ಈ ನಾಯಕಿಯ ಪತಿ 9 ಮಹಿಳೆಯರೊಂದಿಗೆ ಅಫೇರ್ ಇಟ್ಕೊಂಡಿದ್ದ.. 9ನೇಯವರು ಐಎಎಸ್ ಅಧಿಕಾರಿ
ಸಿನಿಮಾ ಇಂಡಸ್ಟ್ರೀ ಎಷ್ಟು ಹೆಸರು, ಹಣ ಕೊಡುತ್ತೋ ಅಷ್ಟೇ ಮಾನಸಿಕ ಯಾತನೆಯನ್ನೂ ನೀಡುತ್ತೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅದೆಷ್ಟೋ ಕಲಾವಿದರು ತಮ್ಮ ವೈಯಕ್ತಿಕ ಜೀವನವನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ ಉದಾಹರಣೆಗಳು ಸಾಕಷ್ಟು ಇವೆ. ಚಿತ್ರರಂಗದಲ್ಲಿ ಇರುವ ಅದೆಷ್ಟೋ ಕಲಾವಿದರ ಬಾಳು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಗಳು ಇವೆ. ಕೆಲವರು ಹೊರಗಿನ ಪ್ರಪಂಚಕ್ಕೆ ಹೇಳಿಕೊಳ್ಳದೆ ಹೋಗಬಹುದು.
1990ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿದ ನಟಿಯೊಬ್ಬರ ಬಾಳು ಸಂಕಷ್ಟಕ್ಕೆ ಸಿಲುಕಿತ್ತು. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆ ಸೇರಿದಂತೆ ಸುಮಾರು 120ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ನಟಿ. ವೃತ್ತಿ ಬದುಕಿನಲ್ಲಿ ಗೆದ್ದಿದ್ದ ನಟಿಯ ವೈವಾಹಿಕ ಜೀವನ ನರಕದಂತೆ ಇತ್ತು. ಆ ನಟಿ ಮತ್ಯಾರೂ ಅಲ್ಲ ಹಿರಿಯ ನಟಿ ಪೂಜಿತಾ. ತಮ್ಮ ವೈವಾಹಿಕ ಬದುಕಿನ ಕರಾಳ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಟಿ ಪೂಜಿತಾ ಮದುವೆ ಬಳಿಕ ತಮ್ಮ ಬದುಕಿನಲ್ಲಿ ಏನಾಯ್ತು? ತನ್ನ ಪತಿಯ ಕರಾಳ ಮುಖ ಹೇಗಿತ್ತು? ಅನ್ನೋದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಿನಿಮಾಗಳಲ್ಲಿ ಹೆಸರು, ಹಣ ಗಳಿಸಿದರೂ ಮದುವೆ ಬಳಿಕ ಬದುಕು ನರಕ ಆಗಿತ್ತು. ಪತಿ ಈ ನಟಿಯನ್ನು ಮನೆಯೊಳಗೆ ಕೂಡಿ ಬೀಗ ಹಾಕುತ್ತಿದ್ದ ಸನ್ನಿವೇಶಗಳನ್ನು ನೆನಪಿಸಿಕೊಂಡಿದ್ದಾರೆ. ಅದು ಎಂತಹವರಿಗೂ ಅಯ್ಯೋ ಅನಿಸದೆ ಇರೋದಿಲ್ಲ.
ತೆಲುಗಿನ ಈ ಹಿರಿಯ ನಟಿ ಪೂಜಿತಾ ಅವರ ಪತಿ ಬಾಲ್ಯದಿಂದಲೇ ಮದ್ಯ ವ್ಯಸನಿಯಾಗಿದ್ದರು. ಸಿನಿಮಾ ಎಂಟ್ರಿ ಕೊಟ್ಟ ಬಳಿಕ ಕೆಟ್ಟ ಸ್ನೇಹಿತರ ಗುಂಪು ಸೇರಿದ್ದರು. ದುಶ್ಚಟಗಳನ್ನು ರೂಢಿಸಿಕೊಂಡರು. ಹೀಗಾಗಿ ತನಗೆ ತುಂಬಾನೇ ಹಿಂಸೆ ನೀಡಿದರು ಎಂದು ಪೂಜಿತಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಪೂಜಿತಾರನ್ನು ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕುತ್ತಿದ್ದರಂತೆ. ಇದನ್ನು ನೋಡಿ ಅಕ್ಕಪಕ್ಕದ ಮನೆಯವರು ಅವರ ತಂದೆ-ತಾಯಿಗೆ ಮಾಹಿತಿ ನೀಡಿದ್ದರು. ಈಕೆಯ ತಂದೆ ಒಮ್ಮೆ ಮನೆಗೆ ವಿಚಾರಿಸಲು ಬಂದಾಗ ಅವರನ್ನು ಹೊರ ದಬ್ಬಿದ್ದರು ಎಂದು ಹೇಳಿಕೊಂಡಿದ್ದಾರೆ.

ಇದಕ್ಕಿಂತ ಆಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಮದುವೆ ಬಳಿಕ ಇವರ ಪತಿ ಫೇಸ್‌ಬುಕ್ ಖಾತೆಯನ್ನು ಬಳಸಿಕೊಂಡು ಬರೋಬ್ಬರಿ 9 ತರುಣಿಯರನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದರಂತೆ. ಮನೆಯೊಳಗೆ ತನ್ನನ್ನು ಲಾಕ್ ಮಾಡಿ ಆ 9 ಮಂದಿ ತರುಣಿಯರೊಂದಿಗೆ ಚಾಟ್ ಮಾಡುತ್ತಿದ್ದರು ಎಂದು ನಟಿ ಪೂಜಿತಾ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಹೀಗಿದ್ದರೂ ಅಪಘಾತದಲ್ಲಿ ಗಂಭೀರ ಗಾಯ ಗೊಂಡಾಗ ಮಾನವೀಯತೆ ದೃಷ್ಠಿಯಿಂದ ಆರೈಕೆ ಮಾಡಿದರೂ, ಕೃತಜ್ಞತೆ ಬದಲು ನಿಂದಿಸುತ್ತಿದ್ದರು ಎಂದು ಬೇಸರ ಹೊರ ಹಾಕಿದ್ದಾರೆ.
ಇನ್ನೊಂದು ಆಘಾತಕಾರಿ ಸಂಗತಿ ಅಂದರೆ, ಪತಿ ನಂಟು ಇಟ್ಟುಕೊಂಡಿದ್ದ ಮಹಿಳೆಯರಲ್ಲಿ 9ನೆಯವರು ಐಎಎಸ್ ಅಧಿಕಾರಿಯಾಗಿದ್ದರು. ಈ ವಿಷಯ ತಿಳಿದು ಅವರ ಹೆತ್ತವರು ನಟಿ ಪೂಜಿತಾ ಬಳಿ ಬಂದು ಮನವಿ ಮಾಡಿಕೊಂಡಿದ್ದರು. ಮೊದಲ ಪತ್ನಿ ನೀನಾಗಿದ್ದರಿಂದ ಈ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದರೆ, ಇದು ನಿಲ್ಲುತ್ತೆ ಎಂದಿದ್ದರಂತೆ. ಆ ಐಎಎಸ್ ಅಧಿಕಾರಿಗೆ ಅದಾಗಲೇ 28 ವರ್ಷದ ಮಗನಿದ್ದ ಅನ್ನೋ ಅಚ್ಚರಿಯ ಸಂಗತಿ. ಆಗ ನಟಿ ಪೂಜಿತಾ 'ಶೀ ಟೀಮ್'ಗೆ ಕರೆ ಮಾಡಿ ಮಾಹಿತಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಶೀ ಟೀಮ್ ಬಂದು ಮದುವೆ ಮಂಟಪದಲ್ಲಿ ದಾಖಲೆ ಪತ್ರಗಳನ್ನು ಹರಿದು ಹಾಕಿದ್ದರು. ಆದರೂ, ಮೂರು ದಿನಗಳ ಬಳಿಕ ಐಪಿಎಸ್ ಅಧಿಕಾರಿಯೊಬ್ಬರ ಸಮ್ಮುಖದಲ್ಲಿ ಮದುವೆ ನಡೀತು ಎಂದು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications