"ಪ್ರಭಾಸ್ ಈ ಜನ್ಮದಲ್ಲಿ ಮದುವೆಯಾಗಿಲ್ಲ" : ವೇಣು ಸ್ವಾಮಿ ಶಾಕಿಂಗ್ ಭವಿಷ್ಯ ನಿಜವಾಗುತ್ತಾ?

ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಮದುವೆ ಬಗ್ಗೆ ಎಷ್ಟು ಚರ್ಚೆಯಾಗುತ್ತೋ.. ಟಾಲಿವುಡ್‌ನಲ್ಲಿ ಅಷ್ಟೇ ಪ್ರಭಾಸ್ ಮದುವೆ ಬಗ್ಗೆನೂ ಚರ್ಚೆಯಾಗುತ್ತೆ. ಈ ವರ್ಷ ಮದುವೆ ಆಗಬಹುದು. ಮುಂದಿನ ವರ್ಷ ಮದ್ವೆ ಆಗಬಹುದು ಅಂತ ಅಭಿಮಾನಿಗಳು ಕಾದಿದ್ದಷ್ಟೇ ಬಂತು. ಆದರೆ, ಪ್ರಭಾಸ್ ಸಂಸಾರಸ್ಥನಾಗಲೇ ಇಲ್ಲ.

ಒಂದ್ವೇಳೆ ಪ್ರಭಾಸ್ ಮದುವೆ ಹಾಗೇ ಉಳಿದು ಬಿಟ್ಟರೆ? ಇಂತಹದ್ದೊಂದು ಪ್ರಶ್ನೆ ಡಾರ್ಲಿಂಗ್ ಅಭಿಮಾನಿಗಳಲ್ಲಿ ಕಾಡುತ್ತಲೇ ಇತ್ತು. ಅದಕ್ಕೆ ತಕ್ಕಂತೆ ಟಾಲಿವುಡ್ ತಾರೆಯರ ಭವಿಷ್ಯ ನುಡಿಯುವ ಜ್ಯೋತಿಷಿ ವೇಣು ಸ್ವಾಮಿ ಅಭಿಮಾನಿಗಳ ಕಣ್ಣುಗಳು ಕೆಂಪಾಗುವಂತಹ ಭವಿಷ್ಯ ನುಡಿದಿದ್ದಾರೆ.

ಪ್ರಭಾಸ್‌ರನ್ನು ಕುಟುಂಬಸ್ಥರನ್ನಾಗಿ ನೋಡಬೇಕು. ಕಲ್ಯಾಣ ಮಂಟಪದಲ್ಲಿ ಕೂತು ಏಳು ಹೆಜ್ಜೆ ಹಾಕಬೇಕು. ಹಿರಿಯರ ಆಶೀರ್ವಾದ ಪಡೆದು ಹೊಸ ಜೀವನ ಆರಂಭಿಸಬೇಕು ಅನ್ನೋದು ಅವರ ಅಭಿಮಾನಿಗಳ ಆಸೆ. ಅದಕ್ಕೆ ಜ್ಯೋತಿಷಿ ವೇಣುಸ್ವಾಮಿ ವ್ಯತಿರಿಕ್ತವಾದ ಹೇಳಿಕೆ ಕೊಟ್ಟು ಪೇಚಿಗೆ ಸಿಲುಕಿದ್ದಾರೆ.

Telugu astrologer venu swamy sensational comments on Prabhas marriage telugu news

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ಗೆ ಈಗಾಗಲೇ 44 ವರ್ಷ. ಇಷ್ಟೊತ್ತಿಗಾಗಲೇ ಅವರು ಮದುವೆ ಆಗಬೇಕಿತ್ತು. ಆದರೆ ಇನ್ನೂ ಮದುವೆಯಾಗಿಲ್ಲ. ಇದೇ ವೇಳೆ ತೆಲುಗಿನ ಜನಪ್ರಿಯ ಜ್ಯೋತಿಷಿ ವೇಣು ಸ್ವಾಮಿ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್‌ಗೆ ಮದುವೆ ಯೋಗವಿಲ್ಲ ಎಂದು ಹೇಳಿದ್ದಾಗಿ ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಈ ಜನ್ಮದಲ್ಲಿ ಪ್ರಭಾಸ್‌ಗೆ ಮದುವೆ ಇಲ್ಲ!

ಟಾಲಿವುಡ್‌ ತಾರೆಯರಿಗೆ ಜ್ಯೋತಿವೆ ವೇಣು ಸ್ವಾಮಿ ಮೇಲೆ ಎಲ್ಲಿಲ್ಲದ ನಂಬಿಕೆ. ಈಗಾಗಲೇ ಹಲವು ಮಂದಿ ನಟಿಯರು ವೇಣು ಸ್ವಾಮಿ ಬಳಿ ತಮ್ಮ ವೃತ್ತಿಯ ಬಗ್ಗೆ ಭವಿಷ್ಯ ಕೇಳಿ ಬಂದಿದ್ದಾರೆ. ಅವರು ಹೇಳಿದಂತೆ ನಡೆದುಕೊಂಡಿದ್ದಾರೆ. ಹೀಗಾಗಿ ತೆಲುಗು ಚಿತ್ರರಂಗದಲ್ಲಿ ವೇಣು ಸ್ವಾಮಿಗೆ ಗೌರವ ಹೆಚ್ಚೇ ಇದೆ. ಇವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಭಾಸ್ ಮದುವೆ ಕೊಟ್ಟ ಹೇಳಿಕೆ ವೈರಲ್ ಆಗುತ್ತಿದೆ.

ಪ್ರಭಾಸ್ ಈ ಜನ್ಮದಲ್ಲಿ ಮದುವೆ ಆಗುವುದಿಲ್ಲ. ಅವರಿಗೆ ಮದುವೆ ಆಗುವ ಯೋಗವಿಲ್ಲ. ಅವರ ಮದುವೆ ವಿಚಾರದಲ್ಲಿ ಹಲವು ಸಮಸ್ಯೆಗಳಿವೆ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಟಾಲಿವುಡ್‌ನ ರೆಬೆಲ್ ಸ್ಟಾರ್ ಅಭಿಮಾನಿಗಳು ಜ್ಯೋತಿಷಿ ವೇಣು ಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Telugu astrologer venu swamy sensational comments on Prabhas marriage telugu news

ವೃತ್ತಿ ಬದುಕಿನ ಬಗ್ಗೆನೂ ಭವಿಷ್ಯ

ವೇಣು ಸ್ವಾಮಿ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಮದುವೆ ಬಗ್ಗೆ ಅಷ್ಟೇ ಅಲ್ಲ. ಅವರ ವೃತ್ತಿ ಬದುಕಿನ ಬಗ್ಗೆನೂ ಮಾತಾಡಿದ್ದರು. ಬಾಹುಬಲಿ ಬಳಿಕ ಪ್ರಭಾಸ್ ಉತ್ತುಂಗಕ್ಕೆ ಹೋಗಿದ್ದಾರೆ. ಇನ್ನು ಅವರ ಡೌನ್ ಫಾಲ್ ಶುರುವಾಗುತ್ತೆ ಎಂದು ಹೇಳಿದ್ದರು. ಇಷ್ಟೇ ಅಲ್ಲದೆ 'ಸಲಾರ್' ಸಿನಿಮಾದ ಬಗ್ಗೆನೂ ಭವಿಷ್ಯ ನುಡಿದಿದ್ದರು.

ವೇಣು ಸ್ವಾಮಿ ಅವರು ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಭವಿಷ್ಯ ನುಡಿಯುತ್ತಾರೆ. ಇದೂವರೆಗೂ ಅವರು ತಾರೆಯರ ವಿಚಾರವಾಗಿ ಹೇಳಿದ ಭವಿಷ್ಯ ಸತ್ಯವಾಗಿದೆ. ಹೀಗಾಗಿ ಚಿತ್ರರಂಗದ ಮಂದಿ ಕೂಡ ನಂಬುತ್ತಾರೆ. ಈಗ ಪ್ರಭಾಸ್ ಮದುವೆ ಬಗ್ಗೆ ಭವಿಷ್ಯ ನುಡಿದಿದ್ದು, ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ.

ವೇಣು ಸ್ವಾಮಿ ಭವಿಷ್ಯ ನಿಜವಾಗಿತ್ತು

ವೇಣು ಸ್ವಾಮಿ ನಾಗ ಚೈತನ್ಯ ಹಾಗೂ ಸಮಂತಾ ಬ್ರೇಕಪ್ ಬಗ್ಗೆ ಭವಿಷ್ಯ ನುಡಿದಿದ್ದರು. ಅವರ ಮಾತಿನಂತೆಯೇ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಬೇರೆಯಾಗಿದ್ದಾರೆ. ಈಗ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮ್ಯಾರೇಜ್ ಲೈಫ್ ಬಗ್ಗೆನೂ ಇದೇ ಸಂದರ್ಶನದಲ್ಲಿ ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಮೆಗಾ ಸ್ಟಾರ್ ಫ್ಯಾನ್ಸ್ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಇತ್ತೀಚೆಗೆ ಕೆಸಿಆರ್ ಮೂರನೇ ಬಾರಿಗೆ ಸಿಎಂ ಆಗುತ್ತಾರೆಂದು ಭವಿಷ್ಯ ನುಡಿದಿದ್ದರು. ಆದರೆ, ಅದು ಸುಳ್ಳಾಗಿದೆ. ಹೀಗಾಗಿ ವೇಣು ಸ್ವಾಮಿ ಭವಿಷ್ಯದ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ನೆಟ್ಟಿಗರು ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

More from Filmibeat

English summary
Venu Swamy says Prabhas will not marry. Prabhas fans got angry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X