"ನಿಮ್ಮ ಅಂದ ಸೀರೆಯಲ್ಲಿರುತ್ತೆ" ಎಂದು ವಿವಾದಕ್ಕೆ ಸಿಕ್ಕಿಕೊಂಡ ನಟ ಶಿವಾಜಿಗೆ ಅನಸೂಯ ತಿರುಗೇಟು

ತೆಲುಗಿನ ಜನಪ್ರಿಯ ನಿರೂಪಕಿ ಹಾಗೂ ನಟಿ ಅನಸೂಯಾ ಭಾರದ್ವಾಜ್ ನೇರವಾಗಿ ಮಾತಾಡುವ ನಟಿ. ಯಾವುದಾದರೂ ವಿವಾದದ ಬಗ್ಗೆ ತಿರುಗೇಟು ಕೊಡುವುದಕ್ಕೆ ಹಿಂದೆ-ಮುಂದೆ ನೋಡುವುದಿಲ್ಲ. ಇಂತಹ ನಟಿಯ ಕೈಗೆ ತೆಲುಗು ನಟ ಶಿವಾಜಿ ಸಿಕ್ಕಿಕೊಂಡಿದ್ದಾರೆ. ಇತ್ತೀಚೆಗೆ ಈ ನಟ ಮಹಿಳೆಯರಿಗೆ "ನಿಮ್ಮ ಅಂದ ಸೀರೆಯಲ್ಲಿರುತ್ತೆ?" ಎಂದು ದೊಡ್ಡದಾಗಿ ಭಾಷಣ ಮಾಡಿದ್ದರು. ಅದು ದೊಡ್ಡ ವಿವಾದಕ್ಕೆ ಸಿಕ್ಕಿಕೊಂಡಿತ್ತು.

ಶಿವಾಜಿ ಕೊಟ್ಟ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸುವಂತೆ ಮಾಧ್ಯಮವರು ನಟಿ ಅನಸೂಯಾ ಅವರಿಗೆ ಹೇಳಿದ್ದರು. ಅದನ್ನೇ ಇಟ್ಟುಕೊಂಡು ಶಿವಾಜಿ ಸಿಂಪತಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆಂದು ನಟಿ ಅನಸೂಯಾ ಆರೋಪ ಮಾಡಿದ್ದಾರೆ. ಸೀರೆಯಿಂದ ಶುರುವಾದ ಈ ವಿವಾದ ಈಗ ಅನಸೂಯಾ ತಿರುಗಿ ಬೀಳುವವರೆಗೂ ಬಂದು ನಿಂತಿದೆ.

Telugu actress Anasuya Bharadwaj slams actor Shivaji getting sympathy drama

ಅಷ್ಟಕ್ಕೂ ತೆಲುಗು ನಟ ಶಿವಾಜಿ ವಿರುದ್ಧ ಅನಸೂಯಾ ಹೀಗೆ ರೊಚ್ಚಿಗೆದ್ದಿದ್ದು ಯಾಕೆ? ಈ ಘಟನೆಯ ಹಿನ್ನಲೆಯೇನು ಅಂತ ನೋಡುವುದಾರೇ, ಶಿವಾಜಿ ನಟನೆಯ 'ದಂಡೋರ' ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಪ್ರೀ-ರಿಲೀಸ್ ಈವೆಂಟ್ ನಡೆಸಿದ್ದ ಶಿವಾಜಿ, ದಿಢೀರನೇ ನಟಿಯ ಕಾಸ್ಟ್ಯೂಮ್ ಬಗ್ಗೆ ಮಾತಾಡಿದ್ದರು. "ನಾಯಕಿಯರು ಹೀಗೆ ಕೆಟ್ಟದಾಗಿ ಬಟ್ಟೆ ಹಾಕೊಂಡು ಹೋದರೆ, ದರಿದ್ರ ಅನುಭವಿಸಬೇಕಾಗುತ್ತೆ. ನಿಮ್ಮ ಅಂದ ಸೀರೆಯಲ್ಲಿ ಅಡಗಿದೆ ಎಂದು ಹೇಳಿದ್ದರು" ಇದು ಟಾಲಿವುಡ್‌ ಮಂದಿಯ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಶಿವಾಜಿಯ ಈ ಹೇಳಿಕೆ ತಾನೇಕೆ ಪ್ರತಿಕ್ರಿಯೆ ಕೊಟ್ಟೆ ಅನ್ನೋದಕ್ಕೆ ಕ್ಲಾರಿಟ್ಟಿ ಕೊಟ್ಟಿದ್ದರು. "ನಾನು ಬಟ್ಟೆ ಮಳಿಗೆ ಉದ್ಘಾಟನೆ ಮಾಡುವುದಕ್ಕೆ ಹೋಗಿದ್ದೆ. ಆವೇಳೆ ಮಾಧ್ಯಮದವರು ಶಿವಾಜಿ ಮಾಡಿದ ಕಾಮೆಂಟ್‌ಗಳ ಕುರಿತು ಪ್ರಶ್ನೆ ಮಾಡಿದ್ದರು. ಆಗ ನನಗೆ ಏನು ಅನಿಸಿತೋ ಅದನ್ನು ಹೇಳಿದೆ. ಯಾರ ಮೇಲೂ ಉದ್ದೇಶಪೂರ್ವಕವಾಗಿ ದಾಳಿ ಮಾಡುವ ಉದ್ದೇಶ ನನಗಿರಲಿಲ್ಲ" ಎಂದು ಸ್ಪಷ್ಟಪಡಿಸಿದರು.

ಅಲ್ಲದೆ ಶಿವಾಜಿ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದರ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ. "ಶಿವಾಜಿ ಕ್ಷಮೆ ಕೇಳಲು ಮಾಡಿದ ಪತ್ರಿಕಾಗೋಷ್ಠಿ ಅವರು ಸಿಂಪತಿಯನ್ನು ಗಳಿಸುವುದಕ್ಕೆ ಮಾಡಿದ ಪ್ರೆಸ್‌ಮೀಟ್‌ನಂತಿತ್ತು. ಈ ಸಮಾಜದಲ್ಲಿ ಮಹಿಳೆಯರು ಹಾಗೂ ಪುರುಷರು ಇಬ್ಬರೂ ಸಮಾನರು. ಮಹಿಳೆಯ ಉಡುಪಿನ ಬಗ್ಗೆ ಮಾತಾಡುವುದು ಅಸಮರ್ಥತೆ ಹಾಗೂ ಅಸುರಕ್ಷತೆ ಭಾವನೆಯ ಸಂಕೇತವೆಂದು" ನಟಿ ಅನಸೂಯಾ ಹೇಳಿದ್ದಾರೆ.

ಹಾಗೇ "ಶಿವಾಜಿ ಇಂದು ಬೇಕು ಅಂತಲೇ ಅನುಕಂಪದ ಕಾರ್ಡ್ ಬಳಸುವುದಕ್ಕೆ ಪ್ರಯತ್ನಿಸಿದ್ದಾರೆ. ಅವರಿಗೆ ಈಗ ಸಹಾನುಭೂತಿಯೇ ಬೇಕಾಗಿದೆ. ಅದಕ್ಕಾಗಿ ನಾನೂ ಕೂಡ ಅದನ್ನೇ ನೀಡುತ್ತಿದ್ದೇನೆ. ನಿಮಗೆ ಇಂತಹದ್ದೇ ಬಟ್ಟೆಯನ್ನು ಧರಿಸಿ ಅಂತ ಎಂದಾದರೂ ಹೇಳಿದ್ದೇವಾ? ಯಾವುದೇ ನಾಯಕಿ ನಿಮ್ಮ ಡ್ರೆಸ್ಸಿಂಗ್ ಬಗ್ಗೆ ಕಾಮೆಂಟ್ ಮಾಡಿದ್ದಾರಾ?" ಎಂದು ನಟಿ ಅನಸೂಯಾ ಪ್ರಶ್ನೆ ಮಾಡಿದ್ದಾರೆ.

ಇಷ್ಟೇ ಅಲ್ಲದೆ "ಶಿವಾಜಿ ತುಂಬಾನೇ ಜಾಣತನದಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಒಬ್ಬ ಮಹಿಳೆಯಾಗಿ, ಗ್ಲಾಮರಸ್ ಹಾಗೂ ಸುಂದರವಾಗಿ ಕಾಣುವುದಕ್ಕೆ ಪ್ರಯತ್ನಿಸುತ್ತೇನೆ. ನನಗೆ ಇಷ್ಟವಾದ ಬಟ್ಟೆಗಳನ್ನು ಧರಿಸುತ್ತೇನೆ" ಎಂದು ಅನಸೂಯಾ ಹೇಳಿದ್ದಾರೆ. ಒಟ್ನಲ್ಲಿ ನಟ ಶಿವಾಜಿ ಸಾರ್ವಜನಿಕವಾಗಿ ಕ್ಷಮೆ ಕೇಳಿದರೂ, ಅನಸೂಯಾ ಭಾರದ್ವಾಜ್ ಕಟುವಾದ ಟೀಕೆಗಳಿಂದ ಪ್ರತಿಕ್ರಿಯೆ ನೀಡುತ್ತಲೇ ಇದ್ದಾರೆ.

More from Filmibeat

English summary
Telugu actress Anasuya Bharadwaj slams actor Shivaji getting sympathy drama.
Read more about: actress telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X