Varanasi Movie: ವಿದೇಶದಲ್ಲಿ 'ವಾರಾಣಾಸಿ' ಖರೀದಿಸಿಲು ಮುಗಿಬಿದ್ದ ವಿತರಕರು; ಆಫರ್ ಕೊಟ್ಟಿದ್ದು ಎಷ್ಟಕ್ಕೆ ಗೊತ್ತೇ?
ಪ್ಯಾನ್ ಇಂಡಿಯಾ ಡೈರೆಕ್ಟರ್ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳ್ತಿದ್ದಾರೆ ಅಂದರೆ, ಸಿನಿಮಾ ಕ್ರೇಜ್ ಹೇಗಿರುತ್ತೆ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಗ್ಲೋಬಲ್ ಲೆವೆಲ್‌ನಲ್ಲಿ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಇವರೊಂದಿಗೆ ಸೂಪರ್‌ಸ್ಟಾರ್ ಮಹೇಶ್ ಬಾಬು ಸೇರಿಕೊಂಡರೆ, ಆ ಸಿನಿಮಾ ಬೇರೆ ಲೆವೆಲ್‌ಗೆ ರೀಚ್ ಆಗುತ್ತೆ. ಈಗ 'ವಾರಾಣಾಸಿ' ಕೂಡ ಅದೇ ಕ್ರೇಜ್ ಹುಟ್ಟಾಕಿದೆ.
RRR ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿದ ಬಳಿಕ ರಾಜಮೌಳಿ ಸಿನಿಮಾಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ 'ವಾರಾಣಾಸಿ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಮೊದಲ ಕಾಂಬಿನೇಷನ್ ಆಗಿರೋದ್ರಿಂದ ವಿದೇಶದಲ್ಲಿ ಈ ಸಿನಿಮಾಗೆ ಈಗಿನಿಂದಲೇ ಬೇಡಿಕೆ ದುಪ್ಪಟ್ಟಾಗಿದೆ.

ರಾಜಮೌಳಿ 'ವಾರಾಣಾಸಿ' ಸಿನಿಮಾವನ್ನು ಸುಮಾರು ₹1300 ಕೋಟಿ ಭಾರೀ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಆಕ್ಷನ್ ಸೀಕ್ವೆನ್ಸ್, ವಿಎಫ್‌ಎಕ್ಸ್ ಸೇರಿದಂತೆ ಇನ್ನೂ ಹಲವು ಕ್ಷೇತ್ರಗಳಿಗೆ ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದಾರೆ. ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋವಿಂಗ್ ಬ್ಯುಸಿನೆಸ್ ಬ್ಯಾನರ್‌ನಲ್ಲಿ ಕೆ.ಎಲ್. ನಾರಾಯಣ, ಎಸ್.ಎಸ್. ಕಾರ್ತಿಕೇಯ, ಎಸ್. ಗೋಪಾಲ್ ರೆಡ್ಡಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಮಹೇಶ್ ಬಾಬು ಜೊತೆ ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಸಿನಿಮಾದಲ್ಲಿರುವ ಇನ್ನೆರಡು ಪ್ರಮುಖ ಪಾತ್ರಗಳು. ಇಷ್ಟೆಲ್ಲ ಇರುವ 'ವಾರಾಣಾಸಿ'ಗೆ ಓವರ್‌ಸೀಸನ್ ಮಾರ್ಕೇಟ್‌ನಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
'ವಾರಾಣಾಸಿ' ಬಿಡುಗಡೆಗೂ ಮುನ್ನವೇ ರಾಜಮೌಳಿ ಪ್ರಚಾರವನ್ನು ಶುರು ಮಾಡಿದ್ದಾರೆ. ಆರಂಭದಿಂದಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ರಾಜಮೌಳಿ ಸ್ಕೆಚ್ ಹಾಕಿದ್ದಾರೆ. ಈ ಮೂಲಕ ತಮ್ಮ ವೃತ್ತಿ ಬದುಕಿನ ಅತೀ ದೊಡ್ಡ ಸಿನಿಮಾವನ್ನಾಗಿ ದಾಖಲೆ ಸೃಷ್ಟಿಸುವುದಕ್ಕೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಅಂಟಾರ್ಟಿಕಾದಲ್ಲಿ ಸಿನಿಮಾದ ಬಹುಮುಖ್ಯ ಭಾಗದ ಚಿತ್ರೀಕರಣ ಮಾಡಿ ಬಂದಿದ್ದಾರೆ. ಈ ಬೆನ್ನಲ್ಲೇ ಎರಡು ಓವರ್‌ಸೀಸ್ ವಿತರಣಾ ಸಂಸ್ಥೆಗಳು 'ವಾರಾಣಾಸಿ' ಖರೀದಿಗೆ ಆಸಕ್ತಿ ತೋರಿವೆ ಎಂದು ಹೇಳಲಾಗುತ್ತಿದೆ.\
ರಾಜಮೌಳಿ-ಮಹೇಶ್ ಬಾಬು ಸಿನಿಮಾ ಮೇಲೆ ನಿರೀಕ್ಷೆ ಕಮ್ಮಿಯೇನು ಇಲ್ಲ. ಈ ಸಿನಿಮಾದ ಹಕ್ಕುಗಳು ಮಾರಾಟವಾಗುವ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಹಿಂದಿ ಹಾಗೂ ಓವರ್‌ಸೀಸ್ ಹಕ್ಕುಗಳಿಗಾಗಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಬಿಗ್ ಆಫರ್‌ಗಳನ್ನು ನೀಡುತ್ತಿವೆ. ಡಿಜಿಟಲ್, ಆಡಿಯೋ ಮತ್ತು ಸ್ಯಾಟಲೈಟ್ ಹಕ್ಕುಗಳಿಗೂ ಈಗಾಗಲೇ ಮಾತುಕತೆ ನಡೆಯುತ್ತಿದೆ ಎಂದು ಸುದ್ದಿ ಹಬ್ಬಿದೆ. ಇತ್ತೀಚೆಗೆ, ಪೂರ್ವ ಗೋದಾವರಿ ಜಿಲ್ಲೆಯ ಥಿಯೇಟ್ರಿಕಲ್ ಹಕ್ಕನ್ನು ಒಬ್ಬ ವಿತರಕ ₹18 ಕೋಟಿ ನೀಡಿ ಖರೀದಿ ಮಾಡಿದ್ದಾಗಿ ಸುದ್ದಿ ಓಡಾಡುತ್ತಿದೆ.

ಭಾರತ ಅಷ್ಟೇ ಅಲ್ಲ. ಓವರ್‌ಸೀಸ್ ಮಾರ್ಕೇಟ್‌ನಲ್ಲೂ 'ವಾರಣಾಸಿ'ಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಪಾರ್ಶ್ ಫಿಲಂಸ್ ಸಂಸ್ಥೆಯು ತೆಲುಗು ಸೇರಿದಂತೆ ಭಾರತೀಯ ಭಾಷೆಗಳ ವಿದೇಶಿ ಹಕ್ಕುಗಳಿಗಾಗಿ ಬೃಹತ್ ಮೊತ್ತದ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಸುಮಾರು ₹160 ಕೋಟಿ ರೂಪಾಯಿಗಳಿಗೆ ಆಫರ್ ಆಫರ್ ಮಾಡಿದೆ ಎಂದು ವರದಿಯಾಗಿವೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, 'ವಾರಣಾಸಿ' ಓವರ್‌ಸೀನ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬ್ಯುಸಿನೆಸ್ ಮಾಡಿದ ಸಿನಿಮಾ ಎನಿಸಿಕೊಳ್ಳಲಿದೆ. ಇದು ಮಹೇಶ್ ಬಾಬು ವೃತ್ತಿ ಬದುಕಿನಲ್ಲಿ ಅತೀ ದೊಡ್ಡ ಬ್ಯುಸಿನೆಸ್ ಡೀಲ್ ಆಗಿರುತ್ತೆ.
ಇನ್ನು ಮಹೇಶ್ ಬಾಬು ಜೊತೆ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್, ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಮಂದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ತಾಂತ್ರಿಕ ವರ್ಗದಲ್ಲಿ ಪಿ.ಎಸ್. ವಿನೋದ್ ಕ್ಯಾಮರಾವರ್ಕ್ ಇದ್ದರೆ, ತಮ್ಮಿರಾಜು ಎಡಿಟಿಂಗ್, ಆಸ್ಕರ್ ವಿನ್ನರ್ ಎಂ.ಎಂ. ಕೀರವಾಣಿ ಟ್ಯೂನ್ ಹಾಕುತ್ತಿದ್ದಾರೆ. ರಾಜಮೌಳಿ ಈ ಸಿನಿಮಾವನ್ನು 2027ರ ಏಪ್ರಿಲ್ 7 ರಂದು ಗ್ಲೋಬಲ್ ರಿಲೀಸ್ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ.


Click it and Unblock the Notifications











