ರಾಜಮೌಳಿ ಬತ್ತಳಿಕೆಯಲ್ಲಿ ಎರಡು ಐಡಿಯಾ: ಮಹೇಶ್ ಬಾಬು ಆಯ್ಕೆ ಯಾವುದು?
RRR ಸಿನಿಮಾ ಬಳಿಕ ರಾಜಮೌಳಿ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ರಾಜಮೌಳಿ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆ ಅಂದ್ಮೇಲಂತೂ ಸಿನಿಪ್ರಿಯರು ಈ ಪ್ರಾಜೆಕ್ಟ್ ಯಾವಾಗ ಟೇಕ್ ಆಫ್ ಆಗುತ್ತೋ ಅಂತ ಎದುರು ನೋಡುತ್ತಲೇ ಇದ್ದಾರೆ.
ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾ ಬಗ್ಗೆ ಟಾಲಿವುಡ್ ಕ್ಯೂರಿಯಸ್ ಆಗಿದೆ. ಮಹೇಶ್ ಬಾಬು ಹಾಗೂ ರಾಜಮೌಳಿಯ ಹಿಂದಿನ ಸಿನಿಮಾಗಿಂತಲೂ ಈ ಸಿನಿಮಾ ಅದ್ದೂರಿಯಾಗಿರುತ್ತೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಕಾರಣಕ್ಕೆ ಇವರಿಬ್ಬರ ಸಿನಿಮಾವೂ ಹಲವು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಟಾಲಿವುಡ್‌ನಲ್ಲಿ ಜಕ್ಕಣ್ಣ ಮಾಸ್ಟರ್ ಪ್ಲ್ಯಾನ್ ಬಗ್ಗೆನೇ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ರಾಜಮೌಳಿ ಹೊಸ ಐಡಿಯಾ ಏನು?

ರಾಜಮೌಳಿ ಎಲ್ಲಾ ಸಿನಿಮಾನೂ ಡಿಫ್ರೆಂಟ್
ರಾಜಮೌಳಿ ನಿರ್ದೇಶನದ ಸಿನಿಮಾಗಳು ಒಂದಕ್ಕಿಂತ ಒಂದು ಡಿಫ್ರೆಂಟ್. ಅದರಲ್ಲೂ 'ಬಾಹುಬಲಿ' ಬಳಿಕವಂತೂ ರಾಜಮೌಳಿ ಖದರ್ ಬದಲಾಗಿದೆ. ಕಥೆ ಹೇಳುವ ಶೈಲಿಯೂ ಬದಲಾಗಿದೆ. ಹಾಗೇ ಸಿನಿಮಾ ಬಜೆಟ್ ಕೂಡ ಬದಲಾಗಿದೆ. ಈ ಕಾರಣಕ್ಕೆ ರಾಜಮೌಳಿಯ ಮುಂದಿನ ಸಿನಿಮಾ ಬಗ್ಗೆ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾ ಕಥೆ ಹೇಗಿರುತ್ತೆ? ಅನ್ನುವ ಕುತೂಹಲ ದುಪ್ಪಟ್ಟಾಗಿದೆ. ಅದಕ್ಕೆ ರಾಜಮೌಳಿ ಕೂಡ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರಂತೆ.

ಎರಡು ಸ್ಕ್ರಿಪ್ಟ್ ಸಿದ್ಧ ಪಡಿಸಿದ ಪ್ರಿನ್ಸ್
ರಾಜಮೌಳಿ ಬಳಿ ಎರಡು ಐಡಿಯಾಗಳಿವೆಯಂತೆ. ಈ ಎರಡೂ ಐಡಿಯಾಗಳಲ್ಲಿ ಮಹೇಶ್ ಬಾಬು ಯಾವುದು ಒಪ್ಪುತ್ತಾರೋ ಅದರ ಮೇಲೆ ಕಥೆಯನ್ನು ಡೆವೆಲಪ್ ಮಾಡಲಿದ್ದಾರಂತೆ. ಎಲ್ಲಕ್ಕಿಂತ ಮಿಗಿಲಾಗಿ ಮಹೇಶ್ ಬಾಬು ಯಾವ ಐಡಿಯಾಗೆ ಗ್ರೀನ್ ಸಿಗ್ನಲ್ ಕೊಡುತ್ತಾರೋ ಎಲ್ಲವೂ ಅದರ ಮೇಲೆ ನಿಂತಿದೆ ಎನ್ನುತ್ತಿದೆ ಟಾಲಿವುಡ್. ಅಸಲಿಗೆ ರಾಜಮೌಳಿ ಹಿಂದೆಂದೂ ಇಂತಹ ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಒಮ್ಮೆ ಕಥೆ ಒಕೆ ಆದರೆ ಮುಗೀತು. ಅದು ಸಂಪೂರ್ಣ ರೆಡಿಯಾಗುತ್ತಿದ್ದಂತೆ ಶೂಟಿಂಗ್ ಆರಂಭಿಸುತ್ತಿದ್ದರು. ಇದೇ ಮೊದಲ ಬಾರಿಗೆ ಮಹೇಶ್ ಬಾಬುಗಾಗಿ ಎರಡು ಐಡಿಯಾಗಳನ್ನು ಸಿದ್ಧಪಡಿಸಿಕೊಂಡ ಒಪ್ಪಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸೆಟ್ಟೇರುವುದು ಯಾವಾಗ?
ರಾಜಮೌಳಿ ಸಿನಿಮಾ ಅಂದುಕೊಂಡ ಸಮಯಕ್ಕೆ ಮುಗಿಯುವುದಿಲ್ಲ. ಯಾಕಂದ್ರೆ, ಒಂದು ಸೀನ್ ಪರ್ಫೆಕ್ಟ್ ಆಗಿ ಬರುವವರೆಗೂ ಬಿಡುವುದಿಲ್ಲ. ಹೀಗಾಗಿ ಅಂದ್ಕೊಂಡಿದ್ದಕ್ಕಿಂತ ತಡವಾಗುತ್ತೆ. ಸದ್ಯದ ಮಾಹಿತಿ ಪ್ರಕಾರ, ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ಸೆಟ್ಟೇರಲಿದ್ದು, 2024ರ ಕೊನೆಯಲ್ಲಿ ಬಿಡುಗಡೆಯಾಗುತ್ತೆ ಎನ್ನಲಾಗುತ್ತಿದೆ. ಆದರೆ, ಎಲ್ಲವೂ ರಾಜಮೌಳಿ ಮಾಡುವ ಶೂಟಿಂಗ್ ಪ್ಲ್ಯಾನ್ ಮೇಲೆ ನಿಂತಿದೆ.

ರಾಜಮೌಳಿ ಸಿನಿಮಾ ಪ್ರಿನ್ಸ್ ಬಾಂಡ್ ಲುಕ್?
ರಾಜಮೌಳಿ ಸಿನಿಮಾ ಹೇಗಿರುತ್ತೆ? ಮಹೇಶ್ ಬಾಬು ಪಾತ್ರ ಹೇಗಿರುತ್ತೆ? ಇಂತಹದ್ದೇ ಒಂದಿಷ್ಟು ಕೌತುಕ ಪ್ರಿನ್ಸ್ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದಕ್ಕೆ ಟಾಲಿವುಡ್‌ನಲ್ಲಿ ಮಹೇಶ್ ಬಾಬು ರೋಲ್ ಬಗ್ಗೆ ಗುಲ್ಲೆದ್ದಿದೆ. ಮಹೇಶ್ ಬಾಬು ಈ ಬಾರಿ ಬಾಂಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬಜೆಟ್ ಕೂಡ ಗಗನಕ್ಕೇರಿದ್ದು, 800 ಕೋಟಿ ದಾಟುತ್ತೆ ಎನ್ನುವ ಮಾತಿದೆ. ಆದರೆ, ರಾಜಮೌಳಿ ಹಾಗೂ ಮಹೇಶ್ ಬಾಬು ತಮ್ಮ ಸಿನಿಮಾದ ಚಿಕ್ಕದೊಂದು ರಹಸ್ಯವನ್ನು ಬಿಟ್ಟುಕೊಡುತ್ತಿಲ್ಲ.


Click it and Unblock the Notifications











