ಶ್ರೀಲೀಲಾ-ಪೂಜಾ ಹೆಗ್ಡೆ; ಇಬ್ಬರಲ್ಲಿ ಪ್ರೇಕ್ಷಕರ ಮನ ಗೆಲ್ಲೋರು ಯಾರು?

ಇದು ಕನ್ನಡ ಮೂಲದ ಇಬ್ಬರು ನಾಯಕಿಯರು ಟಾಲಿವುಡ್ ನಂಬರ್ ಒನ್ ಹೀರೋಯಿನ್ ಪೈಪೋಟಿಯಲ್ಲಿ ಬಿದ್ದಿರುವ ಕತೆ. ತೆಲುಗಿನ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಮುಂದಿನ ಚಿತ್ರ ಗುಂಟೂರ್ ಖಾರಂ ನಲ್ಲಿ ನಾಯಕಿ ಪಾತ್ರಕ್ಕೆ ಕಳೆದ ವರ್ಷವೇ ಪೂಜಾ ಹೆಗ್ಡೆ ವರ್ಸಸ್ ಶ್ರೀಲೀಲಾ ಕಾಂಪಿಟಿಶನ್ ಶುರುವಾಗಿತ್ತು.

ತ್ರಿವಿಕ್ರಮ್ ಫೇವರಿಟ್ ನಾಯಕಿ ಪೂಜಾ ಹೆಗ್ಡೆ ಜಾಗಕ್ಕೆ ಧಿಡೀರನೆ ಶ್ರೀಲೀಲಾ ಬಂದಿದ್ದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಈ ಹಿಂದೆ ಅಲಾ ವೈಕುಂಠಪುರಮುಲೊ ಚಿತ್ರದಲ್ಲಿ ಪೂಜಾ ಹೆಗ್ಡೆಯ ಗ್ಲಾಮರ್, ಟ್ಯಾಲೆಂಟ್ ನ್ನು ಅತ್ಯದ್ಭುತವಾಗಿ ತೋರಿಸಿದ್ದು ಇದೇ ತ್ರಿವಿಕ್ರಮ್. ಆ ಚಿತ್ರದ ನಂತರ ಪೂಜಾ ಕೆರಿಯರ್ ಗ್ರಾಫ್ ಸಖತ್ ಇಂಪ್ರೂವ್ ಆಗಿ ಆಕೆ ನಂಬರ್ ಒನ್ ಪಟ್ಟ ಪಡೆಯುವಲ್ಲಿ ಸಹಕಾರಿ ಆಗಿದ್ದಂತೂ ಸತ್ಯ.

Sreeleela and Pooja Hegde competition result in Mahesh babu trivikram movie Guntur kaaram release

ಇಷ್ಟೆಲ್ಲಾ ಹಿನ್ನೆಲೆ ಇದ್ಮೇಲೆ ತ್ರಿವಿಕ್ರಮ್ ಮುಂದಿನ ಚಿತ್ರಕ್ಕೂ ಪೂಜಾನೇ ನಾಯಕಿ, ಈ ಬಗ್ಗೆ ಅನುಮಾನ ಬೇಡ ಅಂತಲೇ ಎಲ್ರೂ ಮಾತಾಡಿಕೊಂಡಿದ್ರು. ಹೊಸಾ ಸಿನಿಮಾ ಗುಂಟೂರ್ ಖಾರಂನಲ್ಲಿ ತ್ರಿವಿಕ್ರಮ್ ಮಹೇಶ್ ಬಾಬುಗೆ ಮೊದಲ ಸಲ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಚಿತ್ರಕ್ಕೆ ಕನ್ನಡತಿ ಶ್ರೀಲೀಲಾ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ರು. ಆದ್ರೆ ಅಷ್ಟರಲ್ಲಿ ಪೂಜಾ ಹೆಗ್ಡೆ ಮತ್ತು ತ್ರಿವಿಕ್ರಮ್ ನಡುವೆ ಅದೇನು ಕಟಿಪಿಟಿ ಉಂಟಾಯ್ತೋ ಗೊತ್ತಿಲ್ಲ. ಪೂಜಾ ಇಡೀ ಪ್ರಾಜೆಕ್ಟ್ನಿಂದಲೇ ಔಟ್ ಆಗ್ಬಿಟ್ರು.

ಸೆಕೆಂಡ್ ಹೀರೋಯಿನ್ ಆಗಿದ್ದ ಶ್ರೀಲೀಲಾಗೆ ಪ್ರೊಮೋಶನ್ ಸಿಕ್ಕು ಆಕೆಯೇ ನಾಯಕಿಯಾಗ್ಬಿಟ್ರು. ಸಾಲು ಸಾಲು ಸೋಲಿನಿಂದ ಕಂಗೆಟ್ಟಿರುವ ಶ್ರೀಲೀಲಾ ಪಾಲಿಗಂತೂ ಇದು ನಿಜಕ್ಕೂ ಬಯಸದೇ ಬಂದ ಭಾಗ್ಯವೇ. ಈ ಸಿನಿಮಾ ಗೆಲುವು ಶ್ರೀಲೀಲಾ ಕೆರಿಯರ್‌ಗೆ ಅತ್ಯಂತ ಅವಶ್ಯಕ.

Sreeleela and Pooja Hegde competition result in Mahesh babu trivikram movie Guntur kaaram release

ಈ ಎಲ್ಲಾ ಬೆಳವಣಿಗೆಯಿಂದ ಮತ್ತೊಬ್ಬರಿಗೆ ಪ್ರಯೋಜನವಾಯ್ತು. ನಟಿ ಮೀನಾಕ್ಷಿ ಚೌಧರಿ ಈ ಚಿತ್ರಕ್ಕೆ ಸೆಕೆಂಡ್ ಹೀರೋಯಿನ್ ಪಾತ್ರಕ್ಕೆ ಸೆಲೆಕ್ಟ್ ಆದ್ರು. ಈಗ ಶ್ರೀಲೀಲಾ ಪಾಲಿಗೆ ಈ ಸಿನಿಮಾ ಒಂದು ಇಂಪಾರ್ಟೆಂಟ್ ಎಕ್ಸಾಂ ಇದ್ದಂತಾಗಿದೆ. ಬೇಡ ಅಂದ್ರೂ ಜನ ಶ್ರೀಲೀಲಾ ಆಕ್ಟಿಂಗ್‌ ಅನ್ನು ಪೂಜಾ ಹೆಗ್ಡೆ ಜೊತೆ ಹೋಲಿಕೆ ಮಾಡೇ ಮಾಡ್ತಾರೆ. ಪೂಜಾ ನಟನೆಗೆ ಸರಿಸಾಟಿ ಎನ್ನುವಂಥಾ ಪರ್ಫಾಮೆನ್ಸ್ ಕೊಡಲೇಬೇಕಾದ ಒತ್ತಡ ಅವರ ಮೇಲಿದೆ.

ಈ ಚಾಲೆಂಜ್‌ನಲ್ಲಿ ಶ್ರೀಲೀಲಾ ಗೆದ್ದರೆ ಆಕೆಯ ಕೆರಿಯರ್‌ನಲ್ಲಿ ಒಂದು ಮುಖ್ಯ ಮೈಲಿಗಲ್ಲಾಗೋದಂತೂ ಸತ್ಯ. ಈ ನಡುವೆ ತ್ರಿವಿಕ್ರಮ್ ಶ್ರೀಲೀಲಾರನ್ನು ತೆರೆಮೇಲೆ ಹೇಗೆ ತೋರಿಸಿದ್ದಾರೆ ಅನ್ನೋ ಕುತೂಹಲವೂ ಜನರಲ್ಲಿದೆ.

ಒಟ್ನಲ್ಲಿ ಪೂಜಾ ಪಾತ್ರಕ್ಕೆ ಶ್ರೀಲೀಲಾ, ಶ್ರೀಲೀಲಾ ಪಾತ್ರಕ್ಕೆ ಮೀನಾಕ್ಷಿ ಚೌಧರಿ ಬಂದಿದ್ದೇ ಒಂದು ಶಾಕಿಂಗ್ ವಿಚಾರವಾಗಿತ್ತು. ಈಗ ಈ ಚಿತ್ರದ ಹಾಡುಗಳೆಲ್ಲಾ ಒಂದಾದಮೇಲೆ ಒಂದರಂತೆ ಬಂದು ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿವೆ. ಆದ್ರೆ ಈ ಎಲ್ಲಾ ಬೆಳವಣಿಗೆ ಜೊತೆ ಮಹೇಶ್ ಬಾಬು- ತ್ರಿವಿಕ್ರಮ್ ಕಾಂಬಿನೇಶನ್ ಜಾದೂ ಕೂಡಾ ಎಷ್ಟರ ಮಟ್ಟಿಗೆ ಇರಲಿದೆ ಅನ್ನೋ ಪ್ರಶ್ನೆಗೂ ಉತ್ತರ ನಾಳೆ ಸಿಗಲಿದೆ. ನಾಳೆ 'ಗುಂಟೂರ್ ಖಾರಂ' ಬಿಡುಗಡೆಯಾಗಲಿದ್ದು ಈ ಎಲ್ಲಾ ಲೆಕ್ಕಾಚಾರ, ಊಹಾಪೋಹಗಳಿಗೆಲ್ಲಾ ಜನ ಕ್ಲಿಯರ್ ಉತ್ತರ ಕೊಡಲಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗದಲ್ಲೂ ಶ್ರೀಲೀಲಾ ಭವಿಷ್ಯ ನಿರ್ಧಾರವಾಗಲಿದೆ.

More from Filmibeat

English summary
Sreeleela and Pooja Hegde competition result in Mahesh babu trivikram movie Guntur kaaram release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X