Allu Arjun-Venu Swamy: ಅಲ್ಲು ಅರ್ಜುನ್ ಭವಿಷ್ಯ ನುಡಿದ ವೇಣುಸ್ವಾಮಿ.. ಜ್ಯೋತಿಷಿ ಹೇಳಿದ್ದು ನಿಜವೇ?
ಟಾಲಿವುಡ್‌ನಲ್ಲಿ ಜ್ಯೋತಿಷಿ ವೇಣು ಸ್ವಾಮಿ ಸಿಕ್ಕಾಪಟ್ಟೆ ಫೇಮಸ್. ತೆಲುಗು ತಾರೆಯರ ಭವಿಷ್ಯ ನುಡಿಯುವಲ್ಲಿ ವೇಣು ಸ್ವಾಮಿ ಎಕ್ಸ್‌ಪರ್ಟ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಇನ್ನೊಂದು ಕಡೆ ತೆಲುಗು ಸ್ಟಾರ್‌ಗಳು ಕೂಡ ವೇಣುಸ್ವಾಮಿ ಭವಿಷ್ಯವನ್ನು ತುಂಬಾನೇ ನಂಬುತ್ತಾರೆ.
ಇತ್ತೀಚೆಗೆ ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದೆ. ತೆಲುಗಿನಲ್ಲಿ ರಾಷ್ಟ್ರ ಪ್ರಶಸ್ತಿ ಧಕ್ಕಿಸಿಕೊಂಡ ಮೊದಲ ನಟ ಅಲ್ಲು ಅರ್ಜುನ್ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದೇ ಬೆನ್ನಲ್ಲೇ ಅಲ್ಲು ಅರ್ಜುನ್ ಬಗ್ಗೆ ವೇಣು ಸ್ವಾಮಿ ಭವಿಷ್ಯ ನುಡಿದಿರೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಟಾಲಿವುಡ್ ಮಂದಿಗೆ ಪರ್ಸನಲ್ ಜ್ಯೋತಿಷಿಯಾಗಿರೋ ವೇಣುಸ್ವಾಮಿ ಈಗ ಅಲ್ಲು ಅರ್ಜುನ್ ಬಗ್ಗೆ ನುಡಿದ ಭವಿಷ್ಯ ಸಂಚಲನ ಸೃಷ್ಟಿಸಿದೆ. ಅದರಲ್ಲೂ ರಾಷ್ಟ್ರ ಪ್ರಶಸ್ತಿ ಬಳಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಅಲ್ಲು ಅರ್ಜುನ್ ಭವಿಷ್ಯ ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಅಷ್ಟಕ್ಕೂ ಇನ್ನು 10 ವರ್ಷ ಅಲ್ಲು ಅರ್ಜುನ್ ಭವಿಷ್ಯ ಹೇಗಿರುತ್ತೆ? ತಿಳಿಯಲು ಮುಂದೆ ಓದಿ..
ರಕ್ಷಿತಾ, ಇಶಾ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ
ವೇಣು ಸ್ವಾಮಿ ತೆಲುಗು ಚಿತ್ರರಂಗಕ್ಕೆ ಹೊಸಬರೇನೂ ಅಲ್ಲ. ಸದಾ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನವನ್ನು ನೀಡುತ್ತಲೇ ಇರುತ್ತಾರೆ. ತೆಲುಗು ನಾಯಕಿಯರ ಭವಿಷ್ಯ ನುಡಿಯುತ್ತಾರೆ. ಹಾಗೇ ತೆಲುಗು ನಾಯಕಿಯರೂ ಕೂಡ ವೇಣು ಸ್ವಾಮಿ ಭವಿಷ್ಯವನ್ನು ನಂಬುತ್ತಾರೆ. ಇದೇ ವೇಳೆ ವೇಣು ಸ್ವಾಮಿ ನುಡಿದ ಭವಿಷ್ಯ ಸತ್ಯವಾಗಿದ್ದೂ ಇದೆ. ನಾಗಚೈತನ್ಯ ಹಾಗೂ ಸಮಂತಾ ಜಾತಕ ಹೊಂದಾಣಿಕೆಯಾಗಿಲ್ಲ. ಹೆಚ್ಚು ದಿನ ಒಟ್ಟಿಗೆ ವಾಸ ಮಾಡುವುದಿಲ್ಲ ಎಂದು ಹೇಳಿದ್ದರು. ಅದರಂತೆಯೇ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಡಿವೋರ್ಸ್ ನೀಡಿ ದಾಂಪತ್ಯ ಮುರಿದುಕೊಂಡಿದ್ದಾರೆ. ಇಲ್ಲಿಂದ ವೇಣು ಸ್ವಾಮಿ ಭವಿಷ್ಯದ ಬಗ್ಗೆ ನಂಬಿಕೆ ಹೆಚ್ಚಾಗಿದೆ.

ಒಂದು ವರ್ಷದ ಹಿಂದೆ ಅಲ್ಲು ಅರ್ಜುನ್ ಭವಿಷ್ಯ
ವೇಣು ಸ್ವಾಮಿ ಒಂದು ವರ್ಷದ ಹಿಂದೆ ಅಲ್ಲು ಅರ್ಜುನ್ ಭವಿಷ್ಯ ನುಡಿದಿದ್ದರು. ಇತ್ತೀಚೆಗೆ 'ಪುಷ್ಪ' ನಟ ಅಲ್ಲು ಅರ್ಜುನ್‌ಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಇದೇ ಬೆನ್ನಲ್ಲೇ ಅಂದು ವೇಣು ಸ್ವಾಮಿ ನುಡಿದ ಭವಿಷ್ಯ ನಿಜವಾಗಿದೆ ಎಂದು ಅಭಿಮಾನಿಗಳು ವಿಡಿಯೋ ವೈರಲ್ ಮಾಡುತ್ತಿದ್ದಾರೆ. ಆ ವೇಳೆ ತೆಲುಗು ಚಿತ್ರರಂಗದಲ್ಲಿ "ಅಲ್ಲು ಅರ್ಜುನ್ ಮಾತ್ರ ಪ್ಯಾನ್ ಇಂಡಿಯಾ ಸ್ಟಾರ್. ಪ್ರತಿ ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ನಿರ್ಮಾಪಕ ಟೆನ್ಷನ್ ಅನ್ನು ಕಡಿಮೆ ಮಾಡುತ್ತಾರೆ" ಎಂದು ಹೇಳಿದ್ದರು.
ಇನ್ನು 10 ವರ್ಷ ಭವಿಷ್ಯ ಹೇಗಿದೆ?
ಅಲ್ಲು ಅರ್ಜುನ್ ಭವಿಷ್ಯದಲ್ಲಿ ರಿಸ್ಕ್ ಇಲ್ಲ ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ಅಲ್ಲು ಅರ್ಜುನ್ ಜಾತಕ ಅದ್ಭುತವಾಗಿದೆ. ಇದು ಅದ್ಭುತ ಜಾತಕ. ಇನ್ನು 10 ವರ್ಷ ಇವರ ಭವಿಷ್ಯ ಚೆನ್ನಾಗಿರುತ್ತೆ. ಯಾವುದೇ ಸಿನಿಮಾದಲ್ಲಿ ನಟಿಸಿದರೂ, 200 ಕೋಟಿ ರೂಪಾಯಿಗೂ ಹೆಚ್ಚು ಬ್ಯುಸಿನೆಸ್ ಮಾಡುತ್ತಿದೆ ಎಂದು ಭವಿಷ್ಯ ಹೇಳಿದ್ದರು. ಅದೇ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶೇ.99ರಷ್ಟು ಸತ್ಯ ಎಂದು ಫ್ಯಾನ್ಸ್
ಅಲ್ಲು ಅರ್ಜುನ್‌ಗೆ ರಾಷ್ಟ್ರ ಪ್ರಶಸ್ತಿ ಬಂದಿರೋ ಸುದ್ದಿ ಅವರ ಅಭಿಮಾನಿಗಳನ್ನು ಆಕಾಶದಲ್ಲಿ ತೇಲಾಡಿಸುತ್ತಿದೆ. ಇದೇ ವೇಳೆ ವೇಣು ಸ್ವಾಮಿ ಹೇಳಿದ ಮಾತು ನಿಜವಾಗಿದೆ. ಅವರು ಹೇಳಿದ್ದು ಶೇಕಡಾ 99ರಷ್ಟು ಸತ್ಯ ಎಂದು ಅವರ ವಿಡಿಯೋಗಳನ್ನು ವೈರಲ್ ಮಾಡಲಾಗುತ್ತಿದೆ. ಸದ್ಯ ಅಲ್ಲು ಅರ್ಜುನ್ 'ಪುಪ್ಪ 2' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











