"ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ.. ಮದ್ವೆನೂ ಆಗುತ್ತಿಲ್ಲ"; ಕೋಟಿಗೊಬ್ಬ 3 ಬ್ಯೂಟಿ ಹೇಳಿದ್ದೇನು?
ನಟಿಯರು ಅಂದ್ಮೇಲೆ ಅವರ ಸುತ್ತಮುತ್ತ ನೂರೆಂಟು ಗಾಳಿ ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ನಿಜ ಆಗಿರೋ ಸಾಕಷ್ಟು ಉದಾಹರಣೆಗಳು ಇವೆ. ಅದೇ ಇನ್ನೊಂದು ಕಡೆ ಗಾಳಿ ಸುದ್ದಿ ಕೇವಲ ರೂಮರ್ ಆಗಿದ್ದೂ ಇದೆ. ಕೆಲವೇ ದಿನಗಳ ಹಿಂದಷ್ಟೇ ಟಾಲಿವುಡ್ ನಟಿ ಉದ್ಯಮಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಓಡಾಡಿತ್ತು. ಅದಕ್ಕೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.
ಉದ್ಯಮಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅಂತ ಗುಲ್ಲೆದ್ದಿದ್ದ ಟಾಲಿವುಡ್‌ನ ಈ ಜನಪ್ರಿಯ ನಟಿ ಮತ್ಯಾರೂ ಶ್ರದ್ಧಾ ದಾಸ್. ಒಂದು ಕಾಲದಲ್ಲಿ ತೆಲುಗು ಚಿತ್ರರಂಗದ ಜನಪ್ರಿಯ ನಟಿಯೀಕೆ. ತನ್ನ ಗ್ಲಾಮರ್ ಲುಕ್‌ನಿಂದಲೇ ತೆಲುಗು ಮಂದಿಯ ನಿದ್ದೆ ಕದ್ದಿದ್ದ ಬ್ಯೂಟಿ. ಇತ್ತೀಚೆಗೆ ಈಕೆ ಸಿನಿಮಾದಲ್ಲಿ ನಟಿಸೋದು ಕಡಿಮೆಯಾಗಿದ್ದರೂ, ತೆಲುಗು ಮಂದಿಯ ಜನಮಾನಸದಿಂದ ಮಾತ್ರ ಕಣ್ಮರೆಯಾಗಿಲ್ಲ.

ಅಂದ್ಹಾಗೆ ಶ್ರದ್ಧಾ ದಾಸ್ ಮೊದಲ ಮಾಡಲ್ ಆಗಿ ದುಡಿಮೆ ಆರಂಭಿಸಿದ್ದರು. ಆ ಬಳಿಕ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಈ ಬ್ಯೂಟಿ ಟಾಲಿವುಡ್‌ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಮೂಲತ: ಮಹಾರಾಷ್ಟ್ರದವರಾಗಿದ್ದರೂ, ದಕ್ಷಿಣ ಭಾರತದಲ್ಲಿದ ಸಿನಿಮಾಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಹೀರೊಯಿನ್ ಆಗುವುದಕ್ಕೂ ಮುನ್ನ ಮಾಡಲ್ ಆಗಿದ್ದರಿಂದ ಹೆಚ್ಚಾಗಿ ಗ್ಲಾಮರಸ್ ರೋಲ್‌ಗಳಲ್ಲಿ ಕಂಡಿದ್ದೇ ಹೆಚ್ಚು.
ಶ್ರದ್ಧಾ ದಾಸ್ ಬಹುಭಾಷಾ ನಟಿ ಕೂಡ ಹೌದು. ಕೇವಲ ತೆಲುಗು, ಹಿಂದಿ, ಬೆಂಗಾಲಿ, ಮಲಯಾಳಂ ಅಷ್ಟೇ ಅಲ್ಲ. ಕನ್ನಡ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. 2012ರಲ್ಲಿ ತೆರೆಕಂಡಿದ್ದ 'ಹೊಸ ಪ್ರೇಮ ಪುರಾಣ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ಊಜಾ', ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಉದ್ಗರ್ಷ', 2021ರಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವ 'ಕೋಟಿಗೊಬ್ಬ 3' ಸಿನಿಮಾದಲ್ಲಿಯೂ ನಟಿಸಿದ್ದರು. ಹೀಗಾಗಿ ಕನ್ನಡಿಗರೂ ಈಕೆ ತಕ್ಕಮಟ್ಟಿಗೆ ಚಿರಪರಿಚಿತರೇ.

ಇತ್ತೀಚೆಗೆ ತೆಲುಗು ಮಂದಿಯ ಫೇವರಿಟ್ ನಟಿ ಶ್ರದ್ಧಾ ದಾಸ್ ಉದ್ಯಮಿಯೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಅವರನ್ನೇ ಮದುವೆ ಕೂಡ ಆಗಲಿದ್ದಾರೆ ಅಂತೆಲ್ಲ ವದಂತಿಗಳು ಓಡಾಡಿತ್ತು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಅದಕ್ಕೆ ಶ್ರದ್ಧಾ ದಾಸ್ ಕ್ಲಾರಿಟಿ ಕೊಟ್ಟಿದ್ದಾರೆ.
"ನಾನು ಯಾವ ಉದ್ಯಮಿಯನ್ನೂ ಡೇಟಿಂಗ್ ಮಾಡುತ್ತಿಲ್ಲ. ನನಗೆ ಯಾವ ಉದ್ಯಮಿನೂ ಗೊತ್ತಿಲ್ಲ." ಎಂದು ಹಬ್ಬಿರುವ ಗಾಳಿ ಸುದ್ದಿಗೆ ಬಹುಭಾಷಾ ನಟಿ ಶ್ರದ್ಧಾ ದಾಸ್ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೆ ಟಿವಿ ಶೋಗಳಲ್ಲೂ ಫೇಮಸ್ ಆಗಿರೋ ಶ್ರದ್ದಾ ದಾಸ್ ಮದುವೆ ಬಗ್ಗೆ ಅಂತೂ ಕ್ಲಾರಿಟಿ ಕೊಟ್ಟಿದ್ದಾರೆ. ಹೀಗಾಗಿ ಕೆಲ ಅಭಿಮಾನಿಗಳು ಖುಷಿಯಾಗಿದ್ರೆ, ಮತ್ತೆ ಕೆಲವರು ಒಳ್ಳೆಯ ವರ ಸಿಗುತ್ತಾನೆಂದು ಕಮೆಂಟ್ ಬಾಕ್ಸ್‌ನಲ್ಲಿ ಕಮೆಂಟ್ ಪಾಸ್ ಮಾಡುತ್ತಿದ್ದಾರೆ.
2008ರಲ್ಲಿ ತೆಲುಗು ಇಂಡಸ್ಟ್ರಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಶ್ರದ್ಧಾ ದಾಸ್, 'ಆರ್ಯ 2', 'ಡಾರ್ಲಿಂಗ್', 'ಮರೋ ಚರಿತಾ', 'ದಿಲ್ ತೋ ಬಚ್ಚಾ ಹೇ ಜಿ', 'ಗುಂಟೂರು ಟಾಕೀಸ್', 'ಕೋಟಿಗೊಬ್ಬ 3' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ತೆಲುಗಿನ 'ಅರ್ಧಂ' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











