Telangana Elections 2023: ವೋಟ್ ಮಾಡಲು ಕ್ಯೂನಲ್ಲಿ ನಿಂತ ಜೂ.ಎನ್‌ಟಿಆರ್, ಅಲ್ಲು ಅರ್ಜುನ್, ಚಿರಂಜೀವಿ
ತೆಲಂಗಾಣ ಜನತೆಗೆ ಇಂದು (ನವೆಂಬರ್ 30) ಬ್ಯುಸಿ ಡೇ. ರಾಜ್ಯದಲ್ಲಿ ಇಂದು ವಿಧಾನ ಸಭೆಗೆ ಚುನಾವಣೆ ನಡೆಯುತ್ತಿದೆ. ಒಂದ್ಕಡೆ ಆಡಳಿತ ಪಕ್ಷ. ಇನ್ನೊಂದು ಕಡೆ ವಿರೋಧ ಪಕ್ಷ. ಎರಡೂ ಪಕ್ಷಗಳೂ 2023ಯ ತೆಲಂಗಾಣ ಚುನಾವಣೆಯನ್ನು ಗೆಲ್ಲುವ ಆತ್ಮವಿಶ್ವಾಸವನ್ನು ತೋರಿಸುತ್ತಿವೆ.
ಇಂದು (ನವೆಂಬರ್ 30) ಬೆಳಗ್ಗೆಯಿಂದಲೇ ತೆಲಂಗಾಣ ಜನತೆ ಸರದಿ ಸಾಲಿನಲ್ಲಿ ನಿಂತು ವೋಟು ಮಾಡುತ್ತಿದ್ದಾರೆ. ಇವರೊಂದಿಗೆ ಟಾಲಿವುಡ್ ಸೆಲೆಬ್ರೆಟಿಗಳು ಕೂಡ ಮತಗಟ್ಟೆಗೆ ಬಂದು ವೋಟ್ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ತೆಲಂಗಾಣದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಕಾವು ಜೋರಾಗುತ್ತಿದೆ. ತೆಲುಗು ಚಿತ್ರರಂಗದ ಕೆಲವು ಸೆಲೆಬ್ರಿಟಿಗಳು ಈಗಾಗಲೇ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅವರಲ್ಲಿ ಜೂ. ಎನ್ ಟಿಆರ್ ತಮ್ಮ ಕುಟುಂಬದೊಂದಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನ ಓಬುಲ್ ರೆಡ್ಡಿ ಶಾಲೆಯ ಬೂತ್ ನಂ.150ರಲ್ಲಿ ಮತ ಚಲಾಯಿಸಿದ್ದಾರೆ. ಸಾಮಾನ್ಯ ಜನರೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಿಂತು ಮತವನ್ನು ಚಲಾಯಿಸಿದ್ದಾರೆ.
ಟಾಲಿವುಡ್‌ನ 'ಪುಷ್ಪ' ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೂಡ ತಮ್ಮ ಕುಟುಂಬ ಸಮೇತ ಮತಗಟ್ಟೆ ಆಗಮಿಸಿದ್ದರು. ಜೂ.ಎನ್‌ಟಿಆರ್ ಅಂತೆಯೇ ಜನಸಾಮಾನ್ಯರ ಜೊತೆಗೆ ಅವರೂ ಬಹಳ ಹೊತ್ತು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಜುಬಿಲಿ ಹಿಲ್ಸ್‌ನ ಬಿಎಸ್‌ಎನ್‌ಎಲ್ ಕೇಂದ್ರದ ಬಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಇವರೊಂದಿಗೆ ಮತ್ತೊಬ್ಬ ಹೀರೊ ಸುಮಂತ್ ಜುಬಿಲಿ ಹಿಲ್ಸ್ ಕ್ಲಬ್‌ನಲ್ಲಿ ಮತ ಚಲಾಯಿಸಿದ್ದಾರೆ.
ಮತಗಟ್ಟೆಯಲ್ಲಿ ವಿಶೇಷ ಆಕರ್ಷಣೆ ಎಂದರೆ, ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕೂಡ ಮತ ಚಲಾಯಿಸಿದ್ದಾರೆ. ಬೆಳ್ಳಂಬೆಳಗ್ಗೆನೇ ಆಗಮಿಸಿ ಮತ ಚಲಾಯಿಸಿದ್ದರು. ಪತ್ನಿ ಸುರೇಖಾ ಅವರೊಂದಿಗೆ ಆಗಮಿಸಿದ್ದ ಚಿರಂಜೀವಿ, ಜುಬಿಲಿ ಹಿಲ್ಸ್ ಕ್ಲಬ್ ಮತಗಟ್ಟೆಯಲ್ಲಿ ವೋಟ್ ಹಾಕಿದ್ದಾರೆ. ಇವರೂ ಕೂಡ ಅಲ್ಲಿನ ಜನರೊಂದಿಗೆ ಕ್ಯೂನಲ್ಲಿ ನಿಂತು ವೋಟ್ ಹಾಕಿದ್ದು ವಿಶೇಷವಾಗಿತ್ತು.

ಜೂ.ಎನ್‌ಟಿಆರ್, ಅಲ್ಲು ಅರ್ಜುನ್, ಚಿರಂಜೀವಿಯಂತೆಯೇ ವಿಕ್ಟರಿ ವೆಂಕಟೇಶ್ ಕೂಡ ವೋಟ್ ಮಾಡಿದ್ದಾರೆ. ಮಣಿಕೊಂಡ ಪ್ರೌಢಶಾಲೆಯಲ್ಲಿ ವೆಂಕಟೇಶ್ ಮತಚಲಾಯಿಸಿದ್ರೆ, ನಿರ್ದೇಶಕ ತೇಜ ಕೂಡ ಇದೇ ವೋಟಿಂಗ್ ಬೂತ್‌ನಲ್ಲಿ ಮತ ಹಾಕಿದ್ದಾರೆ.


Click it and Unblock the Notifications











