ವಿಜಯ್ ದೇವರಕೊಂಡ ಆಸ್ಪತ್ರೆಗೆ ದಾಖಲು; ಅಭಿಮಾನಿಗಳಲ್ಲಿ ಆತಂಕ.. ಅಂತಹದ್ದೇನಾಯ್ತು?

'ಕಿಂಗ್‌ಡಮ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದ ವಿಜಯ್ ದೇವರಕೊಂಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ರೌಡಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ವಿಜಯ್ ದೇವರಕೊಂಡ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದು ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ವರದಿಯಾಗಿದೆ.

ವಿಜಯ್ ದೇವರಕೊಂಡ ತಮ್ಮ 'ಕಿಂಗ್‌ಡಮ್‌' ಸಿನಿಮಾದ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ವಿಜಯ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಸಿನಿಮಾದ ಪ್ರಮೋಷನ್‌ನಲ್ಲಿ ಅವರು ತಾತ್ಕಾಲಿಕವಾಗಿ ಭಾಗವಹಿಸುತ್ತಿಲ್ಲ. ತೆಲುಗು ಮಾಧ್ಯಮಗಳ ಪ್ರಕಾರ, ವೈದ್ಯರು ವಿಜಯ್ ಅನ್ನು ಪರಿಶೀಲಿಸಿದ್ದು, ಇನ್ನು ಮೂರು ದಿನಗಳಲ್ಲಿ ಅಂದರೆ, ಜುಲೈ 20ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Telugu Actor Vijay Deverakonda Hospitalised with Dengue Fever Ahead of Film Release

ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ವಿಜಯ್ ದೇವರಕೊಂಡ ಸಿನಿಮಾ ಬಿಡುಗಡೆಗೆ ಕೇವಲ 10 ದಿನಗಳು ಮಾತ್ರ ಉಳಿಯುತ್ತವೆ. ಹೀಗಾಗಿ ತಮ್ಮ ಸಿನಿಮಾದ ಪ್ರಚಾರದಲ್ಲಿ ಭಾಗವಹಿಸುತ್ತಾರಾ? ಇಲ್ಲವೇ? ಅನ್ನೋದು ಅವರ ಚೇತರಿಕೆಯ ಮೇಲೆ ನಿಂತಿದೆ. ಸದ್ಯ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ.

ಇನ್ನು ವಿಜಯ್ ದೇವರಕೊಂಡು ಬ್ಯಾಕ್ ಟು ಬ್ಯಾಕ್ ಸೋಲಿನ ರುಚಿಯನ್ನು ನೋಡಿದ್ದಾರೆ. ಹೀಗಾಗಿ ರಿಲೀಸ್‌ಗೆ ರೆಡಿಯಾಗಿರುವ 'ಕಿಂಗ್‌ಡಮ್' ಸಿನಿಮಾದ ಮೇಲೆ ಹೋಪ್ ಇಟ್ಟಿಕೊಂಡಿದ್ದಾರೆ. ಗೌತಮ್ ತಿನ್ನನುರಿ ನಿರ್ದೇಶನ ಮಾಡಿರುವ ಈ ಸಿನಿಮಾ ಈಗಾಗಲೇ ವಿಜಯ್ ದೇವರಕೊಂಡ ಅಭಿಮಾನಿಗಳು ಹಾಗೂ ಸಿನಿಮಾ ಪ್ರಿಯರ ಗಮನ ಸೆಳೆದಿದೆ. ಜುಲೈ 31ರಂದು ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಚಿತ್ರತಂಡ ಪ್ರಚಾರವನ್ನು ಮುಂದುವರೆಸಿದೆ. ಈ ಮಧ್ಯೆ ನಟನ ಕುಟುಂಬ ಆಗಲಿ ವಿಜಯ್ ದೇವರಕೊಂಡ ಆರೋಗ್ಯದ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ಕೊಟ್ಟಿಲ್ಲ.

'ಜೆರ್ಸಿ' ಸಿನಿಮಾ ನಿರ್ದೇಶಿಸಿದ್ದ ಗೌತಮ್ ತಿನ್ನನುರಿ 'ಕಿಂಗ್‌ಡಮ್' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಪೋಸ್ಟರ್, ಗ್ಲಿಂಪ್ಸ್ ಹಾಗೂ ಹಾಡುಗಳು ಈಗಾಗಲೇ ಸದ್ದು ಮಾಡುತ್ತಿವೆ. ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದರಿಂದ ವಿಜಯ್ ದೇವರಕೊಂಡ ಕೊನೆ ಹಂತದ ಪ್ರಚಾರಕ್ಕೆ ಅದ್ಧೂರಿ ಪ್ಲಾನ್ ಅನ್ನು ಹಾಕಿಕೊಂಡಿದ್ದರು. ಆಷ್ಟರಲ್ಲೇ ಅವರು ಅವರು ಆರೋಗ್ಯ ತಪ್ಪಿಸಿದ್ದಾರೆ. ಹೀಗಾಗಿ ಮುಂದಿನ ಸಿನಿಮಾ ತಂಡ ಹೇಗೆಲ್ಲ ಪ್ರಚಾರ ಮಾಡುತ್ತೆ ಅನ್ನೋದು ನೋಡಬೇಕಿದೆ.

More from Filmibeat

English summary
Telugu Actor Vijay Deverakonda Hospitalised with Dengue Fever Ahead of Film Release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X