ಪವಿತ್ರಾ ಲೋಕೇಶ್‌ಗೆ ಸಿಹಿ ಮುತ್ತು ನೀಡಿ ಮದುವೆ ವಿಷಯ ಮುಟ್ಟಿಸಿದ ತೆಲುಗು ನಟ ನರೇಶ್!
ತೆಲುಗಿನ ವಿವಾದತ್ಮಕ ಜೋಡಿ ನರೇಶ್ ಹಾಗೂ ಪವಿತ್ರಾ ಲೋಕೇಶ್. ಕಳೆದ ಕೆಲವು ದಿನಗಳಿಂದ ಇವರಿಬ್ಬರ ಪ್ರೇಮ ಪ್ರಕರಣ ಬೀದಿಗೆ ಬಂದು ರಂಪಾಟವಾಗಿತ್ತು. ತೆಲುಗು ನಟ ನರೇಶ್ ಮೂರನೇ ಪತ್ನಿ ಮಾಧ್ಯಮಗಳ ಮುಂದ ಇಬ್ಬರ ಪ್ರೇಮ ಪ್ರಕರಣವನ್ನು ವಿರೋಧಿಸಿದ್ದರು.
ನಟ ನರೇಶ್, ಮೂರನೇ ಪತ್ನಿ ರಮ್ಯಾ ರಘುಪತಿ ಹಾಗೂ ನಟಿ ಪವಿತ್ರಾ ಲೋಕೇಶ್ ನಡುವಿನ ವಿವಾದ ಆಗಾಗ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇತ್ತು. ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ರಮ್ಯಾ ರಘುಪತಿ ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು.
ಒಂದಿಷ್ಟು ದಿನ ಸೈಲೆಂಟ್ ಆಗಿದ್ದ ಈ ಜೋಡಿ, ಈಗ ದಿಢೀರನೇ ಒಂದು ವಿಡಿಯೋ ಮೂಲಕ ಪ್ರತ್ಯಕ್ಷ ಆಗಿದೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಶೀಘ್ರದಲ್ಲಿಯೇ ವಿವಾಹವಾಗುವುದಾಗಿ ಆ ವಿಡಿಯೋದಲ್ಲಿ ಘೋಷಣೆ ಮಾಡಿದ್ದಾರೆ.

ಗುಡ್ ನ್ಯೂಸ್ ಕೊಟ್ಟ ವಿವಾದಾತ್ಮಕ ಜೋಡಿ
ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಮ್ಯಾಟರ್ ಜಗತ್‌ಜಾಹೀರಾಗಿದೆ. ಇಬ್ಬರ ಸಂಬಂಧ ಇಡೀ ವಿಶ್ವಕ್ಕೆ ಮುಟ್ಟಿದೆ. ಮೂರನೇ ಪತ್ನಿ ರಮ್ಯಾ ರಘುಪತಿ ತೀವ್ರ ವಿರೋಧದ ನಡುವೆಯೂ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದೆ. ಇದೀಗ ಹೊಸ ವರ್ಷದ ಹೊಸ್ತಿಲಲ್ಲೇ ನರೇಶ್ ಹಾಗೂ ಪವಿತ್ರಾ ಲೋಕೇಶ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈ ವಿವಾದಾತ್ಮಕ ಜೋಡಿ ವಿಡಿಯೋ ಒಂದು ಹರಿಬಿಟ್ಟಿದ್ದು, ಅದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿಹಿ ಮುತ್ತು ನೀಡಿ ವಿಷಯ ಮುಟ್ಟಿಸಿದ ಜೋಡಿ
ಹೊಸ ವರ್ಷಕ್ಕೆ ಇನ್ನೊಂದು ದಿನ ಬಾಕಿ ಇದೆ. ಈ ಹೊತ್ತಲ್ಲೇ ವಿ ಕೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರೂ ಕೇಕ್ ಕಟ್ ಮಾಡಿ, ಕೇಕ್ ತಿನ್ನಿಸಿದ್ದಾರೆ. ಕೈಯಲ್ಲಿ ವೈನ್ ಹಿಡಿದು ಪರಸ್ಪರ ಚುಂಬಿಸಿಕೊಂಡು ಶೀಘ್ರವೇ ಮದುವೆ ಆಗುತ್ತಿರುವ ಬಗ್ಗೆ ಸಂದೇಶವನ್ನು ನೀಡಿದ್ದಾರೆ.

ಯಾವ ರೀತಿ ಹೇಳಿದ್ದರು ಪ್ರಯೋಜನ ಆಗಿಲ್ಲ
ಇಬ್ಬರೂ ಒಟ್ಟಿಗೆ ತಂಗಿದ್ದ ಮೈಸೂರಿನ ಹೊಟೇಲ್ ಮುಂದೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಕಾದು ನಿಂತಿದ್ದರು. ಈ ವೇಳೆ ಹೊಟೇಲ್‌ನಲ್ಲಿ ಹೈ ಡ್ರಾಮವೇ ನಡೆದು ಹೋಗಿತ್ತು. ರಮ್ಯಾ ಮಾಧ್ಯಮಗಳ ಮುಂದೆ ಗಂಭೀರ ಆರೋಪಗಳನ್ನು ಮಾಡಿದ್ದರು. "ನರೇಶ್ ಒಬ್ಬ ಹೆಣ್ಣುಬಾಕ. ಆತ ಹೆಣ್ಣುಬಾಕ ಅನ್ನುವುದು ಮದುವೆಯಾದ ಮೂರು ವರ್ಷಕ್ಕೆ ತಿಳಿದಿತ್ತು. ಒಳ್ಳೆ ಮಾತಿನಲ್ಲಿ ಹೇಳಿದ್ದು ಆಯ್ತು. ಅತ್ತು ಹೇಳಿದ್ದಾಯ್ತು. ಯಾವುದೂ ಪ್ರಯೋಜನ ಆಗಿಲ್ಲ." ಎಂದು ಪವರ್ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಕಿಡಿಕಾರಿದ್ದರು.

ಪವಿತ್ರಾ ಜೊತೆಗಿನ ಸಂಬಂಧ ಹೇಳುವ ಅಗತ್ಯವಿಲ್ಲ
ರಮ್ಯಾ ರಘುಪತಿ ವಿವಾದಾತ್ಮಕ ಜೋಡಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದರು. ಕಳೆದ ಆರು ವರ್ಷಗಳಿಂದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಆರೋಪಿಸಿದ್ದರು. ಆ ಬಳಿಕ " ನನ್ನ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಬೆಸ್ಟ್ ಫ್ರೆಂಡ್ಸ್. ನಮ್ಮಿಬ್ಬರ ಸ್ನೇಹ ಹಾಗೂ ಸಂಬಂಧದದ ಬಗ್ಗೆ ಮೂರನೇ ಪತ್ನಿ ರಮ್ಯಾ ರಘುಪತಿಗೆ ಹೇಳುವ ಅಗತ್ಯವಿಲ್ಲ." ಎಂದು ನರೇಶ್ ಆಕ್ರೋಶ ಹೊರಹಾಕಿದ್ದರು. ಈಗ ಈ ವಿಡಿಯೋ ನೋಡಿ ರಮ್ಯಾ ರಘುಪತಿ ಪ್ರತಿಕ್ರಿಯೆ ಏನು? ಅನ್ನೋದನ್ನು ಎದುರು ನೋಡಬೇಕಿದೆ.


Click it and Unblock the Notifications











