For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ನಡುವೆ ವೈದ್ಯೆಯನ್ನು ವರಿಸಿದ ತೆಲುಗು ನಟ ನಿಖಿಲ್ ಸಿದ್ಧಾರ್ಥ್

  |

  'ಹ್ಯಾಪಿ ಡೇಸ್' ಮತ್ತು 'ಕಾರ್ತಿಕೇಯ' ಚಿತ್ರಗಳಂತಹ ಸಿನಿಮಾಗಳಿಂದ ಖ್ಯಾತರಾಗಿರುವ ತೆಲುಗು ನಟ ನಿಖಿಲ್ ಸಿದ್ಧಾರ್ಥ್ ಲಾಕ್ ಡೌನ್ ನಡುವೆ ಸರಳವಾಗಿ ವೈವಾಹಿಕ ಬದುಕಿಗೆ ಕಾಲಿರಿಸಿದರು.

  ನಿವಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ..! | Nivedhita Gowda | Chandan Shetty

  ಗುರುವಾರ ಬೆಳಿಗ್ಗೆ ಹೈದರಾಬಾದ್‌ನಲ್ಲಿನ ತಮ್ಮ ಫಾರ್ಮ್ ಹೌಸ್‌ನಲ್ಲಿ ನಡೆದ ಸಂಪ್ರದಾಯಬದ್ಧ ಸಮಾರಂಭದಲ್ಲಿ ಡಾ. ಪಲ್ಲವಿ ವರ್ಮಾ ಅವರನ್ನು ನಿಖಿಲ್ ವರಿಸಿದರು. ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರವೇ ಮದುವೆಯಲ್ಲಿ ಹಾಜರಿದ್ದು, ನೂತನ ವಧೂ ವರರನ್ನು ಹಾರೈಸಿದರು.

  ಮಗಳ ವಯಸ್ಸಿನ ಮಹಿಳೆಯ ಜತೆ ನಿರ್ಮಾಪಕನ ಎರಡನೆಯ ಮದುವೆ: ಕಾರಣ ಇದು...ಮಗಳ ವಯಸ್ಸಿನ ಮಹಿಳೆಯ ಜತೆ ನಿರ್ಮಾಪಕನ ಎರಡನೆಯ ಮದುವೆ: ಕಾರಣ ಇದು...

  ಮದುವೆಗೂ ಮುನ್ನ ನಿಖಿಲ್ ಸಿದ್ಧಾರ್ಥ ಬುಧವಾರ ಅರಿಸಿನ ಶಾಸ್ತ್ರದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದರು. ಲಾಕ್ ಡೌನ್‌ನಲ್ಲಿ ನಡೆಯುವ ಮದುವೆ ಸಮಾರಂಭಗಳಿಗೆ ಸರ್ಕಾರ ವಿಧಿಸಿರುವ ನಿಯಮಗಳಿಗೆ ಅನುಗುಣವಾಗಿ ಮದುವೆ ಕಾರ್ಯ ನಡೆಯಿತು. ಮುಂದೆ ಓದಿ...

  ಮುಂದೂಡಲಾಗಿದ್ದ ಮದುವೆ

  ಮುಂದೂಡಲಾಗಿದ್ದ ಮದುವೆ

  ವೈದ್ಯೆಯಾಗಿರುವ ಪಲ್ಲವಿ ವರ್ಮಾ ಮತ್ತು ನಿಖಿಲ್ ಸಿದ್ಧಾರ್ಥ ಅವರ ನಿಶ್ಚಿತಾರ್ಥ ಫೆಬ್ರವರಿಯಲ್ಲಿ ನಡೆದಿತ್ತು. ಏಪ್ರಿಲ್‌ನಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಆದರೆ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಮದುವೆಯನ್ನು ಮುಂದೂಡಲಾಗಿತ್ತು.

  ಫೋಟೊಗಳು ವೈರಲ್

  ಫೋಟೊಗಳು ವೈರಲ್

  ಲಾಕ್ ಡೌನ್ ಅವಧಿ ಮುಂದುವರಿಯುತ್ತಿರುವುದರಿಂದ ಪದೇ ಪದೇ ಮದುವೆ ಮುಂದೆ ಹಾಕುವುದು ಸಮಸ್ಯೆಯಾಗಿತ್ತು. ಹೀಗಾಗಿ ಈಗಲೇ ಮದುವೆ ಸಮಾರಂಭ ಆಯೋಜಿಸಲು ನಿರ್ಧರಿಸಲಾಯಿತು. ಗುರುವಾರ ನಡೆದ ಮದುವೆಯ ಫೋಟೊಗಳು ವೈರಲ್ ಆಗಿವೆ.

  ಮದುವೆಯಾಗಲಿದ್ದಾರೆ ರಾಣಾ ದಗ್ಗುಬಾಟಿ: ಯುವತಿ ಯಾರು?ಮದುವೆಯಾಗಲಿದ್ದಾರೆ ರಾಣಾ ದಗ್ಗುಬಾಟಿ: ಯುವತಿ ಯಾರು?

  ಫಾರ್ಮ್ ಹೌಸ್ ಅಲಂಕಾರ

  ಫಾರ್ಮ್ ಹೌಸ್ ಅಲಂಕಾರ

  ಹಳದಿ ಶೆರ್ವಾನಿಯಲ್ಲಿ ನಿಖಿಲ್ ಮಿಂಚಿದರೆ, ವಧು ಪಲ್ಲವಿ ವರ್ಮಾ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು. ನಿಖಿಲ್ ಮತ್ತು ಪಲ್ಲವಿ ಅವರ ಹೆಸರನ್ನು ಶಾರ್ಟ್ ಆಗಿ ನಿಕ್‌ಪಲ್ ಎಂದು ವಿನ್ಯಾಸಗೊಳಿಸಲಾಗಿತ್ತು. ಫಾರ್ಮ್ ಹೌಸ್‌ನ ಬೆಟ್ಟದ ಹಸಿರಿನ ನಡುವೆ ಅಲಂಕೃತಗೊಂಡ ಸ್ಥಳದಲ್ಲಿ ಇಬ್ಬರೂ ಫೋಟೊಗಳಿಗೆ ಪೋಸ್ ನೀಡಿದರು.

  ವೃತ್ತಿಯಿಂದ ವೈದ್ಯೆ

  ವೃತ್ತಿಯಿಂದ ವೈದ್ಯೆ

  ವೃತ್ತಿಯಿಂದ ವೈದ್ಯೆಯಾಗಿರುವ ಭೀಮಾವರಂನ ಪಲ್ಲವಿ ಮತ್ತು ನಿಖಿಲ್ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದರ ಬಗ್ಗೆ ಕಾರ್ಯಕ್ರಮವೊಂದರಲ್ಲಿ ನಿಖಿಲ್ ಹೇಳಿಕೊಂಡಿದ್ದರು. ಫೆಬ್ರವರಿಯಲ್ಲಿ ಬೀಚ್ ನಡುವೆ ಪ್ರಪೋಸ್ ಮಾಡುವ ಫೋಟೊ ಹಂಚಿಕೊಂಡು, 'ಆಕೆ ಎಸ್ ಎಂದಳು' ಎಂದು ಬರೆದುಕೊಂಡಿದ್ದರು.

  ಸರಳ ಮದುವೆ ಮೂಲಕ ಹೊಸ ಬಾಳಿಗೆ ಕಾಲಿಟ್ಟ 'ಅದ್ಧೂರಿ' ನಿರ್ದೇಶಕ ಎ.ಪಿ. ಅರ್ಜುನ್: ಫೋಟೊಗಳುಸರಳ ಮದುವೆ ಮೂಲಕ ಹೊಸ ಬಾಳಿಗೆ ಕಾಲಿಟ್ಟ 'ಅದ್ಧೂರಿ' ನಿರ್ದೇಶಕ ಎ.ಪಿ. ಅರ್ಜುನ್: ಫೋಟೊಗಳು

  ಸಿದ್ಧಾರ್ಥ್ ಸಿನಿಮಾಗಳು

  ಸಿದ್ಧಾರ್ಥ್ ಸಿನಿಮಾಗಳು

  ಆರಂಭದಲ್ಲಿ ಕೆಲವು ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದ ನಿಖಿಲ್, 'ಹ್ಯಾಪಿ ಡೇಸ್' ಚಿತ್ರದ ಮೂಲಕ ಹೆಸರು ಗಳಿಸಿದರು. ನಂತರ ಯುವಥಾ, ಅಲಸಿಂ ಅಮೃತಂ, ವೀದು ತೇದಾ, ಸ್ವಾಮಿ ರಾ ರಾ, ಕಾರ್ತಿಕೇಯ, ಸೂರ್ಯ ವರ್ಸಸ್ ಸೂರ್ಯ, ಕಿರಾಕ್ ಪಾರ್ಟಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

  ಕಾಲೆಳೆದ ಅಲ್ಲರಿ ನರೇಶ್

  ಕಾಲೆಳೆದ ಅಲ್ಲರಿ ನರೇಶ್

  ಶುಭಾಶಯಗಳು ನಿಖಿಲ್. ನಿಮ್ಮಿಬ್ಬರ ಬಗ್ಗೆ ಖುಷಿಯಾಗುತ್ತಿದೆ. 'ಸರಿ ಮನೆಗೆ ಹೊರಡುವ ಸಮಯ ಆಯ್ತು' ಎನ್ನುವ ಕ್ಲಬ್‌ಗೆ ನಿಮಗೆ ಸ್ವಾಗತ ಎಂದು ನಟ ಅಲ್ಲರಿ ನರೇಶ್, ನಿಖಿಲ್ ಅವರ ಕಾಲೆಳೆದಿದ್ದಾರೆ.

  English summary
  Happy Days and Karthikeya fame Telugu actor Nikhil Siddhartha got married to Dr Pallavi Varma in Hyderabad on Thursday morning.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X