twitter
    For Quick Alerts
    ALLOW NOTIFICATIONS  
    For Daily Alerts

    'ಧಮ್ಕಿ' ಸಿನಿಮಾ ಕನ್ನಡಕ್ಕೆ ಎಂಟ್ರಿ ಕೊಡಲಿರೋ ಮಾಸ್‌ ಕಾ ದಾಸ್ ವಿಶ್ವಕ್ ಸೇನ್!

    |

    ಟಾಲಿವುಡ್‌ನಲ್ಲಿ ತನ್ನ ವಿಶಿಷ್ಠ ಸಿನಿಮಾಗಳಿಂದ ಗೆದ್ದು ಬೀಗುತ್ತಿರುವ ವಿಶ್ವಕ್ ಸೇನ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    'ಫಲಕ್‌ನುಮ ದಾಸ್' ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಭರವಸೆಯ ನಾಯಕ ಎನಿಸಿಕೊಂಡಿರೋ ವಿಶ್ವಕ್ ಸೇನ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದುವೇ ವಿಶ್ವಕ್ ಸೇನ್ ನಟಿಸುತ್ತಿರುವ ಈ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

    Telugu Actor Vishwak Sen Next Movie Dhamki Will Be Releasing In Kannada

    'ಧಮ್ಕಿ' ಸಿನಿಮಾದಲ್ಲಿ ನಾಯಕನಾಗಿ ಬಣ್ಣ ಹಚ್ಚಿರುವುದಷ್ಟೇ ಅಲ್ಲ. ನಿರ್ದೇಶಕನಾಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮನ್ಮಯೆ ಕ್ರಿಯೇಷನ್ಸ್ ಹಾಗೂ ವಿಶ್ವಕ್ ಸೇನ್ ಸಿನಿಮಾಸ್ ಬ್ಯಾನರ್‌ನಲ್ಲಿ ಕರಾಟೆ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಧಮ್ಕಿ ಚಿತ್ರಕ್ಕೆ ಪ್ರಸನ್ನ ಕುಮಾರ್ ಬೆಜವಾಡ ಕಥೆ ಮತ್ತು ಸಂಭಾಷಣೆ ಬರೆದಿದ್ದು, ವಿಶ್ವಕ್ ಸೇನ್ ಗೆ ಜೋಡಿಯಾಗಿ ನಿವೇತಾ ಪೇತುರಾಜ್ ನಟಿಸುತ್ತಿದ್ದಾರೆ.

    ಸದ್ಯ 'ಧಮ್ಕಿ' ಸಿನಿಮಾ ಕ್ಲೈಮ್ಯಾಕ್ಸ್ ಫೈಟ್ ಶೂಟಿಂಗ್ ನಡೆಯುತ್ತಿದೆ. ಇದಕ್ಕಾಗಿ RRR ಸಿನಿಮಾಗೆ ಆಕ್ಷನ್ ಸೀಕ್ವನ್ಸ್ ಅನ್ನು ಕಂಪೋಸ್ ಮಾಡಿದ್ದ ಬಲ್ಗೇರಿಯಾದ ಸಾಹಸ ನಿರ್ದೇಶಕ ಟುಡೋರ್ ಲಜಾರ್ವೋ ಕ್ಲೈಮ್ಯಾಕ್ಸ್ ಸೀಕ್ವೆನ್ಸ್ ಕಪೋಸ್ ಮಾಡುತ್ತಿದ್ದಾರೆ. ಇದೇ ನಿರ್ದೇಶಕ ಹರಿಹರ ವೀರ ಮಲ್ಲು ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಈಗ ಹೈದರಾಬಾದ್‌ನ ಸರಥಿ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದೆ.

    Telugu Actor Vishwak Sen Next Movie Dhamki Will Be Releasing In Kannada

    'ಧಮ್ಕಿ' ರೋಮ್ಯಾಂಟಿಕ್ ಕಾಮಿಡಿ, ಆಕ್ಷನ್ ಥ್ರಿಲ್ಲರ್ ಸಿನಿಮಾ. ಜೊತೆ ಕಥೆಯಲ್ಲಿ ಸಂಪೂರ್ಣ ಮನರಂಜನೆ ಇದೆ. ಅಲ್ಲದೆ ಆಕ್ಷನ್ ಪ್ರೇಮಿಗಳಿಗೆ ಈ ಸಿನಿಮಾ ಥ್ರಿಲ್ ಕೊಡುತ್ತೆ ಅಂತಿದೆ ಚಿತ್ರತಂಡ. ಈಗಾಗಲೇ ಈ ಸಿನಿಮಾ ಶೇ. 95ರಷ್ಟು ಶೂಟಿಂಗ್ ಮುಗಿಸಿದ್ದು, ಉಳಿದ ಭಾಗದ ಚಿತ್ರೀಕರಣವನ್ನೂ ಮುಗಿಸಲಿದೆ.

    'ಧಮ್ಕಿ' ಸಿನಿಮಾ ಶೂಟಿಂಗ್ ಮುಗಿಸಿ ದೀಪಾವಳಿಗೆ ಫಸ್ಟ್ ಲುಕ್ ರಿಲೀಸ್ ಮಾಡೋಕೆ ಸಜ್ಜಾಗಿದೆ. ಈ ಮೂಲಕ ಪ್ರಚಾರ ಕಾರ್ಯಕ್ಕೂ ಚಿತ್ರತಂಡ ಮುನ್ನುಡಿ ಬರೆದಿದೆ. ಈಸ ಸಿನಿಮಾದಲ್ಲಿ ರಾವ್ ರಮೇಶ್, ಹೈಪರ್ ಆದಿ, ರೋಹಿಣಿ ಮತ್ತು ಪೃಥ್ವಿರಾಜ್ ಸೇರಿದಂತೆ ಹಲವರು ಸಿನಿಮಾ ನಟಿಸುತ್ತಿದ್ದಾರೆ. ತೆಲುಗು ಸೇರಿದಂತೆ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ.

    English summary
    Telugu Actor Vishwak Sen Next Movie Dhamki Will Be Releasing In Kannada, Know More.
    Sunday, September 4, 2022, 20:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X