Naresh Pavitra Lokesh Wedding : ಕೊನೆಗೂ ಪವಿತ್ರಾ ಲೋಕೇಶ್–ನರೇಶ್ ಮದುವೆ ಆಗೇಬಿಡ್ತಾ? ವಿಡಿಯೋ ಹಂಚಿಕೊಂಡ ತೆಲುಗು ನಟ!
ಕಳೆದ ಕೆಲವು ದಿನಗಳಿಂದ ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ನಡುವಿನ ಪ್ರೇಮ್ ಕಹಾನಿ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಇವರಿಬ್ಬರ ಲವ್ ಸ್ಟೋರಿ ವಿವಾದಕ್ಕೆ ತಿರುಗಿದ್ದು ಕೂಡ ಇದೆ. ಈಗ ತೆಲುಗು ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರೂ ಮದುವೆ ಆಗಿದ್ದಾರೆ ಅನ್ನೋ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕ್ಕೆ ಎನ್ನುವಂತೆ ಸ್ವತ: ನರೇಶ್ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ನರೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಚಿಕ್ಕ ವಿಡಿಯೋವನ್ನು ಹೊರಬಿಟ್ಟಿದ್ದು, "ಒಂದು ಪವಿತ್ರ ಬಂಧ.. ಎರಡು ಮನಸ್ಸುಗಳು.. ಮೂರು ಮುಳ್ಳುಗಳು..ಏಳು ಪಾದಗಳು" ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾ ಹಾಗೂ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆಂದು ಮೂರನೇ ಪತ್ನಿ ರಮ್ಯಾ ರಘುಪತಿ ಆರೋಪ ಮಾಡಿದ್ದರು. ಅಂದಿನಿಂದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧ ಜಗತ್‌ಜಾಹೀರಾಗಿದೆ. ಆದರೆ, ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಮಾತ್ರ ವಿಚ್ಛೇದನ ನೀಡಲು ತಯಾರಿಲ್ಲ. ಹೀಗಾಗಿ ಕಳೆದ ಕೆಲವು ತಿಂಗಳುಗಳಿಂದ ಈ ಮೂವರ ನಡುವೆ ಕಿತ್ತಾಟ ನಡೆಯುತ್ತಲೇ ಇದೆ.
ಈ ವರ್ಷದ ಆರಂಭದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಒಂದು ವಿಡಿಯೋ ಮಾಡಿದ್ದರು. ಈ ವಿಡಿಯೋದಲ್ಲಿ ಇಬ್ಬರೂ ಪರಸ್ಪರ ಚುಂಬಿಸಿಕೊಂಡು ಹೊಸ ವರ್ಷಕ್ಕೆ ಶುಭಾಶಯವನ್ನು ಕೋರಿದ್ದರು. ಆಗಲೂ ಇಬ್ಬರೂ ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಈ ಮದುವೆ ವಿಡಿಯೋ ರಿಲೀಸ್ ಮಾಡಲಾಗಿದೆ.
ತೆಲುಗು ನಟ ನರೇಶ್ ಹಂಚಿಕೊಂಡ ಈ ಮದುವೆ ವಿಡಿಯೋ ಅಸಲಿ ಎಂದೇ ಕೆಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಹಿಂದೆ ನರೇಶ್ ಹಾಗೂ ಪವಿತ್ರಾ ಇಬ್ಬರೂ ತಮ್ಮ ಲೈಫ್ ಸ್ಟೋರಿಯನ್ನೇ ಸಿನಿಮಾ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆ ಸಿನಿಮಾದ ತುಣುಕನ್ನೇ ಹೊಸ ವರ್ಷಕ್ಕೆ ರಿಲೀಸ್ ಮಾಡಲಾಗುತ್ತು ಎಂದು ಗುಲ್ಲೆದ್ದಿತ್ತು. ಈಗಲೂ ಇಬ್ಬರ ಮದುವೆ ವಿಡಿಯೋ ರಿಲೀಸ್ ಆಗುತ್ತಂದೆ, ಸಿನಿಮಾದ ವಿಡಿಯೋನೇ ಇರಬಹುದು ಎಂದು ಮಾತಾಡಿಕೊಳ್ಳುತ್ತಿದ್ದಾರೆ.

ಅಸಲಿಗೆ ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇದನ ನೀಡದೇ ಮದುವೆ ಆಗುವಂತಿಲ್ಲ. ಒಂದು ವೇಳೆ ರಮ್ಯಾ ರಘುಪತಿಗೆ ಡಿವೋರ್ಸ್ ಕೊಡದೇ ಪವಿತ್ರಾ ಲೋಕೇಶ್‌ರನ್ನು ಮದುವೆ ಆಗಿದ್ದರೆ ಅದು ಕಾನೂನು ಪ್ರಕಾರ ಅಪರಾಧ. ಹೀಗಾಗಿ ಈ ವಿಡಿಯೋದಲ್ಲಿ ನರೇಶ್ ನಟಿ ಪವಿತ್ರಾ ಲೋಕೇಶ್‌ರನ್ನು ಮದುವೆ ಆಗಿದ್ದಾರೆ ಅನ್ನೋ ಬಗ್ಗೆ ಅನುಮಾವಿದೆ ಎಂದು ಚರ್ಚೆಯಾಗುತ್ತಿದೆ.
ಇನ್ನೊಂದು ಕಡೆ ರಮ್ಯಾ ರಘುಪತಿ ತನಗೆ ವಿಚ್ಛೇದನ ಬೇಡವೆಂದು ಹೇಳುತ್ತಿದ್ದಾರೆ. ನರೇಶ್ ಹಾಗೂ ರಮ್ಯಾ ರಘುಪತಿ ಪ್ರಕರಣ ಸದ್ಯಕ್ಕೀಗ ಕೌಟುಂಬಿಕ ನ್ಯಾಯಾಲಯದಲ್ಲಿದೆ. ಅಲ್ಲದೆ ಈ ವಿಡಿಯೋದಲ್ಲೂ ಸಹ, ಎರಡೂ ಕುಟುಂಬ ಆತ್ಮೀಯರು ಹಾಗೂ ಚಿತ್ರರಂಗದ ಗಣ್ಯರು ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ನಿಜಕ್ಕೂ ಇಬ್ಬರ ಮದುವೆ ಆಗೇ ಹೋಯ್ತಾ ಅನ್ನೋ ಬಗ್ಗೆ ಅನುಮಾನ ಮೂಡಿರೋದಂತೂ ಸತ್ಯ.


Click it and Unblock the Notifications











