ನರೇಶ್ ₹1000 ಕೋಟಿ ಆಸ್ತಿಗೆ ವಾರಸ್ದಾರ ಯಾರು? ಮೊದಲ ಪತ್ನಿಯ ಮಗ ಕೊಟ್ಟ 50 ಪರ್ಸೆಂಟ್ ಲೆಕ್ಕವೇನು?

ತೆಲುಗು ಚಿತ್ರರಂಗದ ಲೆಜೆಂಡರಿ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ ದಿವಗಂತ ವಿಜಯ ನಿರ್ಮಲಾ. ತೆಲುಗು ಚಿತ್ರರಂಗದಲ್ಲಿ ತನ್ನದೇ ಆದ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ವಿಜಯ ನಿರ್ಮಲಾ ಮಹಿಳಾ ನಿರ್ದೇಶಕಿಯಾಗಿ ಸುಮಾರು 44 ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಿದ್ದ ವಿಜಯ ನಿರ್ಮಾಲಾ 2019ರಲ್ಲಿ ಇಹಲೋಕ ತ್ಯಜಿಸಿದ್ದರು. ಇಲ್ಲಿಂದ ಅವರ ಸಾವಿರಾರು ಕೋಟಿ ಆಸ್ತಿಗೆ ವಾರಸ್ದಾರ ಯಾರು ಅನ್ನೋ ಪ್ರಶ್ನೆ ಎದ್ದಿತ್ತು. ಪವಿತ್ರಾ ಲೋಕೇಶ್ ಜೊತೆ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿರೋ ನರೇಶ್ ಹೆಸರಲ್ಲಿ ತನ್ನೆಲ್ಲಾ ಆಸ್ತಿಯನ್ನು ಬರೆದಿಟ್ಟಿದ್ದಾರೆ ಅನ್ನೋ ಸುದ್ದಿ ಓಡಾಡಿತ್ತು.

vk-naresh-son-naveen-reaction

ಆದ್ರೀಗ ನರೇಶ್ ಮೊದಲ ಪತ್ನಿ ಮಗ ನವೀನ್ ಮುನ್ನೆಲೆಗೆ ಬಂದಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ನವೀನ್ ತನ್ನ ಅಜ್ಜಿಯ ಆಸ್ತಿಯಲ್ಲಿ ತನ್ನ ಪಾಲು ಎಷ್ಟಿದೆ ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ. ಅಲ್ಲದೆ, ಆ ಆಸ್ತಿ ಈಗ ಯಾರ ಸುಪರ್ದಿಯಲ್ಲಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೋಡುವುದಾದರೆ..

ನರೇಶ್ ಆಸ್ತಿಯ ವಾರಸ್ದಾರ ಯಾರು?

ಹಿರಿಯ ನಟಿ, ನಿರ್ದೇಶಕಿ. ನಿರ್ಮಾಪಕಿ ವಿಜಯ ನಿರ್ಮಲಾ ಸೂಪರ್‌ಸ್ಟಾರ್ ಕೃಷ್ಣರನ್ನು ವಿವಾಹವಾಗಿದ್ದರು. ವಿಜಯ್ ನಿರ್ಮಲಾ ಅಗಲಿದ ಮೂರು ವರ್ಷಗಳಲ್ಲೇ ಕೃಷ್ಣ ಕೂಡ ಕೊನೆಯುಸಿರೆಳೆದಿದ್ದರು. ಆ ಬಳಿಕ ಸಾವಿರಾರು ಕೋಟಿ ಆಸ್ತಿ ಯಾರಿಗೆ ಸೇರುತ್ತೆ? ಅನ್ನೋ ಪ್ರಶ್ನೆ ಎದ್ದಿತ್ತು. ನರೇಶ್ ಕೂಡ ತನ್ನ ತಾಯಿ ಬಿಟ್ಟು ಹೋದ ಆಸ್ತಿ ಬಗ್ಗೆ ಓಪನ್ ಆಗಿ ಮಾತಾಡಿದ್ದರು. ಆದರೆ, ಇತ್ತೀಚೆಗೆ ನರೇಶ್ ಮೊದಲ ಪತ್ನಿ ಮಗ ನವೀನ್ ಆ ಆಸ್ತಿಯ ಗುಟ್ಟನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಹಾಗೇ ಪವಿತ್ರಾ ಲೋಕೇಶ್ ಹಾಗೂ ತನ್ನ ತಂದೆಯ ಸಂಬಂಧದ ಬಗ್ಗೆನೂ ಹೇಳಿದ್ದಾರೆ.

vk-naresh-son-naveen-reaction

ಪವಿತ್ರಾ-ನರೇಶ್ ಸಂಬಂಧ ಓಪ್ಪಿದ ಮಗ

ತೆಲುಗು ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ಆಸ್ತಿಗಾಗಿ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಈ ವಿಷಯದ ಬಗ್ಗೆ ನರೇಶ್ ಮೊದಲ ಹೆಂಡ್ತಿ ಪುತ್ರ ನವೀನ್ ಪಾಸಿಟಿವ್ ಆಗಿಯೇ ಮಾತಾಡಿದ್ದಾರೆ. " ಪವಿತ್ರಾ ಲೋಕೇಶ್ ಒಳ್ಳೆಯ ವ್ಯಕ್ತಿ ಅನ್ನೋದು ಗೊತ್ತಿದೆ. ಅವರು ನನ್ನೊಂದಿಗೆ ಚೆನ್ನಾಗಿದ್ದಾರೆ. ಊಟವನ್ನು ಕಳುಹಿಸಿಕೊಡುತ್ತಾರೆ. ಅವರಿಬ್ಬರೂ ಆರಾಮಾಗಿದ್ದಾರೆ. ಅದೇ ಮುಖ್ಯ. ಮಹೇಶ್ ಬಾಬು ಮಾತಾಡುವ ಅಗತ್ಯವಿಲ್ಲ. ಉಪದೇಶ ಕೊಡುವುದಕ್ಕೆ ನಮ್ಮಪ್ಪ ಏನು ಮಗುವಲ್ಲ. ಎಲ್ಲರ ಬದುಕಲ್ಲೂ ತಪ್ಪು ಆಗುತ್ತೆ" ಎಂದು ನರೇಶ್ ಪುತ್ರ ನವೀನ್ ಹೇಳಿದ್ದಾರೆ.

"ನನ್ನ ಹೆಸರಲ್ಲೂ ಆಸ್ತಿ ಇದೆ"

ವಿಜಯ ನಿರ್ಮಲಾ ಸಾವಿರಾರು ಕೋಟಿ ಆಸ್ತಿಯನ್ನು ಸಂಪಾದನೆ ಮಾಡಿದ್ದರು. ಅದರಲ್ಲಿ ಶೇ.50ರಷ್ಟನ್ನು ನರೇಶ್ ಮೊದಲ ಪತ್ನಿ ಮಗ ನವೀನ್‌ನ ಹೆಸರಿಗೆ ವಿಜಯ ನಿರ್ಮಲಾ ಬರೆದಿದ್ದು, ಇನ್ನು ಶೇ.50ರಷ್ಟನ್ನು ನರೇಶ್ ಹೆಸರಿಗೆ ಬರೆದಿದ್ದಾರೆ ಎಂದಿದ್ದಾರೆ. "ಸದ್ಯ ಎಲ್ಲಾ ಆಸ್ತಿಯೂ ನರೇಶ್ ಹೆಸರಿನಲ್ಲಿ ಇದೆ. ಅವರೇ ಈಗ ವಾರಸ್ದಾರ. ನನಗೆ ಇಷ್ಟೊಂದು ಆಸ್ತಿಯನ್ನು ಹೇಗೆ ನೋಡಿಕೊಳ್ಳಬೇಕು ಅನ್ನೋದು ಗೊತ್ತಿಲ್ಲ. ಅದನ್ನು ಕಾಪಾಡುವುದು ದೊಡ್ಡ ಜವಾಬ್ದಾರಿ." ಎಂದು ನರೇಶ್ ಮೊದಲ ಪತ್ನಿ ಪುತ್ರ ನವೀನ್ ಹೇಳಿದ್ದಾರೆ.

"ನರೇಶ್ ಬಳಿಕ ನಾನು ರಕ್ಷಣೆ ಮಾಡುತ್ತೇನೆ"

ನರೇಶ್ ನಿವೃತ್ತಿ ಜೀವನಕ್ಕೆ ಮರಳಿದಾಗ ಈ ಆಸ್ತಿಯನ್ನು ತನಗೆ ನೋಡಿಕೊಳ್ಳುಲು ಹೇಳಿದ್ದಾರೆ ಎಂದು ನವೀನ್ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ. " ಆಸ್ತಿಯನ್ನು ಕಾಪಾಡುವುದು ಒಂದು ದೊಡ್ಡ ಜವಾಬ್ದಾರಿ. ಹಾಗಾಗಿ ಎಲ್ಲಾ ಆಸ್ತಿಯನ್ನು ಅವರ ಹೆಸರಿನಲ್ಲಿ ಇರುವುದೇ ಒಳ್ಳೆಯದೆ ಎಂದು ಕೊಂಡಿದ್ದೇನೆ. ಸದ್ಯ ಎಲ್ಲಾ ಆಸ್ತಿಯೂ ಅವರ ಹೆಸರಿನಲ್ಲೇ ಇದೆ. ನರೇಶ್ ಬಳಿಕ ಈ ಆಸ್ತಿಯನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ" ಎಂದು ನರೇಶ್ ಮೊದಲ ಪತ್ನಿ ಮಗ ನವೀನ್ ಹೇಳಿದ್ದಾರೆ.

More from Filmibeat

English summary
VK Naresh son Naveen about Vijay Nirmala properties
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X