RCB Vs PBKS: "ಆರ್‌ಸಿಬಿ ಗೆದ್ದರೂ, ಪಂಜಾಬ್ ಗೆದ್ದರೂ ಹೃದಯ ಚೂರಾಗುತ್ತೆ"; ರಾಜಮೌಳಿಗೆ ಇದೆಂಥಾ ಸಮಸ್ಯೆ?
ಐಪಿಎಲ್ 2025ರ ಕೊನೆಯ ಹಂತಕ್ಕೆ ಬಂದು ನಿಂತಿದೆ. ಆರ್‌ಸಿಬಿ ಹಾಗೂ ಪಂಜಾಬ್ ಇಬ್ಬರೂ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಇದೇ ಪಂಜಾಬ್ ತಂಡವನ್ನು ಮಣಿಸಿ ಆರ್‌ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇತ್ತ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿ ಪಂಜಾಬ್ ಮತ್ತೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇವರಿಬ್ಬರಲ್ಲಿ ನಾಳೆ (ಜೂನ್ 3) ನಡೆಯುವ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ರೋಚಕ.
ಕಳೆದ 17 ಸೀಸನ್‌ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ತಂಡವನ್ನು ಒಂದೇ ಒಂದು ಬಾರಿ ಟ್ರೋಫಿಯನ್ನು ಗೆದ್ದಿಲ್ಲ. ಈ ಬಾರಿ ಎರಡೂ ತಂಡಗಳೂ ಟ್ರೋಫಿಯನ್ನು ಗೆಲ್ಲುವುದಕ್ಕೆ ಅರ್ಹರು ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಆದರೆ, ಈ ಎರಡು ತಂಡಗಳಲ್ಲಿ ಒಂದು ಮಾತ್ರ ಟ್ರೋಫಿಯನ್ನು ಗೆಲ್ಲುವುದ್ಕೆ ಸಾಧ್ಯ. ಹೀಗಾಗಿ 18ನೇ ಸೀಸನ್‌ನಲ್ಲಿ ಹೊಸ ತಂಡ ಟ್ರೋಫಿಯನ್ನು ಗೆಲ್ಲುವುದಂತೂ ಖಚಿತ.

ಆರ್‌ಸಿಬಿ ಟ್ರೋಫಿಯನ್ನು ಎತ್ತುವುದನ್ನು ನೋಡುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇತ್ತ ಪಂಜಾಬ್ ಫ್ಯಾನ್ಸ್ ಕೂಡ ಟ್ರೋಫಿ ಗೆಲ್ಲಲಿ ಅಂತ ಬಯಸುತ್ತಿದ್ದಾರೆ. ಆದರೆ, ಪ್ಯಾನ್ ಇಂಡಿಯಾದ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಮಾತ್ರ ಎರಡೂ ಟೀಮ್‌ನಲ್ಲಿ ಯಾರೇ ಗೆದ್ದರೂ ಹೃದಯ ಚೂರಾಗುತ್ತೆ ಎಂದು ಹೇಳುತ್ತಿದ್ದಾರೆ. ಇವರ ಮಾತಿನ ಅರ್ಥವೇನು? ತಿಳಿಯುವುದಕ್ಕೆ ಮುಂದೆ ಓದಿ.
ಐಪಿಎಲ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಗೆಲ್ಲುತ್ತಿದ್ದಂತೆ ರಾಜಮೌಳಿ ಫೈನಲ್ ಪಂದ್ಯದ ಕುರಿತು ಪ್ರತಿಕ್ರಿಯಿಸಿದ್ದಾರೆ. ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಇಬ್ಬರ ಬಗ್ಗೆನೂ ಬರೆದು ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ಸದ್ಯ ಇಬ್ಬರೂ ಅಭಿಮಾನಿಗಳೂ ಖುಷಿ ಪಡುವಂತೆ ಮಾಡಿದೆ.
ಅಷ್ಟಕ್ಕೂ ರಾಜಮೌಳಿ ಐಪಿಎಲ್ 2025 ಫೈನಲ್ ಪಂದ್ಯದ ಬಗ್ಗೆ ಏನು ಹೇಳಿದ್ದಾರೆ ಅಂತ ನೋಡುವುದಾದರೇ, "ಬುಮ್ರಾ ಮತ್ತು ಬೌಲ್ಟ್ ಅವರ ಯಾರ್ಕರ್‌ಗಳನ್ನು ಬೌಂಡರಿಗೆ ಕಳುಹಿಸಿದ ಅಯ್ಯರ್.. ಅದ್ಭುತ. ಈತ ದೆಹಲಿಯನ್ನು ಫೈನಲ್‌ಗೆ ತೆಗೆದುಕೊಂಡು ಹೋದ. ಆಮೇಲೆ ಡ್ರಾಪ್ ಮಾಡಲಾಯ್ತು. ಕೊಲ್ಕತ್ತಾ ಟ್ರೋಫಿ ಗೆಲ್ಲುವುದಕ್ಕೆ ಕಾರಣನಾದ.. ಡ್ರಾಪ್ ಮಾಡಲಾಯ್ತು. 11 ವರ್ಷಗಳ ಬಳಿಕ ಪಂಜಾಬ್ ಅನ್ನು ಫೈನಲ್‌ಗೆ ಕರೆದುಕೊಂಡು ಹೋಗುವುದಕ್ಕೆ ಕಾರಣಕರ್ತನಾದ. ಈ ವರ್ಷ ಟ್ರೋಫಿ ಗೆಲ್ಲುವ ಹಕ್ಕು ಇವರಿಗೂ ಇದೆ." ಎಂದು ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹೊಗಳಿದ್ದಾರೆ.
ಹಾಗೇ ಆರ್‌ಸಿಬಿ ತಂಡ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನೂ ಹೊಗಳಿದ್ದಾರೆ. "ಇನ್ನೊಂದು ಕಡೆ.. ವಿರಾಟ್ ಕೊಹ್ಲಿ.. ವರ್ಷದಿಂದ ವರ್ಷಕ್ಕೆ ಇವರ ಪರ್ಫಾಮೆನ್ಸ್ ಹೆಚ್ಚಾಗುತ್ತಲೇ ಇದೆ. ಸಾವಿರಾರು ರನ್‌ಗಳನ್ನು ಕಲೆ ಹಾಕುತ್ತಲೇ ಇದ್ದಾರೆ. ಅವರಿಗೂ ಕೂಡ ಇದು ಅಂತಿಮ ಗಡಿ. ಅವರೂ ಈ ಟ್ರೋಫಿ ಗೆಲ್ಲುವುದಕ್ಕೆ ಅರ್ಹರು. ಪಂದ್ಯದ ಫಲಿತಾಂಶ ಏನೇ ಬಂದರೂ.. ಅದು ನಿಜಕ್ಕೂ ಹೃದಯವನ್ನು ಚೂರು ಮಾಡುತ್ತೆ." ಎಂದು ಎಸ್ ಎಸ್ ರಾಜಮೌಳಿ ಬೆರೆದಿದ್ದಾರೆ.
ರಾಜಮೌಳಿಗೆ ಕ್ರಿಕೆಟ್ ಮೇಲಿರುವ ಆಸಕ್ತಿಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ರಾಜಮೌಳಿ ಸಿನಿಮಾವನ್ನಷ್ಟೇ ಸೂಕ್ಷ್ಮವಾಗಿ ನೋಡುವುದಿಲ್ಲ. ಆದರೆ, ಕ್ರಿಕೆಟ್ ಅನ್ನೂ ಇಷ್ಟು ಹತ್ತಿರದಿಂದ ನೋಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ರಾಜಮೌಳಿ ಸೂಪರ್‌ಸ್ಟಾರ್ ಮಹೇಶ್ ಬಾಬು ನಟಿಸುತ್ತಿರುವ ದುಬಾರಿ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications











