Hanuman: ಬಾಕ್ಸಾಫೀಸ್‌ನಲ್ಲಿ 6ನೇ ದಿನವೂ 'ಹನುಮಾನ್' ಸ್ಟ್ರಾಂಗ್; ಕನ್ನಡ ವರ್ಷನ್ ಗಳಿಸಿದ್ದೆಷ್ಟು?

ಕಳೆದ ಕೆಲವು ದಿನಗಳಿಂದ ಸ್ಮಾಲ್ ಬಜೆಟ್ ಸಿನಿಮಾ 'ಹನುಮಾನ್' ಸದ್ದು ಮಾಡುತ್ತಿದೆ. ಮೂಲತ: ತೆಲುಗು ಸಿನಿಮಾ ಆಗಿದ್ದರೂ, ಚಿತ್ರತಂಡ ಪ್ಯಾನ್ ಇಂಡಿಯಾ ರಿಲೀಸ್ ಮಾಡಿತ್ತು. ತೆಲುಗು ಸೇರಿದಂತೆ ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲೂ ರಿಲೀಸ್ ಮಾಡಿತ್ತು. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ 'ಹನುಮಾನ್' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಮಹೇಶ್ ಬಾಬು ಸಿನಿಮಾ 'ಗುಂಟೂರು ಖಾರಂ', ವೆಂಕಟೇಶ್ ಸಿನಿಮಾ 'ಸೈಂಧವ' ಹಾಗೂ ನಾಗಾರ್ಜುನ ನಟಿಸಿದ 'ನಾ ಸಾಮಿ ರಂಗ' ಅಂತಹ ದಿಗ್ಗಜರ ಸಿನಿಮಾಗಳ ಎದುರು ರಿಲೀಸ್ ಆಗಿತ್ತು. ಹೆಚ್ಚೇನು ನಿರೀಕ್ಷೆಯನ್ನೇ ಹುಟ್ಟಿಸದೆ ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ ಅನ್ನು ಕೊಳ್ಳೆ ಹೊಡೆಯುವುದಕ್ಕೆ ಶುರು ಮಾಡಿದೆ.

Teja Sajja starrer Hanuman box office day 6 What is the Kannada version collection

ಜನವರಿ 12ರಂದು ತೆರೆಕಂಡಿದ್ದ ಸಿನಿಮಾ ಕೇವಲ 6 ದಿನಗಳಲ್ಲಿ ವಿಶ್ವದಾದ್ಯಂತ 100 ಕೋಟಿ ರೂಪಾಯಿಗೂ ಅಧಿಕ ಲೂಟಿ ಮಾಡಿದೆ. ಭಾರತದಲ್ಲಂತೂ ಸಿನಿಮಾ ನೋಡುಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಹಾಗಿದ್ದರೆ 6ನೇ ದಿನ 'ಹನುಮಾನ್' ಕಲೆಕ್ಷನ್ ಹೇಗಿದೆ? ಇದೇ ಸಿನಿಮಾದ ಕನ್ನಡ ವರ್ಷನ್ ಗಳಿಸಿದ್ದೆಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಹನುಮಾನ್' ಸ್ಮಾಲ್ ಬಜೆಟ್‌ನಲ್ಲಿ ನಿರ್ಮಿಸಿರೋ ಸೂಪರ್ ಹೀರೊ ಸಿನಿಮಾ. ತೇಜ ಸಜ್ಜ ಅಂತಹ ಯುವ ಪ್ರತಿಭೆ ಈ ಸಿನಿಮಾ ಹೀರೊ. ವರಲಕ್ಷ್ಮಿ ಶರತ್ ಕುಮಾರ್, ವಿನಯ್ ರೈ ಬಿಟ್ಟರೆ ದೊಡ್ಡ ತಾರಾ ಬಳಗವೂ ಇಲ್ಲ. ಹೀಗಿದ್ದರೂ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. 6ನೇ ದಿನ ವೀಕ್ ಡೇ ಆಗಿದ್ದರೂ ಬಾಕ್ಸಾಫೀಸ್‌ನಲ್ಲಿ ಕದಲಲಿಲ್ಲ.

6ನೇ ದಿನವೂ ಭಾರತದಾದ್ಯಂತ 'ಹನುಮಾನ್' ಭರ್ಜರಿ ಕಲೆಕ್ಷನ್ ಮಾಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಈ ಸಿನಿಮಾ ನಿನ್ನೆ (ಜನವರಿ 17) 11.50 ಕೋಟಿ ರೂಪಾಯಿ (Net) ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾ ಒಟ್ಟು ಗಳಿಕೆ ಭಾರತದಲ್ಲಿ 80.46 ಕೋಟಿ ರೂಪಾಯಿ (Net) ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಹಾಗೇ ವಿಶ್ವದಾದ್ಯಂತ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

Teja Sajja starrer Hanuman box office day 6 What is the Kannada version collection

ಇನ್ನು 'ಹನುಮಾನ್' ಸಿನಿಮಾಗೆ ತೆಲುಗು ಹಾಗೂ ಹಿಂದಿ ಬೆಲ್ಟ್‌ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಎರಡೂ ಏರಿಯಾಗಳಲ್ಲಿ ಕೋಟಿ ಲೆಕ್ಕದಲ್ಲಿ ಗಳಿಕೆ ಆಗುತ್ತಿದೆ. ಆದರೆ, ತಮಿಳು, ಮಲಯಾಳಂ ಹಾಗೂ ಕನ್ನಡ ಅವತರಣಿಕೆಯಲ್ಲಿ ಕಲೆಕ್ಷನ್ ತಕ್ಕ ಮಟ್ಟಿಗಿದೆ. ಆದರೆ, ಪರಭಾಷೆಯ ಯುವ ಪ್ರತಿಭೆಯ ಸಿನಿಮಾಗೆ ಕರ್ನಾಟಕದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಎಂದೇ ಹೇಳಬಹುದು.

'ಹನುಮಾನ್' ಕನ್ನಡ ಅವತರಣಿಕೆ ಸೀಮಿತ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಹೀಗಾಗಿ ಮೊದಲ ದಿನ ಎರಡು ಲಕ್ಷ ಕಲೆಕ್ಷನ್ ಮಾಡಿತ್ತು. ಎರಡನೇ ದಿನ 6 ಲಕ್ಷ ರೂಪಾಯಿಗೆ ಏರಿಕೆಯಾಗಿತ್ತು. ಮೂರನೇ ದಿನ 11 ಲಕ್ಷ ರೂಪಾಯಿ, ನಾಲ್ಕನೇ ದಿನ 12 ಲಕ್ಷ ರೂಪಾಯಿ, ಹಾಗೂ 5ನೇ ದಿನ 5 ಲಕ್ಷ ರೂ. ಗಳಿಕೆ ಕಂಡಿದೆ. ಇನ್ನು 6ನೇ ದಿನ ಕಲೆಕ್ಷನ್ ಹೊರಬೀಳಬೇಕಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಅಂದಾಜು ಲೆಕ್ಕಾಚಾರದ ಪ್ರಕಾರ 'ಹನುಮಾನ್' ಕನ್ನಡ ವರ್ಷನ್ 6 ದಿನಗಳಲ್ಲಿ 41 ಲಕ್ಷ ರೂಪಾಯಿ ಗಳಿಕೆ (Net) ಕಂಡಿದೆ.

ಈ ಸಿನಿಮಾಗೆ ಕರ್ನಾಟಕದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಮೆಚ್ಚುಗೆ ಸೂಚಿಸಿದ್ದರು. ಪತ್ನಿ ಹಾಗೂ ಮಗಳೊಂದಿಗೆ ಕೂತು ಸಿನಿಮಾ ವೀಕ್ಷಸಿದ್ದರು. ಬಳಿಕ ಸೂಪರ್ ಹೀರೊ ಸಿನಿಮಾಗೆ ಭೇಷ್ ಎಂದಿದ್ದರು. ಹಾಗೇ ಡಾಲಿ ಧನಂಜಯ್ ಕೂಡ 'ಹನುಮಾನ್' ಯಶಸ್ಸಿಗೆ ಜೈ ಎಂದಿದ್ದರು. ಹೀಗಾಗಿ ಮುಂದಿನ ದಿನಗಳಲ್ಲೂ ಹೀಗೆ ಚಮತ್ಕಾರ ಮಾಡುತ್ತಾ? ಅನ್ನೋ ಕುತೂಹಲವಂತೂ ಇದ್ದೇ ಇದೆ.

More from Filmibeat

English summary
Hanuman day 6 Box office Collection
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X