"ಮಹಿಳೆಯರು ಚಿನ್ನಕ್ಕಿಂತ ನೀಲಿ ಡ್ರಮ್‌ಗಳನ್ನು ಖರೀದಿ ಮಾಡ್ತಿದ್ದಾರೆ"; ಶಾಕಿಂಗ್ ಹೇಳಿಕೆ ಕೊಟ್ಟಿದ್ದೇಕೆ ಈ ನಟಿ?

'ಬ್ಲೂ ಡ್ರಮ್' ಪ್ರಕರಣ ದೇಶದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಒಂದು ಪ್ರಕರಣ ಬೆಳೆಕಿಗೆ ಬರುತ್ತಿದ್ದಂತೆ ಅದರ ಹಿಂದೇನೆ ಇನ್ನು ಕೆಲವು ಇಂತಹದ್ದೇ ಘಟನೆಗಳು ಬೆಳಕಿಗೆ ಬಂದಿದ್ದು ಇದೆ. 'ಬ್ಲೂ ಡ್ರಮ್' ಪ್ರಕರಣದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದವು. ಇನ್ನು ಕೆಲವರು ಟ್ರೋಲ್ ಮಾಡಿದ್ದೂ ಇದೆ. ರೀಲ್ಸ್ ಮಾಡಿ ಎಂಜಾಯ್ ಮಾಡಿದ್ದೂ ಇತ್ತು.

'ಬ್ಲೂ ಡ್ರಮ್' ಪ್ರಕರಣದ ಗಂಭೀರತೆಯನ್ನು ಹಗರವಾಗಿ ತೆಗೆದುಕೊಂಡಿದ್ದೂ ಕೂಡ ಇದೆ. ಇದೇ 'ಬ್ಲೂ ಡ್ರಮ್' ಬಗ್ಗೆ ತೆಲುಗಿನ ನಟಿಯೊಬ್ಬರು ಶಾಕಿಂಗ್ ಕಾಮೆಂಟ್ ಅನ್ನು ಮಾಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ರೇವ್ ಪಾರ್ಟಿಯ ಪ್ರಕರಣದಲ್ಲಿ ನಟಿ ಹೇಮಾ ಸಿಕ್ಕಿ ಬಿದ್ದಿದ್ದರು. ಆ ವೇಳೆ ಇವರು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇದೇ ನಟಿಯೀಗ 'ಬ್ಲೂ ಡ್ರಮ್' ಬಗ್ಗೆ ಮಾತಾಡಿದ್ದಾರೆ. ಅದು ತೆಲುಗು ರಾಜ್ಯಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Telugu Actress Hema says now a days women more interested in buying drums rather than jewels

ಹೇಮಾ ಅವರು ತೆಲುಗು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದಾರೆ. ಅಲ್ಲದೇ ಆಗಾಗ ಪೋಷಕ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ತಾಯಿ, ಅಕ್ಕ ಹೀಗೆ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ. ತಮ್ಮ ನೇರ ನುಡಿಗಳಿಗೆ ಫೇಮಸ್ ಆಗಿರುವ ಹೇಮಾ ಆಗಾಗ ವಿವಾದಕ್ಕೆ ಸಿಕ್ಕಿಕೊಂಡಿದ್ದೂ ಇದೆ. ಇದೇ ಜನಪ್ರಿಯತೆಯನ್ನು ಇಟ್ಟುಕೊಂಡು ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು.

ತೆಲುಗು ನಟಿ ಹೇಮಾ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪದ ಮೇಲೆ ಕೇಸ್ ದಾಖಲಾಗಿತ್ತು. ಬಳಕ ನ್ಯಾಯಾಲಯ ಅವರಿಗೆ ಕ್ಲೀಸ್ ಚಿಟ್ ನೀಡಿದೆ. ಇತ್ತೀಚೆಗೆ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಗಿದ್ದರಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆಯೇ.

ಬಹಳ ದಿನಗಳ ಬಳಿಕ ನಟಿ ಹೇಮಾ 'ಲೇಚಿದಿ ಮಹಿಳಾ ಲೋಕಂ' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅನನ್ಯ ನಾಗಳ್ಳ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅನನ್ಯ ನಾಗಳ್ಳ ಅವರಿಗೆ ಶ್ರೀರಾಮ ಚಂದ್ರ ಜೋಡಿಯಾಗಿದ್ದು, ಶ್ರದ್ಧಾ ದಾಸ್, ಮಂಚು ಲಕ್ಷ್ಮೀ, ಹರಿತೇಜ, ಹರ್ಷವರ್ಧನ್, ಸುಪ್ರಿತಾ, ಭದ್ರಂ, ಜೆಮಿನಿ ಅಶೋಕ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾವನ್ನು ಅರ್ಜುನ್-ಕಾರ್ತಿಕ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ಮಾರ್ಚ್ 26 ರಂದು ಬಿಡುಗಡೆಯಾಗಲಿದ್ದು, ನಟಿ ಹೇಮಾ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

Telugu Actress Hema says now a days women more interested in buying drums rather than jewels

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ 'ಲೇಚಿದಿ ಮಹಿಳಾ ಲೋಕಂ' ಸಿನಿಮಾದ ಟ್ರೈಲರ್ ಲಾಂಚ್ ಸಮಾರಂಭದಲ್ಲಿ ನಟಿ ಹೇಮಾ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. "ಬಹಳ ದಿನಗಳ ಬಳಿಕ ಪ್ರಸಾದ್ ಲ್ಯಾಬ್ಸ್‌ಗೆ ಕಾಲಿಡುತ್ತಿದ್ದೇನೆ. ನಿಮ್ಮೆಲ್ಲರ ನಡುವೆ ನಡೆದು ಬರುತ್ತಿರುವ ಈ ಭಾವನೆ ತುಂಬಾ ಚೆನ್ನಾಗಿದೆ. ಹಿರಿಯ ಮಾಧ್ಯಮ ಮಿತ್ರರನ್ನು ಭೇಟಿಯಾಗಿ ಮಾತನಾಡಿದ್ದು, ತುಂಬಾ ಸಂತೋಷವಾಗಿದೆ. ನೀವು ಟ್ರೈಲರ್ ನೋಡಿದಿರಿ ಅಲ್ಲವೇ? ಚೆನ್ನಾಗಿದೆ ಅಲ್ಲವೇ? ಒಂದು ಕೋತಿ ಇದ್ದರೆ ಇಡೀ ಕಾಡನ್ನು ಹಾಳು ಮಾಡುತ್ತದೆ. ಇಂತಹ ಇಷ್ಟೊಂದು ಕೋತಿಗಳಿದ್ದರೆ ಏನಾಗುತ್ತದೆ? ಸಿನಿಮಾ ತುಂಬಾ ಮನರಂಜನಾತ್ಮಕವಾಗಿದೆ" ಎಂದು ಹೇಮಾ ಹೇಳಿದರು.

ಸಿನಿಮಾ ಬಗ್ಗೆ ಪ್ರಚಾರ ಮಾಡುವ ವೇಳೆ 'ಬ್ಲೂ ಡ್ರಮ್' ಬಗ್ಗೆ ಮಾತಾಡಿದ್ದಾರೆ. "ಇತ್ತೀಚೆಗೆ ಬಂಗಾರಕ್ಕಿಂತ ಬ್ಲೂ ಡ್ರಮ್‌ಗಳ ಬೆಲೆ ಹೆಚ್ಚಾಗಿದೆ ಅನ್ನೋ ಸುದ್ದಿಯಿದೆ. ಮಹಿಳೆಯರಿಗೆ ಚಿನ್ನವೆಂದರೆ ಎಷ್ಟು ಇಷ್ಟನೋ, ಅದನ್ನೂ ಬಿಟ್ಟು ಬ್ಲೂ ಡ್ರಮ್‌ಗಳನ್ನು ಖರೀದಿಸುತ್ತಿದ್ದಾರೆ. ಅದನ್ನು ಏಕೆ ಖರೀದಿಸುತ್ತಿದ್ದಾರೆ? ಅದೇನಕ್ಕೆ ಖರೀದಿ ಮಾಡುತ್ತಿದ್ದಾರೆ ಅನ್ನೋದನ್ನು ನೀವು ತಿಳಿದುಕೊಳ್ಳಬೇಕಾದರೆ ಮಾರ್ಚ್ 26 ರಂದು ಥಿಯೇಟರ್‌ಗಳಿಗೆ ಬನ್ನಿ" ಎಂದು ಹೇಮಾ ಸಿನಿಮಾ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಸದ್ಯ ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

More from Filmibeat

English summary
Telugu Actress Hema says now a days women more interested in buying drums rather than jewels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X