"12 ವರ್ಷಗಳಿಂದ ನನ್ನ ಬಳಸಿಕೊಂಡು ಮೋಸ ಮಾಡಿದ್ದಾನೆ"; ವಿವಾದಕ್ಕೆ ಸಿಲುಕಿದ ತೆಲುಗು ನಟ

ಹೈದರಾಬಾದ್‌: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅದ್ಯಾಕೋ ಒಂದರ ಹಿಂದೊಂದು ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ. ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ವಿವಾದಗಳನ್ನು ನೋಡಿ ತಲೆಕೆಡಿಸಿಕೊಂಡಿದ್ದ ಸಿನಿ ಪ್ರಿಯರಿಗೆ ತೆಲುಗು ನಟನ ವಿವಾದ ಕೇಳಬೇಕಾಗಿದೆ. 12 ವರ್ಷಗಳಿಂದ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಗೆ ಮೋಸ ಮಾಡಿರುವ ಆರೋಪವನ್ನು ಆ ಯುವ ನಟ ಎದುರಿಸುತ್ತಿದ್ದಾನೆ. ಆ ನಟನೇ ರಾಜ್ ತರುಣ್.

ನಿನ್ನೆಯಿಂದಲೂ (ಜುಲೈ 5) ತೆಲುಗಿನ ಯುವ ನಟ ರಾಜ್ ತರುಣ್ ಹಾಗೂ ಲಾವಣ್ಯ ನಡುವಿನ ವಿವಾದದ ಬಗ್ಗೆ ಚರ್ಚೆಯಾಗುತ್ತಿದೆ. ರಾಜ್ ತರುಣ್ ಗೆಳತಿ ಲಾವಣ್ಯ ಪೊಲೀಸರ ವಿರುದ್ಧ ಈಗಾಗಲೇ ನಟ ಮೋಸ ಮಾಡಿದ್ದಾನೆಂದು ದೂರನ್ನು ದಾಖಲಿಸಿದ್ದಾರೆ. ದಾಂಪತ್ಯ ದ್ರೋಹ ಮಾಡಿರುವ ಆರೋಪವನ್ನು ತೆಲುಗಿನ ಯುವ ನಟ ರಾಜ್ ತರುಣ್ ಎದುರಿಸುತ್ತಿದ್ದಾರೆ. ನಿನ್ನೆಯಿಂದಲೂ (ಜುಲೈ 5) ತೆಲುಗು ಚಿತ್ರರಂಗದಲ್ಲಿ ಈ ಬಗ್ಗೆ ದೊಡ್ಡದಾಗಿ ಚರ್ಚೆಯಾಗುತ್ತಿದೆ.

Telugu actor Raj Tarun girlfriend Lavnaya accuses him of cheating what exactly happened

ರಾಜ್ ತರುಣ್ ಗೆಳತಿ ಲಾವಣ್ಯ ನೀಡಿದ ದೂರಿನಲ್ಲಿ ಇನ್ನೊಂದು ನಟಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದಾನೆ. 2012ರಿಂದ ನನ್ನೊಂದಿಗೆ ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲಿದ್ದು, ಈಗ ನಟಿಗಾಗಿ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ತೆಲುಗು ಮಾಧ್ಯಮಗಳ ಪ್ರಕಾರ ಇತ್ತೀಚೆಗೆ ನಟ ರಾಜ್ ತರುಣ್ ತನ್ನದೇ ಸಿನಿಮಾದ ನಟಿ ಮಾಲ್ವಿ ಮಲ್ಹೋತ್ರಾ ಜೊತೆ ಅಫೇರ್ ಇಟ್ಟುಕೊಂಡಿದ್ದಾರೆಂದು ಸುದ್ದಿಯಾಗಿತ್ತು.

ಹೀಗಾಗಿ ರಾಜ್ ತರುಣ್ ಗೆಳತಿ ಲಾವಣ್ಯ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ಇದರಲ್ಲಿ ಮದುವೆ ಆಗುವುದಾಗಿ ನಂಬಿಸಿ ತನಗೆ ಮೋಸ ಮಾಡಿದ್ದಾನೆಂದು ಹೇಳಿದ್ದಾರೆ. 2012ರಿಂದಲೂ ರಾಜ್ ತರುಣ್ ಹಾಗೂ ಲಾವಣ್ಯ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಅನ್ನೋದನ್ನು ಈ ಹಿಂದೆಯೇ ತೆಲುಗಿನ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಇದೇ ದೂರಿನಲ್ಲಿ ಲಾವಣ್ಯ ದೇವಸ್ಥಾನದಲ್ಲಿ ಈಗಾಗಲೇ ತಮ್ಮಿಬ್ಬರ ಮದುವೆ ಆಗಿದ್ದು, ಕಾನೂನಾತ್ಮಕವಾಗಿ ನೊಂದಣಿ ಮಾಡಿಕೊಳ್ಳು ನಟ ಹಿಂದೇಟು ಹಾಕುತ್ತಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Telugu actor Raj Tarun girlfriend Lavnaya accuses him of cheating what exactly happened

ಅಷ್ಟಕ್ಕೂ ಅನ್ಯೋನ್ಯವಾಗಿದ್ದ ಈ ಸಂಬಂಧ ಮುರಿದು ಬೀಳುವುದಕ್ಕೆ ರಾಜ್‌ ತರುಣ್ ಜೊತೆ ನಟಿಸಿದ್ದ 'ತಿರಗಬಡರಾ ಸಾಮಿ' ಮಾಲ್ವಿ ಮಲ್ಹೋತ್ರಾ ಎನ್ನಲಾಗಿದೆ. ಈ ಸಿನಿಮಾ ಚಿತ್ರೀಕರಣದ ವೇಳೆ ರಾಜ್ ತರುಣ್ ಹಾಗೂ ಮಾಳವಿ ನಡುವೆ ಅಫೇರ್ ಶುರುವಾಗಿದ್ದು, ಆಕೆ ಬಂದ ಮೇಲೆ ತನನ್ನು ದೂರ ಮಾಡಿದ್ದಾನೆ ಎಂಬ ಆರೋಪ ಮಾಡಿದ್ದಾರೆ. ಇತ್ತ ರಾಜ್ ತರುಣ್ ಕೂಡ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಾನು ಹಾಗೂ ಲಾವಣ್ಯ ಇಬ್ಬರೂ ರಿಲೇಷನ್‌ಶಿಪ್‌ನಲ್ಲಿ ಇದ್ದಿದ್ದು ನಿಜ. ಆದರೆ, 2017ರ ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕದಲ್ಲಿ ಇರಲಿಲ್ಲ. ಅಂದಿನಿಂದಲೇ ಆಕೆಯಿಂದ ದೂರವಾಗಿದ್ದೇನೆ. ಆಕೆಗೆ ಪ್ರತಿದಿನ ಡ್ರಗ್ಸ್‌ ತೆಗೆದುಕೊಳ್ಳಬೇಕು. ಈ ವೇಳೆ ಅವಳನ್ನು ನಿಯಂತ್ರಿಸುವುದಕ್ಕೆ ಕಷ್ಟ ಆಗುತ್ತಿತ್ತು. ಈ ಹಿಂದೆ ತನಗೆ ಬ್ಲ್ಯಾಕ್‌ಮೇಲ್‌ ಮಾಡಿ ಸಾಕಷ್ಟು ಹಣ ಕಿತ್ತುಕೊಂಡಿದ್ದಾಳೆ ಎಂದು ರಾಜ್ ತರುಣ್ ಆರೋಪ ಮಾಡಿದ್ದಾರೆ.

ರಾಜ್‌ ತರುಣ್ ಗಾಡ್ ಫಾದರ್ ಇಲ್ಲದೇನೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟವರು. ಒಂದೊಂದು ಹಂತಕ್ಕೆ ಏರುವಾಗಲೂ ಸಾಕಷ್ಟು ಪಟ್ಟಿದ್ದಾರೆ. ಆದ್ರೀಗ ಲಿವ್‌ ಇನ್‌ ರಿಲೇಶನ್‌ಶಿಪ್, ಮೋಸ, ಅಫೇರ್ ಅಂತ ಸುದ್ದಿಯಾಗುತ್ತಿದ್ದಾರೆ. ಆರಂಭದ ದಿನಗಳಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ರಾಜ್ ತರುಣ್ ಕೆಲವು ವರ್ಷ ಸೋಲಿನ ಸುಳಿಗೆ ಸಿಕ್ಕು ಸೈಲೆಂಟ್ ಆಗಿದ್ದರು. ಈಗ ಮತ್ತೆ ಗೆಲುವಿನ ರುಚಿ ನೋಡಿದ್ದ ಈ ನಟನೀಗ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.

More from Filmibeat

English summary
Telugu young actor Raj Tarun alleges torture from girlfriend Lavanya:
Read more about: actor controversy ವಿವಾದ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X