ಕೈಯಲ್ಲಿ 8 ಸಿನಿಮಾ ಇದ್ದರೂ ಸ್ಟಾರ್ ಪಟ್ಟ ಸಿಕ್ಕಿಲ್ಲ.. ರಶ್ಮಿಕಾಗೆ 'ಚಲೋ' ಬಿಟ್ಟುಕೊಟ್ಟು ಸ್ಟಾರ್‌ಗಿರಿ ಕಳ್ಕೊಂಡ್ರಾ ಶ್ರೀಲೀಲಾ?
ಕನ್ನಡದ ಇಬ್ಬರು ನಟಿಯರು ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಒಬ್ಬರು ರಶ್ಮಿಕಾ ಮಂದಣ್ಣ, ಇನ್ನೊಬ್ಬರು ಶ್ರೀಲೀಲಾ. ಸದ್ಯ ಶ್ರೀಲೀಲಾ ಒಂದರ ಹಿಂದೊಂದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ.
ಟಾಲಿವುಡ್‌ನ ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಮಹೇಶ್ ಬಾಬು, ಪವರ್ ಸ್ಟಾರ್ ಪವನ್ ಕಲ್ಯಾಣ್ ಸೇರಿದಂತೆ ತೆಲುಗು ಚಿತ್ರರಂಗದ ದಿಗ್ಗಜರ ಸಿನಿಮಾಗಳು ಸಿಕ್ಕಿವೆ. ತೆಲುಗು ಚಿತ್ರರಂಗದ ಮೋಸ್ಟ್ ಹ್ಯಾಪನಿಂಗ್ ನಟಿ ಎನಿಸಿಕೊಂಡಿರೋ ಶ್ರೀಲೀಲಾ ಬಗ್ಗೆ ಹೊಸ ಸುದ್ದಿಯೊಂದು ಟಾಲಿವುಡ್ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

'ಚಲೋ' ಸಿನಿಮಾ ಹೀರೊ ನಾಗಶೌರ್ಯ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಟಿ ಶ್ರೀಲೀಲಾ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಈ ಹೇಳಿಕೆಯಿಂದ ಶ್ರೀಲೀಲಾಗೆ ಸಿಗಬೇಕಿದ್ದ ಸ್ಟಾರ್‌ಡಮ್ ರಶ್ಮಿಕಾ ಮಂದಣ್ಣಗೆ ಪಾಲಾಗಿದ್ದರ ಬಗ್ಗೆ ಸಿನಿಮಾ ಮಂದಿ ಲೆಕ್ಕಾಚಾರ ಹಾಕುತ್ತಿದ್ದಾರೆ.
'ಚಲೋ' ಸಿನಿಮಾದಲ್ಲಿ ನಟಿಸಬೇಕಿತ್ತು ಶ್ರೀಲೀಲಾ
'ಕಿರಿಕ್ ಪಾರ್ಟಿ' ಮುಗಿಯುತ್ತಿದ್ದಂತೆ ರಶ್ಮಿಕಾ ಮಂದಣ್ಣ 'ಚಲೋ' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾದ ಶೂಟಿಂಗ್ ನಡೆಯುವಾಗಲೇ ರಶ್ಮಿಕಾಗೆ 'ಗೀತಾ ಗೋವಿಂದಂ' ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಇಲ್ಲಿಂದ ರಶ್ಮಿಕಾ ನ್ಯಾಷನಲ್ ಕ್ರಶ್ ಆಗಿ ಬೆಳೆದಿದ್ದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

'ಚಲೋ' ಸಿನಿಮಾದ ಹೀರೊ ನಾಗ ಶೌರ್ಯ ಸಂದರ್ಶನದಲ್ಲಿ ರಶ್ಮಿಕಾಗೂ ಮುನ್ನ ಚಿತ್ರತಂಡ ಶ್ರೀಲೀಲಾರನ್ನು ಸಂಪರ್ಕ ಮಾಡಿತ್ತು. ಆದರೆ, ಶ್ರೀಲೀಲಾ ಕಾರಣಾಂತರಗಳಿಂದ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಅವರ ಸ್ಥಾನಕ್ಕೆ ಕನ್ನಡದ ಮತ್ತೊಬ್ಬ ನಟಿ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡಲಾಯ್ತು ಎಂದಿದ್ದಾರೆ. ಈ ಹೇಳಿಕೆ ಬಳಿಕ ಶ್ರೀಲೀಲಾ ಬಿಟ್ಟುಕೊಟ್ಟ ಗೋಲ್ಡನ್ ಚಾನ್ಸ್ ಬಗ್ಗೆ ಚರ್ಚೆಯಾಗುತ್ತಿದೆ.
ಕೈಯಲ್ಲಿ 8 ಸಿನಿಮಾ ಇದ್ರೂ ಸ್ಟಾರ್‌ಡಮ್ ಸಿಕ್ಕಿಲ್ಲ
'ಚಲೋ' ಸಿನಿಮಾ ತೆರೆಕಂಡ ಮೂರು ವರ್ಷಗಳ ಬಳಿಕ ಟಾಲಿವುಡ್‌ಗೆ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದರು. 'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಈಗ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೈಯಲ್ಲಿ ಬರೋಬ್ಬರಿ 8 ಕ್ಕೂ ಹೆಚ್ಚು ಸಿನಿಮಾಗಳಿವೆ.
'ಚಲೋ' ಸಿನಿಮಾ ಮೂಲಕ ಶ್ರೀಲೀಲಾ ಸಿನಿ ಜರ್ನಿಯನ್ನು ಗಮನಿಸಿ ವಿಶೇಷ ವರದಿಗಳನ್ನು ಮಾಡಿವೆ. ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಯ್ಯ, ನಿತಿನ್ ಅಂತ ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ರಶ್ಮಿಕಾಗೆ ಸಿಕ್ಕಂತಹ ಸ್ಟಾರ್‌ಡಮ್ ಮಾತ್ರ ಸಿಕ್ಕಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿವೆ.
ರಶ್ಮಿಕಾ ಸಿನಿಮಾಗಳು ಶ್ರೀಲೀಲಾಗೆ
ರಶ್ಮಿಕಾ ಮಂದಣ್ಣ 'ಪುಷ್ಪ' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಪ್ಯಾನ್ ಇಂಡಿಯಾ ಸ್ಟಾರ್ ಆಗ್ಬಿಟ್ರು. ತಕ್ಷಣಕ್ಕೆ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇಲ್ಲಿಂದ ರಶ್ಮಿಕಾ ತೆಲುಗು ಸಿನಿಮಾಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. 'ಪುಷ್ಪ 2' ರಶ್ಮಿಕಾ ಕೈಯಲ್ಲಿರೋ ಏಕೈಕ ತೆಲುಗು ಬಿಗ್ ಬಜೆಟ್ ಸಿನಿಮಾ.
ಹೀಗಾಗಿ, ನಟಿ ಶ್ರೀಲೀಲಾ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಮೇಲೆ ರಶ್ಮಿಕಾಗೆ ಬರಬೇಕಾಗಿದ್ದ ಸಿನಿಮಾಗಳೆಲ್ಲಾ ಇವರ ಪಾಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಮಹೇಶ್ ಬಾಬು ನಟಿಸುತ್ತಿರುವ 'ಗುಂಟೂರು ಕಾರಂ' ಹಾಗೂ ಪವನ್ ಕಲ್ಯಾಣ್ ಸಿನಿಮಾ 'ಉಸ್ತಾದ್ ಭಗತ್ ಸಿಂಗ್' ಸಿನಿಮಾಗಳಲ್ಲಿ ನಟಿಸುತ್ತಿದ್ದು ಎಲ್ಲರ ಕಣ್ಣು ಈ ಸಿನಿಮಾಗಳ ಮೇಲಿದೆ.


Click it and Unblock the Notifications











