ಲಿಕ್ಕರ್ ಹಗರಣಕ್ಕೂ ಮಿಲ್ಕಿ ಬ್ಯೂಟಿಗೂ ಏನು ಸಂಬಂಧ? ₹3500 ಕೋಟಿ ಮದ್ಯ ಹಗರಣದ ಆರೋಪಿ ಜೊತೆ ತಮನ್ನಾ

ಕೆಲವೊಮ್ಮೆ ಅನಾವಶ್ಯಕವಾಗಿ ಸಿನಿಮಾ ಮಂದಿ ಕೆಲವು ಗಂಭೀರ ಪ್ರಕರಣಗಳಲ್ಲಿ ಸಿಕ್ಕಿಕೊಳ್ಳುತ್ತಾರೆ. ಇವು ಕೆಲವೊಮ್ಮೆ ಅವರನ್ನು ವಿವಾದದಲ್ಲಿ ಸಿಕ್ಕಿದ ಉದಾಹರಣೆಗಳು ಚಿತ್ರರಂಗದಲ್ಲಿ ಸಾಕಷ್ಟು ಸಿಗುತ್ತವೆ. ಡ್ರಗ್ಸ್ ಪ್ರಕರಣ, ಭೂಗತಲೋಕದ ಖದೀಮರ ಜೊತೆ ಸಂಬಂಧ, ಆರೋಪಿಗಳೊಂದಿಗೆ ಪಾರ್ಟಿ, ಇಂತಹ ಸಾಕಷ್ಟು ಪ್ರಕರಣಗಳು ದೊಡ್ಡ ಮಟ್ಟಕ್ಕೆ ಸಂಚಲನವನ್ನೇ ಸೃಷ್ಟಿಸಿದೆ. ಈಗ ಹೊಸ ಸಂಗತಿಯೊಂದು ಟಾಲಿವುಡ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

ಆಂಧ್ರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಮದ್ಯ ಹಗರಣ ಸಂಚಲವನ್ನು ಸೃಷ್ಟಿಸಿದೆ. ಜಗನ್ ಸರ್ಕಾರದಲ್ಲಿ ನಡೆದಿದ್ದ ಈ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ವೆಂಕಟೇಶ್ ನಾಯ್ಡು ಜೊತೆ ಎಂಎಲ್‌ಸಿ ಕವಿತಾ ಹಾಗೂ ತಮನ್ನಾ ಇರುವ ಫೋಟೋಗಳು ಲೀಕ್ ಆಗಿವೆ. ಈ ವ್ಯಕ್ತಿಯೊಂದಿಗೆ ಖಾಸಗಿ ವಿಮಾನದಲ್ಲಿ ಮಿಲ್ಕಿ ಬ್ಯೂಟಿ ಪ್ರಯಾಣ ಮಾಡುತ್ತಿರುವಾಗ ತೆಗೆದ ಫೋಟೋಗಳು ಲೀಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

Tamannaah Bhatia travelled in private jet with Rs 3500 crore liquor scam suspect Venkatesh Naidu photos creating sensation

ಆಂಧ್ರ ಪ್ರದೇಶದ ಈ ಮದ್ಯದ ಹಗರಣ ಚಿಕ್ಕ ಪುಟ್ಟದ್ದೇನೂ ಅಲ್ಲ. ಸುಮಾರು 3500 ಕೋಟಿ ರೂಪಾಯಿ ಹಗರಣವಿದು. ಈ ಹಗರಣವನ್ನು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ತುಂಬಾನೇ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿಸುತ್ತಿದ್ದಾರೆ. ಇದರಲ್ಲಿ ಹಲವು ಗಣ್ಯರ ಹೆಸರುಗಳು ಕೇಳಿ ಬಂದಿವೆ. ವೆಂಕಟೇಶ್ ನಾಯ್ದು ಜೊತೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದರಿಂದ ಈ ಹಗರಣದಲ್ಲಿ ಅವರ ಹೆಸರು ಕೂಡ ತಳಕು ಹಾಕಿಕೊಂಡಿದೆ. ಅಲ್ಲದೆ ಫೋಟೊಗಳು ಕೂಡ ಟ್ರೆಂಡಿಂಗ್ ಆಗಿವೆ.

ಆಂಧ್ರ ಪ್ರದೇಶದ ₹3500 ಕೋಟಿ ಮೌಲ್ಯದ ಬೃಹತ್ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ. ಧನಂಜಯ ರೆಡ್ಡಿ, ರಾಜ್‌ ಕಸಿರೆಡ್ಡಿ, ಕೃಷ್ಣಮೋಹನ್ ರೆಡ್ಡಿ, ಪೈಲಾ ದಿಲೀಪ್, ವೆಂಕಟೇಶ್ ನಾಯ್ಡು, ಬೂನೇಟಿ ಚಾಣಕ್ಯ, ಬಾಲಾಜಿ ಗೋವಿಂದಪ್ಪ, ಚೆವಿರೆಡ್ಡಿ ಭಾಸ್ಕರ್ ರೆಡ್ಡಿ, ಸಜ್ಜಳ ಶ್ರೀಧರ್ ರೆಡ್ಡಿ, ಮಿಥುನ್ ರೆಡ್ಡಿಯವರನ್ನು ಆರೋಪಿಗಳಾಗಿದ್ದಾರೆ. ಆ ಆರೋಪಿಗಳಲ್ಲಿ ಒಬ್ಬರಾಗಿರುವ ವೆಂಕಟೇಶ್ ನಾಯ್ಡು ಅವರೊಂದಿಗೆ ತಮನ್ನಾ ಖಾಸಗಿ ಜೆಟ್‌ ಹಾಗೂ ಏರ್ಪೋರ್ಟ್‌ನ ಒಳಗೆ ಫೋಟೊ ತೆಗೆಸಿಕೊಂಡಿದ್ದಾರೆ.

Tamannaah Bhatia travelled in private jet with Rs 3500 crore liquor scam suspect Venkatesh Naidu photos creating sensation

ಬೃಹತ್ ಮದ್ಯ ಹಗರಣದ ಪ್ರಮುಖ ಆರೋಪಿ ವೆಂಕಟೇಶ್ ನಾಯ್ದು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅದಕ್ಕೂ ಮುನ್ನ ತಮನ್ನಾ ಭಾಟಿಯಾಗಿ ಈ ಆರೋಪಿಯೊಂದಿಗೆ ಪ್ರಯಾಣ ಮಾಡಿದ್ದರು. ಅದಕ್ಕೆ ಫೋಟೊಗಳೇ ಸಾಕ್ಷಿಯಾಗಿವೆ. ಒಮ್ಮೆ ಫೋಟೊಗಳು ವೈರಲ್ ಆಗುತ್ತಿದ್ದಂತೆ, ವೆಂಕಟೇಶ್ ರೆಡ್ಡಿಗೂ ತಮ್ಮನ್ನಾಗೂ ಏನು ಸಂಬಂಧವೇನು? ಇಬ್ಬರೂ ಖಾಸಗಿ ವಿಮಾನದಲ್ಲಿ ಹೋಗಿದ್ದು ಎಲ್ಲಿಗೆ? ಯಾರನ್ನು ಭೇಟಿಯಾದರು? ಎಂಬುವ ಬಗ್ಗೆ ಸಾಕಷ್ಟು ಪ್ರಶ್ನೆಗಳು ಈಗಾಗಲೇ ತೆಲುಗು ಮಂದಿ ಎತ್ತುತ್ತಿದ್ದಾರೆ.

ತಮನ್ನಾ ಭಾಟಿಯಾ ಈ ಫೋಟೊಗಳು ಲೀಕ್ ಅದ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊಗಳು ಕಳೆದೆರಡು ದಿನಗಳಿಂದ ಸಿಕ್ಕಾಪಟ್ಟೆ ಜೋರಾಗಿಯೇ ಸದ್ದು ಮಾಡುತ್ತಿವೆ. ಒಂದು ವೇಳೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಇವರಿಬ್ಬರ ಪ್ರಯಾಣ ಅನುಮಾನಕ್ಕೆ ಎಡೆ ಮಾಡಿಕೊಟ್ಟರೆ ತಮನ್ನಾ ಭಾಟಿಯಾರನ್ನು ಪ್ರಶ್ನೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಫೋಟೊಗಳಲ್ಲಿ ತಮನ್ನಾ ಹಿಂದೆ ಆಂಧ್ರ ಸರ್ಕಾರದ ವಿವಿಐಪಿ ಕಾರು ಕೂಡ ನಿಂತಿದೆ. ಈ ಬಗ್ಗೆನೂ ಚರ್ಚೆ ಮಾಡಲಾಗುತ್ತಿದೆ. ವಿಮಾನ ನಿಲ್ದಾಣದ ಭದ್ರತಾ ವಲಯದಲ್ಲಿ ವಿವಿಐಪಿ ಕಾರು ಹೇಗೆ ಬಂತು? ತಮನ್ನಾ ಹಾಗೂ ವೆಂಕಟೇಶ್ ಯಾರನ್ನು ಭೇಟಿ ಮಾಡುವುದಕ್ಕೆ ಹೋಗಿದ್ದಾರೆ? ಎನ್ನುವ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ದಕ್ಷಿಣ ಭಾರತದ ಚಿತ್ರರಂಗ ಸಾಕು ಅಂತ ಉತ್ತರ ಭಾರತ ಕಡೆಗೆ ಮುಖ ಮಾಡಿರುವ ತಮನ್ನಾಗಿ ಮತ್ತೆ ವಿವಾದ ಮೂಲಕ ಎಳೆದುಕೊಂಡು ಬರುವ ಸಾಧ್ಯತೆಯಿದೆ.

More from Filmibeat

English summary
Tamannaah Bhatia travelled in private jet with Rs.3500 crore liquor scam suspect Venkatesh Naidu photos creating sensation;
Read more about: tamannaah bhatia actress scam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X