯ ನಟಿ ಮೀನಾ ಮತ್ತೆ ಅಮ್ಮನಾಗುತ್ತಿದ್ದಾರಂತೆ
ಹಿರಿಯ ನಟಿ ಮೀನಾ ಒಂದು ಕಾಲದಲ್ಲಿ ತುಂಬಾನೇ ಬ್ಯುಸಿ ಇದ್ದ ನಟಿ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಮೀನಾ ತುಂಬಾನೇ ಬ್ಯುಸಿಯಾಗಿರುತ್ತಿದ್ದರು. ಅಂದಿನ ಕಾಲಕ್ಕೆ ದಕ್ಷಿಣ ಭಾರತದ ಸ್ಟಾರ್ ನಟರೊಂದಿಗೆ ಮೀನಾ ನಟಿಸಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಸೆಳೆಯುವ ನಟಿ ಮೀನಾ ಎಂದೇ ಜನಪ್ರಿಯರಾಗಿದ್ದರು.
ಹಲವು ವರ್ಷಗಳ ಕಾಲ ಮೀನಾ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿಯೂ ನಟಿಸಿ ಹೆಸರು ಮಾಡಿದ್ದರು. ಕನ್ನಡದಲ್ಲಿ ರವಿಚಂದ್ರನ್, ಸುದೀಪ್‌ರೊಂದಿಗೆ ನಟಿಸಿದ್ದಾರೆ. ಹೀಗಾಗಿ ಕನ್ನಡಿಗರಿಗೂ ಮೀನಾ ಬಗ್ಗೆ ಚೆನ್ನಾಗಿಯೇ ಪರಿಚಯವಿದೆ. ಕನ್ನಡಕ್ಕಿಂತ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರಿಂದ ಅಲ್ಲಿಯ ಪ್ರೇಕ್ಷಕರಿಗೆ ಮೀನಾ ಹೆಚ್ಚು ಚಿರಪರಿಚಿತ.
ಲೀಡ್ ರೋಲ್‌ಗಳು ತನ್ನತ್ತ ಬರುವುದು ಕಡಿಮೆಯಾಗುತ್ತಿದ್ದಂತೆ ಮೀನಾ ಸಿನಿಮಾದಿಂದ ದೂರಾನೇ ಉಳಿದಿದ್ದರು. ವೈವಾಹಿಕಿ ಜೀವನಕ್ಕೆ ಕಾಲಿಟ್ಟ ಮೇಲಂತೂ ಮೀನಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಆದ್ರೀಗ ಪೋಷಕ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಮೀನಾ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಚಿಕ್ಕ ವಿಡಿಯೋ ಒಂದು ವೈರಲ್ ಆಗಿದೆ. ಕಳೆದೊಂದು ವಾರದಿಂದ ದಕ್ಷಿಣ ಭಾರತದಲ್ಲಿ ಚರ್ಚೆಯಲ್ಲಿದೆ.

ಹಿರಿಯ ನಟಿ ಮೀನಾ ತಾಯಿಯಾಗುತ್ತಿದ್ದಾರೆ!
ಕೆಲವು ದಿನಗಳ ಹಿಂದೆ ದಕ್ಷಿಣ ಭಾರತದ ನಟಿ ಮೀನಾ ತನ್ನ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಶೇರ್ ಮಾಡಿದ್ದರು. ಈ ವಿಡಿಯೋದಲ್ಲಿ ಮೀನಾ ಪ್ರೆಗ್ನೆಂಟ್ ಆಗಿರುವ ವಿಡಿಯೋ ಆಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗುತ್ತಿದ್ದಂತೆ ಫ್ಯಾನ್ಸ್ ಅಚ್ಚರಿ ಪಟ್ಟಿದ್ದರು. ದಕ್ಷಿಣ ಭಾರತ ನಟಿ ಮತ್ತೆ ಮೀನಾ ಅಮ್ಮನಾಗುತ್ತಿದ್ದಾರಾ? ಎಂದು ಅಚ್ಚರಿ ಪಟ್ಟಿದ್ದರು. ಇತ್ತ ತೆಲುಗು ಹಾಗೂ ತಮಿಳು ಮೀಡಿಯಾಗಳು ಕೂಡ ಮೀನಾ ಮತ್ತೆ ಅಮ್ಮನಾಗುತ್ತಿದ್ದಾರೆ ಎಂದು ಶೀರ್ಷಕೆ ಕೊಟ್ಟಿದ್ದವು. ಆದರೆ, ಈ ವಿಡಿಯೋ ಹಿಂದೆ ಮೀನಾ ಮತ್ತೊಂದು ಕಥೆಯನ್ನು ಹೇಳಿದ್ದಾರೆ.

ಪ್ರೆಗ್ನೆಂಟ್ ವಿಡಿಯೋ ಗುಟ್ಟೇನು?
ಅಷ್ಟಕ್ಕೂ ಹಿರಿಯ ನಟಿ ಶೇರ್ ಮಾಡಿದ ವಿಡಿಯೋದಲ್ಲಿ ಮೀನಾ ಪ್ರೆಗ್ನೆಂಟ್ ಆಗಿರುವುದಂತೆ ಕಂಡಿರೋದು ನಿಜ. ಈ ವಿಡಿಯೋ ವೈರಲ್ ಆಗಿದ್ದೂ ಕೂಡ ಅಷ್ಟೇ ನಿಜ. ಆದರೆ, ಇದು ಗೆಟಪ್ ಅಷ್ಟೆ. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವ ಮೀನಾ ಮತ್ತೊಂದು ಸಿನಿಮಾದಲ್ಲಿ ಅಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಗೆಟಪ್ ಅನ್ನೇ ಮೀನಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಗರ್ಭಿಣಿ ಪಾತ್ರದ ಬಗ್ಗೆ ಮೀನಾ ಹೇಳಿದ್ದೇನು?
ಮೀನಾ ವಿಡಿಯೋ ಶೇರ್ ಮಾಡಿದ ಬೆನ್ನಲೆ, ನಟಿಯರು ನಿರ್ವಹಿಸುತ್ತಿರುವ ಗರ್ಭಿಣಿ ಪಾತ್ರದ ಬಗ್ಗೆನೂ ಬರೆದುಕೊಂಡಿದ್ದಾರೆ. ಹಿಂದಿನ ದಿನಗಳಲ್ಲಿ ನಟಿಯರು ಗರ್ಭಿಣಿ ಪಾತ್ರ ಮಾಡುವಾಗ ಹೆಚ್ಚು ಭಾರದ ಸೀರೆಯನ್ನು ಧರಿಸಬೇಕಿತ್ತು. ಆದರೆ ಈಗ ಹಗುರವಾದ ಶಿಫಾನ್ ಸೀರೆಯನ್ನು ತೊಡಬಹುದು. ಇದು ತೆರೆಯ ಮೇಲೆ ಸಹಜವಾಗಿ ಕಾಣಿಸುತ್ತದೆ ಎಂದು ಮೀನಾ ಹೇಳಿದ್ದಾರೆ. ಈ ವ್ಯತ್ಯಾಸವನ್ನು ತೋರಿಸಲೆಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.

ತಾಯಿ ಪಾತ್ರಗಳಲ್ಲಿಯೇ ಮೀನಾ ನಟನೆ
ಮೀನಾ ಇತ್ತೀಚೆಗೆ ತಾಯಿ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮೋಹನ್ ಲಾಲ್ ಜೊತೆ 'ಬ್ರೋ ಡ್ಯಾಡಿ' ಸಿನಿಮಾದಲ್ಲೂ ಮೀನಾ ನಟಿಸಿದ್ದರು. ಈ ಸಿನಿಮಾದಲ್ಲಿಯೂ ಮೀನಾ ಪ್ರೆಗ್ನೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೊಂದು ಸಿನಿಮಾದಲ್ಲಿ ಇದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.


Click it and Unblock the Notifications











