ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ ಮಹೇಶ್ ಬಾಬು ಸಹೋದರಿ

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಬಗ್ಗೆ ಇಡೀ ತೆಲುಗು ಚಿತ್ರರಂಗ ಮಾತಾಡಿಕೊಳ್ಳುತ್ತಿದೆ. ಇನ್ನೊಂದು ಕಡೆ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಯಾಕಂದ್ರೆ, ಪ್ರಿನ್ಸ್ ಮಹೇಶ್ ಬಾಬು ಶಸ್ತ್ರ ಚಿಕಿತ್ಸೆ ಒಳಗಾಗಲಿದ್ದಾರೆ ಅನ್ನುವ ಸುದ್ದಿ ಎದ್ದಿದೆ. ಇದರಿಂದ ಮಹೇಶ್ ಬಾಬು ಅಭಿಮಾನಿಗಳು ಗೆಟ್ ವೆಲ್ ಸೂನ್ ಮಹೇಶ್ ಅಣ್ಣ ಅನ್ನುವ ಅಭಿಯಾನವನ್ನು ಆರಂಭಿಸಿದ್ದರು.

ಟಾಲಿವುಡ್ ಮೂಲಗಳ ಪ್ರಕಾರ, ಮಹೇಶ್ ಬಾಬು ಬಹಳ ದಿನಗಳಿಂದ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲವು ಬಾರಿ ಶಸ್ತ್ರ ಚಿಕಿತ್ಸೆ ರೆಡಿಯಾಗಿದ್ದರೂ ಕಾರಣಾಂತರಗಳಿಂದು ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ ಮುಂದಿನ ತಿಂಗಳು ಮೊಣಕಾಲು ಶಸ್ತ್ರ ಚಿಕಿತ್ಸೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಮಹೇಶ್ ಬಾಬು ಸಹೋದರಿ ಪ್ರಿಯದರ್ಶಿನಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ವಂಚನೆ ಪ್ರಕರಣ ದಾಖಲಿಸಿದ್ದಾರೆ.

ವಂಚನೆ ಪ್ರಕರಣ ದಾಖಲಿಸಿದ ಪ್ರಿನ್ಸ್ ಸಹೋದರಿ

ವಂಚನೆ ಪ್ರಕರಣ ದಾಖಲಿಸಿದ ಪ್ರಿನ್ಸ್ ಸಹೋದರಿ

ಸೂಪರ್‌ಸ್ಟಾರ್ ಮಹೇಶ್ ಬಾಬು ಸಹೋದರಿ ಲೈಮ್‌ಲೈಟ್‌ನಿಂದ ಸದಾ ದೂರ ಉಳಿದಿದ್ದಾರೆ. ಸ್ವಂತ ಸಹೋದರ ಟಾಲಿವುಡ್ ಸೂಪರ್‌ಸ್ಟಾರ್ ಆಗಿದ್ದರೂ, ತಂದೆ ತೆಲುಗು ಚಿತ್ರರಂಗ ಲೆಜೆಂಡ್ ಆಗಿದ್ದರೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ತಮ್ಮ ಖಾಸಗಿ ಜೀವನವನ್ನು ಗೌರವಿಸುವ ಪ್ರಿಯದರ್ಶಿನಿ ಕ್ಯಾಮರಾ ಮುಂದೆ ಬಂದಿದ್ದು ತೀರಾ ವಿರಳ. ಆದ್ರೀಗ ಶಿಲ್ಪ ಚೌಧರಿ ಎಂಬುವವರು ತನಗೆ ವಂಚಿಸಿದ್ದಾರೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪ್ರಿಯದರ್ಶಿನಿಗೆ 2.9 ಕೋಟಿ ಹಣ ವಂಚನೆ?

ಪ್ರಿಯದರ್ಶಿನಿಗೆ 2.9 ಕೋಟಿ ಹಣ ವಂಚನೆ?

ಮಹೇಶ್ ಬಾಬು ಸಹೋದರಿಗೆ ಶಿಲ್ಪ ಚೌಧರಿ ಹಾಗೂ ಆಕೆಯ ಪತಿ ಸುಮಾರು 2.9 ಕೋಟಿ ಹಣ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ವಂಚಕಿ ಶಿಲ್ಪ ಹಾಗೂ ಆಕೆಯ ಪತಿ ಅರೆಸ್ಟ್ ಆಗುತ್ತಿದ್ದಂತೆ ಪ್ರಿನ್ಸ್ ಸಹೋದರಿ ಪೊಲೀಸರ ಮುಂದೆ ತನಗಾದ ಮೋಸವನ್ನು ವಿವರಿಸಿದ್ದಾರೆ. ಜೊತೆ 2.9 ಕೋಟಿ ವಂಚಿಸಿದ್ದಾರೆಂದು ದೂರಿನಲ್ಲಿ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆಯನ್ನು ಆರಂಭಿಸಲಿದ್ದಾರೆ.

ಯಾರೀ ವಂಚಕಿ ಶಿಲ್ಪ ಚೌಧರಿ

ಯಾರೀ ವಂಚಕಿ ಶಿಲ್ಪ ಚೌಧರಿ

ಶಿಲ್ಪ ಚೌಧರಿ ಹಾಗೂ ಆಕೆಯ ಪತಿ ತಮ್ಮಲ್ಲಿ ಹಣ ಹೂಡಿಕೆ ಮಾಡುವಂತೆ ಜನರನ್ನು ನಂಬಿಸುತ್ತಿದ್ದರು. ನಿಮ್ಮ ಹಣಕ್ಕೆ ಹೆಚ್ಚು ಬಡ್ಡಿ ಕೊಡುತ್ತೇವೆ ಎಂದು ಹೇಳುತ್ತಿದ್ದರು. ಇದಕ್ಕಾಗಿ ಪಾರ್ಟಿಯನ್ನು ಆಯೋಜನೆ ಮಾಡಿ ದೊಡ್ಡ ಕುಳಗಳನ್ನು ಪಾರ್ಟಿಗೆ ಆಹ್ವಾನ ಮಾಡುತ್ತಿದ್ದರು. ಒಮ್ಮೆ ಅವರ ನಂಬಿಕೆ ಗಳಿಸಿ, ಹಣ ಕೂಡಿಕೆ ಮಾಡಿದ ಮೇಲೆ ಅವರಿಗೆ ಕೈ ಎತ್ತುತ್ತಿದ್ದರು. ಇದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ವೇಳೆ ಮಹೇಶ್ ಬಾಬು ಸಹೋದರಿಗೂ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಹೀಗಾಗಿ ಒಂದು ಕಡೆ ಸಹೋದರಿ ಮೋಸ ಹೋಗಿದ್ದಾರೆ. ಇನ್ನೊಂದು ಕಡೆ ಮಹೇಶ್ ಬಾಬುಗೆ ಮೊಣಕಾಲು ಸಮಸ್ಯೆ ಎದುರಾಗಿದೆ.

ಶಸ್ತ್ರ ಚಿಕಿತ್ಸೆ ಬಳಿಕ 2 ತಿಂಗಳು ಪ್ರಿನ್ಸ್ ವಿಶ್ರಾಂತಿ

ಶಸ್ತ್ರ ಚಿಕಿತ್ಸೆ ಬಳಿಕ 2 ತಿಂಗಳು ಪ್ರಿನ್ಸ್ ವಿಶ್ರಾಂತಿ

ಮಹೇಶ್ ಬಾಬು ಜನವರಿ ತಿಂಗಳಲ್ಲಿ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈಗಾಗಲೇ ಅವರು ನಟಿಸುತ್ತಿರುವ 'ಸರ್ಕಾರು ವಾರಿ ಪಾಟ' ಚಿತ್ರದ ಪ್ರಮುಖ ದೃಶ್ಯಗಳ ಶೂಟಿಂಗ್ ಮುಗಿದಿದೆ. ಹೀಗಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದು, ಎರಡು ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.

More from Filmibeat

English summary
Mahesh babu sister Priyadarshini filed a police complaint against Shilpa Chowdhary. Priyadarshini alleged that Shilpa took an amount of Rs. 2.9 crores and cheated her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X