ಸಾಮಾನ್ಯರಂತೆ ಸರದಿ ಸಾಲಿನಲ್ಲಿ ನಿಂತ ಸೂಪರ್‌ಸ್ಟಾರ್ ಮಹೇಶ್ ಬಾಬು!

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಯಶಸ್ಸಿನಲ್ಲಿ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ' ಭರ್ಜರಿ ಕಲೆಕ್ಷನ್ ಮಾಡಿದೆ. ಈಗಾಗಲೇ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಬಾಕ್ಸಾಫೀಸ್‌ನಲ್ಲಿ ಕಲೆ ಹಾಕಿದೆ.

ಮಹೇಶ್ ಬಾಬು ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಅದಕ್ಕೆ ಬೇಕಾಗಿರೋ ಪ್ರಚಾರ ಮಾಡದೆ ಬಿಡುವುದಿಲ್ಲ. 'ಸರ್ಕಾರು ವಾರಿ ಪಾಟ' ಸಿನಿಮಾ ಬಿಡುಗಡೆಗೂ ಮುನ್ನ ಕೂಡ ಭರ್ಜರಿ ಪ್ಲ್ಯಾನ್ ಮಾಡಿದ್ದರು. ಈಗ ಅವರೇ ನಿರ್ಮಿಸಿರುವ ಮೇಜರ್ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಇದರಲ್ಲಿ ಅದಿವಿ ಶೇಷ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಾಮಾನ್ಯರಂತೆ ಕ್ಯೂನಲ್ಲಿ ನಿಂತ ಪ್ರಿನ್ಸ್

ಸಾಮಾನ್ಯರಂತೆ ಕ್ಯೂನಲ್ಲಿ ನಿಂತ ಪ್ರಿನ್ಸ್

ಸೋಶಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ಕ್ಯೂನಲ್ಲಿ ನಿಂತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಮಹೇಶ್ ಬಾಬು ಸಿನಿಮಾ ನೋಡುವುದಕ್ಕೆ ಕ್ಯೂನಲ್ಲಿ ನಿಲ್ಲುವ ದೃಶ್ಯವಿದೆ. ಇವರೊಂದಿಗೆ 'ಮೇಜರ್' ಸಿನಿಮಾದ ನಾಯಕ ನಟ ಅದಿವಿ ಶೇಷ್ ಹಾಗೂ ಯೂಟ್ಯೂಬರ್ ನಿಹಾರಿಕಾ ಕೂಡ ಇದ್ದಾರೆ. ಈ ಸಿನಿಮಾ ನೋಡಿದ ಮಹೇಶ್ ಬಾಬು ಫ್ಯಾನ್ಸ್ ದಿಲ್ ಫುಲ್ ಖುಷ್ ಆಗಿದ್ದಾರೆ. ಅಸಲಿಗೆ ಇದೊಂದು ಪ್ರಮೋಷನಲ್ ವಿಡಿಯೋ ಆಗಿದ್ದು, ನೆಟ್ಟಿಗರಿಗೆ ತುಂಬಾನೇ ಇಷ್ಟ ಆಗುತ್ತಿದೆ.

ಸಾಲಿನ ಮಧ್ಯೆ ನುಗ್ಗಿದ್ದೇಕೆ ಪ್ರಿನ್ಸ್ ?

ಸಾಲಿನ ಮಧ್ಯೆ ನುಗ್ಗಿದ್ದೇಕೆ ಪ್ರಿನ್ಸ್ ?

ಇದು 'ಮೇಜರ್' ಸಿನಿಮಾದ ಪ್ರಮೋಷನ್‌ಗಾಗಿ ಮಾಡಿದ ವಿಡಿಯೋ. ಇದರಲ್ಲಿ ಮಹೇಶ್ ಬಾಬು ಸರದಿ ಸಾಲಿನಲ್ಲಿ ನಿಂತಿದ್ದ ಯೂಟ್ಯೂಬರ್ ಮಧ್ಯೆ ನುಗ್ಗಿ ನಿಲ್ಲುತ್ತಾರೆ. ಆಗ ಯೂಟ್ಯೂಬರ್ ನಿಹಾರಿಕಾ ಮಹೇಶ್ ಬಾಬು ವಿರುದ್ಧ ತಿರುಗಿಬೀಳುತ್ತಾರೆ. ಬಳಿಕ ಅದು ಸೂಪರ್‌ಸ್ಟಾರ್ ಮಹೇಶ್ ಬಾಬು ಅಂತ ಗೊತ್ತಾಗುತ್ತಿದ್ದಂತೆ ಕೋಪವೆಲ್ಲ ಕರಗಿ ನೀರಾಗುತ್ತೆ. ಇದೇ ವಿಡಿಯೋ ಈಗ ವೈರಲ್ ಆಗಿದೆ.

ಪ್ರಿನ್ಸ್ ಯುಡೋಪ್ ಪ್ರವಾಸ

'ಸರ್ಕಾರು ವಾರಿ ಪಾಟಿ' ಸಿನಿಮಾ ಪ್ರಚಾರದ ವೇಳೆನೇ ಮಹೇಶ್ ಬಾಬು ತಾವೇ ನಿರ್ಮಿಸಿರುವ ಮೇಜ್ ಸಿನಿಮಾವನ್ನು ಪ್ರಮೋಟ್ ಮಾಡುತ್ತಿದ್ದರು. ಆಗ ಮಾಡಿದ ವಿಡಿಯೋ ಇದೆನೇ. ಈಗ ತನ್ನ ಕೆಲಸವನ್ನೆಲ್ಲಾ ಮುಗಿಸಿ ಮಹೇಶ್ ಬಾಬು ಯುರೋಪ್‌ಗೆ ತೆರಳಿದ್ದಾರೆ. ತಮ್ಮ ಸಿನಿಮಾ ಯಶಸ್ಸಿನ ಖುಷಿಯಲ್ಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಈ ಮಧ್ಯೆ ಸಿನಿಮಾ ಪ್ರಚಾರ ಕೂಡ ನಡೆಯುತ್ತಿದೆ.

ಯೂಟ್ಯೂಬರ್ ನಿಹಾರಿಕಾ ಯಾರು?

ಯೂಟ್ಯೂಬರ್ ನಿಹಾರಿಕಾ ಯಾರು?

ಮಹೇಶ್ ಬಾಬು ವಿಡಿಯೋವನ್ನು ಸೋಶಿಯಲ್ ಮೀಡಿಯಾಗೆ ಶೇರ್ ಮಾಡಿದ್ದು ಇವರೆನೇ. ನಿಹಾರಿಕಾ ಇಂಡಿಯನ್ -ಅಮೆರಿಕನ್ ಯೂಟ್ಯೂಬರ್. ಇವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದಿದ್ದು ಈ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಆ ವೇಳೆ ತೆಗೆದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಆ ವಿಡಿಯೋಗೆ 8.28 ಲಕ್ಷ ಮಂದಿ ಈ ವಿಡಿಯೋವನ್ನು ನೋಡಿದ್ದಾರೆ.

More from Filmibeat

English summary
Superstar Mahesh Babu Stands In Queue With YouTuber Niharika Has Gone Viral, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X