TATA IPL 2023: ಬಾಲಕೃಷ್ಣ ನಟನೆ ಅಷ್ಟೇ ಅಲ್ಲ ಕ್ರಿಕೆಟ್‌ ಕಾಮೆಂಟರಿನೂ ಮಾಡ್ತಾರೆ.. ಇನ್ಮುಂದೆ ಇಲ್ಲೂ'ಅನ್‌ಸ್ಟಾಪಬಲ್'

ಟಾಲಿವುಡ್‌ನ ಲೆಜೆಂಡ್ ಬಾಲಕೃಷ್ಣ ಸ್ಟೈಲ್‌ಗೆ, ಸ್ಪೀಡ್‌ಗೆ, ಡೈಲಾಗ್‌ಗೆ ಮರುಳಾಗದವರು ಯಾರಿಲ್ಲ ಹೇಳಿ? ಈಗಂತೂ ಮಾಸ್ ಸಿನಿಮಾಗಳ ಸರದಾರ ಮಲ್ಟಿಟ್ಯಾಲೆಂಟ್ ತೋರಿಸುತ್ತಿದ್ದಾರೆ. ಇಷ್ಟು ದಿನ ಬಾಲಕೃಷ್ಣ ನಟನೆ ನೋಡಿದ ಅಭಿಮಾನಿಗಳು, ಇನ್ಮುಂದೆ ಕಾಮೆಂಟರಿ ಮಾಡೋದನ್ನು ನೋಡ್ತಾರೆ.

ಹೌದು, ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಇದೇ ಮಾರ್ಚ್ 31ರಿಂದ ಆರಂಭಗೊಳ್ಳಲಿದೆ. 16ನೇ ಸೀಸನ್‌ಗೆ ವೇದಿಕೆನೂ ಸಿದ್ಧವಾಗಿದೆ. ಇನ್ನು ನಾಲ್ಕು ದಿನಗಳಲ್ಲಿ ಹೈವೋಲ್ಟೇಜ್ ಪಂದ್ಯಗಳು ಆರಂಭ ಆಗಲಿವೆ. ಪಂದ್ಯದ ಉದ್ಘಾಟನೆಗೆ ಸಿನಿಮಾ ತಾರೆಯರಿಂದ ಹಿಡಿದು, ಕ್ರಿಕೆಟ್ ಲೋಕದ ದಿಗ್ಗಜರು ಕೂಡ ಆಗಮಿಸುತ್ತಿದ್ದಾರೆ.

TATA IPL 2023 : Actor Nandamuri Balakrishna to be part of Telugu commentary team

ಐಪಿಎಲ್ 2023ಯ ಮೊದಲ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯೋ ಪಂದ್ಯದಲ್ಲಿ ನಂದಮೂರಿ ಬಾಲಕೃಷ್ಣ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಷಯವನ್ನು ಸ್ವತ: ಬಾಲಕೃಷ್ಣ ಅವರೇ ಅಭಿಮಾನಿಗಳಿಗೆ ಹೇಳಿದ್ದಾರೆ.

ಐಪಿಎಲ್‌ನ ಆರಂಭಿದ ಪಂದ್ಯದಲ್ಲಿ ಬಾಲಯ್ಯ ಎಂಎಸ್‌ಕೆ ಪ್ರಸಾದ್ ಮತ್ತು ವೇಣುಗೋಪಾಲ ರಾವ್ ಅವರೊಂದಿಗೆ ಕಾಮೆಂಟರಿ ಬಾಕ್ಸ್‌ನಲ್ಲಿ ಕೂರಲಿದ್ದಾರೆ. ಸ್ಟಾರ್ ಸ್ಟೋರ್ಟ್ಸ್ ತೆಲುಗು ಈಗಾಗಲೇ ಬಾಲಯ್ಯ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಮೊದಲ ಪಂದ್ಯದಲ್ಲೇ ಕಿಕ್ ಸ್ಟಾರ್ಟ್ ಕೊಡುವುದಕ್ಕೆ ಸಿದ್ಧವಾಗಿದೆ.

ಐಪಿಎಲ್ 2023 ಪ್ರಚಾರದ ಸಲುವಾಗಿ ಟಾಲಿವುಡ್ 'ಲೆಜೆಂಡ್' ನಂದಮೂರಿ ಬಾಲಕೃಷ್ಣ ಸ್ಟಾರ್ ಸ್ಪೋರ್ಟ್ಸ್ ತೆಲುಗು ಜೊತೆ ಕೈ ಜೋಡಿಸಿದೆ ಎಂದು ಟ್ವಿಟರ್ ಮೂಲಕ ಅನೌನ್ಸ್ ಮಾಡಿದೆ. ಇದೇ ವಿಚಾರವಾಗಿ ಸ್ಟಾರ್ ಸ್ಟೋರ್ಟ್ಸ್ ತೆಲುಗು ಬಾಲಯ್ಯ ಜೊತೆ ವಿಡಿಯೋವನ್ನೂ ರಿಲೀಸ್ ಮಾಡಿದೆ.

ನಂದಮೂರಿ ಬಾಲಕೃಷ್ಣ ನಟಿಸುತ್ತಿದ್ದ ಸಿನಿಮಾದ ಶೂಟಿಂಗ್ ಸ್ಥಳಕ್ಕೆ ಹೋಗಿ ವಿಡಿಯೋ ಮಾಡಿದ್ದು, ಈ ವಿಡಿಯೋದಲ್ಲಿ ಎಂಎಸ್ ಕೆ ಪ್ರಸಾದ್ ಮತ್ತು ವೇಣುಗೋಪಾಲ ರಾವ್ ಕೂಡ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಬಾಲಯ್ಯಗೆ ಬ್ಯಾಟ್ ನೀಡಿ ಗೌರವಿಸಲಾಗಿದೆ.

"ಐಪಿಎಲ್ 2023ಕ್ಕೆ ಸ್ಟಾರ್ ಸ್ಪೋರ್ಟ್ಸ್ ತೆಲುಗು ಜೊತೆ ಕೈ ಜೋಡಿಸಿರುವು ತುಂಬಾನೇ ಖುಷಿ ಕೊಟ್ಟಿದೆ. ನನ್ನ ಅಭಿಮಾನಿಗಳು ನನ್ನನ್ನು ಕೇವಲ ನಟನೆಯಲ್ಲಿ ಅಷ್ಟೇ ಅಲ್ಲದೆ ಕ್ರಿಕೆಟ್ ಪಂದ್ಯದಲ್ಲಿಯೂ ನೋಡುತ್ತಾರೆ. ನನ್ನ ಶಾಲಾ ದಿನಗಳಿಂದಲೂ ಕ್ರಿಕೆಟ್ ಆಟದ ಬಗ್ಗೆ ಆಸಕ್ತಿ ಇತ್ತು. ಈಗ ಕಾಮೆಂಟೇಟರ್ ಆಗಿ ಬರುವುದಕ್ಕೆ ಮತ್ತಷ್ಟು ಖುಷಿಯಾಗುತ್ತಿದೆ" ಎಂದು ವಿಡಿಯೋದಲ್ಲಿ ಬಾಲಕೃಷ್ಣ ಹೇಳಿದ್ದಾರೆ.

ಹಲವು ವರ್ಷಗಳ ಕಾಲ ತೆಲುಗು ಚಿತ್ರರಂಗದಲ್ಲಿ ಬಾಲಯ್ಯ ನಾಯಕನಾಗಿ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಆಹಾ ಓಟಿಟಿಯಲ್ಲಿ 'ಅನ್ ಸ್ಟಾಪಬಲ್' ಟಾಕ್ ಶೋನ ನಿರೂಪಕರಾಗಿಯೂ ಯಶಸ್ಸು ಗಳಿಸಿದ್ದಾರೆ. ಈಗ ಐಪಿಎಲ್‌ಗೆ ಕಾಮೆಂಟೇಟರ್ ಆಗಿ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ. ಕಾಮೆಂಟರಿ ಬಾಕ್ಸ್‌ನಲ್ಲಿ ಬಾಲಯ್ಯ ಮೈಕ್ ಹಿಡಿದು ಕಾಮೆಂಟರಿ ಮಾಡುವುದನ್ನು ನೋಡುವುದಕ್ಕೆ ಅಭಿಮಾನಿಗಳು ಕೂಡ ಕಾದು ಕೂತಿದ್ದಾರೆ.

ಈ ಬಾರಿ ಐಪಿಎಲ್‌ನಲ್ಲೂ ಒಟ್ಟು 10 ತಂಡಗಳು ಭಾಗವಹಿಸಲಿವೆ. ಸುಮಾರು 52 ದಿನಗಳ ಕಾಲ 74 ಪಂದ್ಯಗಳು ನಡೆಯಲಿವೆ. 12 ಕ್ರೀಡಾಂಗಣಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಲೀಗ್ ಹಂತದಲ್ಲಿ ಪ್ರತಿಯೊಂದು ತಂಡವೂ ಬರೋಬ್ಬರಿ 14 ಪಂದ್ಯಗಳನ್ನು ಆಡಲಿದೆ. ಬೆಂಗಳೂರು, ಹೈದರಾಬಾದ್, ಮೊಹಾಲಿ, ಲಕ್ನೋ, ಚೆನ್ನೈ, ದೆಹಲಿ, ಕೋಲ್ಕತ್ತಾ, ಜೈಪುರ, ಮುಂಬೈ, ಗುವಾಹಟಿ ಮತ್ತು ಧರ್ಮಶಾಲಾದ ಕ್ರೀಡಾಂಗಣದಲ್ಲಿ ಪಂದ್ಯಗಳು ಜರುಗಲಿವೆ.

More from Filmibeat

English summary
TATA IPL 2023 : Actor Nandamuri Balakrishna to be part of Telugu commentary team, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X