ರಾಜಮೌಳಿ ಎಲ್ಲಾ ಸಿನಿಮಾ ಗೆಲ್ಲೋಕೆ ಕಾರಣ ಅವರ ಅಮ್ಮ: ಆ ಸೀಕ್ರೆಟ್ ಏನು?

ರಾಜಮೌಳಿ ಭಾರತೀಯ ಚಿತ್ರರಂಗ ಟಾಪ್ ಡೈರೆಕ್ಟರ್. ಸಾವಿರ ಕೋಟಿಯ ಎರಡು ಸಿನಿಮಾಗಳನ್ನು ನೀಡಿರೋ ಈ ನಿರ್ದೇಶಕ ವಿಶ್ವದ ಗಮನ ಸೆಳೆದಿದ್ದಾರೆ. 'ಬಾಹುಬಲಿ 2' ಹಾಗೂ RRR ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಕಲೆ ಹಾಕಿದೆ. ಈ ಎರಡು ಸಿನಿಮಾಗಳು ರಾಜಮೌಳಿಯನ್ನು ಟಾಪ್ ಡೈರೆಕ್ಟರ್ ಪಟ್ಟಕ್ಕೇರಿಸಿದೆ.

ರಾಜಮೌಳಿ ಸಿಕ್ಕಿರೋ ಸಕಸ್ಸ್‌ ಬಹುಶ: ಇತ್ತೀಚೆಗೆ ಯಾವ ನಿರ್ದೇಶಕರಿಗೂ ಸಿಕ್ಕಿಲ್ಲ. ಈಗಂತೂ ರಾಜಮೌಳಿ ನಿರ್ದೇಶಿಸಿದ RRR ಸಿನಿಮಾಗೆ ಹಾಲಿವುಡ್ ಮಂದಿನೇ ಮೆಚ್ಚಿ ಕೊಂಡಾಡಿದ್ದಾರೆ. ಹೀಗಾಗಿ ರಾಜಮೌಳಿ ಸಕ್ಸಸ್ ಸೀಕ್ರೆಟ್ ಏನು ಅಂತ ತಿಳಿದುಕೊಳ್ಳೋಕೆ ಬಹಳ ದಿನಗಳಿಂದ ಜನರು ಕಾದು ಕೂತಿದ್ದರು.

ಸ್ವತ: ರಾಜಮೌಳಿನೇ ತನ್ನ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ್ದಾರೆ. ಕ್ರಿಯೇಟಿವ್ ಆಗಿ ಹೇಗೆ ಯೋಚನೆ ಮಾಡುತ್ತಾರೆ? ಕಥೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ? ಅಸಲಿಗೆ ಯಶಸ್ಸಿನ ಸೀಕ್ರೆಟ್ ಏನು? ಅನ್ನೋದನ್ನು ಜಕ್ಕಣ್ಣನೇ ಬಿಟ್ಟು ಕೊಟ್ಟಿದ್ದಾರೆ.

ರಾಜಮೌಳಿ ಸಕ್ಸಸ್ ಬಗ್ಗೆ ಡಿಬೇಟ್

ರಾಜಮೌಳಿ ಸಕ್ಸಸ್ ಬಗ್ಗೆ ಡಿಬೇಟ್

ರಾಜಮೌಳಿ ಇಲ್ಲಿವರೆಗೂ ನಿರ್ದೇಶಿಸಿದ ಒಂದೇ ಒಂದು ಸಿನಿಮಾನೂ ಸೋತಿಲ್ಲ. ಮೊದಲನೇ ಸಿನಿಮಾದಿಂದ ಇತ್ತೀಚೆಗೆ ನಿರ್ದೇಶಿಸಿದ RRR ವರೆಗೂ ಎಲ್ಲವೂ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿವೆ. ಅದರಲ್ಲೂ 'ಬಾಹುಬಲಿ' ಹಾಗೂ RRR ಅಂತಹ ಸಿನಿಮಾಗಳು ರಾಜಮೌಳಿ ರೇಂಜ್ ಅನ್ನೇ ಬದಲಾಯಿಸಿದೆ. ಇಲ್ಲಿಂದ ಅಂತೂ ಜಕ್ಕಣ್ಣನ ಸಕ್ಸಸ್ ಬಗ್ಗೆನೇ ಚರ್ಚೆಯಾಗುತ್ತಿದೆ. ಆದರೂ, ಯಾರಿಗೂ ಇವರ ಸೀಕ್ರೆಟ್ ಅನ್ನೂ ಕ್ರ್ಯಾಕ್ ಮಾಡೋದಕ್ಕೆ ಸಾಧ್ಯವಾಗಿರಲಿಲ್ಲ.

ರಾಜಮೌಳಿ ಯಶಸ್ಸಿನ ಗುಟ್ಟೇನು?

ರಾಜಮೌಳಿ ಯಶಸ್ಸಿನ ಗುಟ್ಟೇನು?

ಇತ್ತೀಚೆಗೆ ರಾಜಮೌಳಿ ಡಿಜಿಟಲ್ ಮಾಧ್ಯಮಕ್ಕೆ ಸಂದರ್ಶನವನ್ನು ನೀಡಿದ್ದರು. ಈ ಸಂದರ್ಶನದಲ್ಲಿ ರಾಜಮೌಳಿ ಕ್ರಿಯೇಟಿವ್ ಆಗಿ ಹೇಗೆ ಯೋಚನೆ ಮಾಡುತ್ತಾರೆ ಅನ್ನೋ ರಹಸ್ಯವನ್ನು ಬಿಟ್ಟುಕೊಟ್ಟಿದ್ದಾರೆ. ರಾಜಮೌಳಿ ಚಿಕ್ಕವರಿರುವಾಗಲೇ ಕ್ರಿಯೇಟಿವ್ ಆಗಿ ಯೋಚನೆ ಮಾಡಲು ಆರಂಭಿಸಿದ್ದರು. ಅದಕ್ಕೆ ಕಾರಣ ಅವರ ಅಮ್ಮ. ಅವರು ಬಾಲ್ಯದಲ್ಲಿ ಓದಿನ ಮೇಲೆ ಹೆಚ್ಚು ಒತ್ತಡ ಹೇರುತ್ತಿರಲಿಲ್ಲ. ಕ್ರೀಡೆ ಹಾಗೂ ಕಾಮಿಕ್ ಪುಸ್ತಕಗಳ ಓದುವಂತೆ ಹೇಳುತ್ತಿದ್ದರಂತೆ. ಅದೇ ಕ್ರಿಯೇಟಿವ್ ಆಗಿ ಯೋಚಿಸಲು ಅನುಕೂಲ ಮಾಡಿಕೊಟ್ಟಿದ್ದನ್ನು ರಿವೀಲ್ ಮಾಡಿದ್ದಾರೆ.

ಅಮ್ಮನ ಬಗ್ಗೆ ರಾಜಮೌಳಿ ಹೇಳಿದ್ದೇನು?

ಅಮ್ಮನ ಬಗ್ಗೆ ರಾಜಮೌಳಿ ಹೇಳಿದ್ದೇನು?

ಡಿಜಿಟಲ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಾಜಮೌಳಿ ಅಮ್ಮನೇ ಸಕ್ಸಸ್ ಸೀಕ್ರೆಟ್ ಅನ್ನೋದನ್ನು ಹೇಳಿದ್ದರು. " ನಮ್ಮ ಅಮ್ಮ ಯಾವತ್ತೂ ಓದು ಅಂತ ಒತ್ತಡ ಹೇರಲಿಲ್ಲ. ನಾನು ಸುಮ್ಮನೆ ಕೂತಿದ್ದನ್ನು ನೋಡಿದರೆ, ಎರಡು ಕೆಲಸ ಮಾಡುವುದಕ್ಕೆ ಹೇಳುತ್ತಿದ್ದರು. ನೀವು ಹೊರಗಡೆ ಹೋಗಿ ಯಾಕೆ ಆಟ ಆಡುವುದಿಲ್ಲ ಎನ್ನುತ್ತಿದ್ದರು. ನೀನ್ಯಾಕೆ ಕಾಮಿಕ್ ಪುಸ್ತಕಗಳನ್ನು ಓದಬಾರದು ಎಂದು ಕೇಳುತ್ತಿದ್ದರಂತೆ. ಇದು ನನ್ನ ಮೇಲೆ ತುಂಬಾನೇ ಪರಿಣಾಮ ಬೀರಿದೆ. ನನ್ನ ಕೈಗೆ ಏನು ಸಿಗುತ್ತೋ ಅದೆಲ್ಲವನ್ನೂ ನಾನು ಓದುತ್ತೇನೆ." ಎಂದು ರಾಜಮೌಳಿ ಹೇಳಿದ್ದರು.

ಮಹೇಶ್ ಬಾಬು ಜೊತೆ ಮುಂದಿನ ಸಿನಿಮಾ

ಮಹೇಶ್ ಬಾಬು ಜೊತೆ ಮುಂದಿನ ಸಿನಿಮಾ

RRR ಸಕ್ಸಸ್ ಬಳಿಕ ಮಹೇಶ್ ಬಾಬುಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಕಳೆದೆರಡು ಸಿನಿಮಾಗಳಿಗಿಂತಲೂ ಬಿಗ್ ಬಜೆಟ್‌ಗೆ ರಾಜಮೌಳಿ ಕೈ ಹಾಕಿದ್ದಾರೆ. ಪ್ರಪಂಚ ಸುತ್ತುವ ಕಥೆಯನ್ನು ತಂದೆ ವಿಜಯೇಂದ್ರ ಪ್ರಸಾದ್ ಸಿದ್ಧಪಡಿಸಿದ್ದು, ಸ್ಕ್ರೀನ್ ಪ್ಲೇ ರೆಡಿ ಮಾಡುತ್ತಿದ್ದಾರೆ. ಮಹೇಶ್ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸುವುದಕ್ಕೆ ಹಾಲಿವುಡ್ ಸ್ಟಾರ್ ನಟರನ್ನು ಕರೆದುಕೊಂಡು ಬರಲು ಚಿಂತಿಸಿದ್ದು, 'ಥಾರ್' ನಟ ಕ್ರಿಸ್ ಹೆಮ್ಸ್‌ವರ್ತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎನ್ನಲಾಗಿದೆ.

More from Filmibeat

English summary
SS Rajamouli Success Secret: His Mother And comic book Are The Reason, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X