"ಅನುಷ್ಕಾ ಶೆಟ್ಟಿಗೆ ಬಲವಾಗಿ ಕಾಲಿನಿಂದ ಒದ್ದೆ.. ಅದರೂ ಏನೂ ಹೇಳಿಲ್ಲ"- ತೆಲುಗು ನಟ ಅಡವಿ ಶೇಷ್
ತೆಲುಗು ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಹಿಂದೆ ಬೀಳದೆ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ನಟ ಅಡವಿ ಶೇಷ್. ಇವರು ಇದೂವರೆಗೂ ನಟಿಸಿದ ಸಿನಿಮಾಗಳು ಪ್ರೇಕ್ಷಕರಿಗೆ ವಿಶಿಷ್ಠ ಅನುಭವವನ್ನು ನೀಡಿದೆ. ತೆಲುಗು ಸಿನಿಮಾಗಳು ಮಾಸ್ ಎಲಿಮೆಂಟ್ಸ್ ಇರಲೇಬೇಕು. ಇಲ್ಲದೇ ಹೋದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ನೆಲಕ್ಕಚ್ಚುತ್ತೆ. ಇಂತಹ ಸಮಯದಲ್ಲಿ ವಿಶಿಷ್ಠ ಸಿನಿಮಾಗಳ ಬೆನ್ನು ಬಿದ್ದು ಗೆದ್ದ ನಟನೀತ.
ಹೀಗಾಗಿ ತೆಲುಗು ಚಿತ್ರರಂಗದಲ್ಲಿ ಅಡವಿ ಶೇಷ್‌ಗೆ ವಿಶೇಷವಾದ ಫ್ಯಾನ್ ಫಾಲೋವಿಂಗ್ ಇದೆ. ಸದ್ಯ ಇವರು ನಟಿಸಿರುವ ಹೊಚ್ಚ ಹೊಸ ಸಿನಿಮಾ 'ಡಕಾಯಿತ್' ಕೂಡ ವಿಭಿನ್ನ ಕಥಾ ಹಂದರದೊಂದಿಗೆ ಬಂದಿದೆ. ಅಡವಿ ಶೇಷ್ ಕೇವಲ ನಟನಾಗಿ ಅಷ್ಟೇ ಅಲ್ಲ, ನಿರ್ದೇಶಕನಾಗಿಯೂ ಗೆದ್ದಿದ್ದಾರೆ. ಸಿನಿಮಾ ಬಿಡುಗಡೆಯಾಗುತ್ತಿರುವ ಈ ಸಮಯದಲ್ಲಿ ಅಡವಿ ಶೇಷ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ಅನುಷ್ಕಾ ಶೆಟ್ಟಿಯೊಂದಿಗೆ ನಡೆದ ಅಚ್ಚರಿಯ ಘಟನೆಯನ್ನು ಹಂಚಿಕೊಂಡಿದ್ದಾರೆ.

'ಡೆಕಾಯಿತ್' ಸಿನಿಮಾದ ಪ್ರಚಾರದ ವೇಳೆ ಅಡಿವಿ ಶೇಷ್ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಿರೂಪಕಿ ಸುಮಾ ಕನಕಾಲ ಅಡವಿ ಶೇಷ್‌ಗೆ 'ಬಾಹುಬಲಿ' ಸಿನಿಮಾದ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆಗಳ ಕುರಿತು ಪ್ರಶ್ನೆ ಮಾಡಿದರು. ಆ ಸಿನಿಮಾದಲ್ಲಿ ಜೈಲಿನಲ್ಲಿರುವ ಅನುಷ್ಕಾ ಅವರನ್ನು ಭಲ್ಲಾಳದೇವನ ಮಗನಾಗಿ ಶೇಷ್ ಹೊರಕ್ಕೆ ಎತ್ತುವ ದೃಶ್ಯವಿತ್ತು. ಈ ವೇಳೆ ಅನುಷ್ಕಾ ಶೆಟ್ಟಿ ಬಲವಾಗಿ ಕಾಲಿನಿಂದ ಒದ್ದ ಸನ್ನಿವೇಶವನ್ನು ವಿವರಿಸಿದ್ದಾರೆ.
ನಿರೂಪಕಿ ಸುಮಾ ಕೇಳಿದ ಪ್ರಶ್ನೆಗೆ ಅಡವಿ ಶೇಷ್ ಕೊಟ್ಟ ಉತ್ತರ ಹೀಗಿತ್ತು. "ಬಾಹುಬಲಿ ಚಿತ್ರೀಕರಣ ನಡೆಯುವಾಗ ನನ್ನ ಪಾತ್ರ ಮುಗಿಯುವ ಹಂತಕ್ಕೆ ಬಂದಿತ್ತು. ಆ ವೇಳೆ ದೃಶ್ಯವನ್ನು ಚಿತ್ರೀಕರಿಸಲಾಯಿತು. ಆ ವೇಳೆ ಈ ಘಟನೆ ನಡೆದಿತ್ತು" ಎಂದು ಉತ್ತರ ಕೊಟ್ಟಿದ್ದರು. ಅಂತಹ ಗಂಭೀರ ದೃಶ್ಯದ ನಂತರ ಅನುಷ್ಕಾ ಪ್ರತಿಕ್ರಿಯೆ ಹೇಗಿತ್ತು ಎಂದು ಪ್ರಶ್ನೆ ಹಾಕಿದಾಗ, "ಸ್ವೀಟಿ ಹೆಸರಿಗೆ ಮಾತ್ರವಲ್ಲ, ಅವರು ನಿಜಕ್ಕೂ ಸ್ವೀಟೆಸ್ಟ್ ಪರ್ಸನ್. ಸೀನ್ ಮುಗಿದ ತಕ್ಷಣ ನಾನು ಅವರ ಬಳಿ ಹೋಗಿ, ಏನೂ ಗಾಯವಾಗಿಲ್ಲ ಅಲ್ವಾ? ಎಂದು ಕೇಳಿದೆ" ಎಂದು ಹೇಳಿದ್ದಾಗಿ ವಿವರಿಸಿದ್ದಾರೆ.

'ಬಾಹುಬಲಿ' ಸಿನಿಮಾದ ದೃಶ್ಯವನ್ನು ಚಿತ್ರೀಕರಿಸುವಾಗ ರಾಜಮೌಳಿ ಇನ್ನೂ ಪವರ್‌ಫುಲ್ ಆಗಿ ಬರಬೇಕು ಎಂದು ಬಯಸಿದ್ದರು. ಹೀಗಾಗಿ ಅಡವಿ ಶೇಷ್ ಅಗ್ರೆಸಿವ್ ಆಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. "ನಾನು ಬರ್ಚಿಯಿಂದ ಅನುಷ್ಕಾ ಶೆಟ್ಟಿಯವರ ಅವರ ಕುತ್ತಿಗೆಗೆ ಬಲವಾಗಿ ಹೊಡೆದಿದ್ದೆ. ಹಾಗೇ ಕಾಲಿನಿಂದ ಒದೆಯುವ ದೃಶ್ಯವೂ ಕೂಡ ಇತ್ತು. ಈ ವೇಳೆ ಚಿತ್ರೀಕರಣದ ಸಮಹಯದಲ್ಲಿ ಅನುಷ್ಕಾ ಅವರ ಕುತ್ತಿಗೆ ಬಳಿ ಗಾಯವಾಗಿತ್ತು" ಎಂದು ಅಡವಿ ಶೇಷ್ ನೆನಪಿಸಿಕೊಂಡಿದ್ದಾರೆ.
ಅಡವಿ ಶೇಷ್ ಆ ದೃಶ್ಯದಲ್ಲಿ ಅನುಷ್ಕಾಗೆ ಕಾಲಿನಿಂದ ಒದೆಯುವುದಕ್ಕೆ ಹೆದರುತ್ತಿದ್ದರಂತೆ. "ರಾಜಮೌಳಿ ನಿನ್ನಲ್ಲಿ ಪವರ್ ಕಾಣಿಸುತ್ತಿಲ್ಲ. ಆ ಫೀಲ್ ಬರುತ್ತಿಲ್ಲ" ಎಂದಿದ್ದರು. ಹೀಗಾಗಿ ಬಲವಾಗಿ ಕಾಲಿನಿಂದ ಒದೆಯಬೇಕಾಯ್ತು. ಆ ವೇಳೆ ಅನುಷ್ಕಾ ಶೆಟ್ಟಿಗೆ ಪೆಟ್ಟಾಗಿದೆ ಎಂದು ಅಡವಿ ಶೇಷ್ ಹೇಳಿದ್ದಾರೆ.
ಆ ಘಟನೆ ನಡೆದ ದಿನದಿಂದ ಅನುಷ್ಕಾ ಶೆಟ್ಟಿ ಜೊತೆ ಯಾವುದೇ ದೃಶ್ಯ ಮಾಡುವಾಗ ಬಹಳ ಎಚ್ಚರ ವಹಿಸುತ್ತಾರೆ. ಶೂಟಿಂಗ್ ಮುಗಿಯುತ್ತಿದ್ದಂತೆ ಏನೂ ಆಗಿಲ್ಲವೆಂದು ಖಚಿತ ಪಡಿಸಿಕೊಳ್ಳುತ್ತಾರೆ. ಈ ವಿಷಯವನ್ನು ಸಂದರ್ಶನದಲ್ಲಿ ಅಡಿವಿ ಶೇಷ್ ಹಂಚಿಕೊಂಡಿದ್ದಾರೆ. ಇತ್ತ ಅನುಷ್ಕಾ ಶೆಟ್ಟಿಗೆ ಅಷ್ಟು ಗಂಭೀರವಾಗಿ ಪೆಟ್ಟಾಗಿದ್ದರೂ, ನೋವು ತೋಡಿಕೊಳ್ಳದೆ ದೃಶ್ಯ ಚೆನ್ನಾಗಿ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ಆಲೋಚಿಸುತ್ತಿದ್ದರು ಎಂದು ಶೇಷ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.


Click it and Unblock the Notifications











