"ಶ್ರೀದೇವಿ- ಸಾವಿತ್ರಿ ಇಬ್ಬರ ಸಾವು ಒಂದೇ ರೀತಿ ಆಗಿದೆ": ಶಾಕಿಂಗ್ ಹೇಳಿಕೆ ಕೊಟ್ಟ ತೆಲುಗು ನಟ!
ಒಂದು ಕಾಲದ ಬಾಲಿವುಡ್‌ನ ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಸಿನಿಮಾಗಳಿಗೆ ಸಿನಿಪ್ರಿಯರು ಮರುಳಾಗಿದ್ದರು. ದಕ್ಷಿಣ ಭಾರತದಿಂದ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಅಲ್ಲಿ ಗಟ್ಟಿಯಾಗಿ ನೆಲೆಯೂರುವುದು ಸುಲಭದ ಮಾತೇನು ಅಲ್ಲ. ತನ್ನ ನಟನೆಯಿಂದಲೇ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಎಲ್ಲರನ್ನೂ ಹುಬ್ಬೇರುವಂತೆ ಮಾಡಿದ್ದಾರೆ.
ಶ್ರೀದೇವಿ ನಿಜಕ್ಕೂ ಭಾರತೀಯ ಚಿತ್ರರಂಗದ ಅತಿಲೋಕ ಸುಂದರಿ. ಈಕೆ ಸೌಂದರ್ಯಕ್ಕೆ, ಹಾವ- ಭಾವಗಳಿಗೆ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ. ಶ್ರೀದೇವಿ ತನ್ನ ಮಗಳು ಜಾಹ್ನವಿ ಕಪೂರ್ ಅನ್ನು ಚಿತ್ರರಂಗಕ್ಕೆ ಪರಿಚಯ ಮಾಡಬೇಕು ಅಂದುಕೊಳ್ಳುವವರೆಗೂ ನಟಿಸಿದ್ದಾರೆ. ಆಗೊಂದು ಈಗೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟು ನಟಿಸಿದ್ದರು. ಆ ಎಲ್ಲಾ ಸಿನಿಮಾಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು.

ಎಲ್ಲವೂ ಸರಿಯಾಗಿಯೇ ಇದ್ದ ಶ್ರೀದೇವಿ ದಿಢೀರನೇ ಇಹಲೋಕ ತ್ಯಜಿಸಿ ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟುಬಿಟ್ಟರು. ದುಬೈನ ಐಶಾರಾಮಿ ಹೋಟೆಲ್‌ನ ಬಾತ್ ಟಬ್‌ನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದರು. ಈ ಸುದ್ದು ಮುಟ್ಟುತ್ತಿದ್ದಂತೆ ಈ ಸಾವು ಸಹಜವಲ್ಲ ಅನ್ನುವ ಚರ್ಚೆನೂ ಇದೆ. ಪತಿ ಬೋನಿ ಕಪೂರ್ ಈಕೆ ಸಾವಿಗೆ ಕಾರಣ ಅಂತ ಪ್ರತಿಪಾದಿಸುವವರೂ ಇದ್ದಾರೆ.
ದುಬೈನ ಹೋಟೇಲ್‌ನಲ್ಲಿ ಶ್ರೀದೇವಿ ಸಾವನ್ನಪ್ಪಿದ ವೇಳೆ ಪತಿ ಬೋನಿ ಕಪೂರ್ ಅಲ್ಲೇ ಇದ್ದರು. ಹೀಗಾಗಿ ಈ ಸಾವಿನ ಹಿಂದೆ ನೂರೆಂಟು ಶಂಕೆಗಳು ಹುಟ್ಟಿಕೊಂಡಿವೆ. ದುಬೈ ಪೊಲೀಸರೇ ಇದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂಬ ವರದಿ ನೀಡಿದ್ದರು. ಹೀಗಾಗಿ ಶ್ರೀದೇವಿ ಸಾವಿನ ಅನುಮಾನಗಳಿಗೆ ಒಂದು ಹಂತದಲ್ಲಿ ತೆರೆ ಬಿದ್ದಿತ್ತು. ಆದರೂ, ಇದನ್ನು ಒಪ್ಪಿಕೊಳ್ಳದವರು ಇದ್ದಾರೆ. ಆದ್ರೀಗ ತೆಲುಗು ಚಿತ್ರರಂಗದ ಬರಹಗಾರ ಹಾಗೂ ನಟ ತೋಟಪಲ್ಲಿ ಮಧು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಶ್ರೀದೇವಿಗೆ ತನ್ನ ಸೌಂದರ್ಯದ ಬಗ್ಗೆ ಕಾಳಜಿ ಇತ್ತು. ಹೀಗಾಗಿ ಅನ್ನ ತಿನ್ನುವುದನ್ನೇ ಕಡಿಮೆ ಮಾಡಿದ್ದರು. ಸದಾ ಡಯೆಟ್ ಅಂತ ತಲೆ ಕೆಡಿಸಿಕೊಂಡಿದ್ದರು. ಇನ್ನೊಂದು ಕಡೆ ಶ್ರೀದೇವಿ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಆದರೆ, ಖರ್ಚನ್ನು ಹೆಚ್ಚು ಮಾಡಿಕೊಂಡಿದ್ದರು ಎಂದು ತೋಟಪಲ್ಲಿ ಮಧು ಹೇಳಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಶ್ರೀದೇವಿ ತನ್ನಿಬ್ಬರು ಹೆಣ್ಣು ಮಕ್ಕಳಿಗಾಗಿ ಒಂದು ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದರು. ಕೊನೆಯ ದಿನಗಳಲ್ಲಿ ಕುಡಿತ ಹೆಚ್ಚು ಮಾಡಿದ್ದರು. ಶ್ರೀದೇವಿ ದಿನವೂ ಕುಡಿಯುತ್ತಿದ್ದರು. ಆಕೆ ಕುಡಿಯದ ದಿನವೇ ಇಲ್ಲ. ದುಬೈಗೆ ಹೋದಾಗ ಶ್ರೀದೇವಿ ಒಂಟಿಯಾಗಿ ಇದ್ದಳು. ಜೊತೆಯಲ್ಲಿ ಪತಿ ಹಾಗೂ ಮಗಳು ಇಲ್ಲದ ಕಾರಣ, ಕುಡಿಯುವುದನ್ನು ಹೆಚ್ಚು ಮಾಡಿದ್ದಳು ಎಂದು ಮಧು ಹೇಳಿದ್ದಾರೆ.
ಕೆಲಸ ಸಂಬಂಧ ಪತಿ ಬೋನಿ ಕಪೂರ್ ಭಾರತಕ್ಕೆ ಮರಳಿದ್ದರು. ಆ ವೇಳೆ ಶ್ರೀದೇವಿ ಒಂಟಿಯಾಗಿದ್ದರು. ಈ ವೇಳೆ ಹೆಚ್ಚು ಕುಡಿದಿದ್ದರು. ಪತಿ ಹಿಂತಿರುಗಿದ ಬಳಿಕ ಸ್ನಾನ ಮುಗಿಸಿ, ಏನಾದರೂ ತಿನ್ನಬೇಕು ಎಂದುಕೊಂಡಿದ್ದರು. ಆ ವೇಳೆ ಕೋಮಾಗೆ ಹೋಗಿದ್ದರು ಎಂದು ತೋಟಪಲ್ಲಿ ಮಧು ವಿವರಿಸಿದ್ದಾರೆ. ಹಾಗಂತ ಶ್ರೀದೇವಿ ಮಾತ್ರ ಅಲ್ಲ, ದಕ್ಷಿಣ ಭಾರತದ ಮತ್ತೊಬ್ಬ ನಟಿ ಸಾವಿತ್ರ ಕೂಡ ಕುಡಿತ ಚಟಕ್ಕೆ ಬಲಿಯಾದರು. ಈಕೆ ಕೂಡ ಕೋಮಾಗೆ ಹೋಗಿದ್ದರಿಂದಲೇ ಸಾವನ್ನಪ್ಪಿದ್ದರು ಎಂದು ಇಬ್ಬರ ಸಾವು ಒಂದೇ ರೀತಿ ಸಂಭವಿಸಿದೆ ಎಂದಿದ್ದಾರೆ.


Click it and Unblock the Notifications











