ವಿಕ್ಕರಿ ವೆಂಕಟೇಶ್ 2ನೇ ಮಗಳ ಮದುವೆ ಹೇಗಿತ್ತು? ಸ್ಟಾರ್ ಪುತ್ರಿಯ ಕೈ ಹಿಡಿದ ವರ ಯಾರು ಗೊತ್ತಾ?

ಟಾಲಿವುಡ್‌ನಲ್ಲಿ ಜನಪ್ರಿಯ ನಟ ದಗ್ಗುಬಾಟಿ ವೆಂಕಟೇಶ್. ತೆಲುಗು ಚಿತ್ರರಂಗದಲ್ಲಿ ವಿಕ್ಟರಿ ವೆಂಕಟೇಶ್ ಅಂತಲೇ ಜನಪ್ರಿಯರಾಗಿದ್ದಾರೆ. ಬಹುತೇಕ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರೂ, ಆಗಾಗ ಬಾಲಿವುಡ್‌ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ಕಂಡಿದ್ದು ಇದೆ. ಟಾಲಿವುಡ್‌ನ ಜನಪ್ರಿಯ ನಟರ ಸಾಲಿನಲ್ಲಿ ನಿಲ್ಲುವ ವೆಂಕಟೇಶ್ ತಮ್ಮ ಪುತ್ರಿಯನ್ನು ಮದುವೆ ಮಾಡಿದ ಸಂಭ್ರಮದಲ್ಲಿದ್ದಾರೆ.

ವಿಕ್ಟರಿ ವೆಂಕಟೇಶ್ ಎರಡನೇ ಮಗಳ ಮದುವೆ ಹೈದರಾಬಾದ್‌ನಲ್ಲಿ ನಿನ್ನೆ (ಮಾರ್ಚ್ 15) ರಾತ್ರಿ ನಡೆದಿದೆ. ಈ ಮದುವೆಗೆ ಯಾರೆಲ್ಲ ಬಂದಿದ್ದರು. ಅತಿಥಿಗಳು ಯಾರೆಲ್ಲ ಬಂದಿದ್ದರು? ಸ್ಟಾರ್ ಪುತ್ರಿಯ ಜೊತೆ ಸಪ್ತಪದಿ ತುಳಿದ ಆ ನಟ ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ..

Telugu actor Daggubatti Venkatesh Daughter Hayavahini Got Married Nishanth

ತೆಲುಗು ಚಿತ್ರರಂಗದ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಎರಡನೇ ಪುತ್ರಿ ಹಯವಾಹಿನಿ. ಇವರ ಮದುವೆ ಶುಕ್ರವಾರ (ಮಾರ್ಚ್ 15) ರಾತ್ರಿ ನಿಶಾಂತ್ ಎಂಬುವವರ ಜೊತೆ ನಡೆದಿದೆ. ಹೈದರಾಬಾದ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಎರಡು ಕಡೆಯ ಕುಟುಂಬಸ್ಥರು ಹಾಗೂ ಪ್ರಮುಖ ಗಣ್ಯರು ಭಾಗವಹಿಸಿದ್ದರು.

ವೆಂಕಟೇಶ್ ಪುತ್ರಿ ಹಯವಾಹಿನಿ ವಿಜಯವಾಡದ ಡಾ. ಪಾತೂರಿ ವೆಂಕಟರಾಮ ರಾವ್, ಡಾ. ಅರುಣಾ ದಂಪತಿಯ ಪುತ್ರ ನಿಶಾಂತ್ ಅವರ ಜೊತೆ ಸರಳವಾಗಿ ಮದುವೆ ಆಗಿದ್ದಾರೆ. ವಿಕ್ಟರಿ ವೆಂಕಟೇಶ್ ಅವರದ್ದೇ ಆದ ರಾಮನಾಯ್ಡು ಸ್ಟುಡಿಯೋದಲ್ಲಿ ಈ ಮದುವೆ ಸಮಾರಂಭ ನಡೆದಿದ್ದು, ರಾತ್ರಿ 9.36ಕ್ಕೆ ಹಯವಾಹಿನಿಯನ್ನು ಶಾಸ್ತ್ರೋಕ್ತವಾಗಿ ನಿಶಾಂತ್ ಮದುವೆ ಆಗಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದಾರೆ.

ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆದ ಹಯವಾಹಿನಿ - ನಿಶಾಂತ್ ಮದುವೆ ಸಮಾರಂಭಕ್ಕೆ ಆಂಧ್ರ ಹಾಗೂ ತೆಲಂಗಾಣ ಎರಡೂ ರಾಜ್ಯದ ಗಣ್ಯರು, ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳನ್ನು ಆಹ್ವಾನ ಮಾಡಲಾಗಿದೆ ಅನ್ನುವ ಸುದ್ದಿ ಹಬ್ಬಿತ್ತು. ಆದರೆ, ಈ ಮದುವೆಯಲ್ಲಿ ಕೇವಲ ಎರಡೂ ಕುಟುಂಬದ ಹಿರಿಯರು ಹಾಗೂ ಆತ್ಮೀಯರು ಮಾತ್ರ ಭಾಗವಹಿಸಿದ್ದರು.

Telugu actor Daggubatti Venkatesh Daughter Hayavahini Got Married Nishanth

ಹೌದು, ವೆಂಕಟೇಶ್ ಎರಡನೇ ಪುತ್ರಿ ಮದುವೆಯಲ್ಲಿ ತೆಲುಗು ಚಿತ್ರರಂಗದ ಸ್ಟಾರ್‌ಗಳು ಹಾಜರಿ ಹಾಕಿರಲಿಲ್ಲ. ಆದರೆ, ದಗ್ಗುಬಾಟಿ ಕುಟುಂಬದ ತಾರೆಯರ ಉಪಸ್ಥಿತಿ ಇತ್ತು. ಈ ಮದುವೆಯಲ್ಲಿ ರಾಣಾ ದಗ್ಗುಬಾಟಿ, ನಾಗ ಚೈತನ್ಯ, ಅಖಿಲ್ ಅಕ್ಕಿನೇನಿ, ಅಭಿರಾಮ್ ಮದುವೆಗೆ ಬಂದಿದ್ದರು ಎನ್ನಲಾಗಿದೆ. ಆದರೆ, ಚಿತ್ರರಂಗದ ಸಾಕಷ್ಟು ತಾರೆಯರು ಯಾಕೆ ಬಂದಿಲ್ಲ ಅನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಅಂದ ಹಾಗೆ ವಿಕ್ಟರಿ ವೆಂಕಟೇಶ್‌ಗೆ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗು. ಈಗ ವೆಂಕಟೇಶ್ ಅವರ ಎರಡನೇ ಪುತ್ರಿ ಹಯವಾಹಿನಿ ಮದುವೆಯನ್ನು ಮಾಡಿದ್ದಾರೆ. ಹಯವಾಹಿನಿ ಹಾಗೂ ನಿಶಾಂತ್ ಇಬ್ಬರ ನಿಶ್ಚಿತಾರ್ಥ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಟಾಲಿವುಡ್‌ನ ಸ್ಟಾರ್ ನಟರು ಆಗಮಿಸಿದ್ದರು.

ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಅವರ ಪತ್ನಿ, ತಮಿಳು ನಟ ಕಾರ್ತಿ, ರಾಣಾ ದಗ್ಗುಬಾಟಿ, ಅಕ್ಕಿನೇನಿ ನಾಗ ಚೈತನ್ಯ ಸೇರಿದಂತೆ ಹಲವು ಸ್ಟಾರ್ ನಟರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈಗ ಮದುವೆ ಟಾಲಿವುಡ್ ತಾರೆಯರು ಬಂದಿರಲಿಲ್ಲ. ಹೀಗಾಗಿ ಅವರಿಗೆಲ್ಲ ಆಹ್ವಾನ ನೀಡಿರಲಿಲ್ಲವೇ? ಅಥವಾ ಆರತಕ್ಷತೆಗೆ ವಿಶೇಷವಾಗಿ ಆಹ್ವಾನ ನೀಡಿದ್ದಾರೆಯೇ? ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.

More from Filmibeat

English summary
Tollywood actor Venkatesh daughter Hayavahini married to Nishanth photos goes viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X