"ಈ ತೆಲುಗು ನಟನಿಂದ ನನ್ನ ಜೀವನವೇ ಸರ್ವನಾಶವಾಯ್ತು.. ಅಮ್ಮನಿಗೆ ಹೃದಯಾಘಾತವಾಯ್ತು"-ನಟಿ ಗಂಭೀರ ಆರೋಪ

ನಟ ಪೋಸಾನಿ ಕೃಷ್ಣ ಮುರಳಿ ವಿರುದ್ಧ ನಟಿ ಪೂನಮ್ ಕೌರ್ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಅವರ ಪತ್ರಿಕಾಗೋಷ್ಠಿಯಿಂದಲೇ ತಮ್ಮ ಜೀವನ ನಾಶವಾಗಿ, ಮದುವೆ ನಿಂರು ಹೋಯ್ತು. ತಾಯಿಯ ಆರೋಗ್ಯ ಹದಗೆಟ್ಟಿರುವುದಕ್ಕೂ ಅವರೇ ಕಾರಣವೆಂದು ನಟಿ ಪೂನಂ ಕೌರ್ ಭಾವುಕರಾಗಿ ನುಡಿದಿದ್ದಾರೆ. ತಮ್ಮ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಿರುವುದಾಗಿ ಅಸಹಾಯಕರಾಗಿ ನುಡಿದಿದ್ದಾರೆ.

ಸಿಗ್ನೇಚರ್ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ವ್ಯಕ್ತಿಗಳು ತಮ್ಮ ಜೀವನದೊಂದಿಗೆ ಹೇಗೆ ಆಟವಾಡಿದರು ಅನ್ನೋದನ್ನು ಮನನೊಂದು ವಿವರಿಸಿದ್ದಾರೆ. ಅದರಲ್ಲೂ ತಮಗೆ ಅನ್ಯಾಯ ಮಾಡಿದವರ ವಿರುದ್ಧ ಹತ್ತು ಹಲವು ಆರೋಪಗಳನ್ನು ನಟಿ ಪೂನಂ ಕೌರ್ ಮಾಡುತ್ತಿದ್ದಾರೆ.

Telugu Actress Poonam Kaur gave controversial statement that Posani Krishna Murali Spoiled My Life

ಪತ್ರಕರ್ತೆಯೊಂದು ಪೂನಂ ಕೌರ್ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. "ಸಿನಿಮಾ ಕ್ಷೇತ್ರದ ಹಿರಿಯ ವ್ಯಕ್ತಿಯೊಬ್ಬರು ನನಗೆ ಅನ್ಯಾಯ ಮಾಡಿದರು. ಅವರಿಂದ ಹಣ ಪಡೆದು ರಾಜಿ ಮಾಡಿಕೊಂಡೆ ಎಂದು ಮಾಧ್ಯಮಗಳು ಸುಳ್ಳು ವರದಿ ಮಾಡಿದವು. ಇದರಿಂದ ನನ್ನ ತಾಯಿಗೆ ಅವಮಾನ ಆಯ್ತು. ಗುರುದ್ವಾರದಲ್ಲಿ ಅವರಿಗೆ ಮಗಳನ್ನು ಹಣಕ್ಕಾಗಿ ಮಾರಿದ್ದೀರಾ? ಎಂದು ಪ್ರಶ್ನೆ ಮಾಡಿದರು. ನಾನು ಯಾರಿಂದಲೂ ಹಣ ಪಡೆದಿರಲಿಲ್ಲ. ನನ್ನ ಸಂಬಂಧಿಕರೂ ಕೂಡ ಇದನ್ನೇ ನಂಬಿದರು" ಎಂದು ಪೂನಂ ಕೌರ್ ಹೇಳಿದ್ದಾರೆ.

ಈ ಸಂದರ್ಶನದಲ್ಲಿ ತನ್ನ ಬದುಕಿನ ಕಷ್ಟದ ದಿನಗಳನ್ನು ತೆರೆದಿಟ್ಟಿದ್ದಾರೆ. ಹಾಗೂ ಪೊಸಾನಿ ಕೃಷ್ಣ ಮುರಳಿ ಪತ್ರಿಕಾಗೋಷ್ಠಿ ತನ್ನ ಬದುಕನ್ನು ಹೇಗೆ ನಾಶ ಪಡಿಸಿತು ಅನ್ನೋದು ಹೇಳಿಕೊಂಡಿದ್ದಾರೆ. "ನಿರ್ದೇಶಕ ದಾಸರಿ ನಾರಾಯಣ ರಾವ್ ಜೀವಂತವಾಗಿದ್ದರೆ, ನನಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ನನ್ನ ಜೀವನವನ್ನು ನಾಶ ಮಾಡುವುದಕ್ಕೆ ಸುಮಾರು ₹15 ಕೋಟಿ ಖರ್ಚು ಮಾಡಲಾಯಿತು. ನನ್ನ ಅನಾರೋಗ್ಯದಿಂದ ಸಿನಿಮಾ ಹಾಗೂ ಕಿರುತೆರೆಯ ಅವಕಾಶಗಳು ಕೈತಪ್ಪಿದವು. ಅಮೆರಿಕದಲ್ಲಿ ಅಪಘಾತಕ್ಕೀಡಾಗಿತ್ತು. ಆವೇಳೆ ತಾಯಿಯ ಆರೋಗ್ಯ ಕಾರಣ ಕೊಟ್ಟು ಮರೆಮಾಚಿದೆ" ಎಂದು ಪೂನಂ ಕೌರ್ ವಿವರಣೆ ಕೊಟ್ಟಿದ್ದಾರೆ.

ಇದೇ ವೇಳೆ ಈಕೆಯ ಕಷ್ಟದ ಸಮಯದಲ್ಲಿ ಸ್ನೇಹಿತನೊಬ್ಬ ಮದುವೆಯಾಗಲು ಮುಂದೆ ಬಂದಿದ್ದ. ಆಗ ನಟ ಪೋಸಾನಿ ಪತ್ರಿಕಾಗೋಷ್ಠಿ ನಡೆಸಿ ಸುಳ್ಳು ಆರೋಪಗಳನ್ನು ಮಾಡಿದರು. ಇದರಿಂದಾಗಿ ಮದುವೆಗೆ ಮುಂದಾಗಿದ್ದ ಆ ವ್ಯಕ್ತಿ ಕೂಡ ಇವರೊಂದಿಗೆ ಸಂಪರ್ಕವನ್ನು ಕಡಿತ ಮಾಡಿಕೊಂಡು ದೂರವಾಗಿದ್ದರು ಎಂದು ಪೂನಂ ಕೌರ್ ಹೇಳಿಕೊಂಡಿದ್ದಾರೆ.

Telugu Actress Poonam Kaur gave controversial statement that Posani Krishna Murali Spoiled My Life

ಪೊಸಾನಿ ಕೃಷ್ಣ ಮುರಳಿ ಆರೋಪದ ಬಳಿಕ ಮದುವೆಯಾಗುವ ಆಸೆಯೇ ಸಂಪೂರ್ಣ ಸತ್ತುಹೋಯಿತು. ಅವರ ಪತ್ರಿಕಾಗೋಷ್ಠಿ ನಂತರ ಹಣ, ಮದುವೆ, ಕೆಲಸ, ಆರೋಗ್ಯ, ಸಂತೋಷ, ಭರವಸೆ ಸೇರಿದಂತೆ ಜೀವನದ ಎಲ್ಲವೂ ನಾಶವಾಯ್ತು. ಆ ಪತ್ರಿಕಾಗೋಷ್ಠಿ ನನ್ನ ಬದುಕನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿತು ಎಂದು ಬೇಸರ ಹೊರ ಹಾಕಿದ್ದಾರೆ.

ಪೊಸಾನಿ ಮಾಡಿದ ಪತ್ರಿಕಾಗೋಷ್ಠಿ ಬಳಿಕ ಅವರ ತಾಯಿ ಆರೋಗ್ಯದಲ್ಲಿಯೂ ಏರುಪೇರಾಗಿತ್ತು. "ಆ ಪತ್ರಿಕಾಗೋಷ್ಠಿಯ ನಂತರ ನನ್ನ ತಾಯಿಗೆ ಹೃದಯಾಘಾತವಾಗಿತ್ತು. ಆಗ ನಾನು ಕಾಲೇಜು ತೊರೆದಿದ್ದೆ. ಹಲವು ದಿನಗಳವರೆಗೆ ಆಸ್ಪತ್ರೆಯಲ್ಲಿದ್ದು ನನ್ನ ತಾಯಿಯ ಆರೈಕೆ ಮಾಡಿದೆ" ಎಂದು ನಟಿ ಪೂನಂ ಕೌರ್ ಭಾವುಕರಾಗಿದ್ದಾರೆ.

More from Filmibeat

English summary
Telugu Actress Poonam Kaur gave controversial statement that Posani Krishna Murali Spoiled My Life.
Read more about: actress controversy telugu movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X