"ಅಲ್ಲು ಅರ್ಜುನ್ ಮದುವೆ ಆಗಲಿಲ್ಲ.. ಆದರೆ ಒಂದು ಆಸೆ ಈಡೇರಿತು" ಎಂದು ಸಂಚಲನ ಸೃಷ್ಟಿಸಿದ ಈ ನಟಿ ಯಾರು?

ಸೂಪರ್‌ಸ್ಟಾರ್‌ಗಳ ಜೊತೆ ನಟಿಸೋಕೆ ಅದೆಷ್ಟೋ ನಟಿಯರು ಕನಸು ಕಾಣುತ್ತಲೇ ಇರುತ್ತಾರೆ. ಅದರಲ್ಲೂ ಯುವ ನಟಿಯರಿಗೆ ಆ ನಟರೊಂದಿಗೆ ಒಂದು ಸೀನ್‌ನಲ್ಲಿ ನಟಿಸುವ ಅವಕಾಶ ಸಿಕ್ಕರೆ ಸಾಕು, ಒಂದು ಸಾಂಗ್‌ನಲ್ಲಿ ಹೆಜ್ಜೆ ಹಾಕುವುದಕ್ಕೆ ಅವಕಾಶ ಸಿಕ್ಕರೆ ಸಾಕು ಎಂದು ಹಪಾಹಪಿಸುತ್ತಿರುತ್ತಾರೆ. ಅದರಲ್ಲೂ ಅಲ್ಲು ಅರ್ಜುನ್ ಅಂತಹ ಹೀರೋ ನಟಿಯರ ಫೇವರಿಟ್.

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅನ್ನೋ ಹೆಸರೇ ಅವರ ಅಭಿಮಾನಿಗಳಿಗೆ ರೋಮಾಂಚನ. ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ಅಲ್ಲು ಅರ್ಜುನ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ 'ಪುಷ್ಪ' ಸಿನಿಮಾದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದ್ದಾರೆ. ಪುಷ್ಪ ಅಲಿಯಾಸ್ ಪುಷ್ಪರಾಜ್ ಪಾತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ.

Telugu actress Tejaswi Madivada Wants to Marry Allu Arjun as Her Childhood Dream Goes Viral

'ಪುಷ್ಪ' ಅಲ್ಲು ಅರ್ಜುನ್ ವೃತ್ತಿ ಬದುಕನ್ನೇ ಬದಲಿಸಿದ ಸಿನಿಮಾ. ಈ ಸಿನಿಮಾ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂದು ಕೊಟ್ಟಿತು. ಇನ್ನೊಂದು ಕಡೆ ಬಾಕ್ಸಾಫೀಸ್‌ನಲ್ಲಿ ₹1800 ಕೋಟಿ ಕಲೆಕ್ಷನ್ ಮಾಡಿ ಹೊಸ ಇತಿಹಾಸವನ್ನು ಸೃಷ್ಟಿಸಿತು. 'ಪುಷ್ಪ' ಸೀರಿಸ್ ಬಳಿಕ ಅಲ್ಲು ಅರ್ಜುನ್ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದ್ದಾರೆ. ಅದರಲ್ಲಿ ಟಾಲಿವುಡ್‌ನ ನಟಿ ಕೂಡ ಒಬ್ಬರು. ಈ ತೆಲುಗು ನಟಿಯ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಈ ನಟಿ ತನ್ನ ತಂದೆ ಬಳಿಕ ತಾನು ಮದುವೆ ಅಂತ ಆಗುವುದಾದರೇ ಅಲ್ಲು ಅರ್ಜುನ್ ಅನ್ನೇ ಆಗುತ್ತೇನೆ. ಇಲ್ಲದೆ ಹೋದರೆ ಮದುವೆಯೇ ಆಗುವುದಿಲ್ಲ ಎಂದು ಹೇಳಿದ್ದರಂತೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ತೆಲುಗು ನಟಿ ಹೇಳಿಕೊಂಡಿದ್ದರು. ಅದೇ ಹೇಳಿಕೆಯನ್ನು ಅಲ್ಲು ಅರ್ಜುನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

Telugu actress Tejaswi Madivada Wants to Marry Allu Arjun as Her Childhood Dream Goes Viral

ಅಂದ್ಹಾಗೆ ಅಲ್ಲು ಅರ್ಜುನ್ ಅವರನ್ನು ಮದುವೆ ಆಗಬೇಕು ಅಂತ ಬಯಸಿದ್ದು ನಟಿಯ ತೇಜಸ್ವಿ ಮಡಿವಾಡ. ಶೇಖರ್ ಕಮ್ಮುಲಾ ನಿರ್ದೇಶನದ 'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾ ಮೂಲಕ ತೆಲುಗು ಮಂದಿಯ ಗಮನ ಸೆಳೆದರು. ಹಾಗೇ ಶ್ರೀಕಾಂತ್ ಅಡ್ಡಾಲ ಅವರ ಮಲ್ಟಿಸ್ಟಾರರ್ ಸಿನಿಮಾ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು'ನಲ್ಲಿ ಸಮಂತಾಗೆ ಸಹೋದರಿಯಾಗಿ ನಟಿಸಿದ ಗಮನ ಸೆಳೆದರು. ನಟಿಯಾಗಿ, ಡ್ಯಾನ್ಸರ್ ಆಗಿಯೂ ಗುರುತಿಸಿಕೊಂಡಿರುವ ತೇಜಸ್ವಿ ಮಡಿವಾಡ ಐಕಾನ್‌ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಮದುವೆ ಆಗುವುದಕ್ಕೆ ಬಯಸಿದ್ದರು.

ಅಪ್ಪಟ ತೆಲುಗು ನಟಿ ತೇಜಸ್ವಿನಿ ಮೊದಲ ಬಾರಿಗೆ ರಾಮ್ ಗೋಪಾಲ್ ವರ್ಮ ನಿರ್ದೇಶನದ 'ಐಸ್‌ಕ್ರೀಮ್' ಸಿನಿಮಾದಲ್ಲಿ ನಾಯಕಿಯಾದರು. ಅಲ್ಲಿಂದ ಗ್ಲಾಮರ್ ಇಮೇಜ್ ಕೂಡ ಬಂದಿದೆ. ಅಂದಿನಿಂದ ಸಿನಿಮಾಗಳು, ವೆಬ್ ಸಿರೀಸ್‌ಗಳಲ್ಲಿ ತೇಜಸ್ವಿನಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಿರೂಪಕರು "ನೀವು ಯಾವ ಹೀರೊ ಜೊತೆ ನಟಿಸಲು ಇಷ್ಟಪಡುತ್ತೀರಿ?" ಎಂದು ಪ್ರಶ್ನೆ ಮಾಡಿದ್ದರು. ಆಗ ತೇಜಸ್ವಿನಿ ಒಂದು ಕ್ಷಣವೂ ಹಿಂದೆ ಮುಂದೆ ಯೋಚಿಸದೇ "ಅಲ್ಲು ಅರ್ಜುನ್" ಎಂದು ಉತ್ತರಿಸಿದರು.

"ನಾನು ಚಿಕ್ಕವಳಿದ್ದಾಗ ನನ್ನ ಅಪ್ಪನ ಹತ್ತಿರ ಅಲ್ಲು ಅರ್ಜುನ್‌ರನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದೆ. ಆಗ ಅಪ್ಪ ನಗುತ್ತಾ ಯಾಕಮ್ಮ ಎಂದು ಕೇಳಿದ್ದರು. ಅಲ್ಲು ಅರ್ಜುನ್‌ರಂತೆ ಡಾನ್ಸ್ ಮಾಡೋರು ಯಾರೂ ಇಲ್ಲ. ನಾನು ಕೂಡ ಡಾನ್ಸರ್. ಒಬ್ಬ ಡಾನ್ಸರ್‌ಗೆ ತಮಗಿಂತ ಚೆನ್ನಾಗಿ ಡಾನ್ಸ್ ಮಾಡೋರು ತುಂಬಾನೇ ಇಷ್ಟ ಆಗುತ್ತಾರೆಂದು ನಗುತ್ತಾ ಹೇಳಿದೆ" ಎಂದು ಉತ್ತರ ಕೊಟ್ಟಿದ್ದಾರೆ.

ಅಲ್ಲು ಅರ್ಜುನ್ ಜೊತೆ ಒಂದು ದೃಶ್ಯದಲ್ಲಾದರೂ ನಟಿಸಬೇಕು ಅನ್ನೋ ಆಸೆ ಇತ್ತಂತೆ. ಅದನ್ನು ಈಡೇರಿಸಿಕೊಂಡಿದ್ದಾಗಿ ತೇಜಸ್ವಿ ಹೇಳಿಕೊಂಡಿದ್ದಾರೆ. ಅವರ ವೃತ್ತಿ ಜೀವನ ಅಲ್ಲು ಅರ್ಜುನ್ ಕಾಣಿಸಿಕೊಂಡು 7Up ಜಾಹೀರಾತಿನಿಂದ. ಇದರಲ್ಲಿ ಬ್ಯಾಕ್‌ಗ್ರೌಂಡ್ ಡಾನ್ಸರ್ ಆಗಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗೆ ಅಲ್ಲು ಅರ್ಜುನ್ ಜೊತೆ ಒಂದು ಚಿಕ್ಕ ಪಾತ್ರವೂ ಇತ್ತು ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
Telugu actress Tejaswi Madivada Wants to Marry Allu Arjun as Her Childhood Dream Goes Viral.
Read more about: allu arjun marriage telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X