ಶಿವನ ಭಕ್ತೆ ಪವಿತ್ರಾ ಲೋಕೇಶ್‌ಗಾಗಿ ದೇವಸ್ಥಾನ ಗಿಫ್ಟ್ ಕೊಟ್ಟು ತಗಲಾಕೊಂಡ್ರಾ ನರೇಶ್?
ನರೇಶ್ ಹಾಗೂ ಪವಿತ್ರಾ ಲೋಕೇಶ್ ಮ್ಯಾಟರ್ ಬೀದಿ ರಂಪಾಟ ಆಗಿದೆ. ತೆಲುಗು ಹಾಗೂ ಕರ್ನಾಟಕದಲ್ಲಿ ಇವರಿಬ್ಬರ ವಿಷಯ ಚರ್ಚೆಯಲ್ಲಿದೆ. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಇವರಿಬ್ರರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇನ್ನೊಂದು ಕಡೆ ತೆಲುಗು ನಟ ನರೇಶ್ ತಮ್ಮಬ್ಬಿರ ನಡುವೆ ಏನೂ ಇಲ್ಲ ಎನ್ನುತ್ತಿದ್ದಾರೆ. ಆರೋಪ ಹಾಗೂ ಪ್ರತ್ಯಾರೋಪಗಳಿಂದ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳು ಸಿಗುತ್ತಲೇ ಇವೆ. ಇನ್ನೊಂದು ಕಡೆ ಮಾಧ್ಯಮವೊಂದಕ್ಕೆ ಮಾತಾಡಿರುವ ತಮ್ಮ ಹಾಗೂ ಪವಿತ್ರಾ ಲೋಕೇಶ್ ನಡುವಿನ ಸಂಬಂಧ ಇಷ್ಟೆಲ್ಲಾ ಚರ್ಚೆಯಾಗುತ್ತಿರುವುದು ಯಾಕೆ? ಎಂದು ರಿವೀಲ್ ಮಾಡಿದ್ದಾರೆ.
ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿಗೆ ಇವರಿಬ್ಬರ ಮೇಲೆ ಅನುಮಾನ ಮೂಡಿದ್ದು ಯಾಕೆ? ಪವಿತ್ರಾ ಲೋಕೇಶ್‌ಗಾಗಿ ನರೇಶ್ ಕೊಟ್ಟ ಗಿಫ್ಟ್ ಏನು? ಇದೆಲ್ಲವನ್ನೂ ಕನ್ನಡ ನ್ಯೂಸ್ ಚಾನೆಲ್‌ನಲ್ಲಿ ಸ್ವತ: ನರೇಶ್ ಬಾಯಿಬಿಟ್ಟಿದ್ದಾರೆ. ಅದರ ಮಾಹಿತಿ ಇಲ್ಲಿದೆ.

ಶಿವನ ಭಕ್ತೆ ಪವಿತ್ರಾ
ಕಳೆದ ಒಂದೆರಡು ವಾರಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಪವಿತ್ರಾ ಲೋಕೇಶ್ ಬಗ್ಗೆ ನರೇಶ್ ಒಂದು ವಿಷಯವನ್ನು ರಿವೀಲ್ ಮಾಡಿದ್ದಾರೆ. ಕನ್ನಡದ ನಟ ಪವಿತ್ರಾ ಲೋಕೇಶ್ ಅಪ್ಪಟ ಶಿವನ ಭಕ್ತೆ ಎಂದು ತೆಲುಗು ನಟ ನರೇಶ್ ರಿವೀಲ್ ಮಾಡಿದ್ದಾರೆ. ಪವಿತ್ರಾ ಲೋಕೇಶ್ ಶಿವನ ಆರಾಧನೆ ಮಾಡುತ್ತಾರೆ ಎಂದು ನರೇಶ್ ಕನ್ನಡ ನ್ಯೂಸ್ ಚಾನೆಲ್ ಪಬ್ಲಿಕ್ ಟಿವಿ ಸಂದರ್ಶನದ ವೇಳೆ ತಿಳಿಸಿದ್ದಾರೆ. ಇದರೊಂದಿಗೆ ಇಷ್ಟೆಲ್ಲಾ ಸುದ್ದಿ ಹಬ್ಬುವುದಕ್ಕೆ ಕಾರಣವೇನು ಎಂಬುದನ್ನೂ ತಿಳಿದ್ದಾರೆ.

ಗಿಫ್ಟ್ ಕೊಟ್ಟು ತಗಲಾಕೊಂಡ್ರಾ ನರೇಶ್?
"ನಾವು ಒಂದು ದೇವಸ್ಥಾನವನ್ನು ದತ್ತು ಪಡೆದೆವು. ಸುಂದರವಾದ ದೇವಸ್ಥಾನವನ್ನು ಕಟ್ಟಿದ್ದಾರೆ. ಪವಿತ್ರಾ ಲೋಕೇಶ್ ಶಿವನ ಭಕ್ತೆ. ಅವರು ತುಂಬಾ ಚೆನ್ನಾಗಿ ಬರೆಯುತ್ತಿದ್ದಾರೆ. ಅವರು ನನಗೆ ಈ ಸ್ಕ್ರಿಪ್ಟ್ ಬರೆಯುವುದಕ್ಕೆ ಸಹಾಯ ಮಾಡುತ್ತೀರಾ? ಎಂದು ಕೇಳಿದರು. ಅವರು ನಿರ್ದೇಶನ ಮಾಡುತ್ತಿದ್ದರು. ನಾನು ಸ್ಪಾನ್ಸರ್ ಮಾಡಿದ್ದೆ. ಇದು ಒಂದು ಗಿಫ್ಟ್ ಆಗಿತ್ತು. ಈ ಕಾರಣಕ್ಕೆ ನಾವು ಸ್ವಾಮೀಜಿಯನ್ನು ಭೇಟಿ ಮಾಡಿದ್ದೆವು" ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಅಸಂಬದ್ಧಗಳಿಗೆ ಕಾರಣವೇ ಇದು!
ದೇವಸ್ಥಾನವನ್ನು ಗಿಫ್ಟ್ ಕೊಟ್ಟಿದ್ದೇ ಇಷ್ಟೆಲ್ಲಾ ಊಹಾ-ಪೋಹಗಳಿಗೆ ಕಾರಣವಾಗಿದೆ ಎಂದು ನರೇಶ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಇದಕ್ಕೆ ರಮ್ಯಾ ರಘುಪತಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ. ಇದು ಕೇವಲ ತಪ್ಪು ಕಲ್ಪನೆನಾ? ರಮ್ಯಾ ಸುಮ್ಮನೆ ಆರೋಪ ಮಾಡಿದ್ದಾರಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳನ್ನು ನರೇಶ್ ಹುಟ್ಟಾಕಿದ್ದಾರೆ.

ಆಗ್ಯಾಕೆ ಗಲಾಟೆ ಮಾಡಿಲ್ಲ ರಮ್ಯಾ?
" ನನ್ನ ಜೀವನದಲ್ಲಿ ಪವಿತ್ರಾ 4 ವರ್ಷದಿಂದ ಇದ್ದಾರೆ ಅಂದುಕೊಳ್ಳಿ. ಹಾಗಿದ್ಮೇಲೆ ಆ ಸಮಯದಲ್ಲಿ ಯಾಕೆ ಏನೂ ಗಲಾಟೆ ಆಗಿಲ್ಲ. ಪವಿತ್ರಾರನ್ನು ನನ್ನ ಜೊತೆ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ನೋಡಿದ್ದಾರೆ. ನಾವು ಈ ನಾಲ್ಕು ವರ್ಷದಲ್ಲಿ 6 ಸಿನಿಮಾಗಳನ್ನು ಮಾಡಿದ್ದೇವೆ. ಅವರು ಸಿನಿಮಾ ಅಸೋಸಿಯೇಷನ್‌ನಲ್ಲಿ ಇದ್ದಾರೆ. ಅವರು ಲೀಡರ್ ಅಲ್ಲ. ನಮಗೆ ಸಪೋರ್ಟ್ ಮಾಡುತ್ತಿದ್ದಾರೆ. ಗ್ರೂಪ್‌ಗೆ ಸಪೋರ್ಟ್ ಮಾಡುತ್ತಿದ್ದಾರೆ." ಎಂದು ನರೇಶ್ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.


Click it and Unblock the Notifications











