Pushpa Dialogue: SSLC ಉತ್ತರ ಪತ್ರಿಕೆಯಲ್ಲಿ 'ಪುಷ್ಪ' ಡೈಲಾಗ್ ಬರೆದ ವಿದ್ಯಾರ್ಥಿ: ಶಿಕ್ಷಕರೇ ಕಂಗಾಲು!

ಟಾಲಿವುಡ್‌ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾ ಭಾರತದ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. ಎಲ್ಲಾ ಭಾಷೆಯಿಂದಲೇ ಸುಮಾರು 350 ಕೋಟಿ ಲೂಟಿ ಮಾಡಿದೆ. ಕೇವಲ ಬಾಲಿವುಡ್‌ನಲ್ಲೇ ನೂರೈವತ್ತು ಕೋಟಿ ಬಾಚಿಕೊಂಡಿತ್ತು.

ಸಿನಿಮಾದ ಕಲೆಕ್ಷನ್‌ಗಿಂತ ಈ ಚಿತ್ರದ ಡೈಲಾಗ್‌, ಸಾಂಗ್ ಎಲ್ಲವೂ ಸೂಪರ್ ಹಿಟ್ ಆಗಿತ್ತು. ಇಡೀ ವಿಶ್ವದಾದ್ಯಂತ ಬೇರೆ ಬೇರೆ ಕಡೆ ಈ ಸಿನಿಮಾ ಡೈಲಾಗ್‌ಗಳನ್ನು, ಅಲ್ಲು ಅರ್ಜುನ್ ಮ್ಯಾನರಿಸಂ ಅನ್ನು ಪ್ರೇಕ್ಷಕರು ಅನುಕರಿಸುತ್ತಿದ್ದಾರೆ. ಅವುಗಳೂ ಕೂಡ ಸೂಪರ್‌ ಹಿಟ್ ಆಗಿವೆ.

'ಪುಷ್ಪ' ಸಿನಿಮಾ ಬಿಡುಗಡೆಯಾಗಿ ನಾಲ್ಕು ತಿಂಗಳ ಮೇಲಾದರೂ, ಇಲ್ಲೂ ಕ್ರೇಜ್ ಕಡಿಮೆ ಆಗಿಲ್ಲ ಅನ್ನುವುದಕ್ಕೆ ಇಲ್ಲೊಂದು ಸಾಕ್ಷಿಯಿದೆ. SSLC ಓದುವ ಹುಡುಗನೊಬ್ಬ ಇದೇ ಸಿನಿಮಾದ ಡೈಲಾಗ್ ಅನ್ನು ಉತ್ತರ ಪತ್ರಿಕೆಯಲ್ಲಿ ಬರೆದು ಶಿಕ್ಷಕರಿಗೆ ಶಾಕ್ ಕೊಟ್ಟಿದ್ದಾನೆ.

ಉತ್ತರ ಪತ್ರಿಕೆಯಲ್ಲಿ 'ಪುಷ್ಪ' ಡೈಲಾಗ್

ಉತ್ತರ ಪತ್ರಿಕೆಯಲ್ಲಿ 'ಪುಷ್ಪ' ಡೈಲಾಗ್

'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ಡೈಲಾಗ್ ಹಾಗೂ ಮ್ಯಾನರಿಸಂ ಸಖತ್ ಕ್ರೇಜ್ ಹುಟ್ಟಾಕಿತ್ತು. ಸಿಗ್ನೇಚರ್ ಸ್ಟೆಪ್ಸ್ ಅಂತೂ ವರ್ಲ್ಡ್‌ ವೈಡ್ ಹಿಟ್ ಆಗಿದೆ. ಈಗ ಇದೇ ಡೈಲಾಗ್ SSLC ಉತ್ತರ ಪತ್ರಿಕೆಯಲ್ಲೂ ಸದ್ದು ಮಾಡುತ್ತಿದೆ. ವಿದ್ಯಾರ್ಥಿಯೊಬ್ಬ ಪುಷ್ಪ ಡೈಲಾಗ್ ಬರೆದು ಶಿಕ್ಷಕರಿಗೆ ಶಾಕ್ ಕೊಟ್ಟಿದ್ದಾನೆ. ಉತ್ತರ ಪ್ರತ್ರಿಕೆಯ ಈ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ವೈರಲ್ ಆಗುತ್ತಿದೆ.

ಈ ಘಟನೆ ನಡೆದಿದ್ದು ಎಲ್ಲಿ?

ಈ ಘಟನೆ ನಡೆದಿದ್ದು ಎಲ್ಲಿ?

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿದೆ. ಆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಉತ್ತರ ಬರೆಯುವ ಬದಲು 'ಪುಷ್ಪ' ಸಿನಿಮಾ ಫೇಮಸ್ ಡೈಲಾಗ್ ಬರೆದಿದ್ದಾನೆ. ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವ ವೇಳೆ ಶಿಕ್ಷಕರಿಗೆ ಈ ಉತ್ತರ ಪತ್ರಿಕೆಯನ್ನು ನೋಡಿ ಶಾಕ್ ಆಗಿದೆ. ತಕ್ಷಣವೇ ಶಿಕ್ಷಕ ಅದ ಫೋಟೊ ತೆಗೆದುಕೊಂಡಿದ್ದ. ಅದೇ ಫೋಟೊ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

'ಪುಷ್ಪ' ಡೈಲಾಗ್ ಬರೆದ ವಿದ್ಯಾರ್ಥಿ!

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯಲ್ಲಿ 'ಪುಷ್ಪ.. ಪುಷ್ಪರಾಜ್.. ಅಪ್ಪುನ್ ಲಿಖೇಗಾ ನಹಿ ಸಾಲಾ.." ಎಂದು ಬರೆದಿದ್ದನು. ಅಂದರೆ, "ಪುಷ್ಪ.. ಪುಷ್ಪರಾಜ್.. ನಾನು ಪರೀಕ್ಷೆ ಬರೆಯೋದಿಲ್ಲ.." ಎಂದು ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ. ಇದೇ ಫೋಟೊ ಈಗ ಎಲ್ಲಾ ಕಡೆ ವೈರಲ್ ಆಗಿದೆ.

'ಪುಷ್ಪ' ಬ್ಲಾಕ್‌ಬಸ್ಟರ್ ಸಿನಿಮಾ

'ಪುಷ್ಪ' ಬ್ಲಾಕ್‌ಬಸ್ಟರ್ ಸಿನಿಮಾ

'ಪುಷ್ಪ' ಅಲ್ಲು ಅರ್ಜುನ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಮೋಡಿ ಮಾಡಿತ್ತು. ಇನ್ನು ಸುಕುಮಾರ್ ನಿರ್ದೇಶನ ಚಿತ್ರದ ಹೈಲೈಟ್. ಕನ್ನಡದ ನಟ ಧನಂಜಯ್, ಮಲಯಾಳಂ ನಟ ಫಹಾದ್ ಫಾಸಿಲ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಈ ಕಾರಣಕ್ಕೆ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿತ್ತು. ಈಗ 'ಪುಷ್ಪ 2'ಗೆ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ತಯಾರಿ ನಡೆಸುತ್ತಿದ್ದಾರೆ.

More from Filmibeat

English summary
SSLC Student Wrote Pushpa Movie Dialogues in Answer Paper. West Bengal Student Answer Sheet Goes Viral. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X