ಆಫ್ರಿಕಾದ ಸಾಹಸಕ್ಕೆ 'AI' ತಂತ್ರಜ್ಞಾನದ ಮೊರೆ: ರಾಜಮೌಳಿ ಕಲ್ಪನೆಯಲ್ಲಿ ಪ್ರಿನ್ಸ್ ಹನುಮಂತನಷ್ಟೇ ಪವರ್‌ಫುಲ್!
ಭಾರತದ ಕೆಲವು ಸಿನಿಮಾಗಳು ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡೋಕೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ. ಅದರಲ್ಲಿ ಮೊದಲು ನಿಲ್ಲೋದೇ ರಾಜಮೌಳಿಯ ಮುಂದಿನ ಸಿನಿಮಾ. RRR ಸಿನಿಮ ಬಳಿಕ ರಾಜಮೌಳಿಯ ರೇಂಜ್ ವಿಶ್ವ ಮಟ್ಟಕ್ಕೆ ರೀಚ್ ಆಗಿದೆ. ಹೀಗಾಗಿ ಗ್ಲೋಬಲ್ ಲೆವೆಲ್‌ಗೆ ರೀಚ್ ಮಾಡಬೇಕಿದೆ.
ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಂತೆ ರಾಜಮೌಳಿ ಆ ಲೆವೆಲ್‌ನಲ್ಲೇ ಸಿನಿಮಾ ತೆಗೆಯುವುದಕ್ಕೆ ಯೋಜನೆ ಮಾಡುತ್ತಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು ಬಳಿಸಿ, ಸಿನಿಮಾ ಮಾಡುವುದಕ್ಕೆ ಸಿದ್ದತೆ ನಡೆಸಿದ್ದಾರೆ.

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಹಾಗೂ ರಾಜಮೌಳಿ ಕಾಂಬಿನೇಷನ್‌ನಲ್ಲಿ ಸಿನಿಮಾ ಆರಂಭ ಆಗೋದು ಗೊತ್ತೇ ಇದೆ. ಇದಕ್ಕಾಗಿ ರಾಜಮೌಳಿ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಫಿಲ್ಮಿಬೀಟ್‌ಗೆ ಸಿಕ್ಕಿರೋ ಮಾಹಿತಿ ಪ್ರಕಾರ, ರಾಜಮೌಳಿ ಮುಂದಿನ ಸಿನಿಮಾದಲ್ಲಿ 'AI' ತಂತ್ರಜ್ಞಾವನ್ನು ಬಳಸುತ್ತಿದ್ದಾರಂತೆ. ಅಷ್ಟಕ್ಕೂ 'AI' ಟೆಕ್ನಾಲಜಿ ಯಾಕೆ? ಸಿನಿಮಾ ಯಾವಾಗ ಸೆಟ್ಟೇರುತ್ತೆ? ಎಲ್ಲಾ ಮಾಹಿತಿ ಇಲ್ಲಿದೆ.
ಹನುಮಂತನಷ್ಟೇ ಪವರ್‌ಫುಲ್
RRR ಸಿನಿಮಾ ಬಳಿಕ ರಾಜಮೌಳಿ ಕಲ್ಪನೆಗೆ ಹಾಲಿವುಡ್ ದಿಗ್ಗಜರೇ ಸುಸ್ತಾಗಿದ್ದಾರೆ. ಸ್ಕ್ರೀನ್ ಪ್ಲೇ.. ಗ್ರಾಫಿಕ್ಸ್.. ಸಾಂಗ್ಸ್ ಎಲ್ಲವೂ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದವು. ಜೇಮ್ಸ್ ಕೆಮರೂನ್ ಅಂತಹ ದಿಗ್ಗಜನೇ ಹಾಡಿಹೊಗಳಿದ್ದರು. ಹೀಗಾಗಿ ಮಹೇಶ್ ಬಾಬು ಜೊತೆ ಮಾಡುತ್ತಿರುವ ಸಿನಿಮಾ ಮೇಲೆ ಎಲ್ಲರ ಕಣ್ಣಿದೆ.
ರಾಜಮೌಳಿ ಕಲ್ಪನೆಯಲ್ಲಿ ಮಹೇಶ್ ಬಾಬು ಹೇಗೆ ಕಾಣಿಸಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ. ಅದರಂತೆ, ರಾಜಮೌಳಿ ಸಿನಿಮಾದಲ್ಲಿ ಮಹೇಶ್ ಬಾಬುಗೆ ಹನುಮಂತನಂತಹ ಪವರ್ ಇರುತ್ತೆ. ಆಂಜನೇಯನ ಸ್ವಭಾವಗಳನ್ನು ಮಹೇಶ್ ಬಾಬು ಕ್ಯಾರೆಕ್ಟರ್‌ಗಳಲ್ಲಿ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ದುಬಾರಿ ಮೊತ್ತ ಕೊಟ್ಟು ತಂತ್ರಜ್ಞಾನವನ್ನು ಖರೀದಿ ಮಾಡಲಾಗಿದೆ ಎನ್ನಲಾಗಿದೆ.

'AI' ತಂತ್ರಜ್ಞಾನ ಬಳಸಲಿರೋ ರಾಜಮೌಳಿ
ರಾಜಮೌಳಿ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾ ಆಫ್ರಿಕಾದ ಕಾಡಿನಲ್ಲಿ ನಡೆಯುವ ಅಡ್ವೆಂಚರ್ ಥ್ರಿಲ್ಲರ್ ಕಥೆ. ಇದನ್ನು ಸ್ವತ: ರಾಜಮೌಳಿಯ ತಂದೆಯೇ ಸ್ಪಷ್ಟಪಡಿಸಿದ್ದಾರೆ. ಇದಕ್ಕಾಗಿ ರಾಜಮೌಳಿ 'AI' ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದಾರಂತೆ.
ಸದ್ಯ ಈ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ, ಈಗಾಗಲೇ AI ತಂತ್ರಜ್ಞಾನವನ್ನು ಬಳಸಲು ದುಬಾರಿ ಮೊತ್ತವನ್ನು ಖರ್ಚು ಮಾಡಲಾಗಿದೆ. ಆಫ್ರಿಕಾ ಕೆಲವು ದೃಶ್ಯಗಳನ್ನು AI ಟೆಕ್ನಾಲಜಿ ಬಳಸಿ ಶೂಟಿಂಗ್ ಮಾಡುವ ಆಲೋಚನೆಯಲ್ಲಿ ರಾಜಮೌಳಿ ಇದ್ದಾರಂತೆ. ಆದರೆ, ಹೇಗೆ ಬಳಸುತ್ತಾರೆ? ಯಾಕೆ ಅನ್ನೋದು ಮಾತ್ರ ಗೊತ್ತಾಗಿಲ್ಲ. ಈ ಬಗ್ಗೆ ಸಿನಿಮಾ ಸೆಟ್ಟೇರಿದಾಗ ರಾಜಮೌಳಿಯೇ ಸ್ಪಷ್ಟಪಡಿಸುವ ಸಾಧ್ಯತೆಯಿದೆ.
ಸಿನಿಮಾ ಸೆಟ್ಟೇರೋದ್ಯಾವಾಗ?
ರಾಜಮೌಳಿಯ RRR ಸಿನಿಮಾ ರಿಲೀಸ್ ಆಗಿ ಒಂದೂವರೆ ವರ್ಷ ಆಗುತ್ತಿದೆ. ಆದರೂ, ಹೊಸ ಸಿನಿಮಾ ಸೆಟ್ಟೇರಿಲ್ಲ. ಈಗ ಸಿಕ್ಕಿರೋ ಮಾಹಿತಿ ಪ್ರಕಾರ, ಮಹೇಶ್ ಹುಟ್ಟುಹಬ್ಬಕ್ಕೆ (ಆಗಸ್ಟ್ 9) ಈ ಸಿನಿಮಾ ಮುಹೂರ್ತ ಆಗುತ್ತೆ.
ಈ ವರ್ಷ ಸಿನಿಮಾ ಸೆಟ್ಟೇರುವುದೇನೋ ಸರಿ. ಆದರೆ, ಇದೇ ವರ್ಷ ಶೂಟಿಂಗ್ ಆರಂಭ ಆಗುವುದಿಲ್ಲ. 2024ರಲ್ಲಿ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಇನ್ನು ಬಿಡುಗಡೆ ಯಾವಾಗ ಆಗಬಹುದು ಅನ್ನೋದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಯಾಕಂದ್ರೆ, ರಾಜಮೌಳಿ ಸಿನಿಮಾ ಆರಂಭ ಆಗೋದಷ್ಟೇ ಗೊತ್ತು. ಆದರೆ, ಬಿಡುಗಡೆ ಆಗೋದು ಅವರಿಗೂ ಗೊತ್ತಿರಲ್ಲ. ಹೀಗಾಗಿ ರಿಲೀಸ್ ಡೇಟ್ ಈಗಲೇ ನಿರೀಕ್ಷೆ ಮಾಡೋದು ಸೂಕ್ತವಲ್ಲ.


Click it and Unblock the Notifications











