ರಾಜಮೌಳಿ-ಮಹೇಶ್ ಬಾಬು ಸಿನಿಮಾ ₹1000 ಕೋಟಿ ಕಲೆಕ್ಷನ್ ಮಾಡಲ್ಲ; ಸೆಟ್ಟೇರುವ ಮುನ್ನವೇ ಕರಾಬ್ ಭವಿಷ್ಯ

ಈ ವರ್ಷ ಸೆಟ್ಟೇರಲಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಸಿನಿಮಾ ಕೂಡ ಒಂದು. RRR ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. RRR ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿದ್ದರಿಂದ ಮುಂದಿನ ಸಿನಿಮಾ ಗ್ಲೋಬಲ್ ಮಟ್ಟದಲ್ಲೇ ಸದ್ದು ಮಾಡಲಿದೆ ಅನ್ನೋ ನಿರೀಕ್ಷೆಯಿದೆ.

ಈಗಾಗಲೇ ರಾಜಮೌಳಿ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲವನ್ನು ಕೆರಳಿಸಿದ್ದಾರೆ. ಹೀಗಾಗಿ ಆದಷ್ಟು ಬೇಗ ಸಿನಿಮಾ ಸೆಟ್ಟೇರುವುದನ್ನೇ ಎದುರು ನೋಡುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಕಮ್ಮಿ ಅಂದರೂ, ಸಾವಿರ ಕೋಟಿ ರೂಪಾಯಿ ಟಾರ್ಗೆಟ್ ಇಟ್ಟುಕೊಂಡಿರುವ ರಾಜಮೌಳಿ ತನ್ನ ರೇಂಜ್ ಅನ್ನು ಹೆಚ್ಚಿಕೊಂಡಿದ್ದಾರೆ.

SS Rajamouli Mahesh Babu movie will not collect 1000 crores at the box office astrologer Venu Swamy

ಟಾಲಿವುಡ್‌ನಲ್ಲಿ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಮೇಲೆ ಎಲ್ಲರದ್ದೂ ಒಂದು ಕಣ್ಣಿದೆ. ಈ ಮಧ್ಯೆ ಈ ಜೋಡಿಯ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನೂರು ಕೋಟಿನೂ ಮಾಡುವುದಿಲ್ಲ ಎಂದು ಭವಿಷ್ಯ ನುಡಿದ್ದಾರೆ. ಇದು ಮಹೇಶ್ ಬಾಬು ಅಭಿಮಾನಿಗಳನ್ನು ಕೆರಳಿಸಿದೆ. ಅಷ್ಟಕ್ಕೂ ಸೆಟ್ಟೇರುವುದಕ್ಕೂ ಮುನ್ನವೇ ಅಪಶಕುನ ನುಡಿದಿದ್ಯಾರು? ತಿಳಿಯಲು ಮುಂದೆ ಓದಿ.

ಟಾಲಿವುಡ್ ಮಂದಿಯ ಫೇವರಿಟ್ ಜ್ಯೋತಿಷಿ ವೇಣು ಸ್ವಾಮಿ ವಿಲನ್ ಆಗುತ್ತಿದ್ದಾರೇನೋ ಅಂತ ಅನಿಸುತ್ತಿದೆ. ಇತ್ತೀಚೆಗೆ ಡಾರ್ಲಿಂಗ್ ಪ್ರಭಾಸ್ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರಭಾಸ್ ಜಾತಕ ಸರಿಯಾಗಿಲ್ಲ. ಹೀಗಾಗಿ 'ಸಲಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುತ್ತೆ ಎಂದಿದ್ದರು. ಆದರೆ, ಅವರ ಭವಿಷ್ಯ ಸುಳ್ಳಾಗಿತ್ತು. ಅಂದಿನಿಂದ ಡಾರ್ಲಿಂಗ್ ಫ್ಯಾನ್ಸ್ ವೇಣು ಸ್ವಾಮಿಯ ವಿರುದ್ಧ ತಿರುಗಿಬಿದ್ದಿದ್ದರು.

SS Rajamouli Mahesh Babu movie will not collect 1000 crores at the box office astrologer Venu Swamy

ಇತ್ತೀಚೆಗೆ ಡಾರ್ಲಿಂಗ್ ಸಿನಿಮಾಗಳ ಹಿಂದೆ ಬಿದ್ದಿದ್ದ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿಯ ಕಣ್ಣು ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಬಿದ್ದಿದೆ. ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾ ವಿಶ್ವ ಮಟ್ಟದಲ್ಲಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದರು. ಆದರೆ, ಅದೆಲ್ಲ ಆಗಲ್ಲ ಅಂತ ವೇಣು ಸ್ವಾಮಿ ಅಡ್ಡಬಾಯಿ ಹಾಕಿ ಮಹೇಶ್ ಬಾಬು ಅಭಿಮಾನಿಗಳ ಪಾಲಿಗೆ ವಿಲನ್ ಆಗಿದ್ದಾರೆ.

ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾ ಇನ್ನೇನು ಸೆಟ್ಟೇರುವುದು ಬಾಕಿಯಿದೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದೆ. ಈ ಬೆನ್ನಲ್ಲೇ ಟಾಲಿವುಡ್ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡೋದೇ ಇಲ್ಲ ಅಂತ ಹೇಳಿಬಿಟ್ಟಿದ್ದಾರೆ. ಅದೇ ಈಗ ಮಹೇಶ್ ಬಾಬು ಅಭಿಮಾನಿಗಳ ನಿದ್ದೆ ಕೆಡಿಸಿದೆ.

ಸಮಂತಾ ಹಾಗೂ ನಾಗಚೈತನ್ಯ ಮದುವೆ ಮುರಿದು ಬೀಳುತ್ತೆ ಅಂತ ಮೊದಲು ಹೇಳಿದ್ದೇ ವೇಣು ಸ್ವಾಮಿ. ಈ ಕಾರಣಕ್ಕೆ ವೇಣು ಸ್ವಾಮಿ ಭವಿಷ್ಯದ ಮೇಲೆ ಟಾಲಿವುಡ್ ಮಂದಿಗೆ ಎಲ್ಲಿಲ್ಲದ ನಂಬಿಕೆ. ಅದರಲ್ಲೂ ರಶ್ಮಿಕಾ ಮಂದಣ್ಣರಿಂದ ಹಿಡಿದು ಹಲವು ಮಂದಿ ನಾಯಕಿಯರು ಇವರು ಹೇಳಿದಂತೆ ಹೋಮ-ಹವನಗಳನ್ನು ಮಾಡಿಸಿದ್ದಾರೆ.

More from Filmibeat

English summary
Astrologer Venu Swamy predicts SS Rajamouli Mahesh Babu movie not able to collect 1000cr:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X