ಶೂಟಿಂಗ್ ಸ್ಥಗಿತಗೊಳಿಸಿದ್ರೂ, ದಿಲ್ ರಾಜು- ದಳಪತಿ ವಿಜಯ್ ಸಿನಿಮಾ ಮಾತ್ರ ಯಾಕೆ ನಿಂತಿಲ್ಲ?

ಇಂದಿನಿಂದ (ಆಗಸ್ಟ್ 1) ಟಾಲಿವುಡ್‌ನಲ್ಲಿ ನಿರ್ಮಾಪಕರು ಒಕ್ಕೊರಲಿನಿಂದ ಸಿನಿಮಾ ಶೂಟಿಂಗ್ ಮಾಡದೆ ಇರಲು ನಿರ್ಧರಿಸಿದ್ದಾರೆ. ಸೂಪರ್‌ಸ್ಟಾರ್‌ಗಳ ದುಬಾರಿ ಸಂಭಾವನೆ, ಶೂಟಿಂಗ್ ವೆಚ್ಚ ಇವೆಲ್ಲವೂ ಹೊರೆಯಾಗುತ್ತಿದ್ದು, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಒಂದು ತಿಂಗಳ ಕಾಲ ಶೂಟಿಂಗ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಈ ಹಿಂದೆ ತೆಲುಗು ಪ್ರೊಡ್ಯೂಸರ್ ಗಿಲ್ಡ್‌ನಲ್ಲಿ ಆಕ್ಟಿವ್ ಆಗಿ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರೆಲ್ಲರೂ ಸೇರಿ ಒಮ್ಮದ ನಿರ್ಧಾರಕ್ಕೆ ಬಂದಿದ್ದರು. ಇದರಲ್ಲಿ ಸಿನಿಮಾ ನಿರ್ಮಾಣಕ್ಕೆ ಎದುರಾಗುತ್ತಿರುವ ತೊಡಕುಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಅಂದುಕೊಂಡಂತೆ ಇಂದಿನಿಂದ ಎಲ್ಲಾ ಸಿನಿಮಾಗಳ ಶೂಟಿಂಗ್ ಸ್ಥಗಿತಗೊಂಡಿದೆ.

ಆದರೆ, ಇದೇ ತೆಲುಗು ಪ್ರೊಡ್ಯೂಸರ್ಸ್ ಗಿಲ್ಡ್‌ನಲ್ಲಿರುವ ನಿರ್ಮಾಪಕ ದಿಲ್ ರಾಜು ಮಾತ್ರ ತಮ್ಮ ಸಿನಿಮಾದ ಶೂಟಿಂಗ್ ಅನ್ನು ಮುಂದುವರೆಸಿದ್ದಾರೆ. ಇಷ್ಟೆಲ್ಲಾ ಮೀಟಿಂಗ್‌ಗಳ ಮಧ್ಯೆನೂ ದಿಲ್ ರಾಜು ಸಿನಿಮಾ ಶೂಟಿಂಗ್ ಮಾತ್ರ ಯಾಕೆ ನಡೀತಿದೆ? ಅನ್ನೋ ಚರ್ಚೆ ಎದ್ದಿದೆ. ಅದಕ್ಕೆ ನಿರ್ಮಾಪಕರೇ ಉತ್ತರ ಕೊಟ್ಟಿದ್ದಾರೆ. ಅಸಲಿಗೆ ಟಾಲಿವುಡ್‌ನಲ್ಲಿ ಏನಾಗ್ತಿದೆ? ಅಂತ ತಿಳಿಯಲು ಮುಂದೆ ಓದಿ..

ತೆಲುಗು ಸಿನಿಮಾ ಶೂಟಿಂಗ್ ಬಂದ್

ತೆಲುಗು ಸಿನಿಮಾ ಶೂಟಿಂಗ್ ಬಂದ್

ಇಂದಿನಿಂದ ( ಆಗಸ್ಟ್ 01) ತೆಲುಗು ಚಿತ್ರರಂಗದ ಎಲ್ಲಾ ತರಹದ ಸಿನಿಮಾಗಳೂ ಬಂದ್ ಆಗಿವೆ. ಬಿಗ್, ಮೀಡಿಯಂ ಹಾಗೂ ಸ್ಮಾಲ್ ಬಜೆಟ್ ಸಿನಿಮಾಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಕೋವಿಡ್ ಬಳಿಕ ಟಾಲಿವುಡ್‌ನಲ್ಲಿ ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿಲ್ಲ. ಆದರೆ, ತೆಲುಗಿನ ಸೂಪರ್‌ಸ್ಟಾರ್‌ಗಳು ಮಾತ್ರ ತಮ್ಮ ಸಂಭಾವನೆಯನ್ನು ಇಳಿಕೆ ಮಾಡಿಕೊಂಡಿಲ್ಲ ಎನ್ನುವುದು ಈ ನಿರ್ಧಾರದ ಒಂದು ಅಂಶ. ಹೀಗಾಗಿ ಅಂದಾಜು ಒಂದು ತಿಂಗಳ ಕಾಲ ಬಂದ್ ಮಾಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ. ಈ ಮಧ್ಯೆ ದಿಲ್ ರಾಜ್ ಮಾತ್ರ ತಮ್ಮ ಸಿನಿಮಾದ ಶೂಟಿಂಗ್ ಅನ್ನು ಮುಂದುವರೆಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಶೂಟಿಂಗ್ ಮುಂದುವರೆಸಿದ ದಿಲ್ ರಾಜು

ಶೂಟಿಂಗ್ ಮುಂದುವರೆಸಿದ ದಿಲ್ ರಾಜು

ಒಂದ್ಕಡೆ ಆಕ್ಟಿವ್ ನಿರ್ಮಾಪಕರು ತಮ್ಮ ಸಿನಿಮಾ ಶೂಟಿಂಗ್ ನಿಲ್ಲಿಸಿ ಸೈಲೆಂಟ್ ಆಗಿದ್ದಾರೆ. ಇನ್ನೊಂದ್ಕಡೆ ಅದೇ ತಂಡದಲ್ಲಿರುವ ನಿರ್ಮಾಪಕ ದಿಲ್ ರಾಜು ಮಾತ್ರ ಶೂಟಿಂಗ್ ಮುಂದುವರೆಸಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾ ಶೂಟಿಂಗ್ ಮಾಡುವುದಕ್ಕೆ ಈ ಗಿಲ್ಡ್‌ನಲ್ಲಿರುವ ನಿರ್ಮಾಪಕರೆಲ್ಲರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೌದು, ದಳಪತಿ ವಿಜಯ್ ಸಿನಿಮಾವನ್ನು ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಸೆಟ್ಟೇರಿ, ಶೂಟಿಂಗ್ ಕೂಡ ಆರಂಭ ಆಗಿದೆ. ವಂಶಿ ಪೈಡ್‌ಪಲ್ಲಿ ಈ ಸಿನಿಮಾವನ್ನುನಿರ್ದೇಶನ ಮಾಡುತ್ತಿದ್ದಾರೆ. ಅದುವೇ 'ವಾರಸುಡು'.

'ವಾರಸುಡು' ಶೂಟಿಂಗ್‌ಗೆ ಪರ್ಮಿಷನ್ ಯಾಕೆ?

'ವಾರಸುಡು' ಶೂಟಿಂಗ್‌ಗೆ ಪರ್ಮಿಷನ್ ಯಾಕೆ?

ಇಲ್ಲಿ ಒಬ್ಬರಿಗೊಂದೊಂದು ನ್ಯಾಯನಾ? ಇಂತಹದ್ದೊಂದು ಪ್ರಶ್ನೆ ಟಾಲಿವುಡ್‌ನಲ್ಲಿ ಎದ್ದಿದೆ. ಈ ಬೆಳವಣಿಗೆಗೆ ಬಗ್ಗೆ ಟಾಲಿವುಡ್‌ ಮಂದಿ ಸಮಜಾಯಿಷಿ ಕೊಟ್ಟಿದ್ದಾರೆ. ದಿಲ್ ರಾಜು ನಿರ್ಮಿಸುತ್ತಿರುವ 'ವಾರಸುಡು' ಸಿನಿಮಾ ಎರಡು ಭಾಷೆಯಲ್ಲಿ ಶೂಟಿಂಗ್ ನಡೆಯುತ್ತಿದೆ. ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲಿಯೂ ನಡೆಯುತ್ತಿರೋದ್ರಿಂದ ಈ ಸಿನಿಮಾ ವಿಶೇಷವಾಗಿ ಶೂಟಿಂಗ್ ಮಾಡಲು ಪರ್ಮಿಷನ್ ಸಿಕ್ಕಿದೆ. ಅಲ್ಲದೆ ದಳಪತಿ ವಿಜಯ್ ತೆಲುಗು ನಟ ಅಲ್ಲದೆ ಇರೋದ್ರಿಂದ ಅನುಮತಿ ನೀಡಲಾಗಿದೆ ಎನ್ನಲಾಗಿದೆ.

ವೈಜಾಗ್‌ನಲ್ಲಿ 'ವಾರಸುಡು'

ವೈಜಾಗ್‌ನಲ್ಲಿ 'ವಾರಸುಡು'

ದಿಲ್ ರಾಜು ನಿರ್ಮಾಣದ 'ವಾರಸುಡು' ಸಿನಿಮಾದ ಶೂಟಿಂಗ್ ವೈಜಾಗ್‌ನಲ್ಲಿ ನಡೆಯುತ್ತಿದೆ. ಎಲ್ಲಾ ನಿರ್ಮಾಪಕರು ಸೈಲೆಂಟ್ ಆಗಿರುವಾಗ, ಈ ಸಿನಿಮಾದ ಶೂಟಿಂಗ್ ಬೇರೆ ನಿರ್ಮಾಪಕರಿಗೆ ಪ್ರೇರಣೆ ಎಂದು ಹೇಳಲಾಗುತ್ತಿದೆ. ಮುಂದೆ ಅನೌನ್ಸ್ ಮಾಡುವ ನಿರ್ಮಾಪಕರೆಲ್ಲರೂ ಪ್ಯಾನ್ ಇಂಡಿಯಾ ಸಿನಿಮಾವನ್ನು ಮಾಡಲು ಸಜ್ಜಾಗುತ್ತಾರೆ. ಇದರಿಂದ ನಿರ್ಮಾಪಕರಿಗೆ ಅನುಕೂಲ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

More from Filmibeat

English summary
Telugu Active Producer Guild Strike: Dil Raju Continues To Shoot Vijay Starrer Varasudu Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X