Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Waltair Veerayya Leaked Online : ಮೊದಲ ದಿನವೇ 'ವಾಲ್ತೇರು ವೀರಯ್ಯ' ಲೀಕ್: ಚಿರುಗೆ ಮತ್ತೊಂದು ಮೆಗಾ ಪೆಟ್ಟು!
ಭಾರತೀಯ ಚಿತ್ರರಂಗಕ್ಕೆ ಪೈರಸಿ ಅನ್ನೋದು ದೊಡ್ಡ ಪಿಡುಗಗಾಗಿ ಪರಿಣಮಿಸಿದೆ. ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಲೀಕ್ ಆಗುತ್ತಿವೆ. ಈ ಹಿಂದೆ ಹಲವು ಪೈರಸಿಯನ್ನು ತಡೆಯುವುದಕ್ಕೆ ಹಲವು ಕ್ರಮಗಳನ್ನು ತರಲಾಗಿತ್ತು. ಆದರೂ, ಪೈರಸಿಯನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ.
ಕನ್ನಡ,ತೆಲುಗು,ತಮಿಳು,ಹಿಂದಿ ಎಲ್ಲಾ ಭಾಷೆಯ ಸಿನಿಮಾಗಳನ್ನೂ ಬಿಡುಗಡೆಯಾದ ಕ್ಷಣಾರ್ಧದಲ್ಲಿಯೇ ಆನ್‌ಲೈನ್‌ನಲ್ಲಿ ಲೀಕ್ ಮಾಡುವ ಜಾಲವಿದೆ. ತಮಿಳುರಾಕರ್ಸ್, ಟೊರೆಂಟ್ ಸೈಟ್‌ಗಳು ಹೊಸ ಸಿನಿಮಾಗಳನ್ನು ಲೀಕ್ ಮಾಡುತ್ತಿವೆ. ಈ ಜಾಲವನ್ನು ಭೇದಿಸುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ.
Waltair
Veerayya
Review:
ಚಿರಂಜೀವಿ..
ರವಿತೇಜ
ಬಿಟ್ಟರೆ
ಸಿನಿಮಾದಲ್ಲಿ
ಮೆಚ್ಚುವಂತಹದ್ದೇನಿಲ್ಲ!
ಈಗ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುಕೋಟಿ ವೆಚ್ಚದ ಸಿನಿಮಾ ವಾಲ್ತೇರಿ ವೀರಯ್ಯ ಸಿನಿಮಾ ಕೂಡ ಲೀಕ್ ಆಗಿದೆ.ಸಿನಿಮಾ ಬಿಡುಗಡೆಯಾಗಿ ಇನ್ನೂ ಒಂದು ದಿನವೂ ಆಗಿಲ್ಲ. ಆಗಲೇ ಆನ್‌ಲೈನ್‌ನಲ್ಲಿ ಲೀಕ್ ಮಾಡಲಾಗಿದೆ.

ಚಿರಂಜೀವಿ ಸಿನಿಮಾ ಲೀಕ್
ಚಿರಂಜೀವಿ,ರವಿತೇಜ ಹಾಗೂ ಶೃತಿ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ವಾಲ್ತೇರು ವೀರಯ್ಯ' ಸಿನಿಮಾ ಇಂದು(ಜನವರಿ 13) ಬಿಡುಗಡೆಯಾಗಿದೆ. ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿರೋ ಈ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಹೀಗಿದ್ದರೂ ಒಂದು ಔಟ್ ಅಂಡ್ ಔಟ್ ಎಂಟರ್‌ಟೈನಿಂಗ್ ಸಿನಿಮಾ ಎಂಬ ಮೆಚ್ಚುಗೆ ಕೂಡ ಸಿಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ ಒಂದು ಶೋ ಮುಗಿಯುವುದರೊಳಗೆ ಕಿಡಿಗೇಡಿಗಳು ಆನ್‌ಲೈನ್‌ನಲ್ಲಿ ಲೀಕ್ ಮಾಡಿದ್ದಾರೆ.

'ವಾಲ್ತೇರು ವೀರಯ್ಯ' ಲೀಕ್ ಮಾಡಿದ್ಯಾರು?
ಚಿತ್ರರಂಗಕ್ಕೆ ದೊಡ್ಡ ತಲೆ ನೋವಾಗಿರೋದು ತಮಿಳುರಾಕರ್ಸ್. ಮೆಗಾಸ್ಟಾರ್ ಸಿನಿಮಾ'ವಾಲ್ತೇರು ವೀರಯ್ಯ'ವನ್ನು ಲೀಕ್ ಮಾಡಿದ ಪ್ರಮುಖರಲ್ಲಿ ಇವರ ಹೆಸರಿದೆ. ಇದರೊಂದಿಗೆ ಟೆಲಿಗ್ರಾಂನಲ್ಲಿ, ಟೊರೆಂಟ್ ಜಾಲತಾಣಗಳಲ್ಲಿ ಈ ಸಿನಿಮಾ ಹರಿದಾಡುತ್ತಿದೆ ಎಂದು ವರದಿಯಾಗಿದೆ. ಹಾಗಂತ ಸಿನಿಮಾಗಳು ಆನ್‌ಲೈನ್‌ನಲ್ಲಿ ಲೀಕ್ ಆಗುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಸಿನಿಮಾ ಮೊದಲ ದಿನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

ಆನ್‌ಲೈನ್‌ನಲ್ಲಿ ಲೀಕ್ ಆದ ಸಿನಿಮಾಗಳ ದೊಡ್ಡ ಪಟ್ಟಿಯಿದೆ!
ಆನ್‌ಲೈನ್‌ನಲ್ಲಿ ಸಿನಿಮಾ ಲೀಕ್ ಆಗುವುದನ್ನು ಸಿನಿಮಾ ಮಂದಿನೂ ರೂಢಿಸಿಕೊಂಡಂತಿದೆ. ಯಾಕಂದ್ರೆ, ಅದೆಷ್ಟೇ ಪ್ರಯತ್ನ ಪಟ್ಟರೂ ಲೀಕ್ ಆಗುವುದನ್ನು ಮಾತ್ರ ತಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.'ವೀರ ಸಿಂಹ ರೆಡ್ಡಿ','ವಾರಿಸು', 'ಥುನಿವು','ಅವತಾರ್ 2', 'ಸರ್ಕಸ್','ದೃಶ್ಯಂ 2','ಥ್ಯಾಂಕ್ ಗಾಡ್','ಕಾಂತಾರ','ಕೆಜಿಎಫ್ 2', 'ಬ್ರಹ್ಮಾಸ್ತ್ರ', 'ಲೈಗರ್','ರಕ್ಷಾ ಬಂಧನ್' ಸೇರಿದಂತೆ ಹಲವು ಸಿನಿಮಾಗಳು ಮೊದಲ ದಿನವೇ ಸೋರಿಕೆಯಾಗಿತ್ತು. ಆದರೂ, ಜನರು ಕೆಲವು ಸಿನಿಮಾಗಳನ್ನು ಥಿಯೇಟರ್‌ನಲ್ಲೇ ನೋಡಿ ಗೆಲ್ಲಿಸಿದ್ದಾರೆ.

ಕಿಡಿಗೇಡಿಗಳು ಕೈಗೆ ಸಿಗುತ್ತಿಲ್ಲ
ಆನ್‌ಲೈನ್‌ನಲ್ಲಿ ಲೀಕ್ ಆಗುತ್ತಿದ್ದಂತೆ ಹಲವು ಅಗತ್ಯಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಒಂದು ಡೊಮೈನ್ ಅನ್ನು ಬ್ಲಾಕ್ ಮಾಡುತ್ತಿದ್ದಂತೆ ಇನ್ನೊಂದು ಡೊಮೈನ್ ಮೂಲಕ ಪ್ರತ್ಯಕ್ಷ ಆಗುತ್ತಿದ್ದಾರೆ. ಹೀಗಾಗಿ ಇವರನ್ನು ಹಿಡಿಯುವುದಕ್ಕೆ ಕಷ್ಟ ಆಗುತ್ತಿದೆ.ಆದರೂ, ಈ ಕಿಡಿಗೇಡಿಗಳಿಂದ ಶಾಶ್ವತ ಮುಕ್ತಿ ಪಡೆಯಲು ಸಿನಿಮಾ ಮಂದಿ ಪ್ರಯತ್ನ ಮಾಡುತ್ತಲೇ ಇದ್ದಾರೆ.
(Disclaimer: Filmibeat Kannada ಪೈರಸಿಯನ್ನು ಬೆಂಬಲಿಸುವುದಿಲ್ಲ. 1957ರ ಕಾಯ್ದೆ ಅಡಿ ಪೈರಸಿ ಮಾಡುವುದು ಅಪರಾಧ.)