'ಗುಂಟೂರು ಖಾರಂ' ಇವೆಂಟ್‌ನಲ್ಲಿ ಶ್ರೀಲೀಲಾ ತೊಟ್ಟ ಸೀರೆಯ ಬೆಲೆ ಬಗ್ಗೆ ಯಾಕಿಷ್ಟು ಚರ್ಚೆ; ಅದೇನು ಸ್ಪೆಷಲ್?
ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಗುಂಟೂರು ಖಾರಂ'. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾವಿದು. ಟಾಲಿವುಡ್‌ನಲ್ಲಿ ಸಂಕ್ರಾಂತಿ ರೇಸ್‌ಗೆ ಈ ಸಿನಿಮಾ ಸಿದ್ಧವಾಗಿದೆ. ಮಹೇಶ್ ಹಾಗೂ ತ್ರಿವಿಕ್ರಂ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗುತ್ತಿರೋ ಮೂರನೇ ಸಿನಿಮಾವಿದು ಅನ್ನೋದು ಅಷ್ಟೇ ಇಂಟ್ರೆಸ್ಟಿಂಗ್ ವಿಷಯ.
'ಗುಂಟೂರು ಖಾರಂ' ಸಿನಿಮಾ ಇದೇ ಜನವರಿ 12ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಗುಂಟೂರಿನಲ್ಲಿಯೇ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಹೇಗೆ ತಮ್ಮ ಅಭಿಮಾನಿಗಳನ್ನು ಸೆಳೆದರೋ ಹಾಗೇ ನಟಿ ಶ್ರೀಲೀಲಾ ಕೂಡ ಅವರ ಅಭಿಮಾನಿಗಳಿ ಇಷ್ಟ ಆಗಿದ್ದರು.

ಸೀರೆಯುಟ್ಟು ಮುದ್ದುಮುದ್ದಾಗಿ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನೆಟ್ಟಿಗರ ಕಣ್ಣು ಶ್ರೀಲೀಲಾ ಧರಿಸಿದ್ದ ಸೀರೆ ಮೇಲೆ ಬಿದ್ದಿದೆ. ಸದ್ಯಕ್ಕೀಗ ಈ ಸೀರೆಯ ಬೆಲೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಶ್ರೀಲೀಲಾ ಸೀರೆನೇ ಹೈಲೈಟ್
ಸಿನಿಮಾ ಸ್ಟಾರ್‌ಗಳು ತೆರೆಮೇಲೆ ತೆರೆಮೇಲೆ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋದನ್ನು ಗಮನಿಸುತ್ತಾರೋ, ಹಾಗೇ ಅವರ ತೆರೆಯ ಹಿಂದೆ ಹೇಗಿದ್ದಾರೆ ಅಂತಾನೂ ಫಾಲೋ ಮಾಡುತ್ತಿರುತ್ತಾರೆ. ಅದರಲ್ಲೂ ನಟಿಯರ ಫ್ಯಾಷನ್ ಬ್ರ್ಯಾಂಡ್‌ಗಳ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಹೀಗಾಗಿ ನಟಿಯರು ಕೂಡ ತಮ್ಮ ಕಾಸ್ಟ್ಯೂಮ್ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. 'ಗುಂಟೂರು ಖಾರಂ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೂ ಶ್ರೀಲೀಲಾ ಸಿಂಪಲ್ ಆಗಿ ಸೀರೆಯುಟ್ಟು ಬಂದಿದ್ದರು. ಆದರೆ, ಆ ಸೀರೆಯ ಬೆಲೆ ಅವರು ಧರಿಸಿದ್ದಷ್ಟು ಸಿಂಪಲ್ ಆಗಿಲ್ಲ ಅನ್ನೋದನ್ನು ನೆಟ್ಟಿಗರು ಕಂಡುಗೊಂಡಿದ್ದಾರೆ.
ಶ್ರೀಲೀಲಾ ಸೀರೆಯ ಬೆಲೆ ಬಲು ದುಬಾರಿ
'ಗುಂಟೂರು ಖಾರಂ' ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಶ್ರೀಲೀಲಾ ನೋಡಿ ಮಹಿಳೆಯ ಥ್ರಿಲ್ ಆಗಿದ್ದಾರೆ. ಅದರಲ್ಲೂ ಅವರ ಕಣ್ಣು ಶ್ರೀಲೀಲಾ ಸೀರೆಯ ಮೇಲೆ ಬಿದ್ದಿದೆ. ಹೀಗಾಗಿ ಸೀರೆಯ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾರೆ. ಈ ವೇಳೆ ಆ ಸೀರೆಯ ಬೆಲೆ ಕಂಡು ಶಾಕ್ ಆಗಿದ್ದಾರೆ. ಅಂದ್ಹಾಗೆ ಈ ಸೀರೆಯ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಸೀರೆಯ ವಿಶೇಷತೆ ಏನು?
ನಟಿ ಶ್ರೀಲೀಲಾ ಧರಿಸಿದ್ದ ಸೀರೆಯ ಹೆಸರಿನ ಬಗ್ಗೆನೂ ಚರ್ಚೆಯಾಗುತ್ತಿದೆ. ಈ ಸೀರೆಗೆ 'ಬಾಟಲ್ ಗ್ರೀನ್ ಕಟ್ ವರ್ಕ್ ಸೀರೆ' ಎನ್ನುತ್ತಾರೆ. ಈ ಸೀರೆ ನೋಡುವುದಕ್ಕೆ ತೀರ ಸರಳವಾಗಿದ್ದರೂ, ಬಾರ್ಡರ್ ಹಾಗೂ ಅದರ ವಿನ್ಯಾಸ ವಿಭಿನ್ನವಾಗಿದ್ಯಂತೆ. ಈ ಸೀರೆಯ ವಿನ್ಯಾಸಕ್ಕೆ ಹೆಚ್ಚು ಖರ್ಷು ತಗುಲಿದೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.
ಮತ್ತೊಬ್ಬ ನಾಯಕಿ ಮೀನಾಕ್ಷಿ ಚೌಧರಿ
'ಗುಂಟೂರು ಖಾರಂ' ಸಿನಿಮಾದಲ್ಲಿ ಶ್ರೀಲೀಲಾ ಜೊತೆ ಮತ್ತೊಬ್ಬ ನಾಯಕಿ ಕೂಡ ಇದ್ದಾರೆ. ಅವರೇ ಮೀನಾಕ್ಷಿ ಚೌಧರಿ. ಈ ಇಬ್ಬರು ನಟಿಯರು ಮಹೇಶ್ ಬಾಬುಗೆ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಗುಂಟೂರು ಖಾರಂ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಎಲ್ಲರೂ ಶ್ರೀಲೀಲಾ ಬಗ್ಗೆ ಮಾತನಾಡಿದ್ದೇ ಹೆಚ್ಚು. ಆದರೆ, ಎರಡನೇ ನಾಯಕಿ ಮೀನಾಕ್ಷಿ ಚೌಧರಿ ಬಗ್ಗೆ ಯಾರೂ ಮಾತಾಡಿಯೇ ಇಲ್ಲ ಎಂದು ಇನ್ನೊಂದು ಕಡೆ ಚರ್ಚೆಯಾಗುತ್ತಿದೆ.


Click it and Unblock the Notifications











