ನಟಿಯನ್ನು ಐಶ್ವರ್ಯಾ ಅಂತ ಕರೆದಿದ್ದಕ್ಕೆ ರಿಯಾಲಿಟಿ ಶೋ ವೇದಿಕೆ ಮೇಲೆ ಕೆನ್ನೆಗೆ ಬಾರಿಸಿದ ನಟಿ; ಮುಂದೇನಾಯ್ತು?
ಇತ್ತೀಚೆಗಂತೂ ರಿಯಾಲಿಟಿ ಶೋಗಳಲ್ಲಿ ಏನೇನೋ ನಡೀತಾನೇ ಇರುತ್ತೆ. ವೀಕ್ಷಕರಿಗೆ ಮನರಂಜನೆ ನೀಡುವ ಭರಾಟೆಯಲ್ಲಿ ಏನೇನೋ ಆಗಿಬಿಡುತ್ತೆ. ಅತಿಥಿಗಳಾಗಿ ಬಂದರು ಆಕ್ಟಿಂಗ್ ಶುರು ಮಾಡುತ್ತಾರೆ. ನಿರೂಪಕರು ಚೇಷ್ಟೆ ಮಾಡಿ ಉಗಿಸಿಕೊಳ್ಳುತ್ತಾರೆ. ಇಂತಹದ್ದೇ ಘಟನೆಗಳು ಇತ್ತೀಚೆಗಿನ ರಿಯಾಲಿಟಿ ಶೋಗಳಲ್ಲಿ ನಡೆಯುತ್ತಲೇ ಇರುತ್ತೆ. ಅದು ತಮಾಷೆಗೆ ನಡೆದಿಯೋ. ಗಂಭೀರವಾಗಿಯೂ ಆ ಘಟನೆ ನಡೆದಿದೆಯೋ ಅನ್ನೋದು ಕಾರ್ಯಕ್ರಮದ ಕೊನೆಯಲ್ಲೇ ಗೊತ್ತಾಗೋದು.
ಇಲ್ಲೊಂದು ರಿಯಾಲಿಟಿ ಶೋನಲ್ಲಿ ನಾಯಕಿಯೊಬ್ಬರು ವೇದಿಕೆ ಮೇಲೆ ಕರೆಸಿದ್ದರು. ಆಕೆಯನ್ನು ಹೊಗಳುವ ಭರಾಟೆಯಲ್ಲಿ ನಿರೂಪಕರು ಬೇರೊಂದು ಹೆಸರು ಹೇಳಿಬಿಟ್ಟಿದ್ದಾರೆ. ಅದಕ್ಕೆ ಕೋಪಗೊಂಡ ನಾಯಕಿ ನಿರೂಪಕನ ಕೆನ್ನೆಗೆ ಬಾರಿಸಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಎಲ್ಲರ ಮುಂದೆ ನಿಜಕ್ಕೂ ನಾಯಕಿ ನಿರೂಪಕನ ಕೆನ್ನೆಗೆ ಬಾರಿಸಿದರೇ? ಅಂತ ಜನರು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಅಂದ್ಹಾಗೆ ರಿಯಾಲಿಟಿ ಶೋ ವೇದಿಕೆ ಮೇಲೆ ನಿರೂಪಕನ ಕೆನ್ನೆಗೆ ಬಾರಿಸಿದ್ದು ತೆಲುಗಿನ ಯುವ ನಟಿ ಫರಿಯಾ ಅಬ್ಧುಲ್ಲಾ. ಇನ್ನು ಏಟು ತಿಂದವರು ರಿಯಾಲಿಟಿ ಶೋಗಳ ಜನಪ್ರಿಯ ನಿರೂಪಕ ಸುಡಿಗಾಲಿ ಸುಧೀರ್. ಅಷ್ಟಕ್ಕೂ ಇವರಿಬ್ಬರ ನಡುವೆ ಅಂತಹದ್ದೇನು ನಡೀತು? ಏನಿದು ಘಟನೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ತೆಲುಗು ಚಿತ್ರರಂಗದ ಯುವ ನಟಿ ಫರಿಯಾ ಅಬ್ದುಲ್ಲಾ. ತಮ್ಮ ಚೊಚ್ಚಲ ಸಿನಿಮಾದಿಂದಲೇ ತೆಲುಗು ಪ್ರೇಕ್ಷಕರ ಮನಗೆದ್ದಿದ್ದಾರೆ. ಇವರು ನಟಿಸಿದ 'ಜಾತಿರತ್ನಲು' ಸಿನಿಮಾ ಟಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಈ ಸಿನಿಮಾ ರಿಲೀಸ್ ಆದಲ್ಲಿಂದ ತೆಲುಗು ಮಂದಿ ಇವರನ್ನು 'ಕ್ರೇಜಿ ಹೀರೋಯಿನ್' ಎಂದು ಕರೆಯುತ್ತಾರೆ. ಇದೇ ನಟಿ ತೆಲುಗಿನ 'ಸರಿಗಮಪ ಲಿಟಲ್ ಚಾಂಪ್' ರಿಯಾಲಿಟಿ ಶೋಗೆ ಅತಿಥಿಯಾಗಿ ಆಗಮಿಸಿದ್ದರು.
ಸುಡುಗಾಲಿ ಸುಧೀರ್ 'ಸರಿಗಮಪ ಲಿಟಲ್ ಚಾಂಪಿಯನ್ಸ್' ಶೋಗೆ ನಿರೂಪಕರಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಫರಿಯಾ ಅಬ್ದುಲ್ಲಾರನ್ನು ಸುಧೀರ ಸ್ವಾಗತ ಮಾಡಿದ್ದರು. ಸುಧೀರ್ "ಚಿಟ್ಟಿ ನಾ ಬುಲ್ ಬುಲ್ ಚಿಟ್ಟಿ" ಎಂಬ ಹಾಡಿಗೆ ಫರಿಯಾ ಅಬ್ದುಲ್ಲಾ ಜೊತೆ ಹೆಜ್ಜೆ ಹಾಕಿದರು. ಆ ಮೂಲಕ ಅವರನ್ನು ವೇದಿಕೆಗೆ ಸ್ವಾಗತಿಸಲಾಯ್ತು. ಈ ಖುಷಿಯಲ್ಲಿ ನಟಿಸಿಗೆ ಮೆಗಾಸ್ಟಾರ್ ಚಿರಂಜೀವಿ ನಟಿಸಿದ 'ಶಂಕರ್ ದಾದಾ ಎಂಬಿಬಿಎಸ್' ಸಿನಿಮಾದಲ್ಲಿರುವ ಡೈಲಾಗ್ ಅನ್ನು ಮಾರ್ಪಾಡು ಮಾಡುಕೊಂಡು "ನಮ್ಮ ಸರಿಗಮಪಕ್ಕೆ ಐಶ್ವರ್ಯ ಬಂದಿದೆ" ಎಂಬ ಹೇಳಿಬಿಟ್ಟರು.

ಸುಡುಗಾಲಿ ಸುಧೀರ್ ಹೀಗೆ ಹೇಳುತ್ತಿದ್ದಂತೆ ಫರಿಯಾ ನಿರೂಪಕನಿಗೆ ಒಂದು ಏಟು ಕೊಟ್ಟೇಬಿಟ್ಟರು. ಆ ಕೂಡಲೇ ಸುಧೀರ್ "ನಾನು ಇವರು ಚೆನ್ನಾಗಿಯೇ ಹೊಗಳಿದ್ದೆ. ಆದರೂ ನನಗೆ ಯಾಕೆ ಹೊಡೆದರು?" ಎಂದು ಪ್ರಶ್ನೆ ಮಾಡಿದ್ದರು. ಇಲ್ಲಿವರೆಗೂ ನಿಜಕ್ಕೂ ಹೊಡೆದಿರಬೇಕು ಎಂದುಕೊಂಡಿದ್ದರು. ಸುಧೀರ್ ಕೂಡಲೇ ಅತಿಥಿಗಳಾಗಿ ಬಂದಿದ್ದ ನಿರ್ದೇಶಕ ಅನಿಲ್ ರವಿಪುಡಿ ಅವರನ್ನು ಕೇಳಿದರು. ಅದಕ್ಕೆ ನಿರ್ದೇಶಕ ಅನಿಲ್ ಪ್ರತಿಕ್ರಿಯೆ ಹೀಗಿತ್ತು. "ಈ ಕಾರ್ಯಕ್ರಮಕ್ಕೆ ಫರಿಯಾ ಬಂದರೆ, ಐಶ್ವರ್ಯ ಬಂದಿದ್ದಾಳೆ ಅಂತ ಹೇಳಿದರೆ ಹೊಡೆಯದೆ ಇನ್ನೇನು ಮಾಡಬೇಕು?" ಎಂದು ತಮಾಷೆಯಾಗಿ ಉತ್ತರ ಕೊಟ್ಟಿದ್ದಾರೆ. ಆ ಬಳಿಕ ಕೆಲ ನೆಟ್ಟಿಗರು ಸಮಾಧಾನಗೊಂಡಿದ್ದಾರೆ.
ಈ ತಮಾಷೆ ಇಲ್ಲಿ ನಿಂತಿಲ್ಲ. ವೇದಿಕೆ ಮೇಲಿನ ಪರಿಸ್ಥಿತಿಯನ್ನು ತಿಳಿಗೊಳಿಸುವುದಕ್ಕೆ " ನಿಮ್ಮ ಸಿನಿಮಾ ನೋಡಿ ನನಗೆ ಹುಚ್ಚು ಹಿಡಿದಿದೆ ಗೊತ್ತಾ?" ಎಂದು ಕೇಳಿದರೆ, ಫರಿಯಾ ಅದಕ್ಕೂ ತಮಾಷೆಯಾಗಿ ತಿರುಗೇಟು ಕೊಟ್ಟಿದ್ದಾರೆ. "ನಿಮ್ಮ ಸಿನಿಮಾಗಳನ್ನು ನೋಡಿ ನನಗೆ ನಿದ್ರೆ ಬಂತು" ಎಂದು ತಮಾಷೆ ಮಾಡಿದ್ದಾರೆ. ಸರಿಗಮಪ ಲಿಟಲ್ ಚಾಂಪ್ಸ್‌ನ 4ನೇ ಸಂಚಿಕೆಯ ಪ್ರೋಮೋದಲ್ಲಿರುವ ಕಂಟೆಂಟ್ ಇದು. ತೆಲುಗು ಸಿಂಗಿಂಗ್ ರಿಯಾಲಿಟಿ ಶೋ ತಮ್ಮ ವೀಕ್ಷಕರಿಗೆ ಹೀಗೆ ಚಮಕ್ ಕೊಟ್ಟಿದೆ. ಸದ್ಯ ಈ ಪ್ರೋಮೋ ವೀಕ್ಷಕರ ವೀಕೆಂಡ್ ಸೆಳೆಯುವಲ್ಲಿ ಯಶಸ್ವಿಯಾಗಿದೆ.


Click it and Unblock the Notifications











