ನೆಮ್ಮದಿ ಹುಡುಕಿಕೊಂಡು ಸ್ಮಶಾನ ಹೋಗುವ ನಟಿಯೀಕೆ; ವೈದ್ಯೆಯೂ ಆಗಿರುವ ಈಕೆ ಯಾಕೆ ಹೀಗೆ?

ಸಿನಿಮಾ ಸೆಲೆಬ್ರೆಟಿಗಳು ಕೆಲವೊಮ್ಮೆ ಇಂಟ್ರೆಸ್ಟಿಂಗ್ ಅಂತ ಅನಿಸುತ್ತಾರೆ. ಅವರ ನಟನೆ, ಸ್ಟೈಲ್, ಕಾಸ್ಟ್ಯೂಮ್ ಸೆನ್ಸ್‌ಗಳನ್ನು ಹೊರತು ಪಡಿಸಿ, ವಿಚಿತ್ರವಾದ ಹ್ಯಾಬಿಟ್‌ಗಳು ಇರುತ್ತೆ. ಸಿನಿಮಾ ಶೂಟಿಂಗ್‌ಗೆ ಹೊರಡುವುದಕ್ಕೂ ಮುನ್ನ ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಅದು ಮಾಡದೇ ಹೋದರೆ, ಅವರು ಮನೆಯಿಂದ ಹೊರಡುವುದಿಲ್ಲ. ಹೀಗೆ ಸಿನಿಮಾ ಕ್ಷೇತ್ರದಲ್ಲಿರೋ ಪ್ರತಿಯೊಬ್ಬರಿಗೂ ಇಂತಹದ್ದೊಂದು ಅಭ್ಯಾಸವಿರುತ್ತೆ.

ಇನ್ನೊಬ್ಬ ನಟಿ ತಾನು ಸ್ಮಶಾನಕ್ಕೆ ಹೋಗಿ ನೆಮ್ಮದಿಯನ್ನು ಕಂಡು ಕೊಳ್ಳುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದು ಒಂದು ತರ ಅಭ್ಯಾಸ. ಬಹುತೇಕ ಮಂದಿ ಸ್ಮಶಾನಕ್ಕೆ ವಿಸಿಟ್ ಹಾಕುವುದಕ್ಕೆ ಹೆದರುತ್ತಾರೆ. ಇಂತಹದರಲ್ಲಿ ಈ ನಟಿ ಸ್ಮಶಾನಕ್ಕೆ ಹೋಗಿ ನೆಮ್ಮದಿ ಕಂಡುಕೊಳ್ಳುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ತೆಲುಗು ಮಾಧ್ಯಮಗಳು ಈಕೆಯ ಹೇಳಿಕೆಯನ್ನು ವರದಿ ಮಾಡಿವೆ.

Telugu actress Dr Kamakshi Bhaskarla admits that she finds peace by visiting the graveyard

ಅಂದ್ಹಾಗೆ, ಆಗಾಗ ಸ್ಮಶಾನಕ್ಕೆ ವಿಸಿಟ್ ಹಾಕುವ ಈ ನಟಿಯ ಹೆಸರು ಕಾಮಾಕ್ಷಿ ಭಾಸ್ಕರ್ಲಾ. ಈಕೆ ತೆಲುಗು ಚಿತ್ರರಂಗದ ಉದಯೋನ್ಮುಖ ನಟಿ. ನಿರ್ಮಾಪಕಿಯಾಗಿ, ನಟಿಯಾಗಿ, ವೈದ್ಯೆಯಾಗಿ ಯಶಸ್ಸು ಕಂಡಿರೋ ನಟಿ. ಈ ನಟಿ ಕನ್ನಡಿಗರಿಗೆ ಚಿರಪರಿಚಿತ ಅಲ್ಲದೇ ಹೋದರೂ, ಇವರ ನಟಿಸಿದ ಕೆಲವು ಸಿನಿಮಾಗಳನ್ನು ನೋಡಿರುವ ಸಾಧ್ಯತೆಯಿದೆ. ಹಾಗಿದ್ದರೆ, ವೈದ್ಯೆಯಾಗಿದ್ದುಕೊಂಡು ನೆಮ್ಮದಿ ಹುಡುಕಿಕೊಂಡು ಸ್ಮಶಾನಕ್ಕೆ ಹೋಗುವ ನಟಿ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

ಕಾಮಾಕ್ಷಿ ಭಾಸ್ಕರ್ಲಾ ಸ್ಮಶಾನದ ಬಗ್ಗೆ ಕೊಟ್ಟ ಹೇಳಿಕೆಯೇನು ಅಂತ ನೋಡುವುದಕ್ಕೆ ಮುನ್ನ ಇವರ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳಿವೆ. ಕಾಮಾಕ್ಷಿ ಭಾಸ್ಕರ್ಲಾ ಮೂಲತ: ವೈದ್ಯೆ. ಇವರು ಚೈನಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿ, ಅಲ್ಲೇ ಒಂದು ವರ್ಷ ಕೆಲಸ ಮಾಡಿ ಭಾರತಕ್ಕೆ ಬಂದಿದ್ದರು. ಇಲ್ಲಿಗೆ ಬಂದ ಬಳಿಕ ಅಪೋಲೊ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರು ನಾಟಕಗಳನ್ನು ಮಾಡುತ್ತಿದ್ದರು. ಅಲ್ಲಿಂದ ಅವರ ಸಿನಿಮಾ ಜರ್ನಿ ಶುರುವಾಗಿತ್ತು.

ಕಾಮಾಕ್ಷಿ ಭಾಸ್ಕರ್ಲಾ ನಟಿಸಿದ ಮೊದಲ ಸಿನಿಮಾ ಅಕಿಲ್ ಅಕ್ಕಿನೇನಿ ನಟಿಸಿದ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಆಯ್ತು. 2021ರಿಂದ ಚಿತ್ರರಂಗದಲ್ಲಿರುವ ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಅಲ್ಲಿಂದ 'ರೌಡಿ ಬಾಯ್ಸ್', 'ವಿರೂಪಾಕ್ಷ','ಲೈಲಾ', 'ಶೋ ಟೈಮ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

Telugu actress Dr Kamakshi Bhaskarla admits that she finds peace by visiting the graveyard

ಇತ್ತೀಚೆಗೆ ಸಂದರ್ಶನ ನೀಡಿದ ಕಾಮಾಕ್ಷಿ ತನ್ನಲ್ಲಿರುವ ವಿಚಿತ್ರ ಅಭ್ಯಾಸದ ಬಗ್ಗೆ ರಿವೀಲ್ ಮಾಡಿದ್ದಾರೆ. ತನಗೆ ಬೇಸರವಾದಾಗ, ಮನಸ್ಸಿಗೆ ದು:ಖವಾದಾಗ ಸ್ಮಶಾನಕ್ಕೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. "ನನಗೆ ಬೇಸರವಾದಾಗ, ಖಿನ್ನತೆಗೆ ಒಳಗಾದಾಗ ಸ್ಮಶಾನಕ್ಕೆ ಹೋಗುತ್ತೇನೆ. ಅಲ್ಲಿಗೆ ಹೋಗುವುದರಿಂದ ನನ್ನ ಮನಸ್ಸಿಗೆ ಶಾಂತಿ ಸಿಗುತ್ತೆ ಎಂದು ಕಾಮಾಕ್ಷಿ ಭಾಸ್ಕರ್ಲಾ ಹೇಳಿದ್ದಾರೆ. ಈಕೆ ನೀಡಿದ ಈ ಹೇಳಿಕೆ ವೈರಲ್ ಆಗುತ್ತಿದೆ.

ಕಾಮಾಕ್ಷಿ ಭಾಸ್ಕರ್ಲಾ ಕೈಯಲ್ಲಿ ಮೂರು ಪ್ರಾಜೆಕ್ಟ್‌ಗಳಿವೆ. '12ಎ ರೈಲ್ವೆ ಕಾಲೋನಿ', 'ಮಾ ಒರಿ ಪೊಲಿಮೇರಾ 3', 'ಮ್ಯಾನ್ಷನ್ ಹೌಸ್ ಮಲ್ಲೇಶ್' ಎಂಬ ಸಿನಿಮಾಗಳಿವೆ. ಇವುಗಳಲ್ಲಿ ಮೊದಲು '12ಎ ರೈಲ್ವೆ ಕಾಲೋನಿ' ರಿಲೀಸ್ ಆಗುತ್ತಿದೆ. ಅಲ್ಲರಿ ನರೇಶ್ ಈ ಸಿನಿಮಾದ ಹೀರೋ. ಇದೊಂದು ಥ್ರಿಲ್ಲರ್ ಸಿನಿಮಾ ಆಗಿದ್ದು, ಈ ಸಿನಿಮಾ ತನ್ನ ಕರಿಯರ್‌ಗೆ ಇನ್ನೊಂದು ಆಯಾಮ ಸಿಗಬಹುದೆಂದು ನಿರೀಕ್ಷೆ ಮಾಡಿದ್ದಾರೆ.

More from Filmibeat

English summary
Telugu actress Dr.Kamakshi Bhaskarla admits that she finds peace by visiting the graveyard.
Read more about: actress tollywood movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X