Varanasi: 'ವಾರಾಣಾಸಿ' ಸಿನಿಮಾದ ಬಜೆಟ್ ಎಷ್ಟು? ಏನಕ್ಕೆಲ್ಲಾ ಖರ್ಚಾಗುತ್ತಿದೆ?

ಭಾರತೀಯ ಚಿತ್ರರಂಗದ ಅತೀ ದುಬಾರಿ ಸಿನಿಮಾ 'ವಾರಾಣಾಸಿ'. ಎಸ್‌ ಎಸ್‌ ರಾಜಮೌಳಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ಜೋರಾಗಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆ ದುರ್ಗಾ ಆರ್ಟ್ಸ್ ಬ್ಯಾನರ್ ಮೂಲಕ ಕೆ.ಎಲ್. ನಾರಾಯಣ ನಿರ್ಮಾಣ ಮಾಡುತ್ತಿದ್ದಾರೆ.

ಎಸ್‌.ಎಸ್‌ ರಾಜಮೌಳಿ ಈ ಬಾರಿ ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ದುಬಾರಿ ಸಿನಿಮಾ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಅದಕ್ಕೆ ಟೈಟಲ್ ಲಾಂಚ್ ಇವೆಂಟ್ ಸಾಕ್ಷಿ. ಸೂಪರ್‌ಸ್ಟಾರ್ ಮಹೇಶ್ ಬಾಬು ವೃತ್ತಿ ಬದುಕಿನ 29ನೇ ಸಿನಿಮಾವನ್ನು ಇಡೀ ಭಾರತವೇ ತಿರುಗಿ ನೋಡುವಂತೆ ಮಾಡುವುದಕ್ಕೆ ಜಕ್ಕಣ್ಣ ಸ್ಕೆಚ್ ಹಾಕಿದ್ದಾರೆ. ಈಗಾಗಲೇ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್‌ ಸುಕುಮಾರನ್ ಲುಕ್ ರಿವೀಲ್ ಆಗಿವೆ. ಇದು ಸಿನಿಮಾ ಪ್ರೇಮಿಗಳಿಗೆ ಥ್ರಿಲ್ ಕೊಟ್ಟಿದೆ.

SS Rajamouli Mahesh Babu Priyanka Chopra movie Varanasi movie Budget expenditure and other details

ಸದ್ಯ ಈ ಸಿನಿಮಾದ ಟೈಟಲ್ ರಿವೀಲ್ ಆಗುತ್ತಿದ್ದಂತೆ, ಬಜೆಟ್ ಬಗ್ಗೆ ಚರ್ಚೆಯಾಗುತ್ತಿದೆ. ಅದರಲ್ಲೂ ವಿಜಯೇಂದ್ರ ಪ್ರಸಾದ್ ಕಥೆ ಬರೆದಿರುವುದರಿಂದ ಸಿನಿಮಾ ಸಿಕ್ಕಾಪಟ್ಟೆ ಮಜವಾಗಿರುತ್ತೆ ಅನ್ನೋ ನಂಬಿಕೆಯಿದೆ. ಮತ್ತೊಮ್ಮೆ ಅಪ್ಪ-ಮಗನ ಕಾಂಬಿನೇಷನ್ ಗ್ಲೋಬಲ್ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ಇತಿಹಾಸವನ್ನು ಸೃಷ್ಟಿಸುತ್ತೆ ಎಂದು ಎದುರು ನೋಡಲಾಗುತ್ತಿದೆ. ಈ ಮಧ್ಯೆ 'ವಾರಾಣಾಸಿ' ಸಿನಿಮಾದ ಬಜೆಟ್ ಬಗ್ಗೆ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಇತ್ತೀಚೆಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದ ಟೈಟಲ್ ಲಾಂಚ್ ಮಾಡಿದ ಬಳಿಕ ಕುತೂಹಲ ದುಪ್ಪಟ್ಟಾಗಿದೆ. ಜೊತೆಗೆ ಒಂದಿಷ್ಟು ವಿವಾದಗಳು ಕೂಡ ಸೃಷ್ಟಿಯಾಗಿವೆ. ಆದರೆ, ಸಿನಿಮಾ ತಂಡ ಈ ಬಗ್ಗೆ ಮೌನಕ್ಕೆ ಶರಣಾಗಿದೆ. 'ವಾರಾಣಾಸಿ' ಮೇಕಿಂಗ್ ಬಗ್ಗೆ ಗಮನ ಹರಿಸಿದೆ. ಅಂದ್ಹಾಗೆ ಸಿನಿಮಾ ಬಜೆಟ್ ಸದ್ಯ ಟಾಲಿವುಡ್ ಮಂದಿಯನ್ನಷ್ಟೇ ಅಲ್ಲ. ಇಡೀ ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.

ರಾಜಮೌಳಿ 'ವಾರಾಣಾಸಿ' ಸಿನಿಮಾ ಆರಂಭ ಮಾಡುತ್ತಿದ್ದಂತೆ ಬಜೆಟ್‌ ಬಗ್ಗೆ ಚರ್ಚೆಯೊಂದು ಮುನ್ನೆಲೆಗೆ ಬಂದಿತ್ತು. ಸುಮಾರು ಸಾವಿರ ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆಂಬ ಸುದ್ದಿ ಹಬ್ಬಿತ್ತು. ಆದ್ರೀಗ ಟ್ರೈಟಲ್ ಲಾಂಚ್ ಆಗುತ್ತಿದ್ದಂತೆ, ಇದು ಸಾವಿರ ಕೋಟಿ ಬಜೆಟ್ ಅಲ್ಲ. ಸುಮಾರು ₹1200 ಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆಯೆಂದು ವರದಿಯಾಗಿವೆ.

SS Rajamouli Mahesh Babu Priyanka Chopra movie Varanasi movie Budget expenditure and other details

ಇಷ್ಟು ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವಾಗ ರಾಜಮೌಳಿ ಕೇವಲ ಒಂದು ಪಾರ್ಟ್‌ನಲ್ಲಿ ಸಿನಿಮಾವನ್ನು ಮುಗಿಸುತ್ತಾರಾ? ಇಲ್ಲ 'ಬಾಹುಬಲಿ'ಯಂತೆ ಎರಡು ಪಾರ್ಟ್‌ಗಳಾಗಿ ಸಿನಿಮಾವನ್ನು ಬಿಡುಗಡೆ ಮಾಡುತ್ತಾರಾ? ಅನ್ನೋ ಗುಮಾನಿ ತೆಲುಗು ಮಂದಿಗೆ ಹುಟ್ಟಿಕೊಂಡಿದೆ. ಆದರೆ, ಈ ಬಗ್ಗೆ ರಾಜಮೌಳಿ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಆದರೆ, 3 ಗಂಟೆ 25 ನಿಮಿಷಗಳ ಅವಧಿಯಲ್ಲಿ ಸಿನಿಮಾವನ್ನು ತೋರಿಸುವುದಕ್ಕೆ ರಾಜಮೌಳಿ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ.

ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್‌ನಲ್ಲಿ ನಿರ್ಮಾಣ ಆಗುತ್ತಿರುವ 'ವಾರಾಣಾಸಿ' 2027ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಎರಡು ಶೆಡ್ಯೂಲ್ ಶೂಟಿಂಗ್ ಮಾಡಿದ್ದರೂ, ಇನ್ನೂ ಎಷ್ಟು ಹಂತಗಳಲ್ಲಿ ಚಿತ್ರೀಕರಣ ನಡೆಯುತ್ತೋ ಗೊತ್ತಿಲ್ಲ. ಆದರೆ, ಸಿನಿಮಾಗೆ ಸಿಕ್ಕಾಪಟ್ಟೆ ವಿಎಫ್‌ಎಕ್ಸ್ ಕೆಲಸವಿದೆ. ಈ ಕಾರಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಒಂದೂವರೆ ವರ್ಷಗಳಷ್ಟು ಗಡುವನ್ನು ರಾಜಮೌಳಿ ಪಡೆದುಕೊಂಡಿದ್ದಾರೆ.

More from Filmibeat

English summary
SS Rajamouli, Mahesh Babu, Priyanka Chopra movie Varanasi movie Budget, expenditure and other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X